Bengaluru Namma Metro: ಬೆಂಗಳೂರು ನಮ್ಮ ಮೆಟ್ರೋದ ಈ ಲೈನ್‌ನಲ್ಲಿ ಮತ್ತೆ ಸಮಸ್ಯೆ, 45 ನಿಮಿಷ ಪ್ರಯಾಣಿಕರ ಪರದಾಟ!

Bengaluru Namma Metro: ಬೆಂಗಳೂರು ನಮ್ಮ ಮೆಟ್ರೋದಲ್ಲಿ ಮತ್ತೆ ಸಮಸ್ಯೆ ಆಗಿದೆ. ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ಇತ್ತೀಚಿನ ದಿನಗಳಲ್ಲಿ ಸಮಸ್ಯೆ ಹೆಚ್ಚಾಗುತ್ತಿದೆ. ಇದೀಗ ಬೆಂಗಳೂರು ನಮ್ಮ ಮೆಟ್ರೋದ ಹಸಿರು ಮಾರ್ಗ (Green Line) ಮೆಟ್ರೋ ಸೇವೆಯಲ್ಲಿ ವ್ಯತ್ಯಾಸವಾಗಿರುವುದು ವರದಿಯಾಗಿದೆ.

ಬೆಂಗಳೂರು ನಮ್ಮ ಮೆಟ್ರೋದ ಗ್ರೀನ್‌ಲೈನ್‌ನಲ್ಲಿ ಆರ್‌.ವಿ ರೋಡ್ (RV Road) ಮೆಟ್ರೋದ ಬಾಗಿಲುಗಳು ಹಲವು ನಿಮಿಷಗಳ ಕಾಲ ಕ್ಲೋಸ್ ಆಗಿರಲಿಲ್ಲ. ಇದರಿಂದ ಬೆಳಿಗ್ಗೆ ಕಚೇರಿ ಹಾಗೂ ಬೇರೆ ಬೇರೆ ಕೆಲಸಗಳಿಗೆ ಹೋಗುವ ಪ್ರಯಾಣಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಬಗ್ಗೆ ನಮ್ಮ ಮೆಟ್ರೋ ಮಾಹಿತಿ ಹಂಚಿಕೊಂಡಿದೆ. ಬೆಂಗಳೂರಿನಲ್ಲಿ ಮೆಟ್ರೋ ಸಂಚಾರದಲ್ಲಿ ವ್ಯತ್ಯಯವಾಗುತ್ತಿರುವುದು ಯಾಕೆ ಹಾಗೂ ಈ ಬಗ್ಗೆ ನಮ್ಮ ಮೆಟ್ರೋದ ಅಧಿಕಾರಿಗಳು ಹೇಳಿದ್ದೇನು ಎನ್ನುವ ವಿವರ ಇಲ್ಲಿದೆ.

Bengaluru Namma Metro

ಜುಲೈ 21ರ ಸೋಮವಾರ ಬೆಳಿಗ್ಗೆ 8 ಗಂಟೆಯಿಂದ ವಿದ್ಯುತ್ ವ್ಯತ್ಯಯ ಉಂಟಾದ ಹಿನ್ನೆಲೆಯಲ್ಲಿ, ಹಸಿರು ಮಾರ್ಗದಲ್ಲಿ ಸಿಲ್ಕ್ ಇನ್‌ಸ್ಟಿಟ್ಯೂಟ್ ಮತ್ತು ಯಶವಂತಪುರ ನಿಲ್ದಾಣಗಳ ನಡುವೆ ಮಾತ್ರ ಮೆಟ್ರೋ ರೈಲುಗಳು ಶಾರ್ಟ್-ಲೂಪ್ ಸೇವೆಯಲ್ಲಿ ಸಂಚರಿಸುತ್ತಿವೆ. ಯಶವಂತಪುರ ಮತ್ತು ಮಾದಾವರ ನಿಲ್ದಾಣಗಳ ನಡುವಿನ ಮೆಟ್ರೋ ಸೇವೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಸಾಮಾನ್ಯ ಮೆಟ್ರೋ ಸೇವೆಯನ್ನು ಶೀಘ್ರದಲ್ಲೇ ಪುನಃ ಆರಂಭಿಸಲು ನಮ್ಮ ತಾಂತ್ರಿಕ ತಂಡಗಳು ತುರ್ತುಗತಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗೆ ವಿಷಾದಿಸುತ್ತೇವೆ. ಸೇವೆ ಪುನಃ ಆರಂಭವಾದ ಕೂಡಲೇ ಮುಂದಿನ ಮಾಹಿತಿಯನ್ನು ಹಂಚಿಕೊಳ್ಳಲಾಗುವುದು ಎಂದು ನಮ್ಮ ಮೆಟ್ರೋದ ಅಧಿಕೃತ ಸೋಶಿಯಲ್ ಮೀಡಿಯಾ ಎಕ್ಸ್‌ ಖಾತೆಯಲ್ಲಿ ಟ್ವೀಟ್ ಮಾಡಲಾಗಿತ್ತು.

