ಲೋಕಸಭಾ ಚುನಾವಣೆ ಬಳಿಕ ಕರ್ನಾಟಕದಲ್ಲಿ ಮತ್ತೆ ವಿಧಾನಸಭೆಗೆ ಚುನಾವಣೆ?: ಮಾಜಿ ಸಿಎಂ ಹೇಳಿದ್ದೇನು?
ಹಾವೇರಿ, ಏಪ್ರಿಲ್ 05: ಬಿಜೆಪಿ ಮುಖಂಡರು ಕರ್ನಾಟಕದಲ್ಲಿ ರಾಜ್ಯ ಸರ್ಕಾರ ಪತನವಾಗಲಿದೆ ಎಂದು ಹೇಳುತ್ತಿದ್ದಾರೆ. ಹೀಗೆ ಭವಿಷ್ಯ ನುಡಿಯುವುದು ಮುಂದುರೆದಿದ್ದು, ಇದೀಗ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಲೋಕಸಭಾ ಚುನಾವಣೆ ನಂತರ ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ ನಡೆದರು ಆಶ್ಚರ್ಯವಿಲ್ಲ ಎಂದು ಹೇಳಿರುವುದು ಮತ್ತಷ್ಟು ಕುತೂಹಲ ಹೆಚ್ಚಾಗುವಂತೆ ಮಾಡಿದೆ.
ಹಾವೇರಿ ಜಿಲ್ಲೆಯ ಹಾನಗಲ್‌ನಲ್ಲಿ ಗುರುವಾರ ರಾತ್ರಿ ರೋಡ್ ಶೋ ನಡೆಸಿ ಭರ್ಜರಿ ಪ್ರಚಾರ ಕೈಗೊಂಡಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಪ್ರಧಾನಿ ಮೋದಿಯನ್ನು ಹಾಡಿ ಹೊಗಳಿದರು. ಇದೇ ವೇಳೆ ರಾಜ್ಯ ಸರ್ಕಾರದ ಆಯಸ್ಸಿನ ಕುರಿತು ಮಾತನಾಡಿದರು.

ಲೋಕಸಭೆ ಚುನಾವಣೆ ನಂತರ ಮತ್ತೆ ರಾಜ್ಯದಲ್ಲಿ ಚುನಾವಣೆ ನಡೆದರೆ ಆಶ್ಚರ್ಯ ಪಡಬೇಕಿಲ್ಲ ಎನ್ನುವ ಮೂಲಕ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ. ಲೋಕಸಭೆ ಚುನಾವಣೆಯ ನಂತರ ಕಾಂಗ್ರೆಸ್ ಇಬ್ಬಾಗವಾಗುತ್ತದೆ ಎಂದು ಭವಿಷ್ಯ ನುಡಿದರು.
ಕೇಂದ್ರದ ಸಾಧನೆ ತಿಳಿಸಿದ ಬೊಮ್ಮಾಯಿ
ಭಾರತ ಸಾಕಷ್ಟು ಪ್ರಧಾನಿಗಳನ್ನು ಕಂಡಿದೆ ಆದರೆ, ನರೇಂದ್ರ ಮೋದಿಯವರಂತ ವ್ಯಕ್ತಿತ್ವ ನಮಗೆ ಸಿಗುವುದಿಲ್ಲ. ಪ್ರಮಾಣಿಕತೆ, ಸಮಯ ಪ್ರಜ್ಞೆ, ದೇಶಭಕ್ತಿಯ ಸಂಸ್ಕಾರ ಮೋದಿಯವರಲ್ಲಿ ಇದೆ. ದೇಶಭಕ್ತಿಗೆ ಇನ್ನೊಂದು ಹೆಸರೆ ಮೋದಿಯವರು ಎಂದು ಹೇಳಿದರು.
ದೇಶದಲ್ಲಿ ಭಯೋತ್ಪಾದನೆ ನಡೆದರೆ ಮನಮೋಹನ ಸಿಂಗ್, ಪಾಕಿಸ್ತಾನಕ್ಕೆ ಪತ್ರ ಬರೆಯುತ್ತಿದ್ದರು, ಆದರೆ ಪ್ರಧಾನಿ ಮೋದಿಯವರು ಬರೀ ಮಾತಲ್ಲ ಕೃತಿ ಮೂಲಕವೂ ತಕ್ಕ ಉತ್ತರ ನೀಡಿದರು.

