ಹಾವೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ಪಿಯುಸಿಯಲ್ಲಿ ಶೇ.97 ಅಂಕ ಗಳಿಸಿದ್ದರೂ ರಾಜ್ಯದಲ್ಲಿ ಮೆಡಿಕಲ್ ಸೀಟು ಸಿಗಲಿಲ್ಲ' ನವೀನ್ ತಂದೆ

|
Google Oneindia Kannada News

ಹಾವೇರಿ, ಮಾರ್ಚ್ 2: ಉಕ್ರೇನ್-ರಷ್ಯಾ ನಡುವಿನ ಯುದ್ಧ ಆರನೇ ದಿನಕ್ಕೆ ಕಾಲಿಟ್ಟಿದೆ. ರಷ್ಯಾ ರಕ್ಕಸ ದಾಳಿಗೆ ಕರುನಾಡು ಒಬ್ಬ ವಿದ್ಯಾವಂತ ಯುವಕನನ್ನು ಕಳೆದುಕೊಂಡಿದೆ. ಇದು ಯಾರಿದಂಲೂ ಭರಸಲಾಗದ ನಷ್ಟ. ಉಕ್ರೇನ್‌ ನಲ್ಲಿ ವಿದ್ಯಾಬ್ಯಾಸ ಮಾಡುತ್ತಿದ್ದ ಹಾವೇರಿ ಮೂಲದ ನವೀನ್‌ ರಷ್ಯಾ ದಾಳಿಗೆ ಬಲಿಯಾಗಿದ್ದಾನೆ. ಕುಟುಂಬಕ್ಕೆ ಆಸರೆಯಾಗಬೇಕಿದ್ದ ಮಗನನ್ನು ಕಳೆದುಕೊಂಡ ಕುಟುಂಬದಲ್ಲಿ ಶೋಕ ಮಡುಗಟ್ಟಿದೆ. ಕೊನೆ ಮುಖವನ್ನಾದರು ನೋಡಬೇಕು ಎಂದು ಕುಟುಂಬ ಮರುಕ ವ್ಯಕ್ತಪಡಿಸುತ್ತಿದೆ. ಸರ್ಕಾರಕ್ಕೆ ಪರಿ ಪರಿಯಾಗಿ ಮನವಿ ಮಾಡಿಕೊಳ್ಳುತ್ತಿದೆ. ಈ ವೇಳೆ ನಮ್ಮಲ್ಲಿನ ಶಿಕ್ಷಣ ವ್ಯವಸ್ಥೆ ಸರಿ ಇದ್ದಿದ್ದರೆ ನಮ್ಮ ಮಕ್ಕಳು ನಮ್ಮ ಕಣ್ಣು ಮುಂದೆ ಇರುತ್ತಿದ್ದರು ಎಂದು ತಂದೆ ನೋವು ತೋಡಿಕೊಂಡಿದ್ದಾರೆ.

ನವೀನ್ ಡಾಕ್ಟರ್ ಓದುತ್ತಿದ್ದರು. MBBS ಓದಲು ಅವರು ಉಕ್ರೇನ್‌ಗೆ ತೆರಳಿದ್ದರು. ಭಾರತದಲ್ಲಿನ ಖಾಸಗಿ ವೈದ್ಯಕೀಯ ಕಾಲೇಜುಗಳಿಗೆ ಹೋಲಿಸಿದರೆ ಇಲ್ಲಿ ಹೆಚ್ಚು ಕೈಗೆಟುಕುವ ಹಣದಲ್ಲಿ ಎಂಬಿಬಿಎಸ್‌ ಮುಗಿಸಬಹುದು. ಹೀಗಾಗಿ ಇದು ಭಾರತೀಯ ವಿದ್ಯಾರ್ಥಿಗಳಲ್ಲಿ ಜನಪ್ರಿಯ ಆಯ್ಕೆಯಾಗಿದೆ. ಇಲ್ಲಿನ ಖಾಸಗಿ ಕಾಲೇಜುಗಳಲ್ಲಿ ಕಡಿಮೆ ಶುಲ್ಕ ಪಡೆದು ಶಿಕ್ಷಣದ ಗುಣಮಟ್ಟವನ್ನು ಆಧರಿಸಿ ಭಾರತೀಯ ವಿದ್ಯಾರ್ಥಿಗಳನ್ನು ಆಯಕ್ಎ ಮಾಡಿಕೊಳ್ಳುತ್ತಾರೆ. ಹೀಗಾಗಿ ಹೆಚ್ಚು ವೈದ್ಯರಾಗುವ ಕನಸು ಕಂಡ ವಿದ್ಯಾರ್ಥಿಗಳು ಉಕ್ರೇನ್ ಅನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಏಕೆಂದರೆ ಇಲ್ಲಿ ಹಲವಾರು ಪ್ರಸಿದ್ಧ ವೈದ್ಯಕೀಯ ಶಾಲೆಗಳು ಸೀಟು ಒದಗಿಸಲು ಪ್ರವೇಶ ಪರೀಕ್ಷೆಯನ್ನು ತೆಗೆದುಕೊಳ್ಳುವುದಿಲ್ಲ. ಇತ್ತೀಚೆಗೆ, ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಅವರು ವಿದೇಶದಲ್ಲಿ ವೈದ್ಯಕೀಯ ವ್ಯಾಸಂಗ ಮಾಡುವ ಸುಮಾರು 90% ಭಾರತೀಯರು ಭಾರತದಲ್ಲಿ ಅರ್ಹತಾ ಪರೀಕ್ಷೆಗಳಲ್ಲಿ ಉತ್ತೀರ್ಣರಾಗುವುದಿಲ್ಲ ಎಂದು ಹೇಳಿದ್ದಾರೆ.

