• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭೀಮಾ ಕೋರೆಗಾಂವ್: ಬಂಧಿತ ಆರೋಪಿಗೆ ಐಎಸ್‌ಐ ನಂಟು ಆರೋಪ

|
Google Oneindia Kannada News

ನವದೆಹಲಿ, ಅಕ್ಟೋಬರ್ 13: ಭೀಮಾ ಕೊರೆಗಾಂವ್ ಎಲ್ಗಲ್ ಪರಿಷದ್ ಪ್ರಕರಣದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳವು (ಎನ್‌ಐಎ) ತನ್ನ ಚಾರ್ಜ್‌ಷೀಟ್‌ನಲ್ಲಿ ಸಾಮಾಜಿಕ ಕಾರ್ಯಕರ್ತ ಗೌತಮ್ ನವಲಖಾ ಅವರು ಕಾಶ್ಮೀರಿ ಪ್ರತ್ಯೇಕತಾವಾದಿಗಳು, ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಮತ್ತು ಮಾವೊ ಉಗ್ರರೊಂದಿಗೆ ನಂಟು ಇರಿಸಿಕೊಂಡಿದ್ದರು ಎಂದು ಆರೋಪಿಸಿದೆ.

ಸುಮಾರು ಹತ್ತು ಸಾವಿರ ಪುಟಗಳ ಆರೋಪಪಟ್ಟಿ ಸಲ್ಲಿಸಿರುವ ಎನ್‌ಐಎ, ನವಲಖಾ ಮತ್ತು ಪಾಕಿಸ್ತಾನದ ಐಎಸ್‌ಐನ ಸಕ್ರಿಯ ಸದಸ್ಯ ಗುಲಾಂ ನಬಿ ಫಾಯಿ ಜತೆ ಸಂಬಂಧ ಇರುವುದು ಪತ್ತೆಯಾಗಿದ್ದಾಗಿ ಹೇಳಿದೆ.

ಭೀಮಾ ಕೋರೆಗಾಂವ್: ದೆಹಲಿ ವಿವಿ ಪ್ರಾಧ್ಯಾಪಕ ಸೇರಿ 8 ಮಂದಿ ವಿರುದ್ಧ ಚಾರ್ಜ್‌ಶೀಟ್ಭೀಮಾ ಕೋರೆಗಾಂವ್: ದೆಹಲಿ ವಿವಿ ಪ್ರಾಧ್ಯಾಪಕ ಸೇರಿ 8 ಮಂದಿ ವಿರುದ್ಧ ಚಾರ್ಜ್‌ಶೀಟ್

ಭೀಮಾ ಕೋರೆಗಾಂವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಗೌತಮ್ ನವಲಖಾ ಅವರನ್ನು ಎನ್‌ಐಎ ಬಂಧಿಸಿತ್ತು. ಕಾಶ್ಮೀರಿ ಅಮೆರಿಕನ್ ಕೌನ್ಸಿಲ್‌ ಉದ್ದೇಶಿಸಿದ ಭಾಷಣ ಮಾಡಲು ಅವರು 2010-11ರ ಸಮಯದಲ್ಲಿ ಅಮೆರಿಕಕ್ಕೆ ಮೂರು ಬಾರಿ ತೆರಳಿದ್ದರು. 2011ರಲ್ಲಿ ಎಫ್‌ಬಿಐನಿಂದ ಬಂಧನಕ್ಕೆ ಒಳಗಾದ ಗುಲಾಂ ನಬಿ ಫಾಯಿ ಬಿಡುಗಡೆಗಾಗಿ ಅವರ ಪರ ಅಮೆರಿಕದ ನ್ಯಾಯಾಧೀಶರೊಬ್ಬರಿಗೆ ಪತ್ರ ಬರೆದಿದ್ದರು ಎಂದು ಆರೋಪಿಸಿದೆ.

ಫಾಯಿ ಮೂಲಕ ಪಾಕಿಸ್ತಾನದ ಸೇನೆಯ ಜನರಲ್‌ಗಳಿಗೆ ನವಲಖಾ ಅವರ ಪರಿಚಯವಾಗಿತ್ತು. ಐಎಸ್‌ಐ ನಿರ್ದೇಶನದಂತೆ ಗುಲಾಂ ನಬಿ, ನವಲಖಾ ಅವರನ್ನು ನೇಮಿಸಿದ್ದ. ನವಲಖಾ ಬಳಿ ಇದ್ದ ಡಿಜಿಟಲ್ ಸಾಧನಗಳಿಂದ ವಶಪಡಿಸಿಕೊಳ್ಳಲಾದ ದಾಖಲೆಗಳಿಂದ ಅವರಿಗೆ ಮಾವೋವಾದಿಗಳು ಹಾಗೂ ಐಎಸ್‌ಐ ನಂಟು ಇರುವುದು ದೃಢಪಟ್ಟಿದೆ ಎಂದು ಎನ್‌ಐಎ ಹೇಳಿದೆ.

ಮತ್ತೊಬ್ಬ ಆರೋಪಿಯಾಗಿರುವ ದೆಹಲಿ ವಿಶ್ವವಿದ್ಯಾಲಯದ ಪ್ರೊಫೆಸರ್ ಹನಿ ಬಾಬು ತಮ್ಮ ಮಾವೋವಾದಿ ಸಿದ್ಧಾಂತಗಳ ಮೂಲಕ ವಿದ್ಯಾರ್ಥಿಗಳ ಮೇಲೆ ಪ್ರಭಾವ ಬೀರಲು ಪ್ರಯತ್ನಿಸಿದ್ದರು. ದೆಹಲಿಯಲ್ಲಿನ ವಿದ್ಯಾರ್ಥಿಗಳಲ್ಲಿ, ಮುಖ್ಯವಾಗಿ ದಲಿತರು ಹಾಗೂ ಇತರೆ ವಿದ್ಯಾರ್ಥಿಗಳಲ್ಲಿ ಮಾವೋವಾದಿಗಳ ಮೇಲೆ ಅನುಕಂಪ ಬರುವಂತೆ ಮಾಡಿದ್ದರು ಎಂದು ಆರೋಪಿಸಲಾಗಿದೆ.

English summary
NIA in its chargsheed of Bhima Koregaon case alleged Gautam Navlakha had links with Pakistan's ISI, maoists and Kashmiri separatists.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X