ಮುಂದಿನ ಎರಡೂವರೆ ವರ್ಷ ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ: ಅಖಂಡ ಲಕ್ಷ್ಮಿ ಯೋಗದಿಂದ