Air India: ಹೃದಯಾಘಾತದಿಂದ ಹದಿಹರೆಯದ ಪೈಲಟ್ ಸಾವು, ಆಗಿದ್ದೇನು?
ನವದೆಹಲಿ, ನವೆಂಬರ್ 17: ದೀಪಾವಳಿ ಹಬ್ಬದ ಮುಗಿಸಿ ಮರಳಿ ಕೆಲಸಕ್ಕೆ ಬಂದ್ ಏರ್ ಇಂಡಿಯಾ (Air India AI Pilot) ಎಐ ಪೈಲಟ್ ಒಬ್ಬರು ಹೃದಯಸ್ತಂಭನದಿಂಧ ಮೃತಪಟ್ಟ ಘಟನೆ ದೆಹಲಿ ವಿಮಾನ ನಿಲ್ದಾಣದಲ್ಲಿ ಗುರುವಾರ ನಡೆದಿದೆ.
ಕ್ಯಾಪ್ಟನ್ ಹಿಮಾನಿಲ್ ಕುಮಾರ್ (37) ವರ್ಷದ ಏರ್ ಇಂಡಿಯಾ ಪೈಲಟ್ ಮೃತಪಟ್ಟ ದುರ್ದೈವಿ. ಈ ಯುವ ಕಮಾಂಡರ್ ನಾಗರಿಕ ವಿಮಾನವನ್ನು ನಿರ್ವಹಿಸುತ್ತಿರಲಿಲ್ಲ. ಬದಲಾಗಿ ಅವರು ವಿಮಾನ ಹಾರಾಟದ ತರಬೇತಿಯ್ಲಲಿ ಕೆಲಸ ಮಾಡುತ್ತಿದ್ದರು. ಹಬ್ಬ ಮುಗಿಸಿ ಗುರುವಾರ ಕೆಲಸ ಆರಂಭಿಸಿದ್ದ ಅವರು ಕೆಲವು ಭಾರತೀಯ ವಾಹಕಗಳ ಪೈಲಟ್‌ಗಳು ಕಠಿಣ ತರಬೇತಿ ರೋಸ್ಟರಿಂಗ್ ಕಾರ್ಯದಿಂದ ಹೆಚ್ಚು ಆಯಾಸಕ್ಕೆ ಒಳಗಾಗಿದ್ದರು ಎಂದು ತಿಳಿದು ಬಂದಿದೆ.

ನಾಗರಿಕ ವಿಮಾನಯಾನ ಪ್ರಧಾನ ನಿರ್ದೇಶಕ ಅಧಿಕಾರಿಯೊಬ್ಬರು (ಡಿಜಿಸಿಎ), ಮೃತ ಕ್ಯಾಪ್ಟನ್ ಹಿಮಾನಿಲ್ ಕುಮಾರ್ ಅವರು ಕಳೆದ ಆಗಸ್ಟ್ 23 ರಂದು ವೈದ್ಯಕೀಯ ಚಿಕಿತ್ಸೆಗೆ ಒಳಗಾಗಿದ್ದರು. ಬಳಿಕ ಅವರು ವೈದ್ಯಕೀಯವಾಗಿ ಫಿಟ್ ಎಂದು ಸಾಬೀತಾಗಿತ್ತು ಎಂದು ತಿಳಿಸಿದ್ದರು.
ಗುರುವಾರವಷ್ಟೇ ಕೆಲಸಕ್ಕೆ ಮರಳಿದ್ದ ಪೈಲಟ್
ಕರ್ತವ್ಯದ ಸಂದರ್ಭಗಳಲ್ಲಿ ಅವರಿಗೆ ಆಯಾಸ- ಅನಾರೋಗ್ಯ ಸಮಸ್ಯೆ ಇರಲಿಲ್ಲ. ಈ ಪೈಲಟ್ ಕಳೆದ ಅಕ್ಟೋಬರ್ 3, ತನ್ನ ಬೋಯಿಂಗ್ 777 ಫುಲ್ ಟೈಪ್ ಟ್ರಾನ್ಸಿಶನ್ ಗ್ರೌಂಡ್ ಟೆಕ್ನಿಕಲ್ ಕೋರ್ಸ್ ಅನ್ನು ಏರ್‌ಬಸ್ A320 ಮಾದರಿಗೆ ಪರಿವರ್ತಿಸಿದ್ದರು. ಇದೇ ವೇಳೆ ಎದುರಾದ ದೀಪಾವಳಿಗೆ ಅವರು ರಜೆ ಪಡೆದು ಗುರುವಾರ ಕೆಲಸಕ್ಕೆ ಮರಳಿದಾಗ ಅವರು ಮೃತಪಟ್ಟಿದ್ದಾರೆ.

