ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ 2,71,202 ಹೊಸ ಕೊರೊನಾ ಕೇಸ್: 314 ಸಾವುಗಳು- 1,702 ಓಮಿಕ್ರಾನ್ ಪ್ರಕರಣ

|
Google Oneindia Kannada News

ನವದೆಹಲಿ ಜನವರಿ 16: ದೇಶದಲ್ಲಿ ಕೊರೊನಾದೊಂದಿಗೆ ಓಮಿಕ್ರಾನ್ ಕೂಡ ಶರವೇಗದಲ್ಲಿ ಹರಡುತ್ತಿದೆ. ಆದರೆ ಹೆಚ್ಚಿನ ಪ್ರಕರಣಗಳು ಬೆಳಕಿಗೆ ಬರುತ್ತಿಲ್ಲ. ಹೀಗಾಗಿ ಓಮಿಕ್ರಾನ್ ಈಗಾಗಲೇ ಸಮುದಾಯ ಪ್ರಸರಣ ಆರಂಭವಾಗಿದ್ದು ರೋಗಿಗಳಿಗೆ ಯಾವುದೇ ಇತಿಹಾಸವಿಲ್ಲದೇ ಪತ್ತೆಯಾಗುತ್ತಿದ್ದಾರೆಂದು ದೆಹಲಿಯ ಇನ್‌ಸ್ಟಿಟ್ಯೂಟ್ ಆಫ್ ಲಿವರ್ ಅಂಡ್ ಬಿಲಿಯರಿ ಸರ್ವಿಸಸ್ ನಡೆಸಿದ ಅರೆಸೆಂಟ್ ಅಧ್ಯಯನ ತಿಳಿಸಿದೆ. ಇದರಿಂದಾಗಿ ಕೊರೊನಾದೊಂದಿಗೆ ಓಮಿಕ್ರಾನ್ ಭೀತಿ ಹೆಚ್ಚಾಗುತ್ತಿದೆ. ದಿನಕಳೆದಂತೆ ಕೊರೊನಾ ಸೋಂಕಿತ ಪ್ರಕರಣಗಳ ಸಂಖ್ಯೆ ದೇಶದಲ್ಲಿ ವೇಗವಾಗಿ ಹೆಚ್ಚಾಗುತ್ತಿವೆ. ಜೊತೆಗೆ ಸಾವಿನ ಸಂಖ್ಯೆ ಕೂಡ ಹೆಚ್ಚಾಗಿದೆ.

ಹೆಚ್ಚಿನ ಓಮಿಕ್ರಾನ್ ಪ್ರಕರಣಗಳು ಲಕ್ಷಣರಹಿತವಾಗಿದ್ದು, ಅನೇಕ ಸೋಂಕಿತರು ಆಸ್ಪತ್ರೆಗೆ ದಾಖಲಾಗುತ್ತಿಲ್ಲ ಎಂದು ಅದು ಬಹಿರಂಗಪಡಿಸಿದೆ. ಆದ್ದರಿಂದ ಸಂಪೂರ್ಣ ಜನಸಂಖ್ಯಾ ಮತ್ತು ಕ್ಲಿನಿಕಲ್ ವಿವರಗಳನ್ನು ಆಧರಿಸಿ ಓಮಿಕ್ರಾನ್ ಸಮುದಾಯದಿಂದ ಸಮುದಾಯಕ್ಕೆ ಹರಡಲು ಆರಂಭಿಸಿದೆ ಎಂದು ಅಧ್ಯಯನ ತಿಳಿಸಿದೆ.

82 ಓಮಿಕ್ರಾನ್ ರೋಗಿಗಳಲ್ಲಿ, 72 ಜನರು ಲಸಿಕೆ ಪಡೆದಿದ್ದಾರೆ. ಇದರಲ್ಲಿ 40 ಜನ ಕೋವಿಶೀಲ್ಡ್ ಸಂಪೂರ್ಣವಾಗಿ ಲಸಿಕೆ ಹಾಕಿಸಿಕೊಂಡವರಾಗಿದ್ದಾರೆ. ಕೋವಾಕ್ಸಿನ್ (ಶೇ. 12), ಫೈಜರ್ (ಶೇ. 11), ಮಾಡರ್ನಾ (ಶೇ. ನಾಲ್ಕು), ಸ್ಪುಟ್ನಿಕ್ ವಿ (ಶೇ. ನಾಲ್ಕು), ಜಾನ್ಸನ್ ಮತ್ತು ಜಾನ್ಸನ್ (ಶೇ. ಒಂದು) ಪಡೆದಿದ್ದಾರೆ.