'ನವೀನ್ ಕೊನೆ ಮುಖ ನೋಡಲು ಅವಕಾಶ ಕೊಡಿ' ಸಹೋದರ ಹರ್ಷ'ನವೀನ್ ಕೊನೆ ಮುಖ ನೋಡಲು ಅವಕಾಶ ಕೊಡಿ' ಸಹೋದರ ಹರ್ಷ

'ಪಿಯುಸಿಯಲ್ಲಿ ಶೇ.97 ಅಂಕ ಗಳಿಸಿದ್ದರೂ ರಾಜ್ಯದಲ್ಲಿ ಮೆಡಿಕಲ್ ಸೀಟು ಸಿಗಲಿಲ್ಲಿ' ನವೀನ್ ತಂದೆ

ಈ ಸಂದರ್ಭದಲ್ಲಿ ತಂದೆ ನವೀನ್ ಶೇಖರಗೌಡ ಮಾತನಾಡಿ, ಮಗನ ನಿಧನದ ನಂತರ ಪಿಯುಸಿಯಲ್ಲಿ ಶೇ.97 ಅಂಕ ಗಳಿಸಿದ್ದರೂ ರಾಜ್ಯದಲ್ಲಿ ಮೆಡಿಕಲ್ ಸೀಟು ಪಡೆಯಲು ಸಾಧ್ಯವಾಗಿಲ್ಲ, ಮೆಡಿಕಲ್ ಸೀಟು ಪಡೆಯಲು ಕೋಟ್ಯಂತರ ರೂಪಾಯಿ ನೀಡಿ ವಿದ್ಯಾರ್ಥಿಗಳು ಪಡೆಯುತ್ತಿದ್ದಾರೆ. ವಿದೇಶದಲ್ಲಿ ಅದೇ ಶಿಕ್ಷಣ ಕಡಿಮೆ ಹಣಕ್ಕೆ ಸಿಗುತ್ತದೆ ಎಂದಿದ್ದಾರೆ.

Scored 97% in PUC, but my son couldnt secure medical seat in Karnataka says Naveen Father Shekaragowda

ಪ್ರತಿಭಾವಂತರಿಗೆ ಇಲ್ಲಿ ಬೆಲೆ ಇಲ್ಲ. ಕೋಟಿಗೆ ಮಾತ್ರ ಇಲ್ಲಿ ಬೆಲೆ ಇರೋದು. ಶಿಕ್ಷಣ ವ್ಯವಸ್ಥೆ ಬದಲಾಗಿದೆ ಎಂದು ನಾವು ಅಂದುಕೊಂಡಿದ್ದೇವು. ಆದರೆ ಬದಲಾಗಿಲ್ಲ. ಎಲ್ಲರೂ ಮಕ್ಕಳಿಗೆ ಶಿಕ್ಷಣ ಕೊಡಿಸಿ ಎಂದು ಹೇಳುತ್ತಾರೆ. ಆದರೆ ಶಿಕ್ಷಣ ವ್ಯವಸ್ಥೆ ಹೇಗಿದೆ ಅನ್ನೋದು ಅರ್ಥ ಮಾಡಿಕೊಳ್ಳಬೇಕು. ಮಧ್ಯಮ ವರ್ಗದವರೇ ಸಾಲ ಮಾಡಿ ಮಕ್ಕಳನ್ನು ಬೇರೆ ದೇಶಕ್ಕೆ ಕಳಿಸಿ ಓದಿಸುತ್ತಿದ್ದಾರೆ. ಇಲ್ಲಿ ಕೋಟಿ ಇದ್ದವರಿಗೆ ಸೀಟು ಸಿಗುತ್ತದೆ. ವಿದ್ಯಾವಂತರಿಗಿಲ್ಲ. ಇಲ್ಲಿ ಸೀಟು ಸಿಕ್ಕಿದ್ದರೆ ನಾವು ಹೊರದೇಶಕ್ಕೆ ನಮ್ಮ ಮಕ್ಕಳನ್ನು ಕಳುಹಿಸುತ್ತಿರಲಿಲ್ಲ. ಜಾತಿ ಪದ್ದತಿ, ಹಣದ ಆಸೆಯಿಂದ ವಿದ್ಯಾವಂತ ನಮ್ಮ ಮಕ್ಕಳು ಹೊರದೇಶಕ್ಕೆ ಹೋಗಿ ವಿದ್ಯಾಭ್ಯಾಸ ಮಾಡುವಂತಾಗಿದೆ ನೊಂದ ನವೀನ್ ತಂದೆ ತಂದೆ ಹೇಳಿದರು.

