2 ದಿನಗಳಲ್ಲಿ 7 ಲಕ್ಷ ಕೋಟಿ ರೂಪಾಯಿ ಸಂಪಾದನೆ, ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಭ!
ದೇಶದ ಆರ್ಥಿಕತೆಯಲ್ಲಿ ಹೆಚ್ಚು ದುಡ್ಡು ಓಡಾಡುವ ಜಾಗ ಷೇರು ಮಾರುಕಟ್ಟೆ ಅಂತಾರೆ. ಆದ್ರೆ ಈ ಮಾತು ಅದೆಷ್ಟು ನಿಜಾನೋ, ಅಥವಾ ಅದೆಷ್ಟು ಸುಳ್ಳೋ ಗೊತ್ತಿಲ್ಲ. ಆದರೂ ಷೇರು ಮಾರುಕಟ್ಟೆಯ ಕ್ರೇಜ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಇದೀಗ ಮತ್ತೊಂದು ಗುಡ್ ನ್ಯೂಸ್ ಸಿಕ್ಕಿದ್ದು ಭಾರತದ ಷೇರು ಮಾರುಕಟ್ಟೆ ಮತ್ತೆ ಸಾರ್ವಕಾಲಿಕ ದಾಖಲೆ ಬರೆದಿದೆ. ಈ ಜೊತೆಗೆ ಹೂಡಿಕೆದಾರರಿಗೆ ಕೇವಲ 2 ದಿನದಲ್ಲಿ, 7 ಲಕ್ಷ ಕೋಟಿ ರೂಪಾಯಿ ಲಾಭ ಕೊಟ್ಟಿದೆ!
ಗುರುವಾರ ಅಂದ್ರೆ ನಿನ್ನೆ ಭಾರಿ ದೊಡ್ಡ ಮಟ್ಟದಲ್ಲಿ ಏರಿಕೆ ಕಂಡಿದ್ದ ಷೇರು ಮಾರುಕಟ್ಟೆ, ಇಂದು ಬೆಳಗ್ಗೆ ಕೂಡ ಮತ್ತೆ ಬಂಪರ್ ಏರಿಕೆ ಕಂಡಿದೆ. ಬೆಳಗ್ಗೆಯಿಂದಲೇ ಏರುಗತಿಯಲ್ಲೇ ತನ್ನ ಓಟ ಶುರು ಮಾಡಿದ್ದ ಷೇರು ಮಾರುಕಟ್ಟೆಯ ಸೆನ್ಸೆಕ್ಸ್, ಇಂದಿನ ವಹಿವಾಟಿನಲ್ಲಿ 969 ಅಂಕ ಏರಿಕೆ ಕಾಣುವ ಮೂಲಕ ಸಾರ್ವಕಾಲಿಕ ಗರಿಷ್ಠ ಮಟ್ಟ ಅಂದ್ರೆ 71,483.75ಕ್ಕೆ ಜಂಪ್ ಮಾಡಿದೆ. ಇದರ ಜತೆ ನಿಫ್ಟಿ 50, 273 ಅಂಕ ಗಳಿಕೆಯ ಕಂಡು 21,456 ರಲ್ಲಿ ವಹಿವಾಟನ್ನ ಮುಗಿಸಿದೆ. ಈ ಮೂಲಕ ಹೂಡಿಕೆದಾರರಿಗೆ ಜೇಬು ತುಂಬಾ ಕಾಸು ಮಾಡಿಕೊಟ್ಟಿದೆ.

2 ದಿನಗಳಲ್ಲಿ 7 ಲಕ್ಷ ಕೋಟಿ ರೂಪಾಯಿ!
