ವಲಸಿಗ ಮತದಾರರನ್ನು ಸೆಳೆಯಲು ತಂತ್ರ: ಹಿಂದಿ ಭಾಷಿಗ ಮುಖಂಡರನ್ನು ಪ್ರಚಾರ ಕಣಕ್ಕಿಳಿಸಿದ ಬಿಜೆಪಿ- ಗ್ರೌಂಡ್‌ ರಿಪೋರ್ಟ್‌

ಬೆಂಗಳೂರು, ಮೇ 05: ಬಿಜೆಪಿ ತನ್ನ ಮತಬ್ಯಾಂಕ್‌ಗಳನ್ನು ಉಳಿಸಿಕೊಳ್ಳಲು ಎಲ್ಲಾ ರೀತಿಯ ಪ್ರಯತ್ನಗಳನ್ನು ಮುಂದುವರಿಸಿದೆ. ರಾಜ್ಯದಲ್ಲಿ ಕನ್ನಡ ಮಾತನಾಡದ ವಲಸಿಗರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಅವರನ್ನು ಸಂಪರ್ಕಿಸಲು ಕೇಸರಿ ಪಾಳಯವು ಯುವ ಶಾಸಕರು ಮತ್ತು ಪಕ್ಷದ ಕಾರ್ಯಕರ್ತರನ್ನು ನಿಯೋಜಿಸಿದೆ. ಈ ಮುಖಂಡರು ಹಾಗೂ ಕಾರ್ಯಕರ್ತರು ಹಿಂದಿ ಭಾಷಿಗರಾಗಿದ್ದಾರೆ.

ವಿವಿಧ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳ ಜೊತೆ ಸುಮಾರು 50 ಯುವ ನಾಯಕರು ಕೆಲಸ ಮಾಡುತ್ತಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಪಾಟಿದಾರ್ ಚಳವಳಿಯ ನೇತೃತ್ವ ವಹಿಸಿದ್ದ ಗುಜರಾತ್ ಶಾಸಕ ಹಾರ್ದಿಕ್ ಪಟೇಲ್, ಮಧ್ಯಪ್ರದೇಶ ಬಿಜೆಪಿ ಮುಖ್ಯಸ್ಥ ವಿಡಿ ಶರ್ಮಾ, ಮಹಾರಾಷ್ಟ್ರ ಶಾಸಕ ವಿನೋದ್ ತಾವ್ಡೆ, ಸೂರತ್ ಶಾಸಕ ಪ್ರವೀಣ್ ಘೋಘರಿ ಮತ್ತು ಜಾರ್ಖಂಡ್‌ನ ಮನೀಶ್ ಜೈಸ್ವಾಲ್ ಈ ಯುವ ಮುಖಂಡರಲ್ಲಿ ಸೇರಿದ್ದಾರೆ.

Karnataka Elections 2023: BJP eyes migrant voters, deploys Hindi speaking leaders and workers

ಬಿಟಿಎಂ ಲೇಔಟ್, ಮಹದೇವಪುರ ವಲಯ, ಸಿವಿ ರಾಮನ್ ನಗರ, ಬ್ಯಾಟರಾಯನಪುರ ಮತ್ತು ಬೆಂಗಳೂರು ದಕ್ಷಿಣದಂತಹ ಪ್ರಮುಖ ಕ್ಷೇತ್ರಗಳಲ್ಲಿ ಪಕ್ಷದ ಕಾರ್ಯಕ್ಷಮತೆಯನ್ನು ಸುಧಾರಿಸಲು ಅವರು ಬೆಂಗಳೂರಿನಲ್ಲಿದ್ದಾರೆ.

