Haveri Lok Sabha Constituency: ಹಾವೇರಿ ಲೋಕಸಭಾ ಕ್ಷೇತ್ರದ ಪರಿಚಯ-ಮಾಹಿತಿ, ವಿವರ
ಹಾವೇರಿ, ಮಾರ್ಚ್, 21: ಹಾವೇರಿಯು ಸಂತ ಶಿಶುನಾಳ ಷರೀಫ್, ಕನಕದಾಸ ಮತ್ತು ಸರ್ವಜ್ಞರಂತಹ ಹಲವಾರು ಪ್ರಮುಖ ವ್ಯಕ್ತಿಗಳ ಜನ್ಮಸ್ಥಳವಾಗಿದೆ. ಪ್ರಸಿದ್ಧ ಬರಹಗಾರರು, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ವಿ.ಕೃ.ಗೋಕಾಕ್, ಸ್ವಾತಂತ್ರ್ಯ ಹೋರಾಟಗಾರರಾದ ಗುದ್ಲಪ್ಪ ಹಳ್ಳಿಕೇರಿ ಮುಂತಾದವರ ತವರೂರಾಗಿದೆ. ಅಲ್ಲದೆ ರಾಣೆಬೆನ್ನೂರು ಕೃಷ್ಣಮೃಗ ಅಭಯಾರಣ್ಯ ಮತ್ತು ಬಂಕಾಪುರ ನವಿಲು ಅಭಯಾರಣ್ಯದಂತಹ ವನ್ಯಜೀವಿ ಆಕರ್ಷಣೆಗಳಿಗೆ ಹಾವೇರಿ ಹೆಸರುವಾಸಿಯಾಗಿದೆ. ಹಾಗಾದರೆ ಇಲ್ಲಿ ಮುಂದಾದ ವಿಶೇಷತೆ ರಾಜಕೀಯ ಇತಿಹಾಸವನ್ನು ಇಲ್ಲಿ ತಿಳಿಯಿರಿ.
ಹಾವೇರಿಯ ಆಹಾರ ಪದ್ಧತಿಯು ಉತ್ತರ ಕರ್ನಾಟಕದ ಹೆಚ್ಚಿನ ಅಡುಗೆ ವಿಧಾನಗಳಿಗೆ ಹೋಲುತ್ತದೆ. ಇದರಲ್ಲಿ ಜೊಳದ ರೊಟ್ಟಿ, ಸಜ್ಜೆ ರೊಟ್ಟಿ, ಕುಚ್ಚಕಡಬು ಮತ್ತು ಹೋಳಿಗೆ ಸೇರಿದ್ದು, ನೀವು ಹಾವೇರಿಗೆ ಭೇಟಿ ನೀಡಿದಾಗ ಇಲ್ಲಿಯ ರುಚಿಕರವಾದ ವಿಶೇಷ ಆಹಾರವನ್ನು ಸವಿಯಬಹುದಾಗಿದೆ. ಇನ್ನು ರಾಜಕೀಯ ಇತಿಹಾಸವನ್ನು ಇಲ್ಲಿ ತಿಳಿಯಿರಿ.

ಕುತೂಹಲ ಕೆರಳಿಸಿದ ಹಾವೇರಿ ಕಣ: ಹಾವೇರಿಯು ಉತ್ತರ ಕರ್ನಾಟಕ ಜಿಲ್ಲೆಗಳಿಗೆ ಹೆಬ್ಬಾಗಿಲು ಇದ್ದಂತೆ. ಲೋಕಸಭಾ ಚುನಾವಣೆಗೆ ಹಾವೇರಿ ಕ್ಷೇತ್ರದಿಂದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಕಳಕ್ಕಿಳಿಸಿದ್ದು, ಕಾಂಗ್ರೆಸ್ ಅಭ್ಯರ್ಥಿಯಾಗಿ ಆನಂದಸ್ವಾಮಿ ಗಡ್ಡದೇವರಮಠ ಅವರನ್ನು ಘೋಷಣೆ ಮಾಡಲಾಗಿದೆ. ಆದರೆ ಬಸವರಾಜ ಬೊಮ್ಮಾಯಿ ವಿರುದ್ಧ ಪ್ರಬಲ ಪ್ರತಿಸ್ಪರ್ಧಿಯಾಗಲು ಸಾಧ್ಯವಿಲ್ಲ ಎಂದು ಪಕ್ಷದ ಮುಖಂಡರು ಅಭಿಪ್ರಾಯಪಟ್ಟಿದ್ದಾರೆ. ಹಾಗಾಗಿ ಎಚ್.ಕೆ.ಪಾಟೀಲ್ ಅವರನ್ನು ಕಣಕ್ಕಿಳಿಸಲು ಮನವೊಲಿಸಲಾತ್ತಿದೆ ಎನ್ನುವ ಮಾಹಿತಿ ಮೂಲಗಳಿಂದ ತಿಳಿದುಬಂದಿದೆ.
