ಹಾವೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಕ್ರೇನ್‌ನಲ್ಲಿ ಸಾವನ್ನಪ್ಪಿದ ನವೀನ್ ಮನೆಗೆ ಸಿಎಂ ಭೇಟಿ: 25 ಲಕ್ಷ ಪರಿಹಾರ ವಿತರಣೆ

|
Google Oneindia Kannada News

ಹಾವೇರಿ, ಮಾರ್ಚ್ 5: ರಷ್ಯಾದ ಶೆಲ್ ದಾಳಿಗೆ ಉಕ್ರೇನ್‌ನಲ್ಲಿ ಸಾವನ್ನಪ್ಪಿದ ಕರ್ನಾಟಕದ ವೈದ್ಯಕೀಯ ವಿದ್ಯಾರ್ಥಿ ನವೀನ್ ಮನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶನಿವಾರದಂದು ಭೇಟಿ ನೀಡಿ ಪೋಷಕರಿಗೆ ಸಾಂತ್ವನ ಹೇಳಿದರು.

ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲ್ಲೂಕಿನ ಚಳಗೇರಿಯಲ್ಲಿರುವ ಉಕ್ರೇನ್‌ನಲ್ಲಿ ಮೃತಪಟ್ಟ ವೈದ್ಯ ವಿದ್ಯಾರ್ಥಿ ನವೀನ್ ಗ್ಯಾನಗೌಡರ್ ಅವರ ಮನೆಗೆ ಭೇಟಿ ನೀಡಿ, ಸಾಂತ್ವನ ಹೇಳಿ, ಪರಿಹಾರದ ಚೆಕ್ ವಿತರಿಸಿದರು.

CM Basavaraj Bommai Visit Naveen House in Chalageri; Handed Over Rs 25 Lakh Cheque to His Family

ಈ ಸಂದರ್ಭದಲ್ಲಿ ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ಶ್ರೀ ವಚನಾನಂದ ಶ್ರೀಗಳು, ಕೃಷಿ ಸಚಿವ ಬಿ.ಸಿ. ಪಾಟೀಲ್, ಹಾವೇರಿ-ಗದಗ ಸಂಸದ ಶಿವಕುಮಾರ್ ಉದಾಸಿ, ವಿಧಾನ ಪರಿಷತ್ ಸದಸ್ಯ ಪ್ರೊ. ಎಸ್.ವಿ. ಸಂಕನೂರ್ ಮತ್ತು ಇತರರು ಉಪಸ್ಥಿತರಿದ್ದರು.

CM Basavaraj Bommai Visit Naveen House in Chalageri; Handed Over Rs 25 Lakh Cheque to His Family

ಸಿಎಂ ಬಸವರಾಜ ಬೊಮ್ಮಾಯಿಯವರು ನವೀನ್ ಅವರ ತಂದೆ ಶೇಖರಗೌಡ ಗ್ಯಾನಗೌಡರ್ ಅವರಿಗೆ 25 ಲಕ್ಷ ರೂಪಾಯಿ ಪರಿಹಾರದ ಚೆಕ್ ವಿತರಿಸಿದರು.

ಬಳಿಕ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, "ನವೀನ್​ ಪಾರ್ಥಿವ ಶರೀರ ತಾಯ್ನಾಡಿಗೆ ತರುವ ಪ್ರಯತ್ನವಾಗುತ್ತಿದೆ. ಈ ಬಗ್ಗೆ ವಿದೇಶಾಂಗ ಸಚಿವರ ಜೊತೆಗೆ ಸಂಪರ್ಕದಲ್ಲಿದ್ದೇವೆ. ಉಕ್ರೇನ್​ನಲ್ಲಿ ಬಾಂಬಿಂಗ್​ ಆಗುತ್ತಿದೆ, ಹೀಗಾಗಿ ತರಲು ಆಗುತ್ತಿಲ್ಲ. ಆದಷ್ಟು ಬೇಗ ಪಾರ್ಥಿವ ಶರೀರ ತರಲು ಪ್ರಯತ್ನಿಸುತ್ತೇವೆ," ಎಂದು ಹೇಳಿದ್ದಾರೆ.

