ಕೈತುಂಬಾ ಕಾಸು.. ಬಂಡಾವಳ ಮಾರುಕಟ್ಟೆಯಲ್ಲಿ ಇವರೇ ಬಾಸು!

ಮುಂಬೈ: ಭಾರತೀಯ ಬಂಡವಾಳ ಮಾರುಕಟ್ಟೆ ಸತತ 3ನೇ ದಿನವೂ ಇತಿಹಾಸ ಬರೆದಿದೆ. ಷೇರುಪೇಟೆ ರಾಕೆಟ್ ರೀತಿ ಮುನ್ನುಗ್ಗಿತ್ತಿದ್ದು, ಇಂದು ಕೂಡ ತನ್ನ ಗೆಲುವಿನ ನಾಗಾಲೋಟ ಮುಂದುವರಿಸಿದ ಸೆನ್ಸೆಕ್ಸ್ ಹಾಗೂ ನಿಫ್ಟಿ 50 ಐತಿಹಾಸಿಕ ಮಟ್ಟ ತಲುಪಿದೆ. ಹಾಗಾದರೆ ಈ ದಿನ ಲಾಭ ಮಾಡಿದ ಷೇರುಗಳು ಯಾವುವು? ಷೇರುಪೇಟೆ ಇಷ್ಟು ಲಾಭ ಗಳಿಸಲು ಕಾರಣ ಏನು? ಸಂಪೂರ್ಣ ಮಾಹಿತಿ ಇಲ್ಲಿದೆ.

ಎಚ್‌ಡಿಎಫ್‌ಸಿ & ಎಚ್‌ಡಿಎಫ್‌ಸಿ ಬ್ಯಾಂಕ್ ವಿಲೀನವಾಗಿದ್ದು, ಶುಕ್ರವಾರ ಈ ಬಗ್ಗೆ ನಿರ್ಧಾರ ಪ್ರಕಟವಾಗಿತ್ತು. ಜುಲೈ 1ರಿಂದ ಎಚ್‌ಡಿಎಫ್‌ಸಿ & ಎಚ್‌ಡಿಎಫ್‌ಸಿ ಬ್ಯಾಂಕ್ ಅಧಿಕೃತವಾಗಿ ವಿಲೀನವಾಗಿವೆ. ಹೀಗಾಗಿ ಇಂದು ಷೇರುಪೇಟೆ ಮೇಲೆ ಸಾಕಷ್ಟು ನಿರೀಕ್ಷೆ ಇತ್ತು. ಅದ್ರಲ್ಲೂ ಬ್ಯಾಂಕಿಂಗ್ ವಲಯದ ಷೇರುಗಳ ಮೇಲೆ ಸಾಕಷ್ಟು ವಿಶ್ವಾಸ ಕೂಡ ಇತ್ತು. ಹೀಗೆ ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿದ್ದವರಿಗೆ ಇಂದು ಬೆಳಗ್ಗೆಯಿಂದ ಸಖತ್ ಪ್ರಾಫಿಟ್ ಸಿಕ್ಕಿದೆ. ಹಾಗಾದರೆ ಯಾವ ಷೇರು ಅತಿಹೆಚ್ಚು ಗಳಿಸಿದೆ? ಯಾವ ಷೇರುಗಳು ಅತಿಹೆಚ್ಚು ನಷ್ಟವನ್ನ ಅನುಭವಿಸಿವೆ? ಮುಂದೆ ಓದಿ.

