ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತ ಕೇಳೋಕೆ ಹಿಂದಿ ಬೇಕು, ಸಂಸತ್ತಿನಲ್ಲಿ ಯಾಕ್ ಬೇಡ?

|
Google Oneindia Kannada News

ಇತ್ವಾ (ಉ.ಪ್ರ), ನ 18: ಹಿಂದಿಯನ್ನು ಭಲವಂತವಾಗಿ ಹೇರುತ್ತಿರುವುದಕ್ಕೆ ಅಲ್ಲಲ್ಲಿ, ಆಗಾಗ ಪ್ರತಿಭಟನೆಗಳು ನಡೆಯುತ್ತಲೇ ಇರುತ್ತವೆ, ಅದರಂತೆ ಬೆಂಗಳೂರಿನಲ್ಲೂ. ಕೇಂದ್ರ ಸರಕಾರದ ಅಧೀನದ ಕಚೇರಿಗಳಲ್ಲಿ ಹಿಂದಿ ಹೇರಿಕೆ ವಿರುದ್ದ ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸಿದ ಉದಾಹರಣೆಗಳೂ ಸಾಕಷ್ಟಿವೆ.

ಪ್ರತೀ ಸೆಪ್ಟಂಬರ್ 14ರಂದು ಕೇಂದ್ರ ಸರಕಾರದ ಕಚೇರಿಗಳಲ್ಲಿ 'ಹಿಂದಿ ದಿವಸ್' ಎಂದು ಆಚರಿಸಲಾಗುತ್ತಿತ್ತು. ಒಂದು ದಿನ ಇದ್ದ ಈ ಆಚರಣೆ ನಂತರದ ದಿನಗಳಲ್ಲಿ 'ಹಿಂದಿ ಸಪ್ತಾಹ್' ಮತ್ತು 'ಹಿಂದಿ ಪಾಕ್ಷಿಕ್' ಎಂದು ವಿಸ್ತರಣೆಗೊಂಡಿತು.

Ban English and other languages in Parliment, Mulayam

ಈ ಲೇಖನದಲ್ಲಿ ವಿಚಾರಕ್ಕೆ ಬರುವುದಾದರೆ 'ವೋಟು ಕೇಳೋಕೆ ನಿಮಗೆ ಹಿಂದಿ ಬೇಕು, ಸಂಸತ್ತಿನಲ್ಲಿ ನಿಮಗ್ಯಾಕೆ ಇಂಗ್ಲಿಷ್ ಪ್ರೇಮ' ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಮುಲಾಯಂ ಸಿಂಗ್ ಯಾದವ್ ಹೇಳಿದ್ದಾರೆ.

ನಗರದಲ್ಲಿ ಇತ್ವಾ ಹಿಂದಿ ಸೇವಾ ಟ್ರಸ್ಟ್ ಏರ್ಪಡಿಸಿದ್ದ ಸಮಾರಂಭದಲ್ಲಿ ಮಾತನಾಡುತ್ತಿದ್ದ ಮುಲಾಯಂ, ನಾನು ಇಂಗ್ಲಿಷ್ ವಿರೋಧಿಯಲ್ಲ, ಆದರೂ ನಮಗೆ ನಮ್ಮ ಭಾಷೆಯ ಮೇಲೆ ಅಭಿಮಾನವಿರಬೇಕು. ಹೀಗಾಗಿ ಸಂಸತ್ತಿನ ಉಭಯ ಸದನದಲ್ಲಿ ಇಂಗ್ಲಿಷ್ ಪದ ಬಳಸುವುದನ್ನು ನಿಷೇಧಿಸಿ 'ಹಿಂದಿ ಕಡ್ಡಾಯ' ಮಾಡಬೇಕೆಂದು ಆಗ್ರಹಿಸಿದ್ದಾರೆ.

ಮಾತು ಮುಂದುವರಿಸುತ್ತಾ, ದೇಶದ ಹಲವಾರು ರಾಜ್ಯಗಳಲ್ಲಿ ಪ್ರಾದೇಶಿಕ ಭಾಷೆ ಚಾಲ್ತಿಯಲ್ಲಿದೆ. ಆಯಾಯ ರಾಜ್ಯದ ಅಸೆಂಬ್ಲಿಯಲ್ಲಿ ಪ್ರಾದೇಶಿಕ ಭಾಷೆಯನ್ನೇ ಬಳಸಲಿ. ಆದರೆ ಸಂಸತ್ತಿನ ವಿಚಾರಕ್ಕೆ ಬಂದಾಗ ಸಂಸದರು ಪ್ರಾದೇಶಿಕ ಭಾಷೆಯ ಬದಲು ಹಿಂದಿಯಲ್ಲೇ ವ್ಯವಹರಿಸ ಬೇಕೆಂದು ಹೇಳಿದ್ದಾರೆ.

ನಮ್ಮ ದೇಶದ ಏಕತೆಗೆ ಒಂದು ಭಾಷೆ ಬೇಕು. ಹಾಗಾಗಿ ಹಿಂದಿ ಹೊರತು ಪಡಿಸಿ ಸಂಸತ್ತಿನಲ್ಲಿ ಬೇರೆ ಎಲ್ಲಾ ಭಾಷೆಗಳನ್ನು ನಿಷೇಧಿಸ ಬೇಕೆಂದು ಮುಲಾಯಂ ಆಗ್ರಹಿಸಿದ್ದಾರೆ.

ಹಿಂದಿ ಹೊರತು ಪಡಿಸಿ ಮಿಕ್ಕ ಭಾಷೆಗಳನ್ನು ನಿಷೇಧಿಸ ಬೇಕೆನ್ನುವ ಮುಲಾಯಂ ಹೇಳಿಕೆ ಸಮಂಜಸವೇ?

English summary
Ban English and other languages in Parliment, SP supremo Mulayam Singh Yadav.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X