ಮತದಾರ ಕಳುಹಿಸಿದ ಆ ಒಂದು ಫೋಟೋ: ಮಾಜಿ ಸಿಎಂ ಭಾವುಕ
ಬೆಂಗಳೂರು, ಏಪ್ರಿಲ್ 12: ಲೋಕಸಭಾ ಚುನಾವಣೆಯಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಿರುವ ಮಾಜಿ ಮುಖ್ಯಮಂತ್ರಿಯೊಬ್ಬರು ಭಾವನಾತ್ಮಕ ಸನ್ನಿವೇಶಕ್ಕೆ ಸಾಕ್ಷಿಯಾಗಿದ್ದಾರೆ. ಮತದಾರರು ಆದ ಪಕ್ಷ ಕಾರ್ಯಕರ್ತನೊಬ್ಬ ಕಳುಹಿಸಿ ಆ ಫೋಟೋ ನೋಡಿ ತಂದೆ ಮತ್ತು ತಮ್ಮ ಕಾರ್ಯಗಳನ್ನು ನೆನೆದು ಕ್ಷಣಕಾಲ ಭಾವುಕರಾದ ಘಟನೆ ನಡೆಯಿತು.
ಮತದಾರರೊಬ್ಬರು ಕಳುಹಿಸಿ ಫೋಟೋವನ್ನು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿ, ಇದೊಂದು ಅತ್ಯಂತ ಭಾವನಾತ್ಮಕ ಸನ್ನಿವೇಶ ಎಂದು ಬಿಜೆಪಿ ಮಾಜಿ ಮುಖ್ಯಮಂತ್ರಿ ಹಾವೇರಿ-ಗದಗ ಲೋಕಸಭಾ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಅವರು ತಂದೆ ನೆನಪಿಸಿಕೊಂಡು ಭಾವುಕರಾದರು.

ಕಾರ್ಯಕರ್ತ ಕಳಹಿಸಿದ ಫೋಟೋದಲ್ಲೇನಿದೆ?
ಕ್ಷೇತ್ರದ ಗದಗ-ಬೆಟಗೇರಿ ನಗರದ ಕಾರ್ಯಕರ್ತರೊಬ್ಬರು ನಾಮಫಲಕದ ಫೋಟೋ ಅನ್ನು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಕಳುಹಿಸಿದ್ದಾರೆ. ಅದನ್ನು ನೋಡಿ ಪೋಸ್ಟ್ ಮಾಡಿರುವ ಬಸವರಾಜ ಬೊಮ್ಮಾಯಿ ಅವರು, ''ನನ್ನ ಪ್ರಾತಃ ಸ್ಮರಣೀಯ ಪೂಜ್ಯ ತಂದೆಯವರಾದ ಎಸ್. ಆರ್. ಬೊಮ್ಮಾಯಿಯವರು 1983ರಲ್ಲಿ ಗದಗ-ಬೆಟಗೇರಿಯ ನೇಕಾರ ಕಾಲೋನಿಯಲ್ಲಿನ ವಸತಿಗೃಹದ ಉದ್ಘಾಟನೆ ನೆರವೇರಿಸಿದ್ದರು. ಅದರ ನಾಮಫಲಕವನ್ನು ನೋಡಿ, ಪೂಜ್ಯ ತಂದೆಯವರ ಅಭಿವೃದ್ಧಿ ಕಾರ್ಯಗಳೆಲ್ಲವೂ ಕಣ್ಣ ಮುಂದೆ ಬಂದಿತು'' ಎಂದು ಬರೆದುಕೊಂಡಿದ್ದಾರೆ.
ಇದೊಂದು ಅತ್ಯಂತ ಭಾವನಾತ್ಮಕ ಸನ್ನಿವೇಶ.
— Basavaraj S Bommai (Modi Ka Parivar) (@BSBommai) April 12, 2024
ಗದಗ-ಬೆಟಗೇರಿ ನಗರದ ಕಾರ್ಯಕರ್ತರೊಬ್ಬರು ಕಳಿಸಿದ ನಾಮಫಲಕದ ಫೋಟೋ ಇದು.
ನನ್ನ ಪ್ರಾತಃ ಸ್ಮರಣೀಯ ಪೂಜ್ಯ ತಂದೆಯವರಾದ ಶ್ರೀ ಎಸ್. ಆರ್. ಬೊಮ್ಮಾಯಿಯವರು 1983ರಲ್ಲಿ ಗದಗ-ಬೆಟಗೇರಿಯ ನೇಕಾರ ಕಾಲೋನಿಯಲ್ಲಿನ ವಸತಿಗೃಹದ ಉದ್ಘಾಟನೆಯನ್ನು ನೆರವೇರಿಸಿದ್ದ ನಾಮಫಲಕವನ್ನು ನೋಡಿ, ಪೂಜ್ಯ ತಂದೆಯವರ ಅಭಿವೃದ್ಧಿ… pic.twitter.com/2FlS5y2VmD
ನೇಕಾರ ಸಮುದಾಯದ ಮೇಲೆ ವಿಶೇಷ ಕಾಳಜಿ
ತಂದೆಯವರು ನೇಕಾರ ಸಮುದಾಯ ಸೇರಿದಂತೆ ರಾಜ್ಯದ ಅಭಿವೃದ್ಧಿಗೆ ತಮ್ಮದೆ ಆದ ಕೊಡುಗೆ ನೀಡಿದ್ದಾರೆ ಎಂದು ಸ್ಮರಿಸಿದರು.
ಕುಶಲಕರ್ಮಿಗಳಾದ ನೇಕಾರ ಸಮುದಾಯದವರ ಮೇಲೆ ನನ್ನ ತಂದೆಯವರಿಗೆ ವಿಶೇಷ ಮಮತೆಯಿತ್ತು. ಈ ಹಿನ್ನೆಲೆಯಲ್ಲಿ ನಾನು ಮುಖ್ಯಮಂತ್ರಿಯಾಗಿದ್ದಾಗ ಸಂದರ್ಭದಲ್ಲಿ ರೈತರ ಮಕ್ಕಳಿಗೆಂದು ಸ್ಥಾಪಿತವಾಗಿದ್ದ 'ರೈತ ವಿದ್ಯಾನಿಧಿ ಯೋಜನೆ'ಯನ್ನು ನೇಕಾರರ ಮಕ್ಕಳಿಗೂ ಸಹ ವಿಸ್ತರಿಸಿದ್ದೆ ಎಂದು ಅವರು ತಿಳಿಸಿದರು.
ಇಷ್ಟೆಲ್ಲಾ ಮಧುರ ಸವಿ ನೆನಪುಗಳನ್ನು ಪುನರ್ ನೆನಪಿಸಿದ ಆ ನಾಮಫಲಕಕ್ಕೆ ಹಾಗೂ ಸೇವೆ ಮಾಡಲು ಅವಕಾಶ ಕಲ್ಪಿಸಿದ ಪ್ರತಿಯೊಬ್ಬರಿಗೂ ಹೃದಯಾಂತರಾಳದಿಂದ ಧನ್ಯವಾದ ಅವರು ಬೊಮ್ಮಾಯಿಯವರು ತಿಳಿಸಿದರು.

