Bengaluru Airport: ವಿಮಾನ ಟೇಕಾಫ್ ಮುನ್ನ ತಾನು 'ಭಯೋತ್ಪಾದಕ' ಎಂದು ಕೂಗಿದ ಯುವಕ: ಮುಂದಾಗಿದ್ದೇನು?
ಬೆಂಗಳೂರು, ಫೆಬ್ರವರಿ 23: ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (KIA)ದಲ್ಲಿ ವಿಲಕ್ಷಣ ಘಟನೆಯೊಂದು ನಡೆದಿದೆ. ವಿಮಾನ ಹೊರಡುವ ಕೆಲವೇ ನಿಮಿಷಗಳಲ್ಲಿ ಅಧಿಕಾರಿಯೊಬ್ಬ ಪುತ್ರನೊಬ್ಬ ತಾವು ಭಯೋತ್ಪಾದಕ ಎಂದು ಹೇಳಿ ಹೊರಬರಲು ಯತ್ನಿಸಿದ ಘಟನೆ ಇತ್ತೀಚೆಗೆ ನಡೆದಿದೆ.
ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಖನೌಗೆ ಏರ್ ಇಂಡಿಯಾ ವಿಮಾನವು ಎಂದಿನಂತೆ ತೆರಳುತ್ತಿತ್ತು. ವಿಮಾನ ತೆರಳುವ ಕೆಲವೇ ನಿಮಿಷಗಳ ಮೊದಲು ಯುವಕನೊಬ್ಬ ತಾವು ಭಯೋತ್ಪಾದಕ ಎಂದು ಹೇಳಿಕೊಂಡು ಭತಭೀತನಾದ್ದಂತೆ ವಿಮಾನದಿಂದ ಹೊರ ಓಡಿಬರಲು ಪ್ರಯತ್ನಿಸಿದ್ದಾನೆ.

ಈ ಯುವಕನನ್ನು ಉತ್ತರ ಪ್ರದೇಶದ ಪೊಲೀಸ್ ಅಧಿಕಾರಿಯೊಬ್ಬರ ಪುತ್ರ ಎಂದು ತಿಳಿದು ಬಂದಿದೆ. ಘಟನೆ ನಡೆಯುತ್ತಿದ್ದಂತೆ.
ನಂತರ ಪೊಲೀಸರು ಆರೋಪಿಯನ್ನು ಸಹಾಯಕ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಪುತ್ರ ಆದರ್ಶ್ ಕುಮಾರ್ ಸಿಂಗ್ ಎಂದು ಗುರುತಿಸಲಾಗಿದೆ.
ಮಾನಸಿಕ ಅಸ್ವಸ್ಥನಂತಿದ್ದ ಯುವಕ?
ಬೆಂಗಳೂರಿನ ಖಾಸಗಿ ಕಾಲೇಜುವೊಂದರಲ್ಲಿ ಓದುತ್ತಿದ್ದ ಎನ್ನಲಾಗಿದೆ. ಈತನಿಗೆ ಸರಿಯಾಗಿ ಓದು ಬರದ ಹಿನ್ನೆಲೆಯಲ್ಲಿ ಮಾನಸಿಕವಾಗಿ ಅಸ್ವಸ್ಥನಾಗಿದ್ದಂತೆ ಕಂಡು ಬಂದಿದೆ. ಭದ್ರತಾ ಸಿಬ್ಬಂದಿ, ಸಹಾಯಕ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಈತನನ್ನು ವಶಕ್ಕೆ ಪಡೆದು ಆತನ ಬ್ಯಾಗಗಳನ್ನು ಪರಿಶೀಲಿಸಿದ್ದಾರೆ.