'ನಮಗಾದ ಸ್ಥಿತಿ ಬೇರೆ ಪೋಷಕರಿಗೆ ಆಗುವುದು ಬೇಡ' ಶೇಕರ್‌ಗೌಡ

ನಮಗಾದ ಸ್ಥಿತಿ ಬೇರೆ ಪೋಷಕರಿಗೆ ಆಗುವುದು ಬೇಡ. ಉಕ್ರೇನ್‌ನಲ್ಲಿರುವ ಬೇರೆ ವಿದ್ಯಾರ್ಥಿಗಳನ್ನು ಕರೆ ತನ್ನಿ ಎಂದು ಮಗನ ಸಾವಿನ ದುಖ:ದಲ್ಲಿಯೂ ಮಾನವೀಯ ಮಾತನ್ನು ಹೇಳುವ ಮೂಲಕ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ. ನನ್ನ ಮಗನನ್ನು ಬದುಕಿರುವಾಗ ನೋಡಲು ಆಗಲಿಲ್ಲ. ಕೊನೆ ಮುಖವನ್ನಾದರು ನೋಡಲು ಅವಕಾಶ ಮಾಡಿಕೊಡಿ ಎಂದು ತಂದೆ ಶೇಖರ್‌ಗೌಡ ನೋವು ತೋಡಿಕೊಂಡಿದ್ದಾರೆ. ಈವರೆಗೆ ಅರವತ್ತು ಲಕ್ಷ ಹಣ ಖರ್ಚು ಮಾಡಿ ವಿದ್ಯಾಭ್ಯಾಸ ಮಾಡಿಸಿದ್ದೇವೆ. ಮುಂದಿನ ಜೀವನಕ್ಕೆ ಆಸರೆಯಾಗಬೇಕಾದ ಮಗನನ್ನು ಕಳೆದುಕೊಂಡಿದ್ದೇವೆ ಎಂದು ಶೇಖರ್‌ಗೌಡ ನೊಂದುಕೊಂಡರು. ಪುತ್ರನ ಮೃತ ದೇಹದ ಪೋಟೋವನ್ನು ನೋಡಿ ನವೀನ್ ತಂದೆ ಮರುಕ ವ್ಯಕ್ತಪಡಿಸಿದ್ದಾರೆ.

'ಕಳೆದ ವಾರವಷ್ಟೇ ನವೀನ್ ಮೆಸೇಜ್ ಮಾಡಿದ್ದನು. ಭಾರತಕ್ಕೆ ಮರಳಿದ ವಿದ್ಯಾರ್ಥಿಗಳು ಎಂದು ಸುದ್ದಿ ಬಂದ ಕೂಡಲೆ ನಾವು ಪೇಪರ್‌ ನಲ್ಲಿ ನವೀನ್ ಹೆಸರು ಹುಡುಕುತ್ತಿದ್ದೆವು. ಮಗನನ್ನು ತುಂಬಾ ಕಾಳಜಿ ಮಾಡಿ ಶೇಖರ್‌ಗೌಡ ಅವರು ವಿದೇಶಕ್ಕೆ ಕಳುಹಿಸಿದ್ದರು. ಅವರಂತೆ ಯಾವ ತಂದೆ-ತಾಯಿಗೂ ಆಗಬಾರದು. ನವೀನ್ ಎರಡು ವರ್ಷಗಳ ಕಾಲ ನನ್ನ ಕೈಯಲ್ಲಿ ಕಲಿತಿದ್ದಾರೆ. ನವೀನ್ ಬಹಳಷ್ಟು ಉತ್ಸಾಹದಿಂದ ಕಳಿಯುತ್ತಿದ್ದ, ನಾವು ಬೈದರು ನಗುಮುಖದಿಂದ ಹೇಳಿದ್ದನ್ನು ಕೇಳುತ್ತಿದ್ದನು. ವೈದ್ಯನಾಗುವ ಕನಸು ಕೂಡ ಕಂಡಿದ್ದನು. ಈಗ ಅವನೇ ಇಲ್ಲ ಅನ್ನೋದು ನಮಗೆ ಅರಗಿಸಿಕೊಳ್ಳಲಾಗುತ್ತಿಲ್ಲ' ಎಂದು ನವೀನ್ ಶಿಕ್ಷಕ ಮಹೇಶ್ ನೊಂದುಕೊಂಡರು.

English summary
Russian-Ukraine war: "Despite scoring 97% in PUC, my son could not secure a medical seat in the state. To get a medical seat, one has to give crores of rupees and students are getting same education abroad spending less money says Naveen's Father Shekaragowda .
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X