Ayatollah Khamenei: ಇರಾನ್‌ನಲ್ಲಿ ಖಮೇನಿ ಅಪರೂಪದ ಅಂತ್ಯಕ್ರಿಯೆಗೆ ಸಿದ್ಧತೆ: ಭಾರತೀಯ ಧಾರ್ಮಿಕ ನಾಯಕರ ಗೌರವ
Ayatollah Ali Khamenei: ಜಗತ್ತು ಕಂಡು ಕೇರಳರಿಯದ ಅಪರೂಪದ ಅಂತ್ಯಕ್ರಿಯೆಗೆ ಸಾಕ್ಷಿಯಾಗಲಿದೆ. ಇಸ್ರೇಲ್ ಮತ್ತು ಅಮೆರಿಕ ನಡೆಸಿದ ಜಂಟಿ ವೈಮಾನಿಕ ದಾಳಿಯಲ್ಲಿ ಇರಾನ್‌ನ ಮಾಜಿ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಕಳೆದ ಫೆಬ್ರವರಿ 28ರಂದೇ ಮೃತಪಟ್ಟಿದ್ದರು. ಈ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಸುದ್ದಿಯಾಗಿತ್ತು. ಇದೀಗ ಅವರ ಅಂತ್ಯಕ್ರಿಯೆ, ವಿಧಿವಿಧಾನಗಳು ಇಂದಿನಿಂದ ಜುಲೈ 3ರ ಶುಕ್ರವಾರದಿಂದ ಶುರುವಾಗಿವೆ. ಇದಕ್ಕೆ ಭಾರತೀಯ ಧಾರ್ಮಿಕ ಮುಖಂಡರ ನಿಯೋಗವು ಅಂತಿಮ ಗೌರವ ಸಲ್ಲಿಸಿದೆ. ಇದರ ಇದರ ವಿಡಿಯೋ ವೈರಲ್ ಆಗಿದೆ. ಜೊತೆಗೆ ಇಷ್ಟು ದಿನ ಖಮೇನಿ ಮೃತದೇಹ ಎಲ್ಲಿಡಲಾಗಿತ್ತು? ಎಂಬ ಅಚ್ಚರಿ ಪ್ರಶ್ನೆಯೊಂದು ನಮ್ಮ ಮುಂದಿದೆ.
ಮಧ್ಯಪ್ರಾಚ್ಯ ದೇಶಗಳ ಯುದ್ಧಕ್ಕೆ ಕಾರಣವಾಗಿ ಅಮೆರಿಕ-ಇಸ್ರೇಲಿ ದಾಳಿಯಲ್ಲಿ ಮೃತಪಟ್ಟ ಇರಾನ್‌ನ ಸರ್ವೋಚ್ಚ ನಾಯಕನ ಮೃತದೇಹವು ಅಂತ್ಯಕ್ರಿಯೆ ಅಂತಿಮ ವಿಧಾನಗಳು ಆರಂಭವಾಗುವ ಮುನ್ನ ಟೆಹ್ರಾನ್‌ನ ಗ್ರ್ಯಾಂಡ್ ಮೊಸಲ್ಲಾಗೆ ತರಲಾಯಿತು. ನಾಳೆ ಶನಿವಾರ (ಜುಲೈ 4) ಖಮೇನಿ ಅಂತ್ಯಕ್ರಿಯೆ ಸಂಬಂಧ ಅನೇಕ ಕಾರ್ಯಕ್ರಮಗಳು ನಡೆಯಲಿವೆ. ಇದರಲ್ಲಿ ದೇಶ, ವಿದೇಶಗಳ ಅನೇಕ ಗಣ್ಯರು, ಲಕ್ಷಾಂತರ ಜನರು ಪಾಲ್ಗೊಳ್ಳುವ ಸಾಧ್ಯತೆ ಇದೆ.