Indian Stock Market

ಅತಿಹೆಚ್ಚು ಗಳಿಸಿದ ಷೇರು ಕಂಪನಿಗಳು

ಅಂದಹಾಗೆ ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳು ಇಂದು ಶೇ. 2.42ರಷ್ಟು ಏರಿಕೆ ಕಾಣುವ ಮೂಲಕ 61 ಅಂಕ ಗಳಿಸಿವೆ. ಈ ಮೂಲಕ ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳು 2,612 ಅಂಕದೊಂದಿಗೆ ದಿನದ ವಹಿವಾಟು ಮುಗಿಸಿವೆ. ಐಟಿಸಿ ಕಂಪನಿ ಷೇರು ಶೇ. 3.17ರಷ್ಟು ಏರಿಕೆ ಕಂಡಿದ್ದು, 14 ಅಂಕದೊಂದಿಗೆ 465ದಲ್ಲಿ ವಹಿವಾಟು ಮುಗಿಸಿದೆ. ಹಾಗೇ ಬಜಾಜ್ ಫೈನಾನ್ಸ್ ಸಂಸ್ಥೆ ಷೇರು 177 ಅಂಕ ಏರಿಕೆಯೊಂದಿಗೆ 7,338ದಲ್ಲಿ ವಹಿವಾಟು ಮುಗಿಸಿದೆ. ಎಸ್‌ಬಿಐ 12.55 ಅಂಕ ಏರಿಕೆ ಮೂಲಕ 585 ಅಂಕದೊಂದಿಗೆ ವಹಿವಾಟು ಮುಗಿಸಿದ್ದು, ಪ್ರಮುಖವಾಗಿ ಎಚ್‌ಡಿಎಫ್‌ಸಿ ಷೇರುಗಳು 50 ಅಂಕ ಏರಿಕೆ ಕಂಡು 2,872 ಅಂಕದೊಂದಿಗೆ ವಹಿವಾಟು ಮುಗಿಸಿದೆ.

ಸೆನ್ಸೆಕ್ಸ್ ಗಳಿಸಿದ್ದು 486 ಅಂಕ!

ಹೀಗೆ ಎಚ್‌ಡಿಎಫ್‌ಸಿ & ಎಚ್‌ಡಿಎಫ್‌ಸಿ ಬ್ಯಾಂಕ್ ವಿಲೀನದ ನಂತರ ಮೊದಲ ದಿನ ಭಾರತೀಯ ಷೇರು ಮಾರುಕಟ್ಟೆ ಝಗಮಗಿಸಿದೆ. ಬೆಳಗ್ಗೆಯಿಂದಲೇ ಷೇರುಪಟೆಯಲ್ಲಿ ಗೂಳಿಯ ಆರ್ಭಟವು ಜೋರಾಗಿತ್ತು. ಇನ್ನು HDFC ಷೇರುಗಳಲ್ಲಿ ಹೂಡಿಕೆ ಮಾಡಿದ್ದವರಿಗೆ ಲಾಟರಿ ಹೊಡೆದಿತ್ತು. ಎಚ್‌ಡಿಎಫ್‌ಸಿ & ಎಚ್‌ಡಿಎಫ್‌ಸಿ ಬ್ಯಾಂಕ್ ವಿಲೀನ ಪ್ರಕ್ರಿಯೆ ಹಿನ್ನೆಲೆ ಈ ಬದಲಾವಣೆಗಳನ್ನ ಷೇರುಪೇಟೆ ಕಂಡಿತ್ತು. ಜೂನ್ 30ರ ಶುಕ್ರವಾರ ರಾತ್ರಿಯೇ ಅಧಿಕೃತವಾಗಿ ಎಚ್‌ಡಿಎಫ್‌ಸಿ & ಎಚ್‌ಡಿಎಫ್‌ಸಿ ಬ್ಯಾಂಕ್ ವಿಲೀನ ಪ್ರಕ್ರಿಯೆಗೆ ಗ್ರೀನ್ ಸಿಗ್ನಲ್ ಸಿಕ್ಕಿತ್ತು. ಬಳಿಕ ಇಂದು ಅಂದರೆ ಮೊದಲ ಸೋಮವಾರವೇ ಭಾರತೀಯ ಬಂಡವಾಳ ಮಾರುಕಟ್ಟೆ ರಾಕೆಟ್ ರೀತಿ ಮುನ್ನುಗ್ಗಿದೆ. ಬಿಎಸ್​ಇ ಸೆನ್ಸೆಕ್ಸ್ (BSE Sensex) 486 ಅಂಕ ಗಳಿಸಿ 65,205ದ ಗಡಿ ದಾಟಿದೆ.

