2.9 ಕೋಟಿ ರೂ. ಪ್ಯಾಕೇಜ್ ಬಿಟ್ಟು ಕಿರಾಣಿ ಅಂಗಡಿ ನಡೆಸುತ್ತಿರುವ IIT ವಿದ್ಯಾರ್ಥಿ ವೈರಲ್ ಕಥೆ ಹಿಂದಿನ ಅಸಲಿಯತ್ತೇನು?

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸ್ವಲ್ಪ ಭಾವನಾತ್ಮಕ ಕಥೆಗಳು ಬಹಳ ಬೇಗನೆ ವೈರಲ್ ಆಗುತ್ತವೆ. ಅದರಲ್ಲೂ, ಕೋಟ್ಯಂತರ ರೂಪಾಯಿ ಸಂಬಳದ ಉದ್ಯೋಗವನ್ನು ತ್ಯಜಿಸಿ ಹೆತ್ತವರಿಗಾಗಿ ತ್ಯಾಗ ಮಾಡಿದ ಕಥೆಗಳೆಂದರೆ ನೆಟ್ಟಿಗರು ಕಣ್ಣುಮುಚ್ಚಿ ನಂಬುತ್ತಾರೆ. ಆ ಪೋಸ್ಟ್‌ಗಳಿಗೆ ಸಾವಿರಾರು ಲೈಕ್ಸ್‌, ಕಮೆಂಟ್ಸ್‌ ಮಾಡುತ್ತಾರೆ.

ಆದರೆ ಇತ್ತೀಚೆಗೆ ಐಐಟಿ ಬಾಂಬೆ ಪದವೀಧರನೊಬ್ಬ ಅಮೆರಿಕದಲ್ಲಿ ಸಿಕ್ಕ ವಾರ್ಷಿಕ 2.9 ಕೋಟಿ ರೂಪಾಯಿ ಪ್ಯಾಕೇಜ್‌ನ ಉದ್ಯೋಗವನ್ನು ಬಿಟ್ಟು, ತಮ್ಮ ಅನಾರೋಗ್ಯ ಪೀಡಿತ ಪೋಷಕರನ್ನು ನೋಡಿಕೊಳ್ಳಲು ಕಿರಾಣಿ ಅಂಗಡಿ ನಡೆಸುತ್ತಿದ್ದಾರೆ ಎಂಬ ಕಥೆಯೊಂದು ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡಿತ್ತು.

Fact Check

ಆದರೆ, ಈ ವೈರಲ್ ಕಥೆಯ ಅಸಲಿಯತ್ತೇ ಬೇರೆ! ಹೌದು, ಇದೊಂದು ಸಂಪೂರ್ಣ ಐಐಟಿ ಬಾಂಬೆ ಫೇಕ್ ಸ್ಟೋರಿ ಎಂಬುದು ಫ್ಯಾಕ್ಟ್ ಚೆಕ್‌ನಿಂದ ಸಾಬೀತಾಗಿದೆ ಎಂದು ಹಿಂದೂಸ್ತಾನ್‌ ಟೈಮ್ಸ್‌ ವರದಿ ಮಾಡಿದೆ.

ಏನಿದು ವಿವೇಕ್ ಶರ್ಮಾ ಐಐಟಿ ಬಾಂಬೆ ವೈರಲ್ ಕಥೆ?