ಹಾವೇರಿಗೆ 480 ಕೋಟಿ ಬೆಳೆ ವಿಮೆ
ಭಾರತದಲ್ಲಿ ಬೆಳೆವಿಮೆ ನೇತಾರ ಸಿ.ಎಂ ಉದಾಸಿಯವರು, ಹಾವೇರಿ ಜಿಲ್ಲೆಯಲ್ಲಿ 480 ಕೋಟಿ ಬೆಳೆವಿಮೆ ಬಂದಿದೆ. ವಿಮೆ ಜಾರಿ ಮಾಡುವುದು ಮಾತ್ರವಲ್ಲ. ಯೋಜನೆಯನ್ನು ಜನರಿಗೆ ತಲುಪಿಸುವ ಕಾರ್ಯ ಪ್ರಧಾನಿ ಮೋದಿ ಮಾಡುತ್ತಿದ್ದಾರೆ. ಪ್ರಧಾನಿ ಸ್ಥಾನಕ್ಕೆ ಮೋದಿಯವರನ್ನು ಬಿಟ್ಟು ಯೋಗ್ಯ ವ್ಯಕ್ತಿ ಮತ್ತೊಬ್ಬರಿಲ್ಲ ಎಂದು ವಿವರಿಸಿದರು.
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಖರ್ಗೆ ಪ್ರಧಾನಿಯಾಗಬೇಕು ಎನ್ನುತ್ತಿದ್ದರೆ, ಕರ್ನಾಟಕದ ಕಾಂಗ್ರೆಸ್ ನವರು, ರಾಹುಲ್ ಗಾಂಧಿ ಎನ್ನುತ್ತಿದ್ದಾರೆ. ಭಾರತಕ್ಕೆ 75 ವರ್ಷದ ನಂತರ ಇಂದು ಜಲಜೀವನ್ ಮಿಷನ್ ಮೂಲಕ ಇಂದು ಮನೆಗೆ ನೀರು ಬರುತ್ತಿದೆ. ಕಳೆದ ಹತ್ತು ವರ್ಷದಲ್ಲಿ 15 ಕೋಟಿ ಜನರನ್ನು ಬಡತನದಿಂದ ಹೊರಗೆ ಬಂದಿದ್ದಾರೆ ಬಿಜೆಪಿ ಕೇಂದ್ರ ಸರ್ಕಾರದ ಸಾಧನೆ ತಿಳಿಸಿದರು.
ನಾನು ಅಕ್ಕಿಆಲೂರಿಗೆ ಸೇವೆ ಮಾಡುವ ಅಳಿಯ: ಬೊಮ್ಮಾಯಿ
ನಾನು ಅಕ್ಕಿಆಲೂರಿನ ಅಳಿಯಾ, ಸೇವೆ ಮಾಡಿಸಿಕೊಳ್ಳುವ ಅಳಿಯ ಆಗುವುದಿಲ್ಲ. ಸೇವೆ ಮಾಡುವ ಅಳಿಯನಾನಾಗುತ್ತೇನೆ ಎಂದು ತಮ್ಮ ಹಾಗೂ ಅಕ್ಕಿ ಆಲೂರಿನ ಸಂಬಂಧ ಕುರಿತು ಮಾಜಿ ಸಿಎಂ ಮಾತನಾಡಿದರು.
ಮಾಜಿ ಸಚಿವ ಮನೋಹರ ತಹಶಿಲ್ದಾರ ಅವರು ಮಾತನಾಡಿ, ತನ್ನ ದಕ್ಷ ಮತ್ತು ಪ್ರಾಮಣಿಕ ಆಡಳಿತದ ಮೂಲಕ ದೇಶದ ಗಮನ ಸೆಳೆದಿರುವ ಬಸವರಾಜ ಬೊಮ್ಮಾಯಿಯವರ ಶಕ್ತಿ ಸಾಮರ್ಥ್ಯ ಗಮನಿಸಿರುವ ಹೈಕಮಾಂಡ್, ಕೇಂದ್ರಕ್ಕೆ ಆಹ್ವಾನಿಸಿದ್ದಾರೆ. ಜೀವನದ ಪ್ರತಿ ಹೆಜ್ಜೆ ಯಶಸ್ವಿಯ ಹಾದಿಯಲ್ಲಿರುವ ಬೊಮ್ಮಾಯಿಯವರು ಹಾವೇರಿಯಿಂದ ಲೋಕಸಭೆಗೆ ಪ್ರತಿನಿಧಿಸಿದರೆ ನಮ್ಮ ಪೀಳಿಗೆಯ ಭವಿಷ್ಯ ಉಜ್ವಲವಾಗುತ್ತದೆ.
ಸಿ.ಎಂ ಉದಾಸಿಯವರು ಮತ್ತು ನಮ್ಮ ಮಧ್ಯೆ ಕಳೆದ 4 ದಶಕಗಳ ಕಾಲ ಅಭಿವೃದ್ಧಿಗಾಗಿ ತೀವ್ರ ಜಿದ್ದಾಜಿದ್ದಿ ಇತ್ತು, ಆದರೆ ಎಂದಿಗೂ ವೈಯಕ್ತಿಕವಾಗಿ ನಾವು ದ್ವೇಷ ಮಾಡಿಕೊಂಡವರಲ್ಲ. ನಮ್ಮನ್ನು ದ್ವೇಷಿಸುತ್ತಿದ್ದ ಪರಕೀಯರು ಭಾರತಕ್ಕೆ ಗೌರವ ಕೊಟ್ಟು ಹೆದರುವ ವಾತಾವರಣ ನಡುವೆ ನಿರ್ಮಾಣವಾಗಿದೆ ಎಂದರೆ ಕಾರಣ ನರೇಂದ್ರ ಮೋದಿಜಿಯವರು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಶಿವಯೋಗಿ ಹಿರೇಮಠ ಮತ್ತು ನಾಗೇಶ ಪಡೆಯಪ್ಪನವರ ಬಿಜೆಪಿಗೆ ಸೇರ್ಪಡೆಯಾದರು.
ಹಾವೇರಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಲೋಕಸಭಾ ಚುನಾವಣೆಗೆ ನಿಂತಿರುವುದು ಹರ್ಷ ತಂದಿದೆ. ಇಲ್ಲಿ ಬಿಜೆಪಿ ಗೆಲ್ಲಿಸಲು ನಾವು ಪಣ ತೊಟ್ಟಿದ್ದೇವೆ ಎಂದು ಕಾರ್ಯಕರ್ತರು ಹೇಳಿದರು.












Click it and Unblock the Notifications