ಬ್ಯಾಂಕಿಂಗ್ ವಲಯಕ್ಕೆ ಹೊಸ ಹುಮ್ಮಸ್ಸು!

ಬಿಎಸ್​ಇ ಸೆನ್ಸೆಕ್ಸ್ ರೀತಿ ಎನ್​ಎಸ್​ಇ ನಿಫ್ಟಿ ಅಥವಾ ನಿಫ್ಟಿ 50 ಕೂಡ ಹೊಸ ದಾಖಲೆ ಬರೆದಿದೆ. 133 ಅಂಕ ಏರಿಕೆ ಮೂಲಕ ನಿಫ್ಟಿ 50 ಈಗ 19,322 ಅಂಕದೊಂದಿಗೆ ವಹಿವಾಟು ಮುಗಿಸಿದೆ. ಪ್ರಮುಖವಾಗಿ ಬ್ಯಾಂಕಿಂಗ್ ವಲಯದ ಷೇರು ಸೂಚ್ಯಂಕ ತೋರಿಸುವ ಬ್ಯಾಂಕ್ ನಿಫ್ಟಿ ಇಂದು ಹೂಡಿಕೆದಾರರಿಗೆ ಜಾಕ್‌ಪಾಟ್ ಕೊಟ್ಟಿದೆ. ಒಂದೇ ದಿನ ಬರೋಬ್ಬರಿ 410 ಅಂಕಗಳನ್ನು ಗಳಿಸಿ ಬ್ಯಾಂಕ್ ನಿಫ್ಟಿ 45,158 ಅಂಕಗಳೊಂದಿಗೆ ಇಂದಿನ ವಹಿವಾಟನ್ನು ಮುಗಿಸಿದೆ.

ಇತಿಹಾಸ ಸೃಷ್ಟಿಸಿದ ಭಾರತೀಯ ಬ್ಯಾಂಕ್

ಎಚ್‌ಡಿಎಫ್‌ಸಿ & ಎಚ್‌ಡಿಎಫ್‌ಸಿ ಬ್ಯಾಂಕ್ ವಿಲೀನ ಮುಗಿದ ನಂತರ ಭಾರತದ ಷೇರುಪೇಟೆಯ ಹೂಡಿಕೆದಾರರಿಗೆ ಡಬಲ್ ಲಾಟರಿ ಸಿಕ್ಕಂತಾಗಿದೆ. ಎಚ್‌ಡಿಎಫ್‌ಸಿ ವಿಲೀನ ಜುಲೈ 1ರಿಂದಲೇ ಜಾರಿ ಬಂದಿದ್ದು, ಎಚ್‌ಡಿಎಫ್‌ಸಿ ಬ್ಯಾಂಕ್‌ ಘಟಕ 12 ಕೋಟಿ ಗ್ರಾಹಕರನ್ನು ಹೊಂದಿರಲಿದೆ. ಬ್ಯಾಂಕ್‌ನ ಶಾಖೆ ನೆಟ್‌ವರ್ಕ್‌ ಇದೀಗ 8,300ಕ್ಕೆ ಹೆಚ್ಚಲಿದ್ದು, 1,77,000ಕ್ಕಿಂತಲೂ ಹೆಚ್ಚು ಉದ್ಯೋಗಿಗಳನ್ನು ಹೊಂದಿರಲಿದೆ. ಈ ಮೂಲಕ ಜಗತ್ತಿನ ಅತಿಮೌಲ್ಯಯುತ ಬ್ಯಾಂಕ್‌ಗಳ ಸಾಲಿಗೆ ಎಚ್‌ಡಿಎಫ್‌ಸಿ ಸೇರ್ಪಡೆ ಆಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+