"ವಿಕಾಸ್ ಆಲ್ವೇಸ್" ಎಂಬ ಎಕ್ಸ್ ಖಾತೆಯಿಂದ ಈ ಸುಳ್ಳು ಕಥೆ ಮೊದಲು ಹರಿದಾಡಲು ಶುರುವಾಯಿತು. ಈ ಪೋಸ್ಟ್ ಪ್ರಕಾರ, ವಿವೇಕ್ ಶರ್ಮಾ ಎಂಬಾತ ಕಾನ್ಪುರದ ಬಡ ಕುಟುಂಬದ ಯುವಕ. ಆತನ ಪೋಷಕರು ತಮ್ಮಲ್ಲಿದ್ದ ಚಿನ್ನಾಭರಣಗಳನ್ನು ಮಾರಿ ಆತನನ್ನು ರಾಜಸ್ಥಾನದ ಕೋಟಾದಲ್ಲಿ ಓದಿಸಿದ್ದರು. ಬಳಿಕ ಆತ ಐಐಟಿ ಬಾಂಬೆಯಲ್ಲಿ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಚಿನ್ನದ ಪದಕದೊಂದಿಗೆ ಪಾಸ್‌ ಆಗಿದ್ದ. ಆತನಿಗೆ ಅಮೆರಿಕದ ಪ್ರತಿಷ್ಠಿತ ಕಂಪನಿಯೊಂದು ವಾರ್ಷಿಕ 2.4 ಲಕ್ಷ ಡಾಲರ್ (ಅಂದರೆ ಅಂದಾಜು 2.9 ಕೋಟಿ ರೂ.) ಪ್ಯಾಕೇಜ್‌ನ ಉದ್ಯೋಗದ ಆಫರ್‌ ನೀಡಿತ್ತು.

ಆದರೆ, ಉದ್ಯೋಗಕ್ಕೆ ಸೇರುವ ಮುನ್ನವೇ ಆತನ ತಂದೆಗೆ ಹೃದಯಾಘಾತವಾಗಿ, ತಾಯಿಗೆ ಕ್ಯಾನ್ಸರ್ ಇರುವುದು ಪತ್ತೆಯಾಯಿತು. ಹೀಗಾಗಿ, ಆತ ಅಮೆರಿಕಕ್ಕೆ ಹೋಗದೆ ಊರಿನಲ್ಲೇ ಉಳಿದು, ಮನೆಯ ಕೆಳಗೆ ಸಣ್ಣ ಕಿರಾಣಿ ಅಂಗಡಿ ಇಟ್ಟುಕೊಂಡು ಪೋಷಕರ ಆರೈಕೆ ಮಾಡುತ್ತಿದ್ದಾನೆ ಎಂದು ಬರೆಯಲಾಗಿತ್ತು. ಜೊತೆಗೆ ಕಿರಾಣಿ ಅಂಗಡಿಯಲ್ಲಿ ನಿಂತಿರುವ ಯುವಕನ ಫೋಟೋವನ್ನೂ ಸಹ ಹಾಕಲಾಗಿತ್ತು.

ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಬ್ಬಿದ್ದು ಹೇಗೆ?

ಈ ಕಥೆಯ ಮೂಲವನ್ನು ಕೆದಕಿದಾಗ, ಇದು ಸುಮಾರು ಒಂದು ತಿಂಗಳ ಹಿಂದೆ ಡಾ. ದಿಲೀಪ್ ಗೋಸಾಯಿ ಎಂಬುವವರು ಲಿಂಕ್ಡ್‌ಇನ್‌ನಲ್ಲಿ ಹಂಚಿಕೊಂಡಿದ್ದ ಪೋಸ್ಟ್ ಎಂಬುದು ತಿಳಿದುಬಂದಿದೆ. ಅವರು ತಮ್ಮ ಪೋಸ್ಟ್‌ನಲ್ಲಿ ವಿವೇಕ್ ಶರ್ಮಾ 2012ರಲ್ಲಿ 147ನೇ ರ‍್ಯಾಂಕ್‌ನೊಂದಿಗೆ ಐಐಟಿ ಬಾಂಬೆ ಸೇರಿದ್ದಾಗಿ ಹೇಳಿಕೊಂಡಿದ್ದರು. ಆದರೆ, 2012ರ ಜೆಇಇ ರ‍್ಯಾಂಕಿಂಗ್ ಪಟ್ಟಿಯಲ್ಲಿ ವಿವೇಕ್ ಶರ್ಮಾ ಎಂಬ ಹೆಸರೇ ಇರಲಿಲ್ಲ. ಈ ಬಗ್ಗೆ ನೆಟ್ಟಿಗರು ಪ್ರಶ್ನಿಸಿದಾಗ, ತಮ್ಮ ಪೋಸ್ಟ್ ಅನ್ನು ಎಡಿಟ್ ಮಾಡಿದ ಡಾ. ದಿಲೀಪ್, "ಜನರಲ್ಲಿ ಕೌಟುಂಬಿಕ ಜವಾಬ್ದಾರಿಯ ಬಗ್ಗೆ ಸ್ಫೂರ್ತಿ ತುಂಬಲು ವಿವೇಕ್ ಶರ್ಮಾ ಎಂಬ ಕಾಲ್ಪನಿಕ ಪಾತ್ರವನ್ನು ಸೃಷ್ಟಿಸಿ ಕಥೆ ಬರೆಯಲಾಗಿತ್ತು" ಎಂದು ಒಪ್ಪಿಕೊಂಡಿದ್ದಾರೆ.

