ಬೆಳ್ಳಂಬೆಳಗ್ಗೆ ಷೇರುಪೇಟೆಯಲ್ಲಿ ದೀಪಾವಳಿ: ಹೂಡಿಕೆದಾರರಿಗೆ ಎಷ್ಟು ಲಾಭವಾಯ್ತು ಗೊತ್ತಾ?
ಮುಂಬೈ: ಎಚ್‌ಡಿಎಫ್‌ಸಿ & ಎಚ್‌ಡಿಎಫ್‌ಸಿ ಬ್ಯಾಂಕ್ ವಿಲೀವಾದ ನಂತರ ಮೊದಲ ದಿನವೇ ಭಾರತೀಯ ಷೇರು ಮಾರುಕಟ್ಟೆ ಝಗಮಗಿಸಿದೆ. ಬೆಳಗ್ಗೆಯಿಂದಲೇ ಷೇರುಪಟೆಯಲ್ಲಿ ಗೂಳಿ ಆರ್ಭಟ ಜೋರಾಗಿದ್ದು, ಎಚ್‌ಡಿಎಫ್‌ಸಿ ಷೇರುಗಳಲ್ಲಿ ಹೂಡಿಕೆ ಮಾಡಿದ್ದವರಿಗೆ ಲಾಟರಿ ಹೊಡೆದಂತಾಗಿದೆ. ಹಾಗಾದ್ರೆ ಏನ್ ಹೇಳುತ್ತೆ ಇಂದಿನ ಷೇರುಪೇಟೆ? ಸಂಪೂರ್ಣ ಮಾಹಿತಿ ಇಲ್ಲಿದೆ ನಿಮಗಾಗಿ.
ಕಳೆದ ವಾರ ಷೇರು ಮಾರುಕಟ್ಟೆಯಲ್ಲಿ ಹೂಡಿಕೆದಾರರಿಗೆ ಬಂಪರ್ ಸಿಕ್ಕಿತ್ತು. ಎಚ್‌ಡಿಎಫ್‌ಸಿ & ಎಚ್‌ಡಿಎಫ್‌ಸಿ ಬ್ಯಾಂಕ್ ವಿಲೀನ ಪ್ರಕ್ರಿಯೆ ಹಿನ್ನೆಲೆಯಲ್ಲಿ ಈ ರೀತಿಯ ಬದಲಾವಣೆಗಳನ್ನ ಷೇರುಪೇಟೆ ಕಂಡಿತ್ತು. ಜೂನ್ 30ರ ಶುಕ್ರವಾರ ರಾತ್ರಿಯೇ ಅಧಿಕೃತವಾಗಿ ಎಚ್‌ಡಿಎಫ್‌ಸಿ & ಎಚ್‌ಡಿಎಫ್‌ಸಿ ಬ್ಯಾಂಕ್ ವಿಲೀನ ಪ್ರಕ್ರಿಯೆಗೆ ಗ್ರೀನ್ ಸಿಗ್ನಲ್ ಸಿಕ್ಕಿತ್ತು. ಬಳಿಕ ಇಂದು ಅಂದರೆ ಮೊದಲ ಸೋಮವಾರವೇ ಭಾರತೀಯ ಬಂಡವಾಳ ಮಾರುಕಟ್ಟೆ ರಾಕೆಟ್ ರೀತಿ ಮುಗ್ಗಿದೆ. ಇತ್ತೀಚಿನ ಮಾಹಿತಿಯಂತೆ ಬಿಎಸ್ಇ ಸೆನ್ಸೆಕ್ಸ್ (BSE Sensex) 370 ಅಂಕ ಗಳಿಸಿ 65,000ದ ಗಡಿ ದಾಟಿದೆ. ಹಾಗೇ ಇನ್ನುಳಿದ ಸೂಚ್ಯಂಕಗಳ ಮಾಹಿತಿ ಮುಂದೆ ಇದೆ ನಿಮಗಾಗಿ.

ಬ್ಯಾಂಕಿಂಗ್ ವಲಯಕ್ಕೆ ಹೊಸ ಹುಮ್ಮಸ್ಸು!