ಮಗನ ಪಾರ್ಥಿವ ಶರೀರ ಬರುವುದಾಗಿ ಸಿಎಂ ಹೇಳಿದ್ದಾರೆ: ಶೇಖರಗೌಡ
"ಮಗನ ಪಾರ್ಥಿವ ಶರೀರವನ್ನು ಶೀಘ್ರದಲ್ಲಿ ತರುವ ಪ್ರಯತ್ನ ಮಾಡುವುದಾಗಿ ಸಿಎಂ ಹೇಳಿದ್ದಾರೆ. ಉಕ್ರೇನ್​ನಲ್ಲಿರುವ ಉಳಿದ ಮಕ್ಕಳನ್ನು ಕರೆಸುವಂತೆ ಹೇಳಿದ್ದೇವೆ," ಎಂದು ಮೃತ ನವೀನ್ ತಂದೆ ಶೇಖರಗೌಡ ಮನವಿ ಮಾಡಿದ್ದಾರೆ.

ನವೀನ ಪಾರ್ಥಿವ ಶರೀರವನ್ನು ಸುರಕ್ಷಿತವಾಗಿಡಲಾಗಿದೆ: ವಚನಾನಂದ ಸ್ವಾಮೀಜಿ
"ಮೇಲ್ವರ್ಗದಲ್ಲಿ ಹುಟ್ಟಿದ್ದೆ ತಪ್ಪಾ ಅಂತಾ ನವೀನ್ ತಾಯಿ ಕೇಳಿದರು. ಪ್ರತಿಭಾವಂತ ಮಕ್ಕಳು ಏನು ಆಗಬೇಕು ಅಂದುಕೊಂಡಿದ್ದಾರೋ ಅದು ಆಗುತ್ತಿಲ್ಲ. ಪ್ರತಿಭೆಗೆ ಪ್ರೋತ್ಸಾಹ ಕೊಡಬೇಕು ಅನ್ನುವುದು ಪ್ರತಿಯೊಬ್ಬ ತಾಯಿಯ ಕನಸು. ಒಬ್ಬ ತಾಯಿಯ ನೋವು ಮತ್ತೊಬ್ಬ ತಾಯಿಗೆ ಮಾತ್ರ ಗೊತ್ತಾಗುತ್ತದೆ. ನವೀನ್ ಪಾರ್ಥಿವ ಶರೀರವನ್ನು ಸುರಕ್ಷಿತವಾಗಿ ಇಡಲಾಗಿದೆ," ಎಂದು ವಚನಾನಂದ ಸ್ವಾಮೀಜಿ ತಿಳಿಸಿದರು.

"ಯುದ್ಧ ನಿಂತ ಮೇಲೆ ಪಾರ್ಥಿವ ಶರೀರ ತರುವ ಪ್ರಯತ್ನ ಮಾಡುತ್ತಿರುವುದಾಗಿ ಸಿಎಂ ಹೇಳಿದ್ದಾರೆ. ಅಲ್ಲಿರುವ ಎಲ್ಲ ಮಕ್ಕಳು ವಾಪಸ್ ಬರಬೇಕು. ಶಿಕ್ಷಣಕ್ಕಾಗಿ ಹೊರದೇಶಕ್ಕೆ ಹೋಗುವ ವಾತಾವರಣ ಆಗಬಾರದು. ಒನ್ ನೇಷನ್ ಒನ್ ರಿಸರ್ವೇಶನ್ ಆಗಬೇಕು. ಒನ್ ನೇಶನ್ ಒನ್ ಲಾ ಆಗಬೇಕು. ನಮ್ಮಲ್ಲಿ ಪ್ರತಿಭೆಗಳಿಗೆ ಕೊರತೆಯಿಲ್ಲ. ಸರಕಾರ ಎಲ್ಲ ರೀತಿಯಿಂದ ಈ ವಿಚಾರಗಳನ್ನು ಗಮನಿಸುತ್ತಿದೆ," ಎಂದು ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಹೇಳಿದ್ದಾರೆ.

English summary
Haveri: CM Basavaraj Bommai Visit Naveen who dies in Ukraine due to russia attack House in Chalageri; Handed Over Rs 25 Lakh Compensation Cheque to His Family Members.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X