Rameshwar Cafe: ರಾಮೇಶ್ವರ ಕೆಫೆ ಕೇಸ್: ದಾಳಿಗೆ ಸಹಾಯ ಮಾಡಿದ ವ್ಯಕ್ತಿ ಬಂಧನ- ತೀರ್ಥಹಳ್ಳಿ ಉಗ್ರನೊಂದಿಗೆ ಸಂಪರ್ಕ
ಬೆಂಗಳೂರು ಮಾರ್ಚ್ 29: ರಾಮೇಶ್ವರ ಕೆಫೆ ಬಾಂಬ್ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕಷ್ಟು ಹೊಸ ಹೊಸ ವಿಚಾರಗಳು ಬಹಿರಂಗವಾಗುತ್ತಿವೆ. ಸ್ಪೋಟಕ್ಕೆ ಸಹಾಯ ಮಾಡಿದ್ದ ಆರೋಪಿ ಮುಜಾಮಿಲ್ ಷರೀಫ್‌ನ ಬಂಧಿಸಿದ ಎನ್ಐಎ ತೀವ್ರ ವಿಚಾರಣೆ ನಡೆಸಿದ್ದು ಹಲವಾರು ವಿಷಯಗಳನ್ನು ಆರೋಪಿ ಬಾಯಿಬಿಟ್ಟಿದ್ದಾನೆ.
ಎನ್‌ಐಎ ಅಧಿಕಾರಿಗಳಿಂದ ಮುಜಾಮಿಲ್ ನ ತೀವ್ರ ವಿಚಾರಣೆ ನಡೆಸಿದ್ದು ಬಾಂಬರ್ ನ ಪರಿಚಯದ ಬಗ್ಗೆ ಶಂಕಿತ ಆರೋಪಿ ಮುಜಾಮಿಲ್ ಬಾಯಿಬಿಟ್ಟಿದ್ದಾನೆ. ತನ್ನ ಕ್ಲಾಸ್ ಮೆಂಟ್ ಮೂಲಕ ಬಾಂಬರ್ ಪರಿಚಯ ಆಗಿತ್ತು ಎಂದು ಮುಜಾಮಿಲ್ ಹೇಳಿಕೊಂಡಿದ್ದಾನೆ. ಹಾಗಾದ್ರೆ ಮುಜಾಮಿಲ್‌ನ ಕ್ಲಾಸ್ ಮೆಂಟ್ ಯಾರು?

ತೀರ್ಥಹಳ್ಳಿಯ ಮೋಸ್ಟ್ ವಾಂಟೆಡ್ ಅಬ್ದುಲ್ ಮತೀನ್ ತಾಹನೇ ಮುಜಾಮಿಲ್ ಷರೀಫ್ ಕ್ಲಾಸ್ ಮೇಟ್ ಆಗಿದ್ದಾನೆ. SSLC ವರೆಗೂ ಕ್ಲಾಸ್ ಮೇಟ್ ಗಳಾಗಿದ್ದ ತಾಹ ಹಾಗೂ ಮುಜಾಮಿಲ್ ಷರೀಫ್, ಬಳಿಕ ಇಬ್ಬರು ದೂರವಾದ್ರೂ ಫೋನ್ ಮೂಲಕ ಸಂಪರ್ಕದಲ್ಲಿ ಇದ್ದರು.
ಇದಾದ ಬಳಿಕ ಚಿಕನ್ ಕೌಂಟಿ ಒಂದರಲ್ಲಿ ಕೆಲಸ ಮಾಡುತ್ತಿದ್ದ ಮುಜಾಮಿಲ್ ಷರೀಫ್‌ನನ್ನು ಆರು ತಿಂಗಳ ಹಿಂದೆ ತಾಹಾ ಸಂಪರ್ಕ ಮಾಡಿದ್ದನು. ಆರು ತಿಂಗಳ ಹಿಂದೆ ಮತ್ತೆ ಭೇಟಿಯಾಗಿ ಮುಸಾವಿರ್‌ಗೆ ಪರಿಚಯ ಮಾಡಿಸಿದ್ದನು. ಬಳಿಕ ಮುಸಾವಿರ್ ಗೆ ಸಹಾಯ ಮಾಡುವಂತೆಯೂ ಮುಜಾಮಿಲ್ ಷರೀಫ್ಗೆ ಸೂಚಿಸಿದ್ದನು.

ಗೆಳೆಯ ತಾಹಾ ಸೂಚಿಸಿದಂತೆ ಮುಜಾಮಿಲ್ ಷರೀಫ್‌ನು ಮುಸಾವಿರ್ಗೆ ಸಹಾಯ ಮಾಡಿದ್ದನು. ಹೀಗೆ ಬಾಂಬ್ ಇಡಲ ಬೇಕಾದ ಎಲ್ಲಾ ಸೌಕರ್ಯಗಳನ್ನು ಕಲ್ಪಿಸಲಾಗಿತ್ತು. ಅಂದರೆ ಆರು ತಿಂಗಳಿಂದ ಬೆಂಗಳೂರು ಬಾಂಬ್ ಬ್ಲಾಸ್ಟ್ ಫ್ಲಾನ್ ನಡೆದಿತ್ತು. ಸದ್ಯ ಬಂಧಿತ ಚಿಕ್ಕಮಗಳೂರು ಮೂಲದ ಮೂಡಿಗೆರೆಯ ಮುಜಾಮಿಲ್ ಷರೀಫ್ ನಿನ್ನೆ ಎನ್ಐಎ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿತ್ತು. ಆರೋಪಿಯನ್ನು ಸದ್ಯ ಕೋರ್ಟ್ ಏಳು ದಿನಗಳ ಎನ್ಐಎ ಕಸ್ಟಡಿಗೆ ಆದೇಶಿದೆ. ಏಪ್ರಿಲ್ 3ರವರೆಗೂ ಎನ್ ಐ ಎ ಕಸ್ಟಡಿಗೆ ನೀಡಿ ಅದೇಶ ಹೊರಡಿಸಲಾಗಿದೆ.












Click it and Unblock the Notifications