Get Updates
Get notified of breaking news, exclusive insights, and must-see stories!

Air India Express: ಈ ಮಾರ್ಗದಲ್ಲಿ ವಿಮಾನ ಹಾರಾಟ ಸಮಯ ಬದಲಾವಣೆ- ಮಾಹಿತಿ ತಿಳಿಯಿರಿ

ಮಂಗಳೂರು, ನವೆಂಬರ್‌, 30: ಕಾರಣಾಂತರಗಳಿಂದ ಕೆಲವು ಸಂದರ್ಭಗಳಲ್ಲಿ ವಿಮಾನಗಳ ಮಾರ್ಗಗಳು ಸೇರಿದಂತೆ ಹಾರಾಟದ ಸಮಯವನ್ನು ಬದಲಾವಣೆ ಮಾಲಾಗುತ್ತದೆ. ಹಾಗೆಯೇ ಇದೀಗ ಇಂದಿನಿಂದ (ನವೆಂಬರ್‌ 30) ಡಿಸೆಂಬರ್‌ 8ರವರೆಗೆ ಏರ್‌ಇಂಡಿಯಾ ಎಕ್ಸ್‌ಪ್ರೆಸ್‌ ಬೆಂಗಳೂರು-ಮಂಗಳೂರು ನಡುವೆ ವಿಮಾನ ಹಾರಾಟದ ಸಮಯವನ್ನು ಬದಲಾವಣೆ ಮಾಡಿದೆ. ಸಮಯಗಳ ವಿವರವನ್ನು ಇಲ್ಲಿ ನೀಡಲಾಗಿದೆ ಗಮನಿಸಿ.

ವಿಮಾನ ಹಾರಾಟ ಸಮಯಗಳ ಬದಲಾವಣೆ

ಐಎಕ್ಸ್ 782 ವಿಮಾನವು ಬೆಂಗಳೂರಿನಿಂದ ಬೆಳಗ್ಗೆ 9:40ಕ್ಕೆ ಆಗಮಿಸಲಿದ್ದು, ಬಳಗ್ಗೆ 10:10ಕ್ಕೆ ವಿಮಾನ 678 ಆಗಿ ಬೆಂಗಳೂರಿಗೆ ಹೊರಡಲಿದೆ. ಕಣ್ಣೂರು-ಬೆಂಗಳೂರು-ಮಂಗಳೂರು- ಬೆಂಗಳೂರು- ತಿರುವನಂತಪುರ ವಲಯದಲ್ಲಿ ಕಾರ್ಯನಿರ್ವಹಿಸುವ ವಿಮಾನ ಐಎಕ್ಸ್ 1795 ಬೆಂಗಳೂರಿನಿಂದ ರಾತ್ರಿ 7:20ಕ್ಕೆ ಬಂದು 7:50ಕ್ಕೆ ವಿಮಾನ ಐಎಕ್ಸ್ 792 ಆಗಿ ಬೆಂಗಳೂರಿಗೆ ಹೊರಡಲಿದೆ. (ಪ್ರಸ್ತುತ ಸಂಜೆ 7:35 ಮತ್ತು ರಾತ್ರಿ 8:15ಕ್ಕೆ ನಿರ್ಗಮನ ಸಮಯ ಆಗಿದೆ).

Air India Express: Flight service timings change in these routes

ಬೆಂಗಳೂರಿನಿಂದ ವಾರಾಣಸಿಗೆ ಹೊರಟು ಮಂಗಳೂರಿಗೆ ತೆರಳುವ ಮಾರ್ಗದಲ್ಲಿ ವಿಳಂಬ ಆದ ಕಾರಣ ವಿಮಾನಯಾನ ಸಂಸ್ಥೆ ಸಮಯವನ್ನು (ಐಎಕ್ಸ್ 782 ಮತ್ತು ಐಎಕ್ಸ್ 678) ಬದಲಾವಣೆ ಮಾಡಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣ

ಬೆಂಗಳೂರು, ನವೆಂಬರ್‌, 30: ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನಗಳಲ್ಲಿ ಪ್ರಯಾಣಿಸುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಆದ್ದರಿಂದ ಇದೇ ರೀತಿಯ ಮತ್ತೊಂದು ವಿಮಾನ ನಿಲ್ದಾಣ ಬೆಂಗಳೂರಿಗೆ ಬೇಕೆ ಬೇಕು ಎನ್ನುವ ಕೂಗುಗಳು ಎದ್ದಿದ್ದವು. ಇದೀಗ ಸರ್ಕಾರದ ತೆಗೆದುಕೊಂಡ ಆ ಒಂದು ನಿರ್ಧಾರದಿಂದ ಪ್ರಯಾಣಿಕರ ಬೇಡಿಕೆ ಸದ್ಯದಲ್ಲೇ ಈಡೇರುವ ಲಕ್ಷಣಗಳು ಎದ್ದುಕಾಣುತ್ತಿವೆ.

