Jaya Bharata Jananiya Tanujate: ನಾಡಗೀತೆಯಲ್ಲಿ ಮಹತ್ವದ ಬದಲಾವಣೆ: ಇನ್ಮುಂದೆ ಪಾರಸಿಕ ಜೈನ "..."ರುದ್ಯಾನ!

Jaya Bharata Jananiya Tanujate: ಕರ್ನಾಟಕ ನಾಡಗೀತೆಯಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ. ನಾಡಗೀತೆಗೆ ಸಂಬಂಧಿಸಿದಂತೆ ಈ ಹಿಂದೆ ಹಲವು ಚರ್ಚೆಗಳು ನಡೆದಿವೆ. ನಾಡಗೀತೆಯ ರಾಗ ಹಾಗೂ ಎಷ್ಟು ಸಮಯ ಹಾಡಬೇಕು ಎನ್ನುವ ವಿಚಾರಗಳು ಈ ಹಿಂದೆ ಚರ್ಚೆ ಆಗಿವೆ. ಅಲ್ಲದೆ ನಾಡಗೀತೆಯ ಯಾವುದೇ ಸಾಲುಗಳನ್ನು ಕತ್ತರಿಸದೆ ಪೂರ್ಣಗೀತೆಯನ್ನು ಹಾಡಬೇಕು ಎಂದು ಈ ಹಿಂದೆಯೇ ತೀರ್ಮಾನಿಸಲಾಗಿತ್ತು. ಇದೀಗ ನಾಡಗೀತೆಯಲ್ಲಿ ಮತ್ತೊಂದು ಬದಲಾವಣೆ ಮಾಡುವುದಕ್ಕೆ ನಿರ್ಧರಿಸಲಾಗಿದೆ. ನಾಡಗೀತೆಯಲ್ಲಿ ಹಳೆಯ ಪದ ಸೇರ್ಪಡೆಗೆ ಅನುಮತಿ ನೀಡಲಾಗಿದೆ. ಹಾಗಾದರೆ ಇನ್ಮುಂದೆ ನಾಡಗೀತೆಯಲ್ಲಿ ಯಾವ ಬದಲಾವಣೆ ಆಗಲಿದೆ ಎನ್ನುವ ಸಂಪೂರ್ಣ ವಿವರ ಈ ಲೇಖನದಲ್ಲಿದೆ.

ಕನ್ನಡದ ನಾಡಗೀತೆಯಲ್ಲಿ ಇನ್ಮುಂದೆ ಮಹತ್ವದ ಬದಲಾವಣೆ ಆಗಲಿದೆ. ಕವಿ ಕುವೆಂಪು ಅವರು ವಿರಚಿತ ನಾಡಗೀತೆಯಲ್ಲಿ ಬೌದ್ಧ ಪದವನ್ನು ಮರು ಸೇರ್ಪಡೆಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಅವರ ನೇತೃತ್ವದ ಸಮಿತಿ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಹೀಗಾಗಿ, ಇನ್ಮುಂದೆ ನಾಡಗೀತೆಯಲ್ಲಿ ಮಹತ್ವದ ಬದಲಾವಣೆ ಆಗಲಿದೆ. ನಾಡಗೀತೆಯಲ್ಲಿ ಬೌದ್ಧ ಪದವನ್ನು ಮರು ಸೇರ್ಪಡೆ ಮಾಡುವುದಕ್ಕೆ ಸಂಬಂಧಿಸಿದಂತೆ ಬೌದ್ಧ ಧರ್ಮಗುರುಗಳ ಜತೆಗೆ, ಆ ಧರ್ಮದ ಸಂಘಟನೆಗಳಿಂದ ಕರ್ನಾಟಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಅಲ್ಲದೆ ನಾಡಗೀತೆಯಲ್ಲಿ ಬೌದ್ಧ ಪದ ಸೇರಿಸಬೇಕು ಎಂದು ಬೌದ್ಧ ಧರ್ಮಗುರುಗಳಿಂದ ಆಗ್ರಹ ವ್ಯಕ್ತವಾಗಿತ್ತು.

