ಬಾಲಿವುಡ್ ನಟಿ ಪರಿಣಿತಿ ಚೋಪ್ರಾ-ಆಪ್ ಎಂಪಿ ನಿಶ್ಚಿತಾರ್ಥ: ದೆಹಲಿ ಪ್ರಿಯಾಂಕಾ ಚೋಪ್ರಾ ಲ್ಯಾಂಡ್
ಬಾಲಿವುಡ್‌ನಲ್ಲಿ ಮತ್ತೆ ಸಂಭ್ರಮ ಮನೆ ಮಾಡಿದೆ. ಮತ್ತೊಬ್ಬ ನಟಿ ವೈವಾಹಿಕ ಜೀವನಕ್ಕೆ ಕಾಲಿಡುವುದಕ್ಕೆ ಸಜ್ಜಾಗಿದ್ದಾರೆ. ಆಕೆ ಮತ್ಯಾರೂ ಅಲ್ಲ ಪರಿಣಿತಿ ಚೋಪ್ರಾ. ಕಳೆದ ಕೆಲವು ದಿನಗಳಿಂದ ಪರಿಣಿತಿ ಚೋಪ್ರಾ ಹಾಗೂ ಆಪ್ ಎಂಪಿ ರಾಘವ್ ಚಡ್ಡಾ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ ಅನ್ನೋ ಗುಸು ಗುಸು ಎದ್ದಿತ್ತು.
ಆದರೆ, ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಹಾಗೂ ಆಪ್ ಎಂಪಿ ರಾಘವ್ ಚಡ್ಡಾ ಇಬ್ಬರೂ ಈ ಸುದ್ದಿಯನ್ನು ಅಲ್ಲಗೆಳೆಯುತ್ತಲೇ ಇದ್ದರು. ಆದ್ರೀಗ ಈ ಜೋಡಿ ಇಂದು (ಮೇ 13) ಅದ್ಧೂರಿಯಾಗಿ ನಿಶ್ವಿತಾರ್ಥ ಮಾಡಿಕೊಳ್ಳುತ್ತಿದ್ದಾರೆ. ದೆಹಲಿ ಕಪುರ್‌ತಲಾ ಹೌಸ್ ಇಬ್ಬರ ಎಂಗೇಜ್‌ಮೆಂಟ್‌ಗೆ ಸಜ್ಜಾಗಿದೆ.

ಪರಿಣಿತಿ ಚೋಪ್ರಾ ಹಾಗೂ ರಾಘವ್ ಚಡ್ಡಾ ನಿಶ್ಚಿತಾರ್ಥದ ಕಾರ್ಯಕ್ರಮಗಳು ಇಂದು (ಮೇ 13) ಸಂಜೆ 5 ಗಂಟೆಯಿಂದ ಆರಂಭ ಆಗಲಿದೆ. ಸಿಕ್ ಸಂಪ್ರದಾಯದಂತೆ ಎಂಗೇಜ್‌ಮೆಂಟ್ ನಡೆಯಲಿದೆ.
ಆಪ್ ಎಂಪಿ ರಾಘವ್ ಚಡ್ಡಾ- ಪರಿಣಿತಿ ನಿಶ್ಚಿತಾರ್ಥ: ದೆಹಲಿಗೆ ಬಂದಿಳಿದ ಪ್ರಿಯಾಂಕ ಚೋಪ್ರಾ
ಆಪ್ ಎಂಪಿ ರಾಘವ ಚಡ್ಡ ಹಾಗೂ ಪರಿಣಿತಿ ಚೋಪ್ರಾ ನಿಶ್ಚಿತಾರ್ಥ ಬಾಲಿವುಡ್ ಥೀಮ್‌ನಲ್ಲಿ ಜರುಗಲಿದೆ. ಸುಮಾರು 150 ಮಂದಿ ಭಾಗವಹಿಸುವ ಸಾಧ್ಯತೆಯಿದೆ. ಕುಟುಂಬಸ್ಥರು ಹಾಗೂ ಆತ್ಮೀಯ ಗೆಳೆಯರು ನಿಶ್ಚಿತಾರ್ಥದಲ್ಲಿ ಭಾಗವಹಿಸುವ ಸಾಧ್ಯತೆಯಿದೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಪಂಜಾಜ್ ಮುಖ್ಯಮಂತ್ರಿ ಭಗವಂತ್ ಮನ್ ಹಾಗೂ ನಟಿ ಪ್ರಿಯಾಂಕಾ ಚೋಪ್ರಾ ಭಾಗವಹಿಸಲಿದ್ದಾರೆ.