ಬಿಎಸ್ಇ ಸೆನ್ಸೆಕ್ಸ್ ರೀತಿ ಎನ್ಎಸ್ಇ ನಿಫ್ಟಿ ಅಥವಾ ನಿಫ್ಟಿ 50 ಕೂಡ ಹೊಸ ದಾಖಲೆ ಬರೆದಿದೆ. ಸುಮಾರು 110 ಅಂಕ ಏರಿಕೆ ಮೂಲಕ ನಿಫ್ಟಿ 50 ಈಗ 19,300ರ ಆಸುಪಾಸಲ್ಲಿ ಟ್ರೇಡಿಂಗ್ ನಡೆಸುತ್ತಿದೆ. ಎಚ್‌ಡಿಎಫ್‌ಸಿ ಷೇರು 100 ಅಂಕ ಏರಿಕೆಯ ಜೊತೆ 2,900ರ ಗಡಿ ದಾಟಿದೆ. ಎಚ್‌ಡಿಎಫ್‌ಸಿ ಬ್ಯಾಂಕ್ ಷೇರುಗಳು ಕೂಡ ಹೊಸ ದಾಖಲೆ ಬರೆದಿದ್ದು 50 ಅಂಕ ಏರಿಕೆ ಕಂಡು 1,755ರ ಗಡಿ ದಾಟಿದೆ. ಪ್ರಮುಖವಾಗಿ ಬ್ಯಾಂಕಿಂಗ್ ವಲಯದ ಷೇರಿನ ಸೂಚ್ಯಂಕ ತೋರಿಸುವ ಬ್ಯಾಂಕ್ ನಿಫ್ಟಿ ಹೂಡಿಕೆದಾರರಿಗೆ ಜಾಕ್‌ಪಾಟ್ ಕೊಟ್ಟಿದೆ. ಒಂದೇ ದಿನ 500 ಅಂಕ ಗಳಿಸಿ ಬ್ಯಾಂಕ್ ನಿಫ್ಟಿ 45,200ರ ಆಸುಪಾಸಿನಲ್ಲಿ ಟ್ರೇಡ್ ಮಾಡುತ್ತಿದೆ.
ಇತಿಹಾಸ ಸೃಷ್ಟಿಸಿದ ಭಾರತೀಯ ಬ್ಯಾಂಕ್
ಎಚ್‌ಡಿಎಫ್‌ಸಿ & ಎಚ್‌ಡಿಎಫ್‌ಸಿ ಬ್ಯಾಂಕ್ ವಿಲೀನ ಮುಗಿದ ನಂತರ ಭಾರತದ ಷೇರುಪೇಟೆಯ ಹೂಡಿಕೆದಾರರಿಗೆ ಡಬಲ್ ಲಾಟರಿ ಸಿಕ್ಕಂತಾಗಿದೆ. ಎಚ್‌ಡಿಎಫ್‌ಸಿ ವಿಲೀನ ಜುಲೈ 1ರಿಂದಲೇ ಜಾರಿ ಬಂದಿದ್ದು, ಎಚ್‌ಡಿಎಫ್‌ಸಿ ಬ್ಯಾಂಕ್ ಘಟಕ 12 ಕೋಟಿ ಗ್ರಾಹಕರನ್ನು ಹೊಂದಿರಲಿದೆ. ಬ್ಯಾಂಕ್‌ನ ಶಾಖೆ ನೆಟ್‌ವರ್ಕ್ ಇದೀಗ 8,300ಕ್ಕೆ ಹೆಚ್ಚಲಿದ್ದು, 1,77,000ಕ್ಕಿಂತಲೂ ಹೆಚ್ಚು ಉದ್ಯೋಗಿಗಳನ್ನು ಹೊಂದಿರಲಿದೆ. ಈ ಮೂಲಕ ಜಗತ್ತಿನ ಅತಿಮೌಲ್ಯಯುತ ಬ್ಯಾಂಕ್‌ಗಳ ಸಾಲಿಗೆ ಎಚ್‌ಡಿಎಫ್‌ಸಿ ಸೇರ್ಪಡೆ ಆಗಿದೆ. ಅದರ ಸಂಪೂರ್ಣ ಮಾಹಿತಿ ಮುಂದೆ ಇದೆ ಓದಿ.