ಯುದ್ಧವು ತೀವ್ರಗತಿಯಲ್ಲಿ ಮುಂದುವರಿಯಲು ಖಮೇನಿ ಅವರ ಸಾವು ಪ್ರಮುಖ ಕಾರಣವಾಗಿತ್ತು. ಹೀಗಾಗಿಯೇ ಇರಾನ್‌ಗೆ ಸಾಕಷ್ಟು ಹಾನಿ ಆದರೂ ಸಹಿತ ತನ್ನ ನಾಯಕನನ್ನು ಕಳೆದುಕೊಂಡಿದ್ದಕ್ಕೆ ಸೇಡು ತೀರಿಸಿಕೊಳ್ಳುವ ಶಪಥ ಮಾಡಿತು. ಸದ್ಯ ಕದನ ವಿರಾಮ ಹಂತದಲ್ಲಿದೆ. ಇದೇ ವೇಳೆ ಖಮೇನಿ ಅವರ ಸಾರ್ವಜನಿಕ ಅಂತ್ಯಕ್ರಿಯೆಗೆ ಬರದ ಸಿದ್ಧತೆಗಳು ನಡೆಯುತ್ತಿವೆ. ಸಂಘರ್ಷವನ್ನು ನಿಲ್ಲಿಸಲು ಪ್ರಾಥಮಿಕ ಒಪ್ಪಂದಕ್ಕೆ ಸಹಿ ಹಾಕಿದ ನಂತರ ತಿಂಗಳುಗಟ್ಟಲೇ ಜಂಟಿ ದಾಳಿ ನಡೆಸಿದ ಇಸ್ರೇಲ್, ಯುಎಸ್ ಕದನ ವಿರಾಮ ಘೋಷಿಸಿವೆ.
ಭಾರತದ ಧಾರ್ಮಿಕ ಮುಖಂಡರಿಂದ ಗೌರವ
ಇನ್ನೂ ವೈರಲ್ ವಿಡಿಯೋದಲ್ಲಿ ಭಾರತದ ಧಾರ್ಮಿಕ ಮುಖಂಡರು, ಗುರುಗಳು ಇರಾನ್ ರಾಯಭಾರ ಕಚೇರಿಯಲ್ಲಿ ಆ ದೇಶದ ಮಾಜಿ ನಾಯಕರಿಗೆ ಗೌರವ ಸಲ್ಲಿಸಿದ್ದಾರೆ. ಶನಿವಾರ ದಿನಪೂರ್ತಿ ಹಲವು ಆಚರಣೆಗಳು ನಡೆಯಲಿವೆ. ಖಮೇನಿ ಮೃತ ದೇಹವನ್ನು ಇರಾನ್ ಮತ್ತು ನೆರೆಯ ಇರಾಕ್‌ನ ನಗರಗಳಿಗೆ ಸಾಗಿಸಲಗುತ್ತದೆ. ಟೆಹ್ರಾನ್‌ನ ಗ್ರ್ಯಾಂಡ್ ಮೊಸಲ್ಲಾದಲ್ಲಿ ಅಂತ್ಯಕ್ರಿಯೆ ಆರಂಭವಾಗಲಿದೆ.
ದಶಕಗಳ ಕಾಲ ಇರಾನ್ ದೇಶವನ್ನು ಅತ್ಯಂತ ಕಟಿಬದ್ಧವಾಗಿ ಮುನ್ನಡೆಸಿದ ಕೀರ್ತಿ ಖಮೇನಿಗೆ ಸಲ್ಲುತ್ತದೆ. ಅಂತಹ ನಾಯಕನನ್ನು ಕಳೆದುಕೊಂಡ ಇರಾನ್ ಶೋಕಸಾಗರದಲ್ಲಿ ಮುಳುಗಿದೆ. ಇದರ ಭಾಗವಾಗಿ ಸರ್ಕಾರಿ ಅಧಿಕಾರಿಗಳು ಬೀದಿಗಳನ್ನು ಬಂದ್ ಮಾಡಲಿದ್ದಾರೆ. ಜನರು, ಸರ್ಕಾರಿ ಕೆಲಸಗಳು, ದೈನಂದಿನ ಜೀವನ ಬಂದ್ ಆಗಲಿದೆ.