ಯಾರೆಲ್ಲ ಆಕಾಂಕ್ಷಿಗಳಾಗಿದ್ದರು?: ಶಿವಕುಮಾರ್ ಉದಾಸಿ ಅವರ ಹ್ಯಾಟ್ರಿಕ್ ಗೆಲುವಿನೊಂದಿಗೆ ಹಾವೇರಿ ಕ್ಷೇತ್ರದಲ್ಲಿ ಬಿಜೆಪಿ ಭದ್ರ ನೆಲೆಯಾಗಿ ಗುರುತಿಸಿಕೊಂಡಿತ್ತು. ಈ ಬಾರಿ ಕ್ಷೇತ್ರದಿಂದ ಸ್ಪರ್ಧಿಸಲು ಉದಾಸಿ ಹಿಂದೇಟು ಹಾಕಿದ್ದು, ಈ ವಿಷಯ ತಿಳಿಯುತ್ತಿದ್ದಂತೆ ಪಕ್ಷದಿಂದ ಹಲವು ಟಿಕೆಟ್ ಆಕಾಂಕ್ಷಿಗಳು ಟಿಕೆಟ್‌ಗಾಗಿ ಭಾರೀ ಪೈಪೋಟಿ ನಡೆಸಿದ್ದರು.
ಈ ಪೈಕಿ ಕೆ.ಎಸ್.ಈಶ್ವರಪ್ಪ ಅವರ ಪುತ್ರ ಕೆ.ಇ.ಕಾಂತೇಶ್ ಒಬ್ಬರಾಗಿದ್ದರು. ಅಲ್ಲದೆ ಡಾ.ಮಹೇಶ ನಾಲವಾಡ, ಶಶಿಧರ ನಾಗರಾಜಪ್ಪ ಕೂಡ ಟಿಕೆಟ್ ಆಕಾಂಕ್ಷಿಗಳು ಆಗಿದ್ದರು. ಆದರೆ ಬಿಜೆಪಿ ಹೈಕಮಾಂಡ್ ಮಾತ್ರ ಯಾರಿಗೂ ಮಣೆ ಹಾಕದೇ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಟಿಕೆಟ್ ಘೋಷಣೆ ಮಾಡುವ ಮೂಲಕ ಅಚ್ಚರಿ ಮೂಡಿಸಿದೆ.
ಮತದಾರರ ವಿವರ: ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಹಾವೇರಿ ಜಿಲ್ಲೆ 5 ತಾಲ್ಲೂಕು ಹಾಗೂ ಗದಗ ಜಿಲ್ಲೆಯ ಮೂರು ತಾಲ್ಲೂಕುಗಳು ಬರುತ್ತಿವೆ. ಒಟ್ಟು 8 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ. ಹಾವೇರಿ, ಹಾನಗಲ್, ಬ್ಯಾಡಗಿ, ಹಿರೇಕೆರೂರು-ರಟ್ಟಿಹಳ್ಳಿ, ರಾಣೇಬೆನ್ನೂರು, ಗದಗ, ರೋಣ, ಶಿರಹಟ್ಟಿಗಳು ಒಳಗೊಂಡಿದೆ. ಹಾವೇರಿ ಲೋಕಸಭಾ ಕ್ಷೇತ್ರದ ಒಟ್ಟು ಮತದಾರರ ಸಂಖ್ಯೆ 17,58,021. ಮಹಿಳೆಯರು-8,68,510 ಮತದಾರರು, ಪುರುಷರು-8,89,421 ಹಾಗೂ ತೃತೀಯಲಿಂಗಿಗಳು-90 ಮತದಾರರಿದ್ದಾರೆ ಎನ್ನುವ ಮಾಹಿತಿ ಲಭ್ಯ ಆಗಿದೆ.
ಉದಾಸಿ ಗೆಲುವಿನ ಹಿಸ್ಟೊರಿ ಮಿಸ್ಟರಿ: 2019ರಲ್ಲಿ ನಡೆದ ಚುನಾವಣೆಯಲ್ಲಿ ಹಾವೇರಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಶಿವಕುಮಾರ್ ಉದಾಸಿ ಸ್ಪರ್ಧೆಗಿಳಿದಿದ್ದು, ಅವರು 6,83,660 ಮತಗಳನ್ನು ಪಡೆಯುವ ಮೂಲಕ ಪ್ರತಿಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿ ಡಿ.ಆರ್.ಪಾಟೀಲ ವಿರುದ್ಧ 1,40,882 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.