ಹಾಲಿವುಡ್‌ನಲ್ಲಿ ಸಿನಿಮಾ ಹಾಗೂ ವೆಬ್ ಸೀರಿಸ್‌ನಲ್ಲಿ ಬ್ಯುಸಿಯಾಗಿರೋ ಪ್ರಿಯಾಂಕಾ ಚೋಪ್ರಾ ಈ ಕಾರ್ಯಕ್ರಮಕ್ಕಾಗಿಯೇ ಆಗಮಿಸಿದ್ದಾರೆ. ಈಗಾಗಲೇ ದೆಹಲಿಗೆ ಪತಿ ನಿಕ್ ಜೋನಾಸ್ ಜೊತೆ ಬಂದಿಳಿದಿದ್ದಾರೆ. ಇವರೊಂದಿಗೆ ಸಿನಿಮಾ, ರಾಜಕೀಯ ಹಾಗೂ ಕ್ರೀಡಾ ಕ್ಷೇತ್ರದ ಗಣ್ಯರು ಕೂಡ ಹಾಜರಾಗಲಿದ್ದಾರೆ.
ಪರಿಣಿತಿ - ರಾಘವ್ ಲವ್ ಸ್ಟೋರಿ, ವಯಸ್ಸಿನ ಅಂತರ, ನಿಶ್ಚಿತಾರ್ಥಕ್ಕೆ ಬರುವ ಅತಿಥಿಗಳ ಲಿಸ್ಟ್
ಆಪ್ ಎಂಪಿ ರಾಘವ್ ಚಡ್ಡಾ ಹಾಗೂ ಪರಿಣಿತಿ ಚೋಪ್ರಾ ಡೇಟಿಂಗ್ ನಡೆಸುತ್ತಿದ್ದಾರೆ ಅನ್ನೋ ಗುಸುಗುಸು ಆರಂಭ ಆಗಿತ್ತು. ಇತ್ತೀಚೆಗೆ ರೆಸ್ಟೋರೆಂಟ್, ಏರ್‌ಪೋರ್ಟ್‌ನಲ್ಲಿ ಒಟ್ಟೊಟ್ಟಿಗೆ ಕಾಣಿಸಿಕೊಂಡಿದ್ದರು. ಇದೀಗ ಆ ಸಂಬಂಧವನ್ನು ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಅಕ್ಟೋಬರ್ ತಿಂಗಳಲ್ಲಿ ಇಬ್ಬರೂ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ.
ದೆಹಲಿಯ ಇಂಡಿಯಾ ಗೇಟ್ ಬಳಿಯ ಕಪುರ್‌ತಲಾ ಹೌಸ್‌ನಲ್ಲಿ ನಡೆಯಲಿರೋ ಸಮಾರಂಭಕ್ಕೆ ಟೆನ್ನಿಸ್ ಸ್ಟಾರ್ ಸಾನಿಯಾ ಮಿರ್ಜಾ, ಡಿಸೈನರ್ ಮನೀಶ್ ಮಲ್ಹೋತ್ರಾ, ಬಾಲಿವುಡ್ ನಿರ್ದೇಶಕ ಕರಣ್ ಜೋಹರ್ ಸೇರಿದಂತೆ ಚಿತ್ರರಂಗದ ಗಣ್ಯರು ಭಾಗವಹಿಸು ಸಾಧ್ಯತೆಯಿದೆ.












Click it and Unblock the Notifications