ನಗರದ ಯೋಜಿತ ಬೆಳವಣಿಗೆಗೆ ಅವಕಾಶ ಕಲ್ಪಿಸಲು ಮತ್ತು ವಾಯುಯಾನ ಮೂಲಸೌಕರ್ಯವನ್ನು ಹೆಚ್ಚಿಸಲು ಬೆಂಗಳೂರಿಗೆ ಸಮೀಪದಲ್ಲಿ ಎರಡನೇ ವಿಮಾನ ನಿಲ್ದಾಣವನ್ನು ಸ್ಥಾಪಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಇದೀಗ ಅಸ್ತಿತ್ವದಲ್ಲಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪೂರಕವಾಗುವ ಉದ್ದೇಶದಿಂದ ತುಮಕೂರು-ಚಿತ್ರದುರ್ಗ ಮಾರ್ಗವು ಈ ಅಭಿವೃದ್ಧಿಗೆ ಪರಿಗಣಿಸಲ್ಪಡುವ ಸಂಭಾವ್ಯ ಸ್ಥಳಗಳಲ್ಲಿ ಒಂದಾಗಿದೆ.

ರಾಜ್ಯ ಸರ್ಕಾರವು ಹೊಸ ವಿಮಾನ ನಿಲ್ದಾಣಕ್ಕೆ ಸೂಕ್ತ ಸ್ಥಳಗಳನ್ನು ಗುರುತಿಸುವ ಪ್ರಾಥಮಿಕ ಹಂತದಲ್ಲಿದೆ ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ ಹೇಳಿದರು. ಮುಂಬೈ ಮತ್ತು ಗೋವಾದಂತಹ ನಗರಗಳು ಸ್ಥಾಪಿಸಿದ ಪೂರ್ವನಿದರ್ಶನವನ್ನು ಅವರು ಹೈಲೈಟ್ ಮಾಡಿದರು, ಅಲ್ಲಿ ಅನೇಕ ವಿಮಾನ ನಿಲ್ದಾಣಗಳನ್ನು ಸಮೀಪದಲ್ಲಿ ಯಶಸ್ವಿಯಾಗಿ ಕಾರ್ಯಗತಗೊಳಿಸಲಾಗಿದೆ ಎಂದರು.

ಏರ್‌ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ (AAI) ಮಾರ್ಗಸೂಚಿಗಳು ಸಾಮಾನ್ಯವಾಗಿ ಅಸ್ತಿತ್ವದಲ್ಲಿರುವ ವಿಮಾನ ನಿಲ್ದಾಣದಿಂದ 150 ಕಿಲೋ ಮೀಟರ್‌ ಅಂತರಲ್ಲಿ ಯಾವುದೇ ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣಗಳನ್ನು ಅನುಮತಿಸಲಾಗುವುದಿಲ್ಲ. ಅದೇ ನಗರದಲ್ಲಿ ಅಥವಾ ಸಮೀಪದಲ್ಲಿ ಎರಡನೇ ವಿಮಾನ ನಿಲ್ದಾಣಕ್ಕೆ ಅನುಮತಿಸಿದರೆ, ಎರಡು ವಿಮಾನ ನಿಲ್ದಾಣಗಳ ನಡುವೆ ಸಂಚಾರಕ್ಕೆ ಸ್ಪಷ್ಟ ಮಾರ್ಗಸೂಚಿಗಳನ್ನು ಸ್ಥಾಪಿಸಲಾಗುತ್ತದೆ ಎಂದರು.

ಬೆಂಗಳೂರಿನ ಎರಡನೇ ವಿಮಾನ ನಿಲ್ದಾಣದ ಸುತ್ತಲಿನ ವಾಯುಯಾನ ಕಾರ್ಯಸಾಧ್ಯತೆಯನ್ನು ಮೌಲ್ಯಮಾಪನ ಮಾಡುವ ಅಗತ್ಯವನ್ನು ಸಚಿವ ಪಾಟೀಲ್ ಒತ್ತಿ ಹೇಳಿದರು. ಆಯ್ಕೆ ಮಾಡಿದ ಸ್ಥಳವು ಸಂಪೂರ್ಣ ಕಾರ್ಯಾಚರಣೆಯ ವಿಮಾನ ನಿಲ್ದಾಣಕ್ಕಾಗಿ ಸಾಕಷ್ಟು ಭೂಮಿಯನ್ನು ನೀಡಬೇಕು ಮತ್ತು ವಿಸ್ತರಣೆಗೆ ಅವಕಾಶ ನೀಡಬೇಕು ಎಂದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+