'ನವೀನ್ ಕೊನೆ ಮುಖ ನೋಡಲು ಅವಕಾಶ ಕೊಡಿ' ಸಹೋದರ ಹರ್ಷ

ಹಾವೇರಿ, ಮಾರ್ಚ್ 2: 'ಈಗ ಬರಬಹುದು ಆಗಬರಬಹುದು' ಅಂತ ಬಾಗಿಲ ಕಡೆ ನೋಡುತ್ತಲೇ ಮಗನ ಬರುವಿಕೆಗಾಗಿ ಕಾಯುತ್ತ ಕುಳಿತಿದ್ದ ನವೀನ್ ಕುಟುಂಬಸ್ಥರಿಗೆ ಸಿಡಿಲು ಬಡಿದಂತಾಗಿದೆ. ಕೊನೆಗೂ ಮಗ ಬರಲೇ ಇಲ್ಲ. ಬಂದಿದ್ದು ಫೋನ್ ಕರೆ ಮಾತ್ರ. ಅದು ನವೀನ್ ರಷ್ಯಾ ದಾಳಿಗೆ ಮೃತನಾಗಿದ್ದಾನೆನ್ನುವ ಸುದ್ದಿ. ಈ ಮಾತು ಕೇಳಿ ನವೀನ್ ಕುಟುಂಬಕ್ಕೆ ಆಕಾಶವೇ ಕಳಚಿ ಬಿದ್ದಂತಾಗಿದೆ. 'ನವೀನ್ ಕೊನೆ ಮುಖ ನೋಡಲು ಅವಕಾಶ ಕೊಡಿ' ಎಂದು ಕುಟುಂಬಸ್ಥರು ಮನವಿ ಮಾಡಿಕೊಳ್ಳುತ್ತಿದ್ದಾರೆ.

ರಷ್ಯಾ ರಕ್ಕಸ ದಾಳಿಗೆ ಉಕ್ರೇನ್‌ಗೆ ವಿದ್ಯಾಬ್ಯಾಸಕ್ಕೆಂದು ಹೋಗಿದ್ದ ಕರ್ನಾಟಕದ ಹಾವೇರಿ ಮೂಲದ ನವೀನ್ ದುರಂತ ಸಾವಿಗೀಡಾಗಿದ್ದಾನೆ. ನಿನ್ನೆ ಬೆಳಗ್ಗೆ ಭಾರತೀಯ ಕಾಲಮಾನದ ಪ್ರಕಾರ ಹತ್ತು ಗಂಟೆಯ ಸುಮಾರಿಗೆ ಆಹಾರ ತರಲು ಹೊರಗಡೆ ಹೋಗಿದ್ದ ನವೀನ್ ರಷ್ಯಾ ದಾಳಿಗೆ ಸಾವನ್ನಪ್ಪಿದ್ದಾರೆ. ಈ ಸುದ್ದಿ ಕುಟುಂಬಸ್ಥರಿಗೆ ಅಘಾತ ತಂದಿದೆ. ಮಗನನ್ನು ನೋಡಲೇ ಬೇಕು ಎನ್ನುವ ತವಕ ಹೆಚ್ಚಾಗಿದೆ. 21 ವರ್ಷದ ನವೀನ್ ವೈದ್ಯನಾಗುವ ಕನಸು ಕಂಡಿದ್ದ. ಆದರೀಗ ಮಗನನ್ನು ವೈದ್ಯನಾಗಿ ನೋಡಬೇಕು ಅಂದುಕೊಂಡಿದ್ದ ಕುಟುಂಬಕ್ಕೆ ಮಗನಿಲ್ಲ ಎನ್ನುವ ಸುದ್ದಿ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. 'ನವೀನ್ ಕೊನೆ ಮುಖ ನೋಡಲು ಅವಕಾಶ ಕೊಡಿ' ಎಂದು ಕುಟುಂಬಸ್ಥರು ಮನವಿ ಮಾಡಿಕೊಳ್ಳುತ್ತಿದ್ದಾರೆ. ನವೀನ್ ಸಹೋದರ ಹರ್ಷ ಹಾಗೂ ನವೀನ್ ತಂದೆ ಶೇಖರ್‌ಗೌಡ ಮಗನನ್ನು ಕೊನೆ ಬಾರಿಗೆ ನೋಡಲು ಅವಕಾಶ ಮಾಡಿಕೊಡಿಕೊಡಲು ಹಾಗೂ ಆತನ ಮೃತದೇಹವನ್ನು ಉಕ್ರೇನ್‌ನಿಂದ ಕರೆತರಲು ಕೇಂದ್ರಕ್ಕೆ ಹಾಗೂ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ರಷ್ಯಾ ದಾಳಿಗೆ ಉಕ್ರೇನ್ ಜನ ಅಕ್ಷರಶ: ನಲುಗಿ ಹೋಗಿದ್ದಾರೆ. ಮನೆಯಿಂದ ಬಂಕರ್‌ಗಳಿಂದ ಹೊರಬರಲು ಸಾಧ್ಯವಾಗದೆ ಅನ್ನ ನೀರು ಇಲ್ಲದೆ ಪರದಾಡುವಂತ ಪರಿಸ್ಥಿತಿ ಎದುರಾಗಿದೆ. ಇದರ ಮಧ್ಯೆ ಆಹಾರಕ್ಕಾಗಿ ಬಂಕರ್‌ನಿಂದ ಹೊರಹೋದ ನವೀನ್ ರಷ್ಯಾ ರಕ್ಕಸ ದಾಳಿಗೆ ಬಲಿಯಾಗಿದ್ದಾನೆ. ಆಹಾರಕ್ಕಾಗಿ ನವೀನ್ ಬಂಕರ್‌ನಿಂದ ಏಳು ಎಂಟು ಕಿಲೋಮಿಟರ್ ಹೊರಬಂದಿದ್ದಾನೆ. ಈ ವೇಳೆ ರಷ್ಯಾ ದಾಳಿಗೆ ನವೀನ್ ಬಲಿಯಾಗಿದ್ದಾರೆ.

