ಕರ್ನಾಟಕ ಸೇರಿದಂತೆ ನಾಲ್ಕು ರಾಜ್ಯಗಳಲ್ಲಿ ದಾಳಿ; ಎಂಟು ಶಂಕಿತ ಉಗ್ರರು ವಶಕ್ಕೆ

ಬಳ್ಳಾರಿ ಡಿಸೆಂಬರ್ 19: ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಸೋಮವಾರ ನಡೆಸಿದ ಕಾರ್ಯಾಚರಣೆಯಲ್ಲಿ ಬಳ್ಳಾರಿ ನಗರದ ಮಿನಾಜ್ ಅಲಿಯಾಸ್ ಎಂಡಿ ಸುಲೈಮಾನ್ ಮತ್ತು ಸೈಯದ್ ಸಮೀರ್ ಅವರನ್ನು ಬಂಧಿಸಿದೆ.

ಐಎಸ್‌ಐಎಸ್ ಉಗ್ರ ಸಂಘಟನೆಯ ಭಾರತದ ಮಾಡ್ಯೂಲ್ ಮೇಲೆ ದೇಶದಾದ್ಯಂತ ನಾಲ್ಕು ರಾಜ್ಯಗಳ 19 ಸ್ಥಳಗಳಲ್ಲಿ ಸೋಮವಾರ ಬೆಳಗಿನ ಜಾವದಲ್ಲಿ ಎನ್‌ಐಎ ದಾಳಿ ನಡೆಸಿ ಸುಧಾರಿತ ಸ್ಪೋಟಕಗಳ ಬಳಸಿ ವಿಧ್ವಂಸಕ ಕೃತ್ಯ ನಡೆಸಲು ಮಾಡಿದ್ದ ಸಂಚಿನ ಪಾಲುದಾರರನ್ನು ಬಂಧಿಸಿದೆ.

NIA Attacks in four states including Karnataka; Eight suspected terrorists were arrested

ಈ ಕಾರ್ಯಾಚರಣೆಯಲ್ಲಿ ನಿಷೇಧಿತ ಭಯೋತ್ಪಾದಕ ಸಂಘಟನೆಯ ಎಂಟು ಆರೋಪಿಗಳನ್ನು ಬಂಧಿಸಿದೆ. ಈ ಉಗ್ರ ಸಂಘಟನೆಯ ಮಾಡ್ಯೂಲ್‌ನ ನೇತೃತ್ವನ್ನು ಬಳ್ಳಾರಿ ಮೂಲದ ಮಿನಾಝ್ ಅಲಿಯಾಸ್ ಎಂಡಿ ಸುಲೈಮಾನ್ ಎಂದು ತಿಳಿದುಬಂದಿದೆ.

ಎನ್‌ಐಎ ನ ವಿವಿಧ ತಂಡಗಳು ಕರ್ನಾಟಕದ ಬಳ್ಳಾರಿ ಮತ್ತು ಬೆಂಗಳೂರು ಸೇರಿದಂತೆ 19 ಸ್ಥಳಗಳ ಮೇಲೆ ದಾಳಿ ನಡೆಸಿವೆ. ಮಹಾರಾಷ್ಟ್ರದ ಅಮರಾವತಿ, ಮುಂಬೈ ಮತ್ತು ಪುಣೆ, ಜಾರ್ಖಂಡ್‌ನ ಜಮ್ಶೆಡ್‌ಪುರ ಮತ್ತು ಬೊಕಾರೊ ಮತ್ತು ದೆಹಲಿಯಲ್ಲಿ ಏಕಕಾಲದಲ್ಲಿ ಈ ದಾಳಿಗಳು ನಡೆದಿವೆ.

ಬಂಧನಕ್ಕೊಳಗಾಗಿರುವ ಎಂಟು ಶಂಕಿತ ಐಸಿಸ್ ಉಗ್ರರು ನಿಷೇಧಿತ ಸಂಘಟನೆಯಾದ ಐಸಿಸ್‌ನ ಭsÀಯೋತ್ಪಾದನೆ ಸಂಬAಧಿತ ಕೃತ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಎನ್‌ಐಎ ನ ದಾಳಿಯಲ್ಲಿ ಸ್ಫೋಟಕ ಕಚ್ಚಾ ಸಾಮಗ್ರಿಗಳಾದ ಸಲ್ಫರ್, ಪೊಟ್ಯಾಸಿಯಮ್ ನೈಟ್ರೇಟ್, ಇದ್ದಿಲು, ಗನ್ ಪೌಡರ್, ಸಕ್ಕರೆ ಮತ್ತು ಎಥೆನಾಲ್ ಮತ್ತು ಹರಿತವಾದ ಆಯುಧಗಳು, ನಗದು ಸ್ಮಾರ್ಟ್ಫೋನ್‌ಗಳು ಮತ್ತು ಇತರ ಡಿಜಿಟಲ್ ಸಾಧನಗಳನ್ನು ವಶಪಡಿಸಿಕೊಳ್ಳಲಾಗಿದೆ.