Jaya Bharata Jananiya Tanujate

ಈ ಹಿನ್ನೆಲೆಯಲ್ಲಿ ಈ ವಿಷಯಕ್ಕೆ ಸಂಬಂಧಿಸಿದಂತೆ ಅಧ್ಯಯನ ನಡೆಸಿ ವರದಿ ಸಲ್ಲಿಸುವುದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಕಾಂಗ್ರೆಸ್ ಸರ್ಕಾರವು ಸಮಿತಿಯನ್ನು ರಚಿಸಿತ್ತು. ಈ ಸಮಿತಿಯು ಈ ವಿಷಯದ ಬಗ್ಗೆ ಸಭೆ ನಡೆಸಿ, ಪದ ಸೇರ್ಪಡೆಗೆ ಒಮ್ಮತದ ತೀರ್ಮಾನವನ್ನು ತೆಗೆದುಕೊಂಡಿದೆ. ನಾಡಗೀತೆಯಲ್ಲಿ ಈಗ ಇರುವ ಪಾರಸಿಕ ಜೈನರುದ್ಯಾನ ಎಂಬ ಸಾಲುಗಳನ್ನು ಇನ್ಮುಂದೆ ಪಾರಸಿಕ ಜೈನ ಬೌದ್ಧರುದ್ಯಾನ ಎಂದು ಮಾರ್ಪಾಡು ಮಾಡಲು ನಿರ್ಧರಿಸಲಾಗಿದೆ. ಸಮಿತಿಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ವರದಿ ಸಲ್ಲಿಸಿದ್ದು. ಬೌದ್ಧ ಧರ್ಮವೂ ಸಹ ಪ್ರಮುಖ ಧರ್ಮವಾಗಿದೆ. ಬೌದ್ಧ ಪದ ಸೇರ್ಪಡೆಯಿಂದ ನಾಡಗೀತೆಗೆ ಹಾಗೂ ಅದರ ಲಯಕ್ಕೆ ಯಾವುದೇ ತೊಂದರೆ ಆಗುವುದಿಲ್ಲ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಅವರು ತಿಳಿಸಿದ್ದಾರೆ.

ಬೌದ್ಧ ಸಮುದಾಯದ ಬೇಡಿಕೆ ಏನು

ಕುವೆಂಪು ಅವರು ರಚಿಸಿದ್ದ ನಾಡಗೀತೆಯ ಮೂಲ ಕರಡಿನಲ್ಲಿ ಬೌದ್ಧ ಪದವಿತ್ತು. ಆದರೆ, ಕಾರಣಾಂತರಗಳಿಂದ ಈ ಪದವನ್ನು ಕೈಬಿಡಲಾಗಿತ್ತು ಎಂದು ಹೇಳಲಾಗಿದೆ. ಈ ಹಿಂದೆ ಸಮಾಜ ಕಲ್ಯಾಣ ಸಚಿವರಾಗಿದ್ದ ಎಚ್.ಸಿ.ಮಹದೇವಪ್ಪ ಅವರು 2025ರ ನವೆಂಬರ್ ತಿಂಗಳಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಈ ವಿಚಾರವಾಗಿ ಪತ್ರ ಬರೆದಿದ್ದರು. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಸಿದ್ದರಾಮಯ್ಯ ಅವರು ಮುಖ್ಯ ಕಾರ್ಯದರ್ಶಿಗೆ ಸೂಚಿಸಿದ್ದರು. ಅಲ್ಲದೆ ಸಮಿತಿ ರಚನೆ ಮಾಡುವುದಕ್ಕೆ ಆದೇಶಿಸಿದ್ದರು.

ಸಮಿತಿಯಲ್ಲಿದ್ದ ಸದಸ್ಯರು

ಬರಗೂರು ರಾಮ ಚಂದ್ರಪ್ಪ, ಎಸ್‌.ಜಿ.ಸಿದ್ದರಾಮಯ್ಯ, ಹಂಪ ನಾಗರಾಜಯ್ಯ, ಕೆ.ವಿ.ಚಿದಾನಂದ, ಮೀನಾಕ್ಷಿ ಬಾಳಿ, ಎಂ.ಎಸ್.ಆಶಾದೇವಿ, ಸಿ.ಎಸ್‌. ದ್ವಾರಕಾನಾಥ್, ಮೂಡ್ನಾಕೂಡು ಚಿನ್ನಸ್ವಾಮಿ ಹಾಗೂ ಕಾಳೇಗೌಡ ಅವರು ಇದ್ದರು,

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+