Air India: ಬೆಂಗಳೂರು-ಮುಂಬೈ ನಡುವೆ ಏರ್‌ಬಸ್ ಸೇವೆ, ಯಾವಾಗ ಹಾಗೂ ವಿಶೇಷ ಸೌಲಭ್ಯಗಳ ವಿವರ ತಿಳಿಯಿರಿ
ನವದೆಹಲಿ, ಜನವರಿ, 02: ಏರ್ ಇಂಡಿಯಾ ಕಂಪನಿಯು ಆಗಾಗ ಸಿಹಿಸುದ್ದಿಯನ್ನು ಕೊಡುತ್ತಲೇ ಬಂದಿದೆ. ಹಾಗೆಯೇ ಇದೀಗ ಈ ಕಂಪನಿಯ ಮೊದಲ ಏರ್‌ಬಸ್ ಎ350 ವಿಮಾನ ಸೇವೆ ಇದೇ ಜನವರಿ
22ರಿಂದ ಆರಂಭವಾಗಲಿದೆ. ಹಾಗಾದರೆ ಯಾವಲ್ಲ ಮಾರ್ಗಗಳಲ್ಲಿ ಈ ಹೊಸ ಸೇವೆ ಇರಲಿದೆ ಎಂದು ಇಲ್ಲಿ ತಿಳಿಯಿರಿ.
ಏರ್‌ಬಸ್ ಎ350 ವಿಮಾನ ಸೇವೆ ಇದೇ ಜನವರಿ 22ರಿಂದ ಬೆಂಗಳೂರು ಮತ್ತು ಮುಂಬೈ ನಡುವೆ ಆರಂಭ ಆಗಲಿದೆ. ಎ 350-900 ವಿಮಾನವು ಮೂರು ವರ್ಗದ ಕ್ಯಾಬಿನ್ ಹೊಂದಿದ್ದು, ಒಟ್ಟು 316 ಸೀಟುಗಳನ್ನು ಹೊಂದಿದೆ. 24 ಬ್ಯುಸಿನೆಸ್ ಕ್ಲಾಸ್, 24 ಪ್ರೀಮಿಯಂ ಎಕಾನಮಿ ಮತ್ತು 264 ಎಕಾನಮಿ ದರ್ಜೆಯ ಸೀಟುಗಳು ಈ ವಿಮಾನದಲ್ಲಿ ಇವೆ.

ದೇಶೀಯ ಮಾರ್ಗದಲ್ಲಿ ಏರ್‌ಬಸ್‌ನ ಪ್ರಥಮ ವಾಣಿಜ್ಯ ಸಂಚಾರ ಸೇವೆ ಆರಂಭಕ್ಕೆ ಸಿದ್ಧತೆ ಪೂರ್ಣವಾಗಿದೆ. ಹಾಗೂ ಎಲ್ಲಾ ಸಿಬ್ಬಂದಿಗೂ ಸೂಕ್ತ ತರಬೇತಿ ನೀಡಲಾಗಿದೆ ಎಂದು ಕಂಪನಿಯ ಪ್ರಕಟಣೆಯಲ್ಲಿ ತಿಳಿಸಿದೆ.
ಇದೇ ತಿಂಗಳ ಸೋಮವಾರ ಅಂದರೆ ಜನವರಿ 22ರಂದು ಏರ್‌ಬಸ್‌ನ ಪ್ರಯಾಣ ಸೇವೆಗೆ ಸಂಬಂಧಿಸಿದಂತೆ ಬುಕ್ಕಿಂಗ್ ಕೂಡ ಆರಂಭ ಆಗಲಿದೆ. ಫ್ರಾನ್ಸ್‌ನ ಏರ್‌ಬಸ್ ಕಂಪನಿ ನಿರ್ಮಿಸಿರುವ ಈ ವಿಮಾನವು ಡಿಸೆಂಬರ್ 23ರಂದು ನವದೆಹಲಿಯಲ್ಲಿ ಲ್ಯಾಂಡ್ ಆಗಿತ್ತು.












Click it and Unblock the Notifications