ವಿಮಾನದಿಂದ ಆತನನ್ನು ಹೊರ ಕರೆತಂದ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಗೆ (ಸಿಐಎಸ್‌ಎಫ್) ಎಚ್ಚರಿಕೆ ನೀಡಿ ಕಳುಹಿಸಿದೆ. ಆತನ ಬ್ಯಾಗ್‌ಗಳಲ್ಲಿ ಯಾವುದೇ ಅನುಮಾನಕ್ಕೆ ಎಡೆ ಮಾಡಿಕೊಡುವ ವಸ್ತುಗಳ ಸಿಕ್ಕಿಲ್ಲ. ಬಳಿಕ ಆತನನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಫೆಬ್ರವರಿ 17 ರಂದು ಏನಾಯಿತು?
ಪೊಲೀಸ್ ಮಾಹಿತಿ ಪ್ರಕಾರ, ಭದ್ರತಾ ತಪಾಸಣೆಯ ನಂತರ ಸಿಂಗ್ ಫೆಬ್ರವರಿ 17 ರಂದು ಬೆಂಗಳೂರಿನಿಂದ ಲಖನೌಗೆ ತೆರಳುತ್ತಿದ್ದ ವಿಮಾನ ಏರಿದ್ದಾರೆ. ಆದರೆ ನಿರ್ಗಮನಕ್ಕೆ ಕೆಲವು ನಿಮಿಷಗಳ ಮೊದಲು ಆತ ಕಿರುಚಿಕೊಂಡು ವಿಮಾನ ಹೊರಬರಲು ಬಯಸಿದ್ದರು.
ಈ ಅಲ್ಲಿನ ಸಿಬ್ಬಂದಿ ಆ ಯುವಕನನ್ನು ಸಮಾಧಾನಪಡಿಸಲು ಪ್ರಯತ್ನಿಸಿದ್ದಾರೆ. ಆದರೂ ಯುವಕ ಆದರ್ಶ್ ಕೂಗಿಕೊಳ್ಳುತ್ತಾ ತಾನು 'ಭಯೋತ್ಪಾದಕ ಸಂಘಟನೆ'ಯಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿಕೊಂಡು ಹೊರಬರಲು ಕೂಗಾಡಿದ್ದಾನೆ.
ಇದನ್ನು ಕಂಡು ಭದ್ರತಾ ಸಿಬ್ಬಂದಿ ಮತ್ತು ಅಧಿಕಾರಿಗಳು ಅನುಮಾನಾಸ್ಪದವಾಗಿ ಏನೂ ಇಲ್ಲದ್ದನ್ನು ಕಂಡು ಆತನನ್ನು ಸಹಾಯಕ ಪೊಲೀಸರಿಗೆ ಒಪ್ಪಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಏರ್ ಇಂಡಿಯಾದಿಂದ ದೂರು ದಾಖಲು
ಘಟನೆ ಸಂಬಂಧ ಏರ್ ಇಂಡಿಯಾ ವಿಮಾನ ಸಂಸ್ಥೆ ಸಿಬ್ಬಂದಿ ಯುವಕ ಆದರ್ಶ್ ವಿರುದ್ಧ ಕೆಂಪೇಗೌಡ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 505 (ಸಾರ್ವಜನಿಕ ದೌರ್ಜನ್ಯ ನಡೆಸುತ್ತಿರುವ ಹೇಳಿಕೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಈ ಯುವಕ ಆದರ್ಶ್ ತನ್ನ ಗೆಳತಿಯೊಂದಿಗೆ ಜಗಳ ಆಡಿಕೊಂಡಿದ್ದ. ಅಲ್ಲದೇ ಆತನಿಗೆ ಮಾನಸಿಕ ಆರೋಗ್ಯ ಸಮಸ್ಯೆ ಇದೆ ಎಂದು ಆತನ ಕುಟುಂಬಸ್ಥರು ತಿಳಿಸಿದ್ದಾರೆ. ಹೀಗಾಗಿ ಮಾನಸಿಕ ಅನಾರೋಗ್ಯ ಕುರಿತು ವೈದ್ಯಕೀಯ ದಾಖಲಾತಿ ಕೇಳಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.












Click it and Unblock the Notifications