ಆರಂಭಿಕ ತನಿಖೆಯ ಪ್ರಕಾರ, ಆರೋಪಿಗಳು ಸ್ಫೋಟಕ ಕಚ್ಚಾ ವಸ್ತುಗಳನ್ನು ಐಇಡಿ ತಯಾರಿಕೆಗೆ ಬಳಸಲು ಯೋಜಿಸಿದ್ದರು, ಅದನ್ನು ಭಯೋತ್ಪಾದಕ ಕೃತ್ಯಗಳನ್ನು ನಡೆಸಲು ಬಳಸಬೇಕಾಗಿತ್ತು.

ಆರೋಪಿಗಳು ಐಸಿಸ್ ಉಗ್ರ ಸಂಘಟನೆಯ ಪರವಾಗಿ ದೇಶದಲ್ಲಿ ಹಿಂಸಾತ್ಮಕ ಜಿಹಾದ್ ನಡೆಸುವ ಮತ್ತು ಇತರರನ್ನು ಈ ಮಾರ್ಗಕ್ಕೆ ಸೆಳೆದುಕೊಳ್ಳಲು ಸಕ್ರಿಯರಾಗಿ ಕರ‍್ಯನಿರ್ವಹಿಸುತ್ತಿದ್ದರು. ಇವರು ತಮ್ಮ ಸಂಘಟನೆಗೆ ಸೇರಿಸಿಕೊಳ್ಳುವ ಉದ್ದೇಶಗಳಿಗಾಗಿ ನಿರ್ದಿಷ್ಟವಾಗಿ ಕಾಲೇಜು ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡಿದ್ದರು ಮತ್ತು ಜಿಹಾದ್ ಉದ್ದೇಶಕ್ಕಾಗಿ ಮುಜಾಹಿದೀನ್‌ಗಳ ನೇಮಕಾತಿಗೆ ಸಂಬAಧಿಸಿದ ದಾಖಲೆಗಳನ್ನು ಸಹ ಪ್ರಸಾರ ಮಾಡುತ್ತಿದ್ದರು.

ಈ ಶಂಕಿತ ಉಗ್ರರು ತಮ್ಮ ನಡುವಿನ ಸಂರ್ಪಕಕ್ಕೆ ಎನ್‌ಕ್ರಿಪ್ಟ್ ಮಾಡಿದ ಅಪ್ಲಿಕೇಶನ್‌ಗಳ ಬಳಕೆ ಮಾಡುತ್ತಿದ್ದರು ಎಂದು ತನಿಖಾ ಸಂಸ್ಥೆ ಬಹಿರಂಗಪಡಿಸಿವೆ. ಎನ್‌ಐಎ ಸೋಮವಾರ ಮುಂಜಾನೆ ನಡೆಸಿದ ದಾಳಿಯಿಂದ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಮತ್ತು ಸಿರಿಯಾ (ಐಎಸ್‌ಐಎಸ್) ಸಂಘಟನೆಯು ಭಾರತದ ವಿರೋಧಿ ಭಯೋತ್ಪಾದಕ ಪಿತೂರಿಯನ್ನು ವಿಫಲಗೊಳಿಸಿದೆ.

2023 ರ ಡಿಸೆಂಬರ್ 14 ರಂದು ಐಎಸ್‌ಐಎಸ್ ಪ್ರೇರಿತ ಬಳ್ಳಾರಿ ಮಾಡ್ಯೂಲ್ ವಿರುದ್ಧ ಎನ್‌ಐಎ ಪ್ರಕರಣವನ್ನು ದಾಖಲಿಸಿತ್ತು. ಅಂದಿನಿAದ, ಈ ಘಟಕದ ಸದಸ್ಯರನ್ನು ಪತ್ತೆಹಚ್ಚಿ ಬಂಧಿಸಲು ರಾಜ್ಯ ಪೊಲೀಸ್ ಮತ್ತು ಕೇಂದ್ರದ ಏಜೆನ್ಸಿಗಳೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸಿ ಎನ್‌ಐಎ ಸೋಮವಾರ ದಾಳಿ ನಡೆಸಿದೆ.

ಬಳ್ಳಾರಿಯ ಮಿನಾಜ್ ಅಲಿಯಾಸ್ ಎಂಡಿ ಸುಲೈಮಾನ್ ಮತ್ತು ಸೈಯದ್ ಸಮೀರ್, ಬೆಂಗಳೂರಿನ ಮೊಹಮ್ಮದ್ ಮುನಿರುದ್ದೀನ್, ಸೈಯದ್ ಸಮೀವುಲ್ಲಾ ಅಲಿಯಾಸದ ಸಮಿ, ಎಂಡಿ ಮುಝಮ್ಮಿಲ್, ಮುಂಬೈನ ಅನಾಸ್ ಇಕ್ಬಾಲ್ ಶೇಖ್, ದೆಹಲಿಯ ಶಯಾನ್ ರಹಮಾನ್ ಅಲಿಯಾಸ್ ಹುಸೇನ್ ಮತ್ತು ಜಾರ್ಖಂಡ್‌ನ ಎಂಡಿ ಶಹಬಾಜ್ ಅವರನ್ನು ಬಂಧಿಸಲಾಗಿದೆ. ಈ ಎನ್‌ಐಎ ಕಾರ್ಯಚರಣೆಯಲ್ಲಿ ಕರ್ನಾಟಕ, ಮಹಾರಾಷ್ಟ್ರ ,ಜಾರ್ಖಂಡ್ ಮತ್ತು ದೆಹಲಿ ಪೊಲೀಸರು ಭಾಗವಹಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+