ಶಶಿಕಲಾ ಮುಖ್ಯಮಂತ್ರಿ ಆಗಲ್ಲ ಅಂತ ಭವಿಷ್ಯ ನುಡಿದಿದ್ದ ಜ್ಯೋತಿಷಿ

By: ವಿಕಾಸ್ ನಂಜಪ್ಪ
Subscribe to Oneindia Kannada

ಚೆನ್ನೈ, ಫೆಬ್ರವರಿ 14: ಹಣೆ ಬರಹವೋ, ಜ್ಯೋತಿಷಿಯ ಶಕ್ತಿಯೋ ಗೊತ್ತಿಲ್ಲ. ಒಟ್ಟಾರೆ ಅಕ್ರಮ ಆಸ್ತಿ ಪ್ರಕರಣದಿಂದ ಮುಖ್ಯಮಂತ್ರಿ ಪಟ್ಟ ಮಾತ್ರ ಶಶಿಕಲಾ ಕೈ ತಪ್ಪಿದೆ. ಇದೀಗ ಸುಪ್ರಿಂ ಕೊರ್ಟ್ ತೀರ್ಪಿನಿಂದಾಗಿ ಶಶಿಕಲಾ ನಟರಾಜನ್ ಜೈಲು ಪಾಲಾಗಲಿದ್ದಾರೆ. ಮೂಲಗಳ ಪ್ರಕಾರ ಇದೇ ರೀತಿಯ ಭವಿಷ್ಯವನ್ನು ಶಶಿಕಲಾಗೆ ಜ್ಯೋತಿಷಿಯೊಬ್ಬರು ಹೇಳಿದ್ದರು.

ವರದಿಗಳ ಪ್ರಕಾರ ಕಳೆದ ವಾರ ಶಶಿಕಲಾಗೆ ಫೆಬ್ರವರಿ 14ರಂದೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವಂತೆ ಜ್ಯೋತಿಷಿಯೊಬ್ಬರು ಸಲಹೆ ನೀಡಿದ್ದರು. ಒಂದೊಮ್ಮೆ ಫೆಬ್ರವರಿ 14ರ ಒಳಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸದೇ ಇದ್ದಲ್ಲಿ ಮುಂದೆಂದೂ ಮುಖ್ಯಮಂತ್ರಿಯಾಗುವುದಿಲ್ಲ ಎಂದು ಜ್ಯೋತಿಷಿ ಹೇಳಿದ್ದರು ಎನ್ನಲಾಗಿದೆ.[ಚಿನ್ನಮ್ಮ ಮುಂದಿರುವ ಅಂತಿಮ 4 ಆಯ್ಕೆಗಳಿವು..]

When Sasikala's asgtrologer predicted her fate spot on

ಕಾಕತಾಳಿಯ ಎಂದರೆ ಫೆಬ್ರವರಿ 14ರಂದೇ ಸುಪ್ರಿಂ ಕೊರ್ಟ್ ಆದೇಶ ನೀಡಿದ್ದು ಶಶಿಕಲಾರನ್ನು ದೋಷಿ ಎಂದು ಹೇಳಿದೆ. ಈ ಮೂಲಕ ಶಶಿಕಲಾ ಮುಂದಿನ 10 ವರ್ಷ ಚುನಾವಣೆಗೆ ಸ್ಪರ್ಧಿಸುವ ಅವಕಾಶ ಕಳೆದುಕೊಂಡಿದ್ದಲ್ಲದೆ, ಮುಖ್ಯಮಂತ್ರಿಯಾಗುವ ಆಸೆಯನ್ನೂ ಬಿಡಬೇಕಾಗಿದೆ.

ಜೈಲಿನಲ್ಲಿರಬೇಕಾದ ನಾಲ್ಕು ವರ್ಷ ಹೇಗೂ ಚುನಾವಣೆಗೆ ಸ್ಪರ್ಧಿಸುವಂತಿಲ್ಲ, ನಂತರ ಜನಪ್ರತಿನಿಧಿ ಕಾಯ್ದೆಯಂತೆ ಮುಂದಿನ ಆರು ವರ್ಷಗಳ ಕಾಲ ಆಕೆ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ. ಹೀಗೆ ಹತ್ತು ವರ್ಷ ಚಿನ್ನಮ್ಮ ರಾಜಕೀಯದಿಂದ ದೂರವೇ ಉಳಿಯಬೇಕಾಗಿದೆ.[ಅಕ್ರಮ ಆಸ್ತಿ ಲೆಕ್ಕ ಹಾಕುವಾಗ ಕರ್ನಾಟಕ ಹೈಕೋರ್ಟ್ ಎಡವಿದ್ದೆಲ್ಲಿ?]

When Sasikala's asgtrologer predicted her fate spot on

ವಿಶೇಷ ಅಂದರೆ ಜ್ಯೋತಿಷ್ಯವನ್ನು ಹೆಚ್ಚಾಗಿ ನಂಬುವ ಜಯಲಲಿತಾ ಕೂಡಾ ಕೇರಳ ಮೂಲದ ಜ್ಯೋತಿಷಿಯೊಬ್ಬರಿಂದ 2011ರಲ್ಲಿ ತಮ್ಮ ಭವಿಷ್ಯ ಕೇಳಿದ್ದರು. ಆಗ ಜ್ಯೋತಿಷಿ ನೀವು ಮುಖ್ಯಮಂತ್ರಿಯಾಗಲಿದ್ದೀರಿ ಎಂದು ಹೇಳಿದ್ದರು. ಅವತ್ತಿಗೆ ಜಯಲಲಿತಾ ಕ್ರಿಮಿನಲ್ ದಾವೆಗಳನ್ನು ಎದುರಿಸುತ್ತಿದ್ದರು. ಮುಖ್ಯಮಂತ್ರಿಯಾಗುವ ಯಾವ ನಿರೀಕ್ಷೆಯೂ ಅವತ್ತು ಜಯಾಗೆ ಇರಲಿಲ್ಲ.

ಆದರೆ ಜ್ಯೋತಿಷಿ ಹೇಳಿಕೆ ನಿಜವಾಗಿತ್ತು. ಅದರಂತೆ ಜಯಲಲಿತಾ ಮುಖ್ಯಮಂತ್ರಿಯೂ ಆಗಿದ್ದು ಇವತ್ತಿಗೆ ಇತಿಹಾಸ. ಅವತ್ತು ಜ್ಯೋತಿಷಿ ಭವಿಷ್ಯದಿಂದ ಉಬ್ಬಿ ಹೋಗಿದ್ದ ಜಯಲಲಿತಾ ಜ್ಯೋತಿಷಿ ಪಿ.ಯು ಪನಿಕ್ಕರ್ ಗೆ ಪಕ್ಷದ ಕಡೆಯಿಂದ 10 ಲಕ್ಷ ರೂಪಾಯಿ ಕೊಡಿಸಿದ್ದರು. ಮುಂದೆ ಇದೇ ಪನಿಕ್ಕರ್ ಜಯಲಲಿತಾರ ನಂಬಿಕೆಯ ಜ್ಯೋತಿಷಿಯಾಗಿ ಗುರುತಿಸಿಕೊಂಡಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Call it fate or the power of an astrologer, Sasikala's dreams of becoming the next Chief Minister of Tamil Nadu came dashing with the Supreme Court convicting her in the disproportionate case. Last week there were reports that Sasikala's astrologer had advised her to take over as the Chief Minister by February 14th.
Please Wait while comments are loading...