ಕಚ್ಚಾ ತೈಲ ಬೆಲೆಯಲ್ಲಿ ಕುಸಿತ ಸೇರಿ, ಭಾರತೀಯ ಷೇರು ಮಾರುಕಟ್ಟೆಯಲ್ಲಿ ವಿದೇಶಿ ಹೂಡಿಕೆ ಹೆಚ್ಚುತ್ತಿರುವ ಹಿನ್ನೆಲೆ. ಭಾರತದ ವಿದೇಶಿ ವಿನಿಮಯ ಹೆಚ್ಚಳದ ಪರಿಣಾಮದಿಂದಾಗಿ ಇಂದು ಮಾರುಕಟ್ಟೆ ಮತ್ತಷ್ಟು ಬಲಗೊಂಡು ಏರಿಕೆ ಕಂಡಿದೆ. ಅಲ್ಲದೆ ಸತತ 3ನೇ ಬಾರಿಗೆ ಬಡ್ಡಿದರ ಯಥಾ ಸ್ಥಿತಿಯಲ್ಲಿ ಇರಿಸಿರುವ ಫೆಡರಲ್ ರಿಸರ್ವ್ ನಿರ್ಧಾರವು ಕೂಡ ಭಾರತದಲ್ಲಿನ ಷೇರು ಮಾರುಕಟ್ಟೆ ಮೇಲೆ ಪ್ರಭಾವ ಬೀರಿದೆ ಎನ್ನಲಾಗುತ್ತಿದೆ.
ಹೂಡಿಕೆದಾರರಿಗೆ ಡಬಲ್ ಡೇ ಲಾಟರಿ!
ಇನ್ನು ಷೇರು ಮಾರುಕಟ್ಟೆ ಸೂಚ್ಯಂಕ ಗುರುವಾರದ ರೀತಿಯೇ ಶುಕ್ರವಾರ ಮತ್ತೆ ಭಾರೀ ಏರಿಕೆ ಕಂಡ ಹಿನ್ನೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದೆ. ಇಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ 969 ಅಂಕ ಅಂದ್ರೆ ಶೇ. 1.37ರಷ್ಟು ಏರಿಕೆ ಕಂಡಿದೆ. ನಿನ್ನೆಯೂ ಸೆನ್ಸೆಕ್ಸ್ 929 ಅಂಕಗಳಷ್ಟು ಗಳಿಕೆ ಕಂಡಿತ್ತು. ಈ ಎಲ್ಲಾ ಬೆಳವಣಿಗೆ ಪರಿಣಾಮ ಕೇವಲ 2 ದಿನದಲ್ಲಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆದಾರರ ಆಸ್ತಿ ಸುಮಾರು 7 ಲಕ್ಷ ಕೋಟಿ ರೂಪಾಯಿ ಹೆಚ್ಚಾಗಿದೆ.
ಒಟ್ನಲ್ಲಿ ಭಾರತೀಯ ಷೇರು ಮಾರುಕಟ್ಟೆ ಹೊಸ ದಾಖಲೆಯನ್ನ ಬರೆದಿದೆ. ರಾಕೆಟ್ ವೇಗದಲ್ಲಿ ಮುನ್ನುಗ್ಗುತ್ತಿದ್ದ ಭಾರತೀಯ ಷೇರು ಮಾರುಕಟ್ಟೆಗೆ ಕಳೆದ ಜನವರಿಯಲ್ಲಿ ಆಘಾತ ಎದುಯ್ತು, ಆದರೆ ಅದನ್ನೆಲ್ಲಾ ಮೀರಿಸಿ ಈಗ ಮುನ್ನುಗ್ಗಿ ದಾಖಲೆ ಮೇಲೆ ದಾಖಲೆ ಬರೆಯುತ್ತಿದೆ. ಈ ಮಧ್ಯೆ ದೇಶದಲ್ಲಿ ಇನ್ನೇನು ಸಾರ್ವತ್ರಿಕ ಚುನಾವಣೆಗಳು ಬರಲಿದ್ದು, ಹೀಗಾಗಿ ಷೇರು ಪೇಟೆ ಮತ್ತಷ್ಟು ಏರಿಳಿತ ಕಾಣುವ ನಿರೀಕ್ಷೆ ದಟ್ಟವಾಗಿದೆ. ಮಾರುಕಟ್ಟೆ ಹೀಗೆ ಮುನ್ನುಗ್ಗಿ ಮತ್ತಷ್ಟು ದಾಖಲೆ ಬರೆದು ಹೂಡಿಕೆದಾರರಿಗೆ ಭಾರಿ ಲಾಭ ಕೊಡುವ ನಿರೀಕ್ಷೆ ಇದೆ.












Click it and Unblock the Notifications