ಮುಂದುವರಿದು ವಿದ್ಯುತ್ ಪೂರೈಕೆ ಪುನಃಸ್ಥಾಪನೆಯಾಗಿರುವ ಹಿನ್ನೆಲೆಯಲ್ಲಿ, ಬೆಳಿಗ್ಗೆ 8:45 ಗಂಟೆಯಿಂದ ಹಸಿರು ಮಾರ್ಗದ ಸಂಪೂರ್ಣ ವ್ಯಾಪ್ತಿಯಲ್ಲಿ ಸಾಮಾನ್ಯ ಮೆಟ್ರೋ ಸೇವೆ (Revenue Service) ಪುನರಾರಂಭಗೊಂಡಿದೆ. ಸೇವೆಯಲ್ಲಿ ಉಂಟಾದ ತಾತ್ಕಾಲಿಕ ವ್ಯತ್ಯಯದ ಸಂದರ್ಭದಲ್ಲಿ ಸಹಕರಿಸಿದ ಪ್ರಯಾಣಿಕರಿಗೆ ಧನ್ಯವಾದ ಎಂದು ಬಿಎಂಆರ್‌ಸಿಎಲ್ ಹೇಳಿದೆ. ಬಿಎಂಆರ್‌ಸಿಎಲ್ ನೀಡಿದ ಮಾಹಿತಿಯ ಪ್ರಕಾರವೇ ಬೆಂಗಳೂರಿನ ನಮ್ಮ ಮೆಟ್ರೋದ ಹಸಿರು ಮಾರ್ಗದಲ್ಲಿ ಬರೋಬ್ಬರಿ 45 ನಿಮಿಷಗಳ ಕಾಲ ಮೆಟ್ರೋ ಸೇವೆಯಲ್ಲಿ ವ್ಯತ್ಯಾಯವಾಗಿದೆ.

ಮೆಟ್ರೋ ಪ್ರಯಾಣಿಕರು - ನೆಟ್ಟಿಗರಿಂದ ಆಕ್ರೋಶ

ಇನ್ನು ಬೆಂಗಳೂರಿನ ನಮ್ಮ ಮೆಟ್ರೋದ ಹಸಿರು ಮಾರ್ಗ (Green Line) ಮೆಟ್ರೋ ಸೇವೆಯಲ್ಲಿ ವ್ಯತ್ಯಾಸವಾಗಿರುವ ಬಗ್ಗೆ ಸಾರ್ವಜನಿಕರು ಹಾಗೂ ಮೆಟ್ರೋ ಪ್ರಯಾಣಿಕರು ಆಕ್ರೋಶ ಹೊರ ಹಾಕಿದ್ದಾರೆ. ಕಿರಣ್ ಕುಮಾರ್ ಎನ್ನುವವರು, ಬೆಂಗಳೂರು ನಮ್ಮ ಮೆಟ್ರೋ ದೇಶದಲ್ಲೇ ಅತಿ ಹೆಚ್ಚು ದರವನ್ನು ವಸೂಲಿ ಮಾಡುತ್ತದೆ. ಆದರೆ, ಅದರ ಸೇವೆಯ ಗುಣಮಟ್ಟ ಮಾತ್ರ ನಿರಾಶಾದಾಯಕವಾಗಿದೆ. ಆಗಾಗ್ಗೆ ಮೆಟ್ರೋ ಸೇವೆಯಲ್ಲಿ ವ್ಯತ್ಯಯ ಉಂಟಾಗುತ್ತಿದ್ದು, ವಿಶ್ವಾಸಾರ್ಹವಲ್ಲದ ವಿದ್ಯುತ್ (ಟ್ರಾಕ್ಷನ್) ವ್ಯವಸ್ಥೆಯಿಂದ ಪ್ರಯಾಣಿಕರು ನಿರಂತರವಾಗಿ ತೊಂದರೆ ಅನುಭವಿಸುತ್ತಿದ್ದಾರೆ. ಇದರಿಂದ ಮೆಟ್ರೋ ಸೇವೆಯ ವಿಶ್ವಾಸಾರ್ಹತೆ ಮತ್ತು ಪ್ರಯಾಣಿಕರು ನೀಡುವ ಹಣಕ್ಕೆ ತಕ್ಕ ಸೇವೆ ಸಿಗುತ್ತಿದೆಯೇ ಎಂಬ ಪ್ರಶ್ನೆ ಮೂಡಿದೆ ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+