Community Transmission of Omicron? New Indian Study
ಓಮಿಕ್ರಾನ್‌ನ ಸಮುದಾಯ ಪ್ರಸರಣದ ಪುರಾವೆಗಳನ್ನು ಒದಗಿಸಿದ ಭಾರತದಲ್ಲಿ ಪ್ರಾಯಶಃ ಈ ಅಧ್ಯಯನವು ಮೊದಲನೆಯದು, ಕಳೆದ ವರ್ಷ ನವೆಂಬರ್ 25 ಮತ್ತು ಡಿಸೆಂಬರ್ 23 ರ ನಡುವೆ ದೆಹಲಿಯ ಐದು ಜಿಲ್ಲೆಗಳಾದ ದಕ್ಷಿಣ, ಆಗ್ನೇಯ, ನೈಋತ್ಯ, ಪಶ್ಚಿಮ ಮತ್ತು ಪೂರ್ವದಿಂದ ಸಂಗ್ರಹಿಸಲಾದ ಸಕಾರಾತ್ಮಕ ಪ್ರಕರಣಗಳ ಜೀನೋಮ್ ಅನುಕ್ರಮ ಡೇಟಾವನ್ನು ಪರಿಶೀಲಿಸಿದೆ.

ಪ್ರಪಂಚದಾದ್ಯಂತ ಕಾಡ್ಗಿಚ್ಚಿನಂತೆ ಹರಡುತ್ತಿರುವ ಓಮಿಕ್ರಾನ್, ಕೋವಿಡ್ -19 ರ ರೋಗಲಕ್ಷಣಗಳನ್ನು ಬದಲಾಯಿಸಿದೆ. ಕೇವಲ 13 ಪ್ರತಿಶತದಷ್ಟು ಸೋಂಕಿತ ಜನರು ಈಗ ತಮ್ಮ ವಾಸನೆ ಅಥವಾ ರುಚಿಯನ್ನು ಕಳೆದುಕೊಳ್ಳುತ್ತಿದ್ದಾರೆ. 80 ಪ್ರತಿಶತ ಜನ ಗಂಟಲು ನೋವು ಪ್ರಕರಣಗಳು ಸಾಮಾನ್ಯವಾಗಿದೆ. ಆದರೆ ರುಚಿ ಮತ್ತು ವಾಸನೆಯ ನಷ್ಟವು ಈಗ ಕೋವಿಡ್-ಪಾಸಿಟಿವ್ ಜನರ ಮೇಲೆ ಪರಿಣಾಮ ಬೀರುವ ಸಾಧ್ಯತೆ ಕಡಿಮೆಯಾಗಿದೆ. ಸ್ರವಿಸುವ ಮೂಗು, ಜ್ವರ ಮತ್ತು ಕೆಮ್ಮು ಮುಂತಾದ ವೈರಸ್‌ನ ಇತರ ಲಕ್ಷಣಗಳನ್ನು ಹೊಸ ರೂಪಾಂತರದಿಂದ ಬಳಲುತ್ತಿರುವವರು ಅನುಭವಿಸುವ ಸಾಧ್ಯತೆಯಿದೆ.

ಭಾರತದಲ್ಲಿ ಕೊರೊನಾ ಮೂರನೇ ಅಲೆ ಅರ್ಭಟ ಶುರುವಾಗಿದೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 2,71,202 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿದ್ದು 314 ಜನ ಮಹಾಮಾರಿ ಕೊರೊನಾಕ್ಕೆ ಬಲಿಯಾಗಿದ್ದಾರೆ. ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ, ಭಾನುವಾರ ದೇಶದಲ್ಲಿ 2,71,202 ಪ್ರಕರಣಗಳು ದಾಖಲಾಗಿದ್ದು, 314 ಜನ ಸಾವನ್ನಪ್ಪದ್ದಾರೆ. ಜೊತೆಗೆ 1,702 ಹೊಸ ಓಮಿಕ್ರಾನ್ ಪ್ರಕರಣಗಳು ದಾಖಲಾಗಿವೆ. ಇದುವರೆಗೆ ಒಟ್ಟು 7,743 ಒಮಿಕ್ರಾನ್ ಪ್ರಕರಣಗಳು ಪತ್ತೆಯಾಗಿವೆ. ದೇಶದಲ್ಲಿ ಈವರೆಗೆ 3,71,22,164 ಕೊರೊನಾ ಪ್ರಕರಣಗಳು ದಾಖಲಾಗಿವೆ. 24 ಗಂಟೆಗಳ ಅವಧಿಯಲ್ಲಿ ಸಕ್ರಿಯ ಕೋವಿಡ್ -19 ಪ್ರಕರಣಗಳ ಸಂಖ್ಯೆ 1,32,557 ರಷ್ಟು ಹೆಚ್ಚಾಗಿದ್ದು ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 15,50,377ರಷ್ಟಿದೆ.

ಜೊತೆಗೆ 24 ಗಂಟೆಗಳಲ್ಲಿ 1,38,331 ಜನ ಗುಣಮುಖರಾಗಿದ್ದಾರೆ. ಈವರೆಗೆ ಒಟ್ಟು 3,50,85,721 ಜನ ಚೇತರಿಸಿಕೊಂಡಿದ್ದಾರೆ. ಜನವರಿ 15 ರವರೆಗೆ ಒಟ್ಟು 70,24,48,838 ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ಜನವರಿ 15 ರಂದು 16,65,404 ಮಾದರಿಗಳನ್ನು ಪರೀಕ್ಷಿಸಲಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

English summary
A recent study conducted by the Institute of Liver and Biliary Services in Delhi has indicated community transmission of the Omicron variant as majority of patients infected with the strain had no history.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X