ಗುರುವಾರ ಅವರು B777 ವಿಮಾನದ ಕುರಿತ ತರಗತಿಗೆ ಆರಂಭಿಸಿದ್ದರು. ಆಗಲು ಅವರು ಆರೋಗ್ಯವಾಗಿಯೇ ಇದ್ದರು. ಆದರೆ ಪೈಲಟ್ ದಿಢೀರ್ ಹೃದಯ ಸ್ತಂಭನಕ್ಕೆ ಒಳಗಾಗಿರುವುದು ಗೊತ್ತಾಗಿದೆ. ಸಿಪಿಆರ್ ನೀಡಿ ಸಮೀಪದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅವರು ಬದುಕುಳಿಯಲಿಲ್ಲ ಎಂದು ತಿಳಿಸಿದರು.
ಕರ್ತವ್ಯ ನಿರ್ವಹಣೆ, ಒತ್ತಡದ ಬಗ್ಗೆ ದೂರು
ಭಾರತೀಯ ವಾಹಕಗಳ ಪೈಲಟ್‌ಗಳು ಒತ್ತಡ ಮತ್ತು ಆಯಾಸದ ಬಗ್ಗೆ ದೂರು ನೀಡುತ್ತಿರುತ್ತಾರೆ. ಬ್ಯಾಕ್-ಟು-ಬ್ಯಾಕ್ ರಾತ್ರಿ ಪಾಳಿಗಳಿಗೆ ನಿಯೋಜಿಸುವುದು, ದೂರ ಪ್ರದೇಶಗಳಲ್ಲಿ ಕರ್ತವ್ಯ ನಿರ್ವಹಣೆ ಮಾಡಲಾಗುತ್ತಿದೆ ಎಂದು ದೂರಿದ್ದಾರೆ. ಡಿಜಿಸಿಎ ಇತ್ತೀಚೆಗೆ ಕರ್ತವ್ಯಕ್ಕೆ ಸಂಬಂಧಿಸಿದಂತೆ ಪರಿಷ್ಕೃತ ಫ್ಲೈಟ್ ಡ್ಯೂಟಿ ಟೈಮ್ ಲಿಮಿಟೇಶನ್ (ಎಫ್‌ಡಿಟಿಎಲ್) ನಿಯಮಗಳ ಕರಡ ಬಿಡುಗಡೆಗೊಳಿಸಿದೆ.
ಆಗಸ್ಟ್‌ನಲ್ಲಿ ಇಂಡಿಗೋ ವಿಮಾನವನ್ನು ಪುಣೆಗೆ ಚಲಾಯಿಸಬೇಕಿದ್ದ ಪೈಪಟ್‌ವೊಬ್ಬರು ನಾಗಪುರ ವಿಮಾನ ನಿಲ್ದಾಣದ ಬೋರ್ಡಿಂಗ್ ಗೇಟ್‌ನಲ್ಲಿ ಕುಸಿದು ಬಿದ್ದಿದ್ದರು. ಬುಧವಾರವಷ್ಟೇ ಕತಾರ್ ಏರ್‌ವೇಸ್‌ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸ್ಪೈಸ್‌ಜೆಟ್ ಮಾಜಿ ಕ್ಯಾಪ್ಟನ್ ದೆಹಲಿ-ದೋಹಾಗೆ ವಿಮಾಣದಲ್ಲಿ ತೆರಳುವಾಗ ಮೃತಪಟ್ಟರು.












Click it and Unblock the Notifications