ಬಿಟಿಎಂ ಕ್ಷೇತ್ರವನ್ನು ನಿಯೋಜಿಸಲಾಗಿರುವ ಹಾರ್ದಿಕ್ ಪಟೇಲ್ 'ದಿ ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌ಗೆ' ಮಾತನಾಡಿದ್ದಾರೆ. 'ಹಿಂದಿ ಮಾತನಾಡುವವರು ಶೇಕಡಾ 25 ಕ್ಕಿಂತ ಹೆಚ್ಚು ಮತದಾರರನ್ನು ಈ ಕ್ಷೇತ್ರ ಹೊಂದಿಗೆ. ಎಲ್ಲರೂ ಬಿಜೆಪಿ ಅಧಿಕಾರವನ್ನು ಉಳಿಸಿಕೊಳ್ಳಬೇಕೆಂದು ಬಯಸುತ್ತಾರೆ. ಗುಜರಾತ್‌ನ ಅಭಿವೃದ್ಧಿ ಮಾದರಿಯನ್ನು ರಾಜ್ಯದಲ್ಲಿಯೂ ಪುನರಾವರ್ತಿಸಬೇಕೆಂದು ಅವರು ಬಯಸುತ್ತಾರೆ' ಎಂಬುದಾಗಿ ಹೇಳಿದ್ದಾರೆ.

Karnataka Elections 2023: BJP eyes migrant voters, deploys Hindi speaking leaders and workers

ವಿಡಿ ಶರ್ಮಾ ಅವರಿಗೆ ಮಲ್ಲೇಶ್ವರಂ ಕ್ಷೇತ್ರವನ್ನು ಹಂಚಿಕೆ ಮಾಡಲಾಗಿದೆ. ತಮ್ಮ ಎರಡು ದಿನಗಳ ಭೇಟಿಯಲ್ಲಿ, 'ನಾವು ಸಣ್ಣ ಗುಂಪುಗಳನ್ನು ರಚಿಸಿದ್ದೇವೆ. ಮತದಾರರೊಂದಿಗೆ, ವಿಶೇಷವಾಗಿ ಮೊದಲ ಬಾರಿಗೆ ಸಂವಹನ ನಡೆಸಿದ್ದೇವೆ' ಎಂದು ಅವರು ತಿಳಿಸಿದ್ದಾರೆ. ಉತ್ತರ ಭಾರತದ ಅನೇಕ ನಿವಾಸಿಗಳು ಮತ್ತು ಉದ್ಯಮಿಗಳೊಂದಿಗೆ ಮಾತನಾಡಿದ್ದೇನೆ ಎಂದು ಅವರು ಹೇಳಿದ್ದಾರೆ.

ಜನರು ಬಿಜೆಪಿಗೆ ಮತ ಹಾಕುವ ಬಗ್ಗೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ ಎಂದು ಅವರು ಹೇಳಿದ್ದಾರೆ. ಯಶವಂತಪುರ ಕ್ಷೇತ್ರದಲ್ಲಿ ವಲಸೆ ಮತದಾರರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸ ಮಾಡುತ್ತಿರುವ ಮನೀಶ್ ಜೈಸ್ವಾಲ್ ಅವರು ತಳಮಟ್ಟದ ಕಾರ್ಯಕರ್ತರೊಂದಿಗೆ ಸಂವಾದ ನಡೆಸುತ್ತಿದ್ದಾರೆ ಮತ್ತು ಮನೆ-ಮನೆಗೆ ಪ್ರಚಾರ ನಡೆಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

ಅವರು ತಮ್ಮ ಪ್ರಣಾಳಿಕೆಯನ್ನು ಇಂಗ್ಲಿಷ್, ಹಿಂದಿ ಮತ್ತು ತೆಲುಗು ಸೇರಿದಂತೆ ಬಹು ಭಾಷೆಗಳಲ್ಲಿ ಬಿಡುಗಡೆ ಮಾಡಿದ್ದಾರೆ. ತಮಿಳುನಾಡು ಮತ್ತು ಕೇರಳದ ನಾಯಕರನ್ನೂ ಪ್ರಚಾರಕ್ಕೆ ಅಣಿಗೊಳಿಸಲಾಗಿದೆ. ಮೊದಲ ಬಾರಿಗೆ ಮತದಾರರು ಬಿಜೆಪಿಯಿಂದ ಪಕ್ಷಕ್ಕೆ ಮತ ಹಾಕುವಂತೆ ಪತ್ರವನ್ನು ಸ್ವೀಕರಿಸುತ್ತಿದ್ದಾರೆ ಎಂದು 'ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌' ವರದಿ ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+