ಹಿಂದಿ ರಾಷ್ಟ್ರಭಾಷೆ ಎಲ್ಲರೂ ಕಲಿಬೇಕು! ಡಿಎಂಕೆ ನಾಯಕನ ವಿರುದ್ಧ ನಿತೀಶ್ ಕುಮಾರ್ ಉದ್ಧಟತನ

ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ನಾಯಕ ಟಿಆರ್ ಬಾಲು ಇಂಡಿಯಾ ಬ್ಲಾಕ್ ನಾಯಕರ ಸಭೆಯಲ್ಲಿ ಹಿಂದಿಯಲ್ಲಿ ಮಾಡಿದ ಭಾಷಣ ಅನುವಾದ ಮಾಡುವಂತೆ ಕೇಳಿದಾಗ ಬಿಹಾರ ಮುಖ್ಯಮಂತ್ರಿ ಮತ್ತು ಜನತಾ ದಳ (ಯುನೈಟೆಡ್) ನಾಯಕ ನಿತೀಶ್ ಕುಮಾರ್ ಕಿಡಿ ಕಾರಿದ್ದಾರೆ.

ನಿತೀಶ್ ಕುಮಾರ್ ಅವರು ಇಂಡಿಯಾ ಬ್ಲಾಕ್ ನಾಯಕರನ್ನು ಉದ್ದೇಶಿಸಿ ಮಾತನಾಡುವಾಗ ಡಿಎಂಕೆ ಮುಖ್ಯಸ್ಥ ಎಂ ಕೆ ಸ್ಟಾಲಿನ್ ಮತ್ತು ಟಿಆರ್ ಬಾಲು ಸಹ ಉಪಸ್ಥಿತರಿದ್ದರು. ನಿತೀಶ್ ಏನು ಹೇಳುತ್ತಿದ್ದಾರೆಂದು ಅರ್ಥಮಾಡಿಕೊಳ್ಳಲು ಸಾಧ್ಯವಾಗದೆ, ಟಿಆರ್ ಬಾಲು ಅವರು ಭಾಷಣವನ್ನು ಭಾಷಾಂತರಿಸುವಂತೆ ಇನ್ನೊಂದು ಬದಿಯಲ್ಲಿ ಕುಳಿತಿದ್ದ ರಾಷ್ಟ್ರೀಯ ಜನತಾ ದಳದ ರಾಜ್ಯಸಭಾ ಸಂಸದ ಮನೋಜ್ ಕೆ. ಝಾ ಅವರಿಗೆ ಸೂಚಿಸಿದರು.

 Learn Hindi: Nitish Kumar Rebukes DMKs Baalu Over English Translation Request at INDIA Leaders Meet

ಮನೋಜ್ ಝಾ ನಿತೀಶ್ ಕುಮಾರ್ ಅವರ ಅನುಮತಿ ಕೇಳುತ್ತಿದ್ದಂತೆ, "ನಾವು ನಮ್ಮ ದೇಶವನ್ನು ಹಿಂದೂಸ್ತಾನ್ ಎಂದು ಕರೆಯುತ್ತೇವೆ ಮತ್ತು ಹಿಂದಿ ನಮ್ಮ ರಾಷ್ಟ್ರೀಯ ಭಾಷೆ, ನಮಗೆ ಭಾಷೆ ತಿಳಿದಿರಬೇಕು" ಎಂದು ಉದ್ದಟತನದಿಂದ ಹೇಳಿದ್ದಾರೆ.

ಹಿಂದಿ ದೇಶದ ರಾಷ್ಟ್ರೀಯ ಭಾಷೆಯಾಗಿದ್ದು, ಪ್ರತಿಯೊಬ್ಬರೂ ಅದನ್ನು ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ. ಬ್ರಿಟಿಷರ ವಿರುದ್ಧದ ಭಾರತೀಯ ಸ್ವಾತಂತ್ರ್ಯ ಹೋರಾಟ ಮತ್ತು ಇಂಗ್ಲಿಷ್ ಹೇರಿಕೆಯ ಬಗ್ಗೆ ಭಾಷಣ ಮಾಡಿದ್ದಾರೆ.

ಭಾಷಾಂತರ ಮಾಡದಂತೆ ಸೂಚನೆ

ಅಷ್ಟಕ್ಕೆ ಸುಮ್ಮನಾಗದ ನಿತೀಶ್ ಕುಮಾರ್ ಅವರು ತಮ್ಮ ಭಾಷಣವನ್ನು ಭಾಷಾಂತರಿಸದಂತೆ ಮನೋಜ್ ಝಾ ಅವರಿಗೆ ಸೂಚನೆ ನೀಡಿದರು.

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಚರ್ಚೆಯ ನಂತರ, ಡಿಎಂಕೆ ಅಧ್ಯಕ್ಷ ಮತ್ತು ತಮಿಳುನಾಡು ಮುಖ್ಯಮಂತ್ರಿ ಎಂ. ಸ್ಟಾಲಿನ್ ಮಾತನಾಡಿದರು, ಮೂಲಗಳ ಪ್ರಕಾರ, ನಿತೀಶ್ ಕುಮಾರ್ ಅವರ ಉದ್ಧಟತನ ಹೇಳಿಕೆಯಿಂದ ಉಂಟಾದ ಅಸಮಾಧಾನ ಸರಿ ಮಾಡಲು ಹಿಂದಿಯಲ್ಲಿ ಮಾತನಾಡುವ ದೆಹಲಿ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ ಅಧ್ಯಕ್ಷ ಅರವಿಂದ್ ಕೇಜ್ರಿವಾಲ್ ಸೇರಿದಂತೆ ಹಲವರು ಇಂಗ್ಲೀಷ್‌ನಲ್ಲಿ ಮಾತನಾಡಿದರು.

ಮುಂಬರುವ 2024 ರ ಲೋಕಸಭೆ ಚುನಾವಣೆಗೆ ಸೀಟು ಹಂಚಿಕೆ ಮತ್ತು ಪ್ರಚಾರ ಕಾರ್ಯತಂತ್ರಗಳಂತಹ ವಿಷಯಗಳ ಕುರಿತು ಚರ್ಚಿಸಲು ಇಂಡಿಯಾ ಬ್ಲಾಕ್ ಪಕ್ಷಗಳು ದೆಹಲಿಯಲ್ಲಿ ತಮ್ಮ ನಾಲ್ಕನೇ ಸಭೆಯನ್ನು ನಡೆಸಿದ್ದವು.

ನಿತೀಶ್ ಕುಮಾರ್ ವಿರುದ್ಧ ಕಿಡಿ

ಇನ್ನು ನಿತೀಶ್ ಕುಮಾರ್ ಹಿಂದಿ ಕಲಿಯುವ ಹೇಳಿಕೆಗೆ ಭಾರಿ ಆಕ್ರೋಶ ವ್ಯಕ್ತವಾಗಿದೆ. ಭಾರತ ಎಂದರೆ ಬರಿ ಹಿಂದಿಯಲ್ಲ, ಹಿಂದಿ ಭಾರತದ ರಾಷ್ಟ್ರ ಭಾಷೆಯಲ್ಲ ಎಂದು ನಿತೀಶ್ ಕುಮಾರ್ ಉದ್ಧಟನಕ್ಕೆ ಕಿಡಿ ಕಾರಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+