Adipurush: ದೇಶದ ಕ್ಷಮೆಯಾಚಿಸಿ- ಆದಿಪುರುಷ್ ಚಿತ್ರದ ಕೀಳು ಸಂಭಾಷಣೆಗೆ ಶಿವಸೇನಾ ಕೆಂಡಾಮಂಡಲ
ಮುಂಬೈ, ಜೂನ್ 17: ಶಿವಸೇನಾ (ಉದ್ಧವ್ ಬಾಳಾಸಾಹೇಬ್ ಠಾಕ್ರೆ) ಸಂಸದೆ ಪ್ರಿಯಾಂಕಾ ಚತುರ್ವೇದಿ ಶನಿವಾರ 'ಆದಿಪುರುಷ' ನಿರ್ಮಾಪಕರ ವಿರುದ್ಧ ಸಿಡಿದೆದ್ದಿದ್ದಾರೆ. ಮಹಾಕಾವ್ಯ ರಾಮಾಯಣವನ್ನು ಆಧರಿಸಿದ ಪೌರಾಣಿಕ ಆಕ್ಷನ್ ಚಿತ್ರದಲ್ಲಿ ಬಳಸಲಾದ ಕೀಳು ಸಂಭಾಷಣೆಗಾಗಿ ನಿರ್ದೇಶಕರು, ನಿರ್ಮಾಪಕರು ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ.
ಈ ಚಿತ್ರದಲ್ಲಿ ಬರುವ ಹನುಮಾನ್ ದೇವರಿಗಾಗಿ ಬರೆದ ಕೀಳು ಸಂಭಾಷಣೆಗಳಿಗಾಗಿ ರಾಷ್ಟ್ರದ ಕ್ಷಮೆಯಾಚಿಸಬೇಕು ಎಂದು ಚತುರ್ವೇದಿ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
ಈ ಚಿತ್ರವನ್ನು ಆನ್‌ಲೈನ್‌ನಲ್ಲಿ ಟ್ರೋಲ್ ಮಾಡಿ ಟೀಕಿಸಲಾಗುತ್ತಿದೆ. ಅದರಲ್ಲೂ ವಿಶೇಷವಾಗಿ ಹನುಮಂತನ ಸಂಭಾಷಣೆಗಳು ಕೀಳು ಮಟ್ಟದಲ್ಲಿವೆ ಎಂದು ಆರೋಪಿಸಲಾಗಿದೆ.

ಲಂಕಾ ರಾಜ ರಾವಣನ ಮಗ ಹನುಮಂತನ ಬಾಲಕ್ಕೆ ಬೆಂಕಿ ಹಚ್ಚುವ ದೃಶ್ಯವು ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ. 'ಕಪಡಾ ತೇರೆ ಬಾಪ್ ಕಾ, ತೇಲ್ ತೇರೆ ಬಾಪ್ ಕಾ, ಆಗ್ ಭೀ ತೇರೆ ಬಾಪ್ ಕಿ, ತೋ ಜಲೇಗಿ ಭೀ ತೇರೆ ಬಾಪ್ ಕಿ ( ಬಟ್ಟೆ ನಿಮ್ಮಪ್ಪಂದು, ಎಣ್ಣೆ ನಿಮ್ಮಪ್ಪಂದು, ಬೆಂಕಿ ನಿಮ್ಮಪ್ಪಂದು, ಉರಿಯುವುದು ನಿಮ್ಮಪ್ಪಂದು ) ಎಂಬ ಸಂಭಾಷಣೆಯು ಹನುಮ ಭಕ್ತರನ್ನು ಕೆರಳಿಸಿದೆ.
ಈ ಸಂಭಾಷಣೆಗಳಿಗೆ ಪ್ರತಿಕ್ರಿಯಿಸಿರುವ ಚತುರ್ವೇದಿ, 'ಮನರಂಜನೆಯ ಹೆಸರಿನಲ್ಲಿ ನಮ್ಮ ಪೂಜ್ಯ ದೇವರುಗಳಿಗೆ ಈ ರೀತಿಯ ಸಂಭಾಷಣೆಯನ್ನು ಬಳಸಿರುವುದು ಪ್ರತಿಯೊಬ್ಬ ಭಾರತೀಯನ ಸಂವೇದನೆಗಳಿಗೆ ನೋವುಂಟುಮಾಡುತ್ತದೆ' ಎಂದು ಬರೆದಿದ್ದಾರೆ.
'ನೀವು ಮರ್ಯಾದಾ ಪುರುಷೋತ್ತಮ ರಾಮ ಅವರ ಮೇಲೆ ಚಲನಚಿತ್ರವನ್ನು ನಿರ್ಮಿಸುತ್ತೀರಿ. ಬಾಕ್ಸ್ ಆಫೀಸ್ ಯಶಸ್ಸಿಗಾಗಿ ಮರ್ಯಾದೆಯ ಎಲ್ಲಾ ಗಡಿಗಳನ್ನು ದಾಟುವುದು ಸ್ವೀಕಾರಾರ್ಹವಲ್ಲ' ಎಂದು ಅವರು ಹೇಳಿದ್ದಾರೆ.
ಏತನ್ಮಧ್ಯೆ, ಬಲಪಂಥೀಯ ಸಂಘಟನೆಯಾದ ಹಿಂದೂ ಸೇನೆಯು 'ಆದಿಪುರುಷ' ಚಿತ್ರಕ್ಕೆ ಸಾರ್ವಜನಿಕ ಪ್ರದರ್ಶನಕ್ಕೆ ಪ್ರಮಾಣಪತ್ರ ನೀಡದಂತೆ ಒತ್ತಾಯಿಸಿ ದೆಹಲಿ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿದೆ.

ಈ ಚಿತ್ರವು ಧಾರ್ಮಿಕ ಮುಖಂಡರು/ಪಾತ್ರಗಳು/ಆಕೃತಿಗಳನ್ನು ಅಸಮರ್ಪಕವಾಗಿ ಮತ್ತು ಅನುಚಿತವಾಗಿ ಚಿತ್ರಿಸುವ ಮೂಲಕ ಹಿಂದೂ ಸಮುದಾಯದ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.
ಇದನ್ನು ಓಂ ರಾವುತ್ ನಿರ್ದೇಶಿಸಿದ್ದಾರೆ ಮತ್ತು ಭೂಷಣ್ ಕುಮಾರ್ ನಿರ್ಮಿಸಿದ್ದಾರೆ, ಆದಿಪುರುಷ ಹಿಂದೂ ಮಹಾಕಾವ್ಯ ರಾಮಾಯಣವನ್ನು ಆಧರಿಸಿದೆ. ಬಾಹುಬಲಿ ಖ್ಯಾತಿಯ ಪ್ರಭಾಸ್ ಭಗವಾನ್ ರಾಮನಾಗಿ, ಕೃತಿ ಸನೋನ್ ಸೀತೆಯಾಗಿ ಮತ್ತು ಸನ್ನಿ ಸಿಂಗ್ ಲಕ್ಷ್ಮಣನಾಗಿ ನಟಿಸಿದ್ದಾರೆ. ಚಿತ್ರದಲ್ಲಿ ಸೈಫ್ ಅಲಿ ಖಾನ್ ರಾವಣನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಬಿಡುಗಡೆಗೂ ಮುನ್ನ ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮತ್ತು ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ ಸೇರಿದಂತೆ ಹಲವು ಬಿಜೆಪಿ ನಾಯಕರು ಚಿತ್ರದ ಯಶಸ್ಸಿಗೆ ಹರಸಿದ್ದರು.












Click it and Unblock the Notifications