ಫ್ಯಾಕ್ಟ್ ಚೆಕ್: ವೈರಲ್ ಫೋಟೋ ಹಿಂದಿನ ಅಸಲಿಯತ್ತು!

ಈ ಫೇಕ್ ಸ್ಟೋರಿಯಲ್ಲಿ ಬಳಸಲಾದ ಫೋಟೋ ಕೂಡ ವಿವೇಕ್ ಶರ್ಮಾ ಅವರದ್ದಲ್ಲ. ಗೂಗಲ್ ಇಮೇಜ್ ಸರ್ಚ್ ಮಾಡಿದಾಗ, ಆ ಕಿರಾಣಿ ಅಂಗಡಿಯಲ್ಲಿ ನಿಂತಿರುವ ಯುವಕನ ಹೆಸರು ಸುಮಿತ್ ಗೊರೈ ಎಂಬುದು ಪತ್ತೆಯಾಗಿದೆ. ಸುಮಿತ್ ಅವರು ಎರಡು ವರ್ಷಗಳ ಹಿಂದೆ ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಿದ್ದ ವಿಡಿಯೋದಿಂದ ಈ ಫೋಟೋವನ್ನು ತೆಗೆದುಕೊಂಡು, ಸುಳ್ಳು ಕಥೆಗೆ ಬಳಸಿಕೊಳ್ಳಲಾಗಿದೆ.

ಇನ್ನು, ಐಐಟಿ ಬಾಂಬೆಯಲ್ಲಿ ವ್ಯಾಸಂಗ ಮಾಡಿದ್ದ ನಿಜವಾದ 'ವಿವೇಕ್ ಶರ್ಮಾ' ಎಂಬ ವ್ಯಕ್ತಿಯೊಬ್ಬರು ಈ ಪೋಸ್ಟ್‌ಗೆ ಕಾಮೆಂಟ್ ಮಾಡಿ, "ಇದು ಸಂಪೂರ್ಣ ಸುಳ್ಳು ಸುದ್ದಿ. ಯಾರೋ ನನ್ನ ಹೆಸರನ್ನು ದುರ್ಬಳಕೆ ಮಾಡಿಕೊಂಡು ಕಾಲ್ಪನಿಕ ಕಥೆ ಕಟ್ಟಿದ್ದಾರೆ. ದಯವಿಟ್ಟು ಇಂತಹ ಸುಳ್ಳು ಮಾಹಿತಿಗಳನ್ನು ನಂಬಬೇಡಿ" ಎಂದು ಮನವಿ ಮಾಡಿದ್ದಾರೆ.

ಒಟ್ಟಾರೆಯಾಗಿ, ಯಾವುದೇ ಮೂಲ ಅಥವಾ ಆಧಾರವಿಲ್ಲದ ಕಥೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮುನ್ನ ಅದರ ಸತ್ಯಾಸತ್ಯತೆಯನ್ನು ಪರಿಶೀಲಿಸುವುದು ಅತ್ಯಗತ್ಯ. ಕೇವಲ ಲೈಕ್ಸ್ ಹಾಗೂ ಶೇರ್‌ಗಳಿಗಾಗಿ ಇಂತಹ ಫೇಕ್ ಕಥೆಗಳನ್ನು ಸೃಷ್ಟಿಸುವುದು ಸಮಾಜಕ್ಕೆ ತಪ್ಪು ಸಂದೇಶ ರವಾನಿಸುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+