ಅಬ್ಬಬ್ಬಾ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
ಭಾರತೀಯ ಷೇರು ಮಾರುಕಟ್ಟೆ ಹೊಸ ದಾಖಲೆಯ ಬರೆದಿದ್ದು ರಾಕೆಟ್ ವೇಗದಲ್ಲಿ ಮುನ್ನುಗ್ಗುತ್ತಿದೆ. ಭಾರತೀಯ ಷೇರು ಮಾರುಕಟ್ಟೆಗೆ ಹುಮ್ಮಸ್ಸು ಬಂದಿದೆ. ಸಾರ್ವತ್ರಿಕ ಚುನಾವಣೆ ಬಂದ ಸಮಯಕ್ಕೆ ಷೇರು ಪೇಟೆ ಮತ್ತಷ್ಟು ಏರಿಕೆ ಕಂಡಿದೆ. 1 ವಾರದಿಂದ ಷೇರು ಮಾರುಕಟ್ಟೆಯಲ್ಲಿ ಭರ್ಜರಿ ಲಾಭವೆ ಮಾಡುತ್ತಿದ್ದಾರೆ ಜನ. ಇಂದು ಒಂದೇ ದಿನ ಸೆನ್ಸೆಕ್ಸ್ ದಾಖಲೆಯ ಪ್ರಮಾಣದಲ್ಲಿ ಏರಿಕೆ ಕಂಡಿದೆ.
ಷೇರು ಮಾರುಕಟ್ಟೆಯಲ್ಲಿ ಪ್ರಮುಖ ಸೂಚ್ಯಂಕ ಬಿಎಸ್ಇ ಸೆನ್ಸೆಕ್ಸ್ (BSE Sensex) & ಎನ್ಎಸ್ಇ ನಿಫ್ಟಿ ಐತಿಹಾಸಿಕ ಹಂತ ತಲುಪಿವೆ. ಬಿಎಸ್ಇ ಸೆನ್ಸೆಕ್ಸ್ ಇಂದು ಗರಿಷ್ಠವಾಗಿ, 1,000 ಅಂಕ ಏರಿಕೆ ಕಂಡು 74,000 ಗಡಿ ದಾಟಿತ್ತು. ಈ ನಡುವೆ ಎನ್ಎಸ್ಇ ನಿಫ್ಟಿ ಅಥವಾ ನಿಫ್ಟಿ-50 300ಕ್ಕೂ ಹೆಚ್ಚು ಅಂಕಗಳ ಏರಿಕೆ ಕಂಡು 22,400 ಅಂಕಕ್ಕೂ ತಲುಪಿತ್ತು. ಇದು ಹೊಸ ದಾಖಲೆಯನ್ನ ಸೃಷ್ಟಿಸಿದೆ ಅಲ್ಲದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೂಡ ಭಾರತದ ಷೇರು ಪೇಟೆ ಹೊಸ ಸಾಧನೆ ಮಾಡಲು ಕಾರಣವಾಗಿದೆ.

ಹೂಡಿಕೆದಾರರಿಗೆ ಹೇಗೆ ಲಾಭ?
ದೇಶದ ಆರ್ಥಿಕತೆಯಲ್ಲಿ ಹೆಚ್ಚು ದುಡ್ಡು ಓಡಾಡುವ ಜಾಗ ಷೇರು ಮಾರುಕಟ್ಟೆ ಅಂತಾರೆ. ಆದರೆ ಈ ಮಾತು ಅದೆಷ್ಟು ನಿಜಾನೋ ಅಥವಾ ಅದೆಷ್ಟು ಸುಳ್ಳೋ ಗೊತ್ತಿಲ್ಲ. ಆದರೂ ಷೇರು ಮಾರುಕಟ್ಟೆಯ ಕ್ರೇಜ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಈಗ ಮತ್ತೊಂದು ಗುಡ್ ನ್ಯೂಸ್ ಸಿಕ್ಕಿದ್ದು, ಭಾರತದ ಷೇರು ಮಾರುಕಟ್ಟೆ ಮತ್ತೆ ಸಾರ್ವಕಾಲಿಕ ದಾಖಲೆ ಬರೆದಿದೆ. ಹೂಡಿಕೆದಾರರಿಗೆ, ಕೇವಲ 1 ದಿನದಲ್ಲಿ ಲಕ್ಷ ಲಕ್ಷ ಕೋಟಿ ರೂಪಾಯಿ ಲಾಭ ಆಗಿದೆ. ಇಂದು ನಿಫ್ಟಿ 50 ಭರ್ತಿ 300ಕ್ಕೂ ಹೆಚ್ಚು ಅಂಕ ಏರಿಕೆ ಕಂಡು ಇತಿಹಾಸ ನಿರ್ಮಾಣ ಮಾಡಿತ್ತು. ಕೊನೆಗೆ ಒಂದಷ್ಟು ಅಂಕ ಕುಸಿತ ಕಂಡರೂ ಅಂತಿಮವಾಗಿ 203 ಅಂಕ ಏರಿಕೆ ಮೂಲಕ 22,326ಕ್ಕೆ ತನ್ನ ದಿನದ ವಹಿವಾಟು ಮುಗಿಸಿದೆ ನಿಫ್ಟಿ-50.
ಏರಿಕೆ ಕಂಡು ಹೂಡಿಕೆದಾರರು ಖುಷ್!
ಸಾಮಾನ್ಯವಾಗಿ ಷೇರುಪೇಟೆ ಮೇಲೆ ಲೋಕಸಭೆ ಚುನಾವಣೆ ಪರಿಣಾಮ ಬೀರುತ್ತೆ ಎಂಬ ಮಾತುಗಳು ಇವೆ. ಆದ್ರೆ ಇಂದಿನ ಮಾರುಕಟ್ಟೆ ಏರಿಕೆಗೆ ನಿಖರ ಕಾರಣಗಳು ಇನ್ನೂ ಸ್ಪಷ್ಟವಾಗಿಲ್ಲ. ಆದ್ರೆ ವಿದೇಶಿ ಷೇರು ಮಾರುಕಟ್ಟೆಗಳು ಈಗ ಭಯದಲ್ಲಿ ಇರುವಾಗ ಭಾರತ ಷೇರು ಪೇಟೆ, ಉತ್ತಮವಾಗಿ ವಹಿವಾಟು ನಡೆಸುತ್ತಿದೆ. ಅಲ್ಲದೆ ಹೂಡಿಕೆ ಮಾಡಿದ ಜನರಿಗೂ ಉತ್ತಮ ಲಾಭವನ್ನೇ ತಂದುಕೊಡುತ್ತಿದೆ. ಇದು ಹೂಡಿಕೆದಾರರಿಗೆ ಲಾಟರಿ ಬಂದಂತೆ ಆಗಿದೆ. ಅಲ್ಲದೆ ಈ ಮೂಲಕ ಭಾರತೀಯ ಷೇರು ಪೇಟೆಯ ಮೇಲೆ ಹೂಡಿಕೆದಾರರ ನಂಬಿಕೆ ಕೂಡ ಹೆಚ್ಚಾಗಿದೆ.












Click it and Unblock the Notifications