Air India: ಬೆಂಗಳೂರು-ಸಿಂಗಾಪುರಗೆ ತಡೆ ರಹಿತ ಕಾರ್ಯಾಚರಣೆ, ಯಾವಾಗ, ಸಮಯ, ಟಿಕೆಟ್ ಬುಕ್ಕಿಂಗ್ ಬಗ್ಗೆ ತಿಳಿಯಿರಿ
ಬೆಂಗಳೂರು, ಅಕ್ಟೋಬರ್ 24: ವಿಮಾನಯಾನ ಪ್ರಯಾಣಿಕರಿಗೆ ಏರ್ ಇಂಡಿಯಾ (Air India) ತಡೆ ರಹಿತ ವಿಮಾನ ಸೇವೆ ನೀಡುವ ಮೂಲಕ ಸಂತಸದ ಸುದ್ದಿಯೊಂದನ್ನು ನೀಡಿದೆ. ಬೆಂಗಳೂರಿನಿಂದ ಸಿಂಗಾಪುರ ದೇಶಕ್ಕೆ ನೇರ ಸಂಪರ್ಕ ಹೊಂದಿರುವ ಏರ್ ಇಂಡಿಯಾವು ತಡೆರಹಿತ ಸೇವೆ ನೀಡಲು ಸಜ್ಜಾಗಿದೆ.
ಏರ್ ಇಂಡಿಯಾ ವಿಮಾನಯಾನ ಸಂಸ್ಥೆಯು ಬೆಂಗಳೂರಿನಿಂದ ಸಿಂಗಾಪುರಗೆ ತಡೆರಸಹಿ ನೇರ ಸೇವೆ ನೀಡಲು ಹೊಸ ವಿಮಾನ (AI392) ಕಾರ್ಯಾಚರಣೆ ಆರಂಭಿಸಿದೆ. ಈ ವಿಮಾನವು ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (KIA) ದಿಂದ ರಾತ್ರಿ 10.30ಕ್ಕೆ ಹೊರಟು ಮರುದಿನ ನಸುಕಿನ ಜಾವ ಸಿಂಗಾಪುರ ತಲುಪಲಿದೆ.

ಈ ನೇರ ಸಂಪರ್ಕ ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸುವುದರಿಂದ ಸಮಯವು ಉಳಿತಾಯವಾಗಲಿದೆ. ಇನ್ನೂ ಸಿಂಗಾಪುರದಿಂದ ಟರ್ನ್ ಏರ್ ಇಂಡಿಯಾ ವಿಮಾನ (AI393) ಬೆಳಗ್ಗೆ ಬೆಳಗ್ಗೆ 6.40ಕ್ಕೆ ಹೊರಟು ರಾತ್ರಿ 8 ಗಂಟೆ ಸುಮಾರಿಗೆ ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ಬರಲಿದೆ ಎಂದು ಸಂಸ್ಥೆ ಮಾಹಿತಿ ನೀಡಿದೆ.
ಯಾವ ದಿನ ವಿಮಾನ ಹಾರಾಟ
ಪ್ರಯಾಣಿಕರಿಗೆ ಈ ಏರ್ ಇಂಡಿಯಾ ವಿಮಾನವು 170 ಎಕಾನಮಿ ಸೀಟು, 12 ಐಷಾರಾಮಿ ಬಿಸಿನೆಸ್ ಕ್ಲಾಸ್ ಸೀಟುಗಳ ವ್ಯವಸ್ಥೆ ಒದಗಿಸಿದೆ. ಬೆಂಗಳೂರು-ಸಿಂಗಾಪುರ ಏರ್ ಇಂಡಿಯಾವು ಸೋಮವಾರ, ಗುರುವಾರ, ಶುಕ್ರವಾರ ಮತ್ತು ಭಾನುವಾರ ಸೇರಿ ವಾರದಲ್ಲಿ ನಾಲ್ಕು ದಿನ ಕಾರ್ಯಾಚರಣೆ ನಡೆಸಲಿದೆ.

ಮುಂಬರುವ ದಿನಗಳಲ್ಲಿ ಈ ಏರ್ ಇಂಡಿಯಾ ನೇರ ಸಂಪರ್ಕ ಸೇವೆ ಪ್ರತಿ ದಿನವು ಲಭ್ಯವಾಗಲಿದೆ. ಆದರೆ ಯಾವಾಗಿನಿಂದ ಆರಂಭ ಎಂಬುದರ ಬಗ್ಗೆ ಇನ್ನಷ್ಟೇ ಅಂತಿಮಗೊಳ್ಳಬೇಕಿದೆ. ಸಂಸ್ಥೆಯ ಈ ತೀರ್ಮಾನದಿಂದ ಎರಡು ನಗರಗಳ ಪ್ರವಾಸೋದ್ಯಮ ಹಾಗೂ ವ್ಯಾಪಾರ ಹೆಚ್ಚುವ ನಿರೀಕ್ಷೆ ಇದೆ.
ವಿವಿಧೆಡೆಯಿಂದ ವಿಮಾನ ಸೇವೆ
ಮುಂದಿನ ಭಾನುವಾರದಿಂದ ಮುಂಬೈನಿಂದ ಸಿಂಗಾಪುರಕ್ಕೆ ವಾರಕ್ಕೆ ಏಳು ದಿನವೂ ವಿಮಾನಗಳ ಸಂಖ್ಯೆಯನ್ನು ಹೆಚ್ಚಿಸಲಾಗುವುದು ಎಂದು ಏರ್ ಇಂಡಿಯಾ ಘೋಷಿಸಿದೆ. ಸದ್ಯ ದೇಶದಲ್ಲಿ ಏರ್ ಇಂಡಿಯಾ ವಿಮಾನಗಳ ಪೈಕಿ ದೆಹಲಿಯಿಂದ- 14 ವಿಮಾನಗಳು, ಮುಂಬೈನಿಂದ -13, ಚೆನ್ನೈನಿಂದ -7 ಮತ್ತು ಬೆಂಗಳೂರಿಂದ - 4 ವಿಮಾನಗಳು ಸಿಂಗಾಪುರಕ್ಕೆ ತಡೆ ರಹಿತ ಸೇವೆ ನೀಡುತ್ತಿವೆ.
ಬೆಂಗಳೂರು- ಸಿಂಗಾಪುರ್ ಅಥವಾ ಬೇರೆಡೆಯಿಂದ ಸಿಂಗಾಪುರಗ ಏರ್ ಇಂಡಿಯಾ ವೆಬ್‌ಸೈಟ್ www.airindia.com ವೆಬ್ಸೈಟ್ ಮೂಲಕ ಟಿಕೆಟ್ ಬುಕ್ಕಿಂಗ್ ಮಾಡಲಾಗುವುದು ಎಂದು ಟವಿ ನೈನ್ ಕನ್ನಡ ವರದಿ ಮಾಡಿದೆ.












Click it and Unblock the Notifications