ಅಡಗುತಾಣದಿಂದ ಹೊರಬಂದ ಜನರಲ್
ಖಮೇನಿ ಅಂತ್ಯಕ್ರಿಯೆಗೆ ಟೆಹ್ರಾನ್ ನಗರ ಸಿದ್ಧವಾಗಿದ್ದು, ಇದೇ ಹೊತ್ತಿನಲ್ಲೇ ಇರಾನ್‌ನ ಅರೆಸೈನಿಕ ಕ್ರಾಂತಿಕಾರಿ ಗಾರ್ಡ್ ಅನ್ನು ಮುನ್ನಡೆಸುವ ಪ್ರಬಲ ಜನರಲ್ 86 ವರ್ಷದ ಅಹ್ಮದ್ ವಾಹಿದಿ ಅಡಗುತಾಣದಿಂದ ಹೊರಬಂದಿದ್ದಾರೆ. ಇಷ್ಟು ದಿನ ಅವರು ಕಣ್ಮರೆಯಾಗಿದ್ದರು, ಇದೀಗ ಅವರು ಖಮೇ
ಇರಾನ್‌ನ ರಾಜ್ಯ ಮಾಧ್ಯಮವು ಆನ್‌ಲೈನ್‌ನಲ್ಲಿ ಪ್ರಕಟಿಸಿದ ಫೋಟೋಗಳಲ್ಲಿ, 86 ವರ್ಷದ ಜನರಲ್ ಅಹ್ಮದ್ ವಾಹಿದಿ ಅವರು ಖಮೇನಿ ಅವರ ಅಂತ್ಯಕ್ರಿಯೆಯ ಸಭೆಯಲ್ಲಿ ಭಾಗವಹಿಸಿದ್ದಾರೆ. ಖಮೇನಿ ಶವಪೆಟ್ಟಿಗೆಯ ಪಕ್ಕದಲ್ಲಿ ಕುಳಿತಿದ್ದರು.
A delegation of Indian religious leaders paid tribute to the martyred Leader of the Islamic Republic of Iran, Ayatollah Ali Khamenei. pic.twitter.com/Ji1i3vNkGm
— Iran in India (@Iran_in_India) July 3, 2026
ಇಷ್ಟು ದಿನ ಖಮೇನಿ ಶವ ಎಲ್ಲಿತ್ತು?
ಇಸ್ಲಾಂ ಧರ್ಮದಲ್ಲಿ ರಸಾಯನಿಕ ಬಳಸಿಕೊಂಡು ವಾರಗಳು, ತಿಂಗಳು ಕಾಲ ಮೃತದೇಹವನ್ನು ರಕ್ಷಿಸಿ ಇಡಲು ಸಾಮಾನ್ಯವಾಗಿ ಒಪ್ಪುವುದಿಲ್ಲ. ಹೀಗಾಗಿ ಖಮೇನಿ ಅವರ ಶವ ರಸಾಯನಿಕ ಬಳಸದೇ ಶೀತಲ ಸಂಗ್ರಹಣಾಗಾರದಲ್ಲಿ ಇರಿಸಲಾಗಿತ್ತು. ಸುಮಾರು ನಾಲ್ಕು ತಿಂಗಳ ಬಳಿಕ ಅವರ ಅಂತ್ಯಕ್ರಿಯೆಗಾಗಿ ಮೃತದೇಶ ಹೊರತೆಗೆಯಲಾಗಿದೆ. ಶಿಯಾ ಧಾರ್ಮಿಕ ಕಾನೂನುಗಳು ಈ ರೀತಿ ಶೀತಲಾಗಾರದಲ್ಲಿ ಶವ ಸಂರಕ್ಷಿಸಿ ಇಡಲು ಒಪ್ಪಿದರೆ, ಇಸ್ಲಾಮಿಕ್ ನಿಯಮಗಳು ರಸಾಯಾನಿಕ ಬಳಸಿ ಸಂರಕ್ಷಿಸಿ ಇಡುವುದನ್ನು ಪ್ರೋತ್ಸಾಹಿಸುವುದಿಲ್ಲ. ಆದರೆ ಈ ನಿಯಮಗಳು ಸರ್ವೋಚ್ಚ ನಾಯಕ ವಿಚಾರದಲ್ಲಿ ಬದಲಾವಣೆ ಆಗಿವೆ ಎಂದು ಮೂಲಗಳು ತಿಳಿಸಿವೆ.













Click it and Unblock the Notifications