ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏರ್‌ ಇಂಡಿಯಾದಿಂದ 24 ಹೆಚ್ಚುವರಿ ವಿಮಾನ ಸಂಚಾರ ಘೋಷಣೆ

|
Google Oneindia Kannada News

ನವದೆಹಲಿ, ಆಗಸ್ಟ್ 11: ಭಾರತದ ಪ್ರಮುಖ ವಿಮಾನಯಾನ ಸಂಸ್ಥೆಯಾಗಿರುವ ಏರ್ ಇಂಡಿಯಾ, 2022ರ ಆಗಸ್ಟ್ 20 ರಿಂದ ಜಾರಿಗೆ ಬರುವಂತೆ ತನ್ನ ದೇಶೀಯ ಸೇವಾ ಕ್ಷೇತ್ರದಲ್ಲಿ 24 ಹೊಸ ವಿಮಾನ ಸೇವೆಗಳನ್ನು ಆರಂಭಿಸುವುದಾಗಿ ಇಂದು ಇಲ್ಲಿ ಪ್ರಕಟಿಸಿದೆ.

ಈ ಹೆಚ್ಚುವರಿ 24 ವಿಮಾನಗಳ ಸೇವೆಯಲ್ಲಿ, ದೆಹಲಿಯಿಂದ ಮುಂಬೈ, ಬೆಂಗಳೂರು, ಅಹ್ಮದಾಬಾದ್‌ಗೆ ಹಾಗೂ ಮುಂಬೈನಿಂದ ಚೆನ್ನೈ ಮತ್ತು ಹೈದರಾಬಾದ್‌ ಮಧ್ಯೆ ಎರಡು ಹೊಸ ಸೇವೆಗಳು ಮತ್ತು ಮುಂಬೈ - ಬೆಂಗಳೂರು ಹಾಗೂ ಅಹ್ಮದಾಬಾದ್‌ - ಪುಣೆ ಮಾರ್ಗದಲ್ಲಿ ಒಂದು ಹೊಸ ಸೇವೆ ಇರಲಿದೆ.

ಈ ಹೆಚ್ಚುವರಿ ವಿಮಾನ ಸೇವೆಗಳು ಮಹಾನಗರಗಳ ಮಧ್ಯೆ ಪ್ರಯಾಣಿಸುವವರಿಗೆ ಮಧ್ಯಾಹ್ನದ ನಂತರ ಮತ್ತು ಸಂಜೆ ವೇಳೆಯಲ್ಲಿ ಹೆಚ್ಚಿನ ಪ್ರಯಾಣ ಅವಕಾಶಗಳನ್ನು ಒದಗಿಸಲಿದೆ.

ಈ ಮೂಲಕ, ದೆಹಲಿ - ಮುಂಬೈ ಮಾರ್ಗದಲ್ಲಿ ಏರ್‌ ಇಂಡಿಯಾದ ವಿಮಾನ ಸೇವೆಗಳ ಸಂಖ್ಯೆಯು ತಲಾ 10ಕ್ಕೆ, ದೆಹಲಿ - ಬೆಂಗಳೂರು ಎರಡೂ ಮಾರ್ಗದಲ್ಲಿ ತಲಾ 7 ವಿಮಾನಗಳ ಸೇವೆ, ಮುಂಬೈ - ಬೆಂಗಳೂರು ಮತ್ತು ಮುಂಬೈ - ಚೆನ್ನೈ ಮಾರ್ಗದಲ್ಲಿ ಎರಡೂ ಬದಿಯಲ್ಲಿ ತಲಾ 4 ಸೇವೆಗಳು ಮತ್ತು ಮುಂಬೈ - ಹೈದರಾಬಾದ್‌ ಹಾಗೂ ದೆಹಲಿ - ಅಹ್ಮದಾಬಾದ್‌ನ ಪ್ರತಿಯೊಂದು ಮಾರ್ಗದಲ್ಲಿ ಎರಡೂ ಬದಿಗಳಲ್ಲಿ ತಲಾ ಮೂರು ವಿಮಾನ ಸೇವೆಗಳು ಲಭ್ಯವಾಗಲಿವೆ.

Air India strengthens domestic connectivity with 24 additional flights

ಹೊಸ ಸೇವೆಗಳ ವಿಸ್ತರಣೆಯ ಕುರಿತು ಪ್ರತಿಕ್ರಿಯಿಸಿರುವ ಏರ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಕ್ಯಾಂಪ್ಬೆಲ್ ವಿಲ್ಸನ್ , 'ಈ ಸೇವಾ ವಿಸ್ತರಣೆಯು ದೇಶದ ಪ್ರಮುಖ ಮಹಾನಗರಗಳ ನಡುವಣ ವಿಮಾನ ಸೇವೆಗಳ ಸಂಪರ್ಕವನ್ನು ಹೆಚ್ಚಿಸಲಿದೆ.

ಏರ್ ಇಂಡಿಯಾದ ದೇಶೀಯ ಮತ್ತು ಅಂತರರಾಷ್ಟ್ರೀಯ ವಿಮಾನ ಸೇವೆಗಳ ನಡುವಣ ಸಂಪರ್ಕ ಸುಧಾರಿಸಲಿದೆ. ವಿಮಾನಗಳು ಸೇವೆಗೆ ಹಿಂದಿರುಗಲು ಏರ್ ಇಂಡಿಯಾ ಕಳೆದ ಆರು ತಿಂಗಳುಗಳಿಂದ ತನ್ನೆಲ್ಲ ಪಾಲುದಾರರೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿದೆ. ಈ ಪ್ರಯತ್ನವು ಈಗ ಫಲ ನೀಡುತ್ತಿರುವುದಕ್ಕೆ ನಮಗೆ ಖುಷಿಯಾಗುತ್ತಿದೆ' ಎಂದು ಹೇಳಿದ್ದಾರೆ.

ಏರ್ ಇಂಡಿಯಾದ ನ್ಯಾರೊಬಾಡಿ ಫ್ಲೀಟ್, ಸದ್ಯಕ್ಕೆ 70 ವಿಮಾನಗಳನ್ನು ಹೊಂದಿದೆ, ಅವುಗಳ ಪೈಕಿ 54 ವಿಮಾನಗಳು ಸೇವೆಗೆ ಅರ್ಹವಾಗಿವೆ. ಉಳಿದ 16 ವಿಮಾನಗಳು 2023ರ ಆರಂಭದ ವೇಳೆಗೆ ಹಂತಹಂತವಾಗಿ ಸೇವೆಗೆ ಮರಳಲಿವೆ.

English summary
Air India, India’s leading airline, today announced an increase of 24 new flights on its domestic network with effect from August 20, 2022.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X