Bring Naveens body back, I want to see him says his father Shekarappa and Brother Harsha

ಸದ್ಯ ನವೀನ್ ಮೃತ ದೇಹದ ಫೋಟೋ ಲಭ್ಯವಾಗಿದ್ದು ನವೀನ್ ಮೃತ ದೇಹವನ್ನು ತರುವ ಪ್ರಯತ್ನ ನಡೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಕುಟುಂಬಕ್ಕೆ ಸಾಂತ್ವನ ನೀಡಿದ್ದಾರೆ. ಉಕ್ರೇನ್‌ನ ಖಾರ್ಕೀವ್‌ನಲ್ಲಿನ ಸೂಪರ್ ಮಾರ್ಕೆಟ್ ಬಳಿಯಲ್ಲಿ ಬೆಳಗ್ಗೆ ತಿಂಡಿ ತರುವುದಕ್ಕೆ ತೆರಳುತ್ತಿದ್ದಂತೆ ಕರ್ನಾಟಕದ ವೈದ್ಯಕೀಯ ವಿದ್ಯಾರ್ಥಿ ನವೀನ್, ರಷ್ಯಾ ಸೇನೆಯಿಂದ ನಡೆಸಿದ ಶೆಲ್ ದಾಳಿಯಲ್ಲಿ ಸಾವನ್ನಪ್ಪಿದರು. ನವೀನ್​ ಸಾವನ್ನಪ್ಪಿರುವ ವಿಷಯವನ್ನು ಭಾರತೀಯ ವಿದೇಶಾಂಗ ಸಚಿವಾಲಯ ತಿಳಿಸುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ದೂರವಾಣಿ ಮೂಲಕ ನವೀನ್ ತಂದೆ ಶೇಖರಪ್ಪ ಗೌಡಗೆ ಕರೆ ಮಾಡಿ ಕೆಲ ನಿಮಿಷಗಳ ಕಾಲ ಮಾತನಾಡಿದ್ದು, ಕುಟುಂಬಸ್ಥರಿಗೆ ಧೈರ್ಯ ತುಂಬಿದ್ದಾರೆ.

ದೇಶವೇ ನಿಮ್ಮೊಂದಿಗಿದೆ, ಮಗನ ಸಾವನ್ನು ಅರಗಿಸಿಕೊಳ್ಳುವಂತ ಶಕ್ತಿಯನ್ನು ಆ ದೇವರು ನೀಡಲಿ. ಭಗವಂತ ನಿಮ್ಮ ಕುಟುಂಬಕ್ಕೆ ಮಗನ ಸಾವಿನ ದುಖ ಭರಿಸುವ ಶಕ್ತಿ ನೀಡಲಿ ಎಂಬುದಾಗಿ ಸಾಂತ್ವನ ಹೇಳಿದ್ದಾರೆ. ಆಗಬಾರದ್ದು ಆಗಿಹೋಗಿದೆ. ಉಕ್ರೇನ್‌ನಲ್ಲಿ ಓದುತ್ತಿದ್ದ ನಮ್ಮ ಕನ್ನಡದ ಹುಡುಗ ಹಾವೇರಿಯ ನವೀನ್ ಶೇಖರಪ್ಪ ಗ್ಯಾನಗೌಡರ್ ಆ ದೇಶದ ಮೇಲೆ ರಷ್ಯಾ ನಡೆಸುತ್ತಿರುವ ಶೆಲ್ಲಿಂಗ್‌ಗೆ ಮಂಗಳವಾರ ಬೆಳಗ್ಗೆ ಬಲಿಯಾಗಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನವೀನ್​ ಅವರ ತಂದೆಯೊಂದಿಗೆ ಫೋನಿನಲ್ಲಿ ಮಾತಾಡಿ ತಮ್ಮ ಸಂತಾಪ ವ್ಯಕ್ತಪಡಿಸಿದ್ದಾರೆ.

ಉಕ್ರೇನ್‌ನಲ್ಲಿ ರಷ್ಯಾದ ಶೆಲ್ ದಾಳಿಗೆ ಮೃತಪಟ್ಟ ಕನ್ನಡಿಗ, ಹಾವೇರಿ ಜಿಲ್ಲೆ ಚಳಗೇರಿ ಗ್ರಾಮದ ನವೀನ್ ಪಾರ್ಥಿವ ಶರೀರವನ್ನು ರಾಜ್ಯಕ್ಕೆ ತರಿಸಲು ಅಗತ್ಯ ನೆರವು ಕಲ್ಪಿಸುವುದಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭರವಸೆ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+