Don 3: ಡಾನ್ 3 ಅನೌನ್ಸ್ ಮಾಡಿದ ಫರ್ಹಾನ್ ಅಖ್ತರ್- ಶಾರುಖ್ ಬದಲು ರಣವೀರ್? ಕಿಂಗ್‌ಖಾನ್ ಬೇಕೆಂದು ಹಠ ಹಿಡಿದ ಅಭಿಮಾನಿಗಳು
ಮುಂಬೈ, ಆಗಸ್ಟ್ 08: ಬಾಲಿವುಡ್‌ನ ಹೆಸರಾಂತ ಚಿತ್ರ ಡಾನ್ ಸಿಕ್ವೆಲ್ ಅನ್ನು ನಟ ಹಾಗೂ ನಿರ್ಮಾಪಕ ಪರ್ಹಾನ್ ಅಖ್ತರ್ ಘೋಷಣೆ ಮಾಡಿದ್ದಾರೆ. 1978 ರಲ್ಲಿ ತೆರೆಕಂಡ ಡಾನ್ ಚಿತ್ರದಲ್ಲಿ ಅಮಿತಾಬ್ ಬಚ್ಚನ್ ನಟಿಸಿದ್ದರು. ಆ ಬಳಿಕ 2006 ರಲ್ಲಿ ಡಾನ್ ಚಿತ್ರವನ್ನು ಮರು ನಿರ್ಮಾಣ ಮಾಡಲಾಗಿತು. ಅದರಲ್ಲಿ ಶಾರುಖ್ ಖಾನ್ ನಟಿಸಿದ್ದರು. 2011 ರಲ್ಲಿ ಡಾನ್ 2 ಚಿತ್ರವನ್ನು ನಿರ್ಮಿಸಲಾಯಿತು. ಈ ಚಿತ್ರದಲ್ಲಿಯೂ ಶಾರುಖ್ ಖಾನ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
ಇವರೆಡೂ ಚಿತ್ರಗಳನ್ನು ನಿರ್ದೇಶಿಸಿದ್ದ ಫರ್ಹಾನ್ ಅಖ್ತರ್ ಅವರೇ ಡಾನ್ 3 ಚಿತ್ರವನ್ನು ನಿರ್ದೇಶಿಸಲಿದ್ದಾರೆ. ಆದರೆ, ಈ ಬಾರಿ ಶಾರುಖ್ ಇರುವುದು ಡೌಟ್ ಎನ್ನುತ್ತಿವೆ ಹಲವು ಮಿಡಿಯಾಗಳು.

ಶಾರುಖ್ ಖಾನ್ ಅವರ ಅಪ್ರತಿಮ ಪಾತ್ರದಲ್ಲಿ ರಣವೀರ್ ಸಿಂಗ್ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಕುರಿತ ಅಪ್‌ಡೇಟ್‌ಗಳನ್ನು ಫರ್ಹಾನ್ ಅಖ್ತರ್ ಅವರು ತಮ್ಮ ಇನ್‌ಸ್ಟಾಗ್ರಾಮ್ ಅಕೌಂಟ್‌ನಲ್ಲಿ ಹಂಚಿಕೊಂಡಿದ್ದಾರೆ. 'A New Era Begins' ಎಂಬ ಬರಹವನ್ನು ಡಾನ್ 3 ಘೋಷಣೆ ಟೀಸರ್‌ನಲ್ಲಿ ಬರೆಯಲಾಗಿದೆ.
ಶಾರುಖ್ ಬೇಕೇಬೇಕು ಎಂದು ಹಠ ಹಿಡಿದ ಅಭಿಮಾನಿಗಳು
ಡಾನ್ 3 ಚಿತ್ರದಲ್ಲಿಯೂ ಶಾರುಖ್ ಖಾನ್ ನಟಿಸಲು ಎಂಬುದು ಅಭಿಮಾನಿಗಳ ಒತ್ತಾಸೆಯಾಗಿದೆ. ಈ ಚಿತ್ರದಲ್ಲಿ ರಣವೀರ್ ಸಿಂಗ್ ನಟಿಸುವುದು ಅವರಿಗೆ ಎಳ್ಳಷ್ಟೂ ಇಷ್ಟವಿಲ್ಲವೆಂದು ಕಿಂಗ್‌ಖಾನ್ ಅಭಿಮಾನಿಗಳು ಹೇಳಿದ್ದಾರೆ. ಡಾನ್ ಸಿಕ್ವೆಲ್‌ಗಳು ಶಾರುಖ್ ಖಾನ್ ಅವರ ನಟನೆಯಿಂದಲೇ ಹಿಟ್ ಆಗಿದ್ದವು. ಶಾರುಖ್ ಖಾನ್ ಬಿಟ್ಟರೆ, ಈ ಪಾತ್ರಕ್ಕೆ ಯಾರೂ ಸಹ ಯೋಗ್ಯರಲ್ಲವೆಂದು ಅಭಿಮಾನಿಗಳು ಹೇಳುತ್ತಿದ್ದಾರೆ.
ಎಸ್‌ಆರ್‌ಕೆ ಇಲ್ಲದಿದ್ದರೆ ಅದನ್ನು ಡಾನ್ 3 ಎಂದು ಕರೆಯುವ ಅಗತ್ಯವಿಲ್ಲ. ನಿಮಗೆ ಅಭಿಮಾನಿಗಳನ್ನು ಗೌರವಿಸುವ ಸೌಜನ್ಯವೂ ಇಲ್ಲ. ನಾವು ಡಾನ್ 3 ಗಾಗಿ ಹಲವು ವರ್ಷಗಳಿಂದ ಕಾಯುತ್ತಿದ್ದೆವು. ಶಾರುಖ್ ಇರುತ್ತಾರೆಂದು ನಮ್ಮ ಬಯಕೆಯಾಗಿತ್ತು, ನೀವು ನಮಗೆ ನಿರಾಸೆಯನ್ನು ಉಂಟು ಮಾಡಿದ್ದೀರಿ ಎಂದು ಅಭಿಮಾನಿಯೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆದರೆ, ಈ ಚಿತ್ರದಲ್ಲಿ ಯಾರು ನಟಿಸಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.
ಜವಾನ್ ಅಗಿ ಬರಲಿದ್ದಾರೆ ಶಾರುಖ್
ಶಾರುಖ್ ಖಾನ್ ಅವರ ಬಹು ನಿರೀಕ್ಷಿತ ಚಿತ್ರ ಜವಾನ್ ಸೆಪ್ಟಂಬರ್ 7 ರಂದು ಬಿಡುಗಡೆಯಾಗಲಿದೆ. ಇದು ಜಗತ್ತಿನಾದ್ಯಂತ ಭಾರೀ ನಿರೀಕ್ಷೆಯನ್ನು ಹುಟ್ಟುಹಾಕಿದೆ. ಜವಾನ್ ಚಿತ್ರವನ್ನು ತಮಿಳಿನ ಯುವ ನಿರ್ದೇಶಕ ಅಟ್ಲಿ ನಿರ್ದೇಶನ ಮಾಡಿದ್ದಾರೆ. ಇದರಲ್ಲಿ ವಿಜಯ್ ಸೇತುಪತಿ ಹಾಗೂ ನಯನತಾರಾ ಅವರು ನಟಿಸಿದ್ದಾರೆ. ಇದು ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂನಲ್ಲಿ ಬಿಡುಗಡೆಯಾಗುತ್ತಿದೆ.












Click it and Unblock the Notifications