Hurun India Rich List 2023: ಮುಕೇಶ್ ಅಂಬಾನಿಗೆ ಭಾರತೀಯ ಅಗ್ರ ಸಿರಿವಂತ ಪಟ್ಟ, ಗೌತಮ್ ಅದಾನಿಗೆ?
ಬೆಂಗಳೂರು, ಅಕ್ಟೋಬರ್ 11: ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಅವರು ಅದಾನಿ ಗ್ರೂಫ್ ಮುಖ್ಯಸ್ಥ ಗೌತಮ್ ಅದಾನಿಯನ್ನು ಹಿಂದಿಕ್ಕಿ ಮತ್ತೆ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ಎಂಬ ಹೆಗ್ಗಳಿಕೆ ಪಾತ್ರವಾಗುವಲ್ಲಿ ಯಶಸ್ವಿಯಾಗಿದ್ದಾರೆ ಎಂದು 'ಹುರುನ್ ಇಂಡಿಯಾ ಶ್ರೀಮಂತರ ಪಟ್ಟಿ 2023' ಮಾಹಿತಿ ನೀಡಿದೆ.
ಹೌದು, 'ಹುರುನ್ ಇಂಡಿಯಾ' ಶ್ರೀಮಂತರ ಪಟ್ಟಿ 2023 ಬಿಡುಗಡೆಗೊಳಿಸಿದೆ. ಇದರಲ್ಲಿ ಮುಖೇಶ್ ಅಂಬಾನಿಯವರು ಮತ್ತೆ ಶ್ರೀಮಂತ ಭಾರತೀಯ ಎಂಬ ಅಗ್ರಸ್ಥಾನ ಪಡೆದಿದ್ದರೆ, ಈ ಓಟದಲ್ಲಿ ಗೌತಮ್ ಅಧಾನಿಯವರು ನಂತರ ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ ಎಂದು ವರದಿ ತಿಳಿಸಿದೆ.

ಈ ಹಿಂದೆ ಹಿಂಡೇನ್ ಬರ್ಗ್ ವಿಶ್ವದ ಶ್ರೀಮಂತಪಟ್ಟಿ ಬಿಡುಗಡೆಗೊಳಿಸಿದ ಬಳಿಕ ಹಂತ ಹಂತವಾಗಿ ಗೌತಮ್ ಅದಾನಿಯವರ ಷೇರುಗಳ ಕುಸಿತ ಕಂಡವು. ಈ ಪಟ್ಟಿಯು ಅದಾನಿ ಸಂಪತ್ತಿನ ಮೇಲೆ ವ್ಯತಿರಿಕ್ಷ ಪರಿಣಾಮ ಭೀರಿತ್ತು. ಇನ್ನೂ ಈ 'ಹುರುನ್ ಇಂಡಿಯಾ ಶ್ರೀಮಂತರ ಪಟ್ಟಿ 2023' ಯಿಂದ ಎಡ್ಟೆಕ್ ಸ್ಟಾರ್ಟ್ಅಪ್ ಬೈಜುಸ್‌ನ ಸಂಸ್ಥಾಪಕ ಬೈಜು ರವೀಂದ್ರನ್ ಅವರು ಹೂಡಿಕೆ ಕುಸಿತದಂತಹ ಕಾರಣಗಳಿಂದ ಪಟ್ಟಿಯಿಂದ ಹೊರಗಿದ್ದಾರೆ.
ಮೂರನೇ ಸ್ಥಾನದಲ್ಲಿ ಯಾರಿದ್ದಾರೆ?
ಪ್ರಸಕ್ತ ಸಾಲಿನ ಶ್ರೀಮಂತರ ಪಟ್ಟಿಯಲ್ಲಿ 'ಸೈರಸ್ ಎಸ್ ಪೂನವಾಲಾ' ಮತ್ತವರ ಕುಟುಂಬಕ್ಕೆ ಮೂರನೇ ಸ್ಥಾನದಲ್ಲಿದೆ. ಕೈಗಾರಿಕೋದ್ಯಮಿ ಕುಮಾರ ಮಂಗಲಂ ಬಿರ್ಲಾ ಮತ್ತು ಕುಟುಂಬ ಮತ್ತು ನಿರಾಜ್ ಬಜಾಜ್ ಮತ್ತು ಕುಟುಂಬವು ಟಾಪ್ 10 ಒಳಗಿನ ಸ್ಥಾನಗಳನ್ನು ಪುನಃ ಪಡೆಯುವ ಮೂಲಕ ಗಮನ ಸೆಳೆದಿದ್ದಾರೆ.
Top 10 in the 360 ONE Wealth Hurun India Rich List 2023.@KB_360_ONE @360ONEWealth @Yatinshahiiflw @maheshwari_anup @anmasc @AnasRahman pic.twitter.com/3VNZjNwNSr
— HURUN INDIA (@HurunReportInd) October 10, 2023
ಇನ್ನೂ ಉದ್ಯಮಿಗಳಾದ ವಿನೋದ್ ಶಾಂತಿಲಾಲ್ ಅದಾನಿ ಮತ್ತು ಅದಾನಿ ಗ್ರೂಪ್ ಕುಟುಂಬ, ಕೋಟಕ್ ಮಹೀಂದ್ರಾ ಬ್ಯಾಂಕ್‌ನ ಉದಯ್ ಕೋಟಕ್ ಅವರು ಪಟ್ಟಿಯಲ್ಲಿ ಟಾಪ್ 10ರ ನಂತರದ ಸ್ಥಾನಗಳಿಗೆ ಇಳಿದಿದ್ದಾರೆ. ಅದೇ ರೀತಿ ಟಾಪ್ 10ರ ಒಳಗಿರುವವರ ಪೈಕಿ ಉದ್ಯಮಿಗಳಾದ ರಾಧಾಕಿಶನ್ ದಮಾನಿ ಮತ್ತು ಕುಟುಂಬ ಹಾಗೂ ಗೌತಮ್ ಅದಾನಿ ಅವರ ನಿವ್ವಳ ಆದಾಯ ಕುಸಿತ ಕಂಡಿದೆ ಎಂದು 'ಹುರುನ್ ಇಂಡಿಯಾ' ತಿಳಿಸಿದೆ.
'ಹುರುನ್ ಇಂಡಿಯಾ ಶ್ರೀಮಂತರ ಪಟ್ಟಿ 2023' ಟಾಪ್ 10 ಹೆಸರು
1. ಮುಖೇಶ್ ಅಂಬಾನಿ - ₹8,08,700
2. ಗೌತಮ್ ಅದಾನಿ- ₹4,74,800
3 ಸೈರಸ್ ಎಸ್ ಪೂನಾವಲ್ಲ- ₹2,78,500
4. ಶಿವ ನಾಡಾರ್- ₹2,28,900
5. ಗೋಪಿಚಂದ್ ಹಿಂದುಜಾ- ₹1,76,500
6. ದಿಲೀಪ್ ಶಾಂಘ್ವಿ- ₹1,64,300
7. ಎಲ್ ಎನ್ ಮಿತ್ತಲ್ ಮತ್ತು ಕುಟುಂಬ- ₹1,62,300
8. ರಾಧಾಕಿಶನ್ ದಮಾನಿ- ₹1,43,900
9. ಕುಮಾರ್ ಮಂಗಳಂ ಬಿರ್ಲಾ- ₹1,25,600
10. ನೀರಜ್ ಬಜಾಜ್- ₹1,20,70












Click it and Unblock the Notifications