* ಬಿಜೆಪಿ ಪ್ಲಸ್: ಹಾವೇರಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸತತ ಮೂರು ಭಾರಿ ಗೆಲುವಿನ ನಗೆ ಬೀರಿದ್ದು, ಇದನ್ನು ಭದ್ರಕೋಟೆ ಮಾಡಿಕೊಂಡಿದೆ. ಜಿಲ್ಲೆಯಲ್ಲಿ ಬಹುದೊಡ್ಡ ವರ್ಚಸ್ಸು ಹಿಂದುತ್ವದ ಪರ ಸಂಘಟನೆ ಹಾಗೂ ದೊಡ್ಡ ಸಮುದಾಯದ ಒಗ್ಗಟ್ಟು.
* ಬಿಜೆಪಿ ಮೈನಸ್: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಾಗ ಉತ್ತಮ ಕೆಲಸ ಮಾಡದಿರುವುದು, ಸಿಎಂ ಹಾಗೂ ಕೃಷಿ ಸಚಿವರಿದ್ದರೂ ಜಿಲ್ಲೆ ಅಭಿವೃದ್ಧಿಯಲ್ಲಿ ಹಿನ್ನಡೆ, ಜಿಲ್ಲೆಯ ಐದು ಕ್ಷೇತ್ರಗಳಲ್ಲೂ ಬಿಜೆಪಿಯ ಹೀನಾಯ ಸೋಲು, ಪಕ್ಷದಲ್ಲಿ ಟಿಕೆಟ್ ಸಂಬಂಧ ಅಸಮಾಧಾನ, ಕಾಂಗ್ರೆಸ್ ಪಕ್ಷ ಜಿಲ್ಲೆಯಲ್ಲಿ ಪಾರುಪತ್ಯ ಸಾಧಿಸುತ್ತಿರುವುದಾಗಿದೆ.
* ಕಾಂಗ್ರೆಸ್ ಪ್ಲಸ್: ಕಾಂಗ್ರೆಸ್ ಪಕ್ಷ ಕೆಳಮಟ್ಟದಿಂದ ಜಿಲ್ಲೆಯಲ್ಲಿ ಪಾರುಪತ್ಯ ಸಾಧಿಸುತ್ತಿರುವುದು, ವಿಧಾನಸಭೆಯ ಚುನಾವಣೆಯಲ್ಲಿ ಐದು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು, ಬಿಜೆಪಿಯ ದುರಾಡಳಿತವನ್ನು ಜನರಿಗೆ ತಲುಪಿಸಲು ಸಲೀಸಾದ ಮಾರ್ಗಗಳಿರುವುದು, ಪಕ್ಷದಲ್ಲಿ ಯಾವುದೇ ಅಸಮಾಧಾನವಿಲ್ಲ.
* ಕಾಂಗ್ರೆಸ್ ಮೈನಸ್: ಮೂರು ಭಾರಿ ಹಾವೇರಿ ಲೋಕಸಭಾ ಚುನಾವಣೆಯಲ್ಲಿ ಸೋಲು, ಸೂಕ್ತವಾದ ಅಭ್ಯರ್ಥಿ ಕಾಂಗ್ರೆಸ್‌ಗೆ ಸಿಗದಿರುವುದು, ಜನರ ವೋಟನ್ನು ಮತಗಳನ್ನಾಗಿ ಮಾಡುವ ಪ್ರಭಾವಿ ನಾಯಕರು ಇಲ್ಲದಿರುವುದು, ಕಾಂಗ್ರೆಸ್ ಶಾಸಕರಿಗೆ ಸೂಕ್ತ ಸ್ಥಾನ ಸಿಗದಿರುವುದಾಗಿದೆ.
ಬಿಜೆಪಿ ಭದ್ರಕೋಟೆ ಆಗಿರುವ ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ 6.5 ಲಕ್ಷಕ್ಕೂ ಅಧಿಕ ಲಿಂಗಾಯತರು, 3 ಲಕ್ಷ ಅಲ್ಪಸಂಖ್ಯಾತರು, 3 ಲಕ್ಷ ಕುರುಬರು, 3 ಲಕ್ಷ ಮುಸ್ಲಿಮರು ಸೇರಿದಂತೆ ಇತರರಿದ್ದಾರೆ.
ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಬಿಜೆಪಿ ಅಭ್ಯರ್ಥಿ ಎಂದು ಘೋಷಿಸಿದ ಬೆನ್ನಲ್ಲೇ ಸಚಿವ ಎಚ್.ಕೆ.ಪಾಟೀಲ್ ಅವರನ್ನು ಇಲ್ಲಿಂದ ಸ್ಪರ್ಧಿಸುವಂತೆ ಮನವೊಲಿಸಲು ಕಾಂಗ್ರೆಸ್ ಚಿಂತನೆ ನಡೆಸಿದೆ. ಆದರೆ ಬೊಮ್ಮಾಯಿ ಅವರ ಬದಲಿಗೆ ಜಗದೀಶ್ ಶೆಟ್ಟರ್ ಅವರನ್ನು ಹಾವೇರಿಯಿಂದ ಸ್ಪರ್ಧಿಸುವಂತೆ ಒತ್ತಡ ಹೇರಲಾಗುತ್ತಿದೆ ಎಂಬ ಮಾತು ಕೂಡ ಕೇಳಿ ಬರುತ್ತಿದೆ. ಆದರೆ ಸ್ಥಳೀಯ ನಾಯಕರಿಗೆ ಈ ಬಗ್ಗೆ ಅಧಿಕೃತ ಮಾಹಿತಿ ಇಲ್ಲ.
ಹಾವೇರಿ ಕ್ಷೇತ್ರದ ಹಿಂದಿನ ಇತಿಹಾಸ: ಹಾವೇರಿ ಕರ್ನಾಟಕ ಲೋಕಸಭಾ ಕ್ಷೇತ್ರವು ಭಾರತದ ರಾಜಕಾರಣದಲ್ಲಿ ಹೆಸರುವಾಸಿಯಾದ ರಾಜಕೀಯ ಶಕ್ತಿ ಕೇಂದ್ರವಾಗಿದೆ. 2019ರ ಲೋಕಸಭಾ ಚುನಾವಣೆಯಲ್ಲಿ, ಇದು ತೀವ್ರ ಪೈಪೋಟಿಯ ಕದನಕ್ಕೆ ಸಾಕ್ಷಿಯಾಯಿತು. ಬಿಜೆಪಿ ಅಭ್ಯರ್ಥಿ ಶಿವಕುಮಾರ್ ಉದಾಸಿ 2019ರ ಸಾರ್ವತ್ರಿಕ ಚುನಾವಣೆಯಲ್ಲಿ 1,40,882 ಮತಗಳ ಗೆಲುವಿನ ಅಂತರದಿಂದ ಗೆದ್ದರು. 6,83,660 ಮತಗಳನ್ನು ಗಳಿಸಿದ್ದು, ಇನ್ನು 5,42,778 ಮತಗಳನ್ನು ಪಡೆದ ಐಎನ್‌ಸಿಯ ಡಿಆರ್ ಪಾಟೀಲ ಅವರಿಗೆ ಸೋಲುಣಿಸಿದ್ದರು.
ಹಾವೇರಿ ವೈವಿಧ್ಯಮಯ ಜನಸಮೂದಾಯವನ್ನು ಪ್ರತಿಬಿಂಬಿಸುತ್ತದೆ ಮತ್ತು ಕರ್ನಾಟಕದ ನಿರ್ಣಾಯಕ ಕ್ಷೇತ್ರವಾಗಿ ಉಳಿದಿದೆ. ಈ ಕ್ಷೇತ್ರದಲ್ಲಿ 2019ರಲ್ಲಿ ಶೇಕಡಾ 74.01ರಷ್ಟು ಮತದಾನವಾಗಿದೆ. ಈಗ 2024ರಲ್ಲಿ, ಮತದಾರರು ತಮ್ಮ ಮತದ ಶಕ್ತಿಯನ್ನು ತೋರಿಸಲು ಇನ್ನಷ್ಟು ಉತ್ಸುಕರಾಗಿದ್ದಾರೆ.
ಹಾವೇರಿ ಲೋಕಸಭಾ ಕ್ಷೇತ್ರದ 2024 ಅಭ್ಯರ್ಥಿಗಳ ಪಟ್ಟಿಗೆ ಸಂಬಂಧಿಸಿದಂತೆ, ಬಿಜೆಪಿಯಿಂದ ಬಸವರಾಜ ಬೊಮ್ಮಾಯಿ ಮತ್ತು ಇಂಡಿಯನ್ ನ್ಯಾಷನಲ್ ಕಾಂಗ್ರೆಸ್‌ನಿಂದದ ಆನಂದಸ್ವಾಮಿ ಗಡ್ಡದೇವರ ಮಠ ಪ್ರಮುಖ ಅಭ್ಯರ್ಥಿಗಳಾಗಿದ್ದಾರೆ.












Click it and Unblock the Notifications