Independence day 2023: ಕಾಂಗ್ರೆಸ್ ಬ್ಯಾನರ್‌ನಲ್ಲಿ 'ಹಿಂದಿ' ಅಕ್ಷರ ಕತ್ತರಿಸಿದ 'ಕರವೇ'
ಬೆಂಗಳೂರು, ಆಗಸ್ಟ್ 15: 77ನೇ ಸ್ವಾತಂತ್ರ್ಯೋತ್ಸವದ ಶುಭಾಯಶ ಕೋರಿ ಕರ್ನಾಟಕ ರಾಜ್ಯ ಕಾಂಗ್ರೆಸ್ ವತಿಯಿಂದ ಹಾಕಲಾಗಿದ್ದ ಬ್ಯಾನರ್‌ನಲ್ಲಿ 'ಹಿಂದಿ' ಬಳಸಲಾಗಿದೆ ಎಂದು ಹಿಂದಿ ಪದಗಳಿದ್ದ ಬ್ಯಾನರ್‌ನ ಭಾಗವನ್ನು ಮಾತ್ರವೇ ಕತ್ತರಿಸಿ ಹಿಂದಿ ಹೇರಿಕೆ ವಿರೋಧಿಸಿದ ಘಟನೆ ಭಾಗಲಕೋಟೆ ಜಿಲ್ಲೆಯಲ್ಲಿ ನಡೆದಿದೆ. ಈ ಘಟನೆ ಕುರಿತ ವಿಡಿಯೋ ವೈರಲ್ ಆಗಿದೆ.
'ಕರ್ನಾಟಕ ರಕ್ಷಣಾ ವೇದಿಕೆ ಬಾಗಲಕೋಟೆ' ಇನ್ಸ್ಟಾಗ್ರಾಮ್ ಪೇಜಿನಲ್ಲಿ ಹಿಂದಿ ಹೇರಿಕೆ ವಿರೋಧಿಸಿದ ಘಟನೆ ಕುರಿತು ವಿಡಿಯೋ ಹಂಚಿಕೊಳ್ಳಲಾಗಿದೆ. ಮಂಗಳವಾರ ಇನ್ಸ್ಟಾಗ್ರಾಮ್ ನಲ್ಲಿ ಈ ವಿಡಿಯೋ ವರಲ್ ಆಗಿದೆ.

ಸ್ವಾತಂತ್ರ್ಯೋತ್ಸವ ದಿನಾಚರಣೆ ಪ್ರಯುಕ್ತ ಕಾಂಗ್ರೆಸ್ ಬ್ಯಾನರ್ ಹಾಕಿ ಸಾರ್ವಜನಿಕರಿಗೆ ಶುಭಾಶಯ ತಿಳಿಸಿತ್ತು. ಈ ಬ್ಯಾನರ್ ಅನ್ನು ಬಾಗಲಕೋಟೆಯ ಬೀದಿಯೊಂದರಲ್ಲಿ ಹಾಕಲಾಗಿತ್ತು. ಬೃಹತ್ ಬ್ಯಾನರ್‌ನಲ್ಲಿ ' 76ನೇ ಸ್ವಾತಂತ್ರ್ಯ ದಿನಾಚರಣೆ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಜಯಂತ್ಯೋತ್ಸವದ ಶುಭಾಶಯಗಳು' ಎಂದು ಬರೆಯಲಾಗಿತ್ತು. ಇದರಲ್ಲಿಯೇ 'ಸ್ವಾತಂತ್ರ್ಯ ದಿನ್' ಎಂದು ಹಿಂದಿಯಲ್ಲೂ ಸಹ ಅಚ್ಚಾಗಿತ್ತು.
ರಾಯಣ್ಣನ ಫೋಟೊ ಜೊತೆಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಸ್ಥಳಿಯ ಕಾಂಗ್ರೆಸ್ ನಾಯಕರ ಫೋಟೊ ಇದ್ದ ಬ್ಯಾನರ್ ಅಳವಡಿಸಲಾಗಿತ್ತು.

ಇದನ್ನು ಗಮನಿಸಿದ ಕರ್ನಾಟಕ ಕರವೇ ಸದಸ್ಯರು ಹಿಂದಿ ಅಕ್ಷರಗಳಲ್ಲಿದ್ದ 'ಸ್ವಾತಂತ್ರ್ಯ ದಿನ್' ಭಾಗವನ್ನು ಕತ್ತರಿಸಿದರು. ಹಿಂದಿ ಹೇರಿಕೆ ಸರಿಯಲ್ಲ ಎಂದು ಆಕ್ಷೇಪಿಸಿದರು. ಈ ವಿಡಿಯೋ ಹರಿದಾಡುತ್ತಿದ್ದಂತೆ ಅನೇಕರು ಕಾಮೆಂಟ್ ಮಾಡಿದ್ದು, ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ರಾಜ್ಯದ ಕೆಲವು ಕಾರ್ಯಕ್ರಮಗಳು 'ಹಿಂದಿ'ಮಯ
ಇಂತಹ ಹಿಂದಿ ಹೇರಿಕೆ ಘಟನೆಗಳು ಕಾಂಗ್ರೆಸ್‌ನಿಂದ ಮಾತ್ರವಲ್ಲದೇ ಬಿಜೆಪಿಯಿಂದಲೇ ಅನೇಕ ಮಾತ್ರವೇ ಆಗಿದೆ. ಕರ್ನಾಟಕ ನೆಲದಲ್ಲಿ ಕನ್ನಡವೇ ಸಾರ್ವಭೌಮ ಎಂಬ ಮಾತು ಆಗಾಗ ಹುಸಿಯಾಗುತ್ತಲೇ ಇರುತ್ತದೆ. ಕೇಂದ್ರದ ನಾಯಕರು ವಿವಿಧ ಸಭೆ, ಸಮಾರಂಭ, ಉದ್ಘಾಟನಾ ಕಾರ್ಯಕ್ರಮಗಳು ಕರ್ನಾಟಕದಲ್ಲಿ ಹಮ್ಮಿಕೊಂಡಾಗ ಆಮಂತ್ರಣ ಪತ್ರಿಕೆ, ವೇದಿಕೆ ಮೇಲಿನ ಬ್ಯಾನರ್‌ಗಳು ಬಹುತೇಕ ಹಿಂದಿಮಯವಾಗಿರುತ್ತವೆ.
ಅದೇಷ್ಟೋ ಬಾರಿ ಕನ್ನಡವೇ ಇಲ್ಲದಂತ ಕಾರ್ಯಕ್ರಮಗಳಿಗೆ ರಾಜಧಾನಿ ಬೆಂಗಳೂರು ಸಾಕ್ಷಿಯಾಗಿದೆ. ಕೇಂದ್ರ ಹೈಕಮಾಂಡ್ ನಾಯಕರ ಓಲೈಕೆಗೆ ನಮ್ಮತನ, ಭಾಷೆ ಬಿಟ್ಟು ಕೊಡುವವರ ವಿರುದ್ಧ ಹಾಗೂ ಹಿಂದಿ ಹೇರಿಕೆ ವಿರುದ್ಧ ಅನೇಕ ಕನ್ನಡಪರ ಸಂಘಟನೆಗಳು, ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದನ್ನು ಕಾಣಬಹುದಾಗಿದೆ.












Click it and Unblock the Notifications