ಎಚ್‌ಡಿಎಫ್‌ಸಿ ವಿಲೀನದ ಪ್ರಮುಖ ಬೆಳವಣಿಗೆಗಳು
1) ಎಚ್‌ಡಿಎಫ್‌ಸಿ & ಎಚ್‌ಡಿಎಫ್‌ಸಿ ಬ್ಯಾಂಕ್ ವಿಲೀನದ ಬಗ್ಗೆ 2022ರ ಏಪ್ರಿಲ್ 4ರಂದು ಘೋಷಣೆ.
2) ವಿಲೀನ ಪ್ರಕ್ರಿಯೆ ಮೂಲಕ ಶೇಕಡಾ 41ರಷ್ಟು ಪಾಲು ಪಡೆಯಲಿದೆ ಎಚ್‌ಡಿಎಫ್‌ಸಿ.
3) ವಿಲೀನದ ನಂತರ ಸಂಯೋಜಿತ ಕಂಪನಿ 1,77,000ಕ್ಕಿಂತ ಹೆಚ್ಚು ಉದ್ಯೋಗಿಗಳನ್ನು ಹೊಂದಿರುತ್ತದೆ.
4) ಎಚ್‌ಡಿಎಫ್‌ಸಿ ಬ್ಯಾಂಕ್ ಗ್ರಾಹಕರ ಸಂಖ್ಯೆ ಇನ್ನುಮುಂದೆ ಬರೋಬ್ಬರಿ 12 ಕೋಟಿಗೆ ತಲುಪಲಿದೆ.
5) ಜುಲೈ 1ರಿಂದ ಎಚ್‌ಡಿಎಫ್‌ಸಿ ವಿಲೀನ ಜಾರಿಗೆ ಬರುವ ಬಗ್ಗೆ ಎರಡೂ ಸಂಸ್ಥೆಗಳ ಮಂಡಳಿಯಲ್ಲಿ ತೀರ್ಮಾನ.
ಒಟ್ನಲ್ಲಿ ಭಾರತೀಯ ಬ್ಯಾಂಕಿಂಗ್ ವಲಯದ ಬಹುದೊಡ್ಡ ಬೆಳವಣಿಗೆ ನಡುವೆ ಭಾರತದ ಷೇರುಪೇಟೆಗೆ ಈ ಬಾರಿ ದೀಪಾವಳಿ ಬಹುಬೇಕ ಬಂದಿದೆ. ಬಂಡವಾಳ ಮಾರುಕಟ್ಟೆಯನ್ನು ನಂಬಿದ್ದವರಿಗೆ ಭರ್ಜರಿ ಲಾಭ ಸಿಕ್ಕಿದೆ. ಹಾಗೇ ಬಂಡವಾಳ ಮಾರುಕಟ್ಟೆಯಲ್ಲಿ ಪ್ರಮುಖ ಸೂಚ್ಯಂಕಗಳು ಐತಿಹಾಸಿಕ ಮಟ್ಟ ತಲುಪಿರುವುದು ಕೂಡ ವಿಶೇಷವೇ ಸರಿ. ಜವರಿಯಲ್ಲಿ ಷೇರುಪೇಟೆ ಒಂದಷ್ಟು ಎಡವಿದ್ದರೂ ಇದೀಗ ಭರ್ಜರಿ ಲಾಭದತ್ತ ಮುನ್ನುಗ್ಗುತ್ತಿದೆ. ಇನ್ನು ಷೇರುಪೇಟೆ ಭರ್ಜರಿ ಲಾಭಕ್ಕೆ ಎಚ್‌ಡಿಎಫ್‌ಸಿ & ಎಚ್‌ಡಿಎಫ್‌ಸಿ ಬ್ಯಾಂಕ್ ವಿಲೀನ ಪ್ರಕ್ರಿಯೆ ಸಾಕಷ್ಟು ಬಲ ತುಂಬಿದೆ. ಈ ಎಲ್ಲಾ ಬೆಳವಣಿಗೆ ಮೂಲಕ ಭಾರತೀಯ ಷೇರುಮಾರುಕಟ್ಟೆ ವಿದೇಶಿ ಹೂಡಿಕೆದಾರರನ್ನ ಮತ್ತೆ ತನ್ನತ್ತ ಆಕರ್ಶಿಸುತ್ತಿದೆ.












Click it and Unblock the Notifications