Air india: ಏರ್ ಇಂಡಿಯಾಗೆ ₹1,0000000 ದಂಡ-ಯಾಕೆ? ಕಾರಣ ಇಲ್ಲಿದೆ ತಿಳಿಯಿರಿ
ವಿಮಾನಯಾನ ಮಹಾನಿರ್ದೇಶನಾಲಯ 1 ಕೋಟಿ ರೂಪಾಯಿ ದಂಡ ವಿಧಿಸದೆ. ಯಾಕೆ ಗೊತ್ತಾ ಇಲ್ಲಿದೆ ಕಾರಣ ತಿಳಿಯಿರಿ.
ಗುತ್ತಿಗೆ ಪಡೆದ ಬೋಯಿಂಗ್ 777 ವಿಮಾನಗಳ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಸುರಕ್ಷತಾ ಮಾನದಂಡಗಳನ್ನು ಉಲ್ಲಂಘಿಸಿದ ಪ್ರಕರಣದಲ್ಲಿ ಏರ್ ಇಂಡಿಯಾಗೆ DGCA 1 ಕೋಟಿ ರೂಪಾಯಿ ದಂಡ ವಿಧಿಸಿದೆ. ಒಂದೇ ವಾರದಲ್ಲಿ ಏರ್ ಇಂಡಿಯಾಗೆ ದಂಡ ವಿಧಿಸುತ್ತಿರುವ ಎರಡನೇ ಪ್ರಕರಣ ಇದಾಗಿದೆ.

ಕಡಿಮೆ ಗೋಚರತೆಯ ಪರಿಸ್ಥಿಯಲ್ಲಿ ವಿಮಾನ ಹಾರಾಟಕ್ಕೆ ಪೈಲಟ್‌ಗಳನ್ನು ನಿಯೋಜಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಏರ್ ಇಂಡಿಯಾಗೆ ಮಹಾನಿರ್ದೇಶನಾಲಯವು ಜನವರಿ 17ರಂದು 30 ಲಕ್ಷ ದಂಡ ವಿಧಿಸಿತ್ತು.
ಭಾರತ ಟಮೆರಿಕ ನಡುವೆ ಹಾರಾಟ ನಡೆಸುವ ಬೋಯಿಂಗ್ 777 ವಿಮಾನದಲ್ಲಿ ತುರ್ತು ಸಂದರ್ಭದಲ್ಲಿ ಆಮ್ಲಜನಕ ಪೂರೈಸುವ ವ್ಯವಸ್ಥೆ ಇಲ್ಲ ಎಂದು ಏರ್ ಇಂಡಿಯಾದ ಮಾಜಿ ಪೈಲಟ್ ಒಬ್ಬರು ದೂರು ನೀಡಿದ್ದನ್ನು ಗಂಭೀರವಾಗಿ ಪರಿಗಣಿಸಿದ ಡಿಜಿಸಿಎ, ಶಿಸ್ತು ಕ್ರಮಕ್ಕೆ ಮುಂದಾಗಿದೆ.
ಈ ಬಗ್ಗೆ ವಿಸ್ತೃತ ತನಿಖೆ ನಡೆಸಿರುವ ಮಹಾನಿರ್ದೇಶನಾಲಯವು, ವಿಮಾನಯಾನ ಸಂಸ್ಥೆಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದೆ. ಗುತ್ತಿಗೆ ಪಡೆದ ವಿಮಾನವು ಮೂಲ ಪರಿಕರಗಳ ತಯಾರಿಕರೊಂದಿಗೆ ಒಪ್ಪಂದ ಹೊಂದಿಲ್ಲ ಎಂಬುದನ್ನು ಪರಿಗಣಿಸಿ ಏರ್ ಇಂಡಿಯಾಗೆ 1.10 ಕೋಟಿ ದಂಡ ವಿಧಿಸಲಾಗಿದೆ ಎಂದು ಡಿಜಿಸಿಎ ಬುಧವಾರ (ಜನವರಿ 24) ತಿಳಿಸಿದೆ.
2023ರ ಅಕ್ಟೋಬರ್ 29ರಂದು ಬೋಯಿಂಗ್ 777ನ ಕಮಾಂಡರ್ ಆಗಿ ಕೆಲಸ ಮಾಡಿದ ಪೈಲಟ್, ವಿಮಾನದಲ್ಲಿ ತುರ್ತು ಸಂದರ್ಭದಲ್ಲಿ ಆಮ್ಲಜನಕ ಪೂರೈಕೆ ಮಾಡುವ ವ್ಯವಸ್ಥೆ ಕೆಲಸ ಮಾಡುತ್ತಿಲ್ಲ ಎಂದು ಆರೋಪ ಮಾಡಿದ್ದರು. ಆ ವೇಳೆ ಆಮ್ಲಜನಕ ಉತ್ಪಾದಿಸುವ ವ್ಯವಸ್ಥೆ ನಿಷ್ಕ್ರಿಯೆಗೊಂಡು 12 ನಿಮಿಷಗಳಾಗಿತ್ತು. ವಿಮಾನವು 10 ಸಾವಿರ ಅಡಿಗಳಿಗಿಂತ ಕೆಳಗೆ ಹಾರಾಟ ನಡೆಸುವುದಾದರೆ, ಆಮ್ಲಜನಕ ಪೂರೈಕೆ ಮಾಡುವ ವ್ಯವಸ್ಥೆ ಕಡ್ಡಾಯವಾಗಿ ವಿಮಾನಗಳಲ್ಲಿ ಇರಬೇಕಾಗುತ್ತದೆ.
ಆದಾಗ್ಯೂ ಪರ್ವತಗಳಂತಹ ಪ್ರದೇಶಗಳಲ್ಲಿ 9 ಸಾವಿರದಿಂದ 10 ಸಾವಿರ ಅಡಿಗಳ ಎತ್ತರದಲ್ಲಿನ ಹಾರಾಟದ ಸಮಯದಲ್ಲಿ ಇದು ಕಡ್ಡಾಯವಾಗಿ ಬೇಕೇ ಬೇಕಾಗುತ್ತದೆ. ವಿಮಾನಯಾನದಲ್ಲಿ ಪ್ರಯಾಣಿಕರ ಸುರಕ್ಷತೆಗೆ ಪ್ರಥಮ ಆದ್ಯೆತೆಯಿದ್ದು, ಇದರಲ್ಲಿ ಯಾವುದೇ ರಾಜೀ ಇಲ್ಲ ಎಂದು ಡಿಜಿಸಿಎ ತಿಳಿಸಿದೆ.












Click it and Unblock the Notifications