ಹಾವೇರಿ-ಗದಗ ಕ್ಷೇತ್ರದಲ್ಲಿ ಬೊಮ್ಮಾಯಿ ಮತಯಾಚನೆ
ಕರ್ನಾಟಕದ 4ನೇ ಸಿಎಂ ಆಗಿ ಕಾರ್ಯ ನಿರ್ವಹಿಸಿರುವ ಎಸ್.ಆರ್ ಬೊಮ್ಮಾಯಿ ಅವರು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರಾಗಿ 1996ರಲ್ಲಿ ಸೇವೆ ನೀಡಿದವರು. ಉತ್ತರ ಕರ್ನಾಟಕ ಭಾಗದ ಜನರಪರ ಧ್ವನಿಯಾಗಿದ್ದವರು. ಅವರ ಪುತ್ರ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಗದಗ ಬೆಟಗೇರಿ ಭಾಗದಲ್ಲಿ ಮತಯಾಚನೆ ಮಾಡುವಾಗಿ ತಂದೆಯವರ ಸಾಧನೆ ಫೋಟೊ ಮೂಲಕ ಸ್ಮರಿಸಿದ್ದಾರೆ.
ಲೋಕಸಭಾ ಚುನಾವಣೆ ಹಿನ್ನೆಯಲ್ಲಿ ಕಳೆದ ಎರಡು ವಾರದಿಂದ ಬಸವರಾಜ ಬೊಮ್ಮಾಯಿ ಅವರು ಹಾವೇರಿ, ಗದಗ ವ್ಯಾಪ್ತಿಯಲ್ಲಿ ಭರ್ಜರಿ ಪ್ರಚಾರ ಕೈಗೊಂಡಿದ್ದಾರೆ. ಬಿಸಿಲು ಲೆಕ್ಕಿಸದೇ ಗ್ರಾಮಗ್ರಾಮಗಳಲ್ಲಿಯೋ ಓಡಾಡಿ ರೋಡ್ ಶೋ ನಡೆಸುತ್ತಿದ್ದಾರೆ.
-
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
IPL 2026: ಆರ್ಸಿಬಿ-ಎಸ್ಆರ್ಎಚ್ ಉದ್ಘಾಟನಾ ಪಂದ್ಯಕ್ಕೆ ಮಳೆ ಅಡ್ಡಿಯಾಗಲಿದ್ಯಾ? ಹವಾಮಾನ ಇಲಾಖೆ ಹೇಳೋದೇನು? -
RCB: ಆರ್ಸಿಬಿ ಜೆರ್ಸಿ ಧರಿಸಿದವರಿಗೆ ಉಚಿತ ಪ್ರಯಾಣ; ಬೆಂಗಳೂರು ಆಟೋ ಚಾಲಕನ 'ಆಫರ್' ಪೋಸ್ಟರ್ ವೈರಲ್ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
ಪಾರದರ್ಶಕ ನೇಮಕಾತಿಗಾಗಿ ಪ್ರತಿಷ್ಠಿತ 'ಸ್ಕಾಚ್ ರಾಷ್ಟ್ರೀಯ ಪ್ರಶಸ್ತಿ' ಮುಡಿಗೇರಿಸಿಕೊಂಡ KSRTC -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
By Election: ಸಿದ್ದರಾಮಯ್ಯರಿಂದ ಅಹಿಂದ ಜೊತೆಗೆ ಗುತ್ತಿಗೆ ರಾಜಕಾರಣ: ಮಾಜಿ ಸಿಎಂ ಗಡುಗು -
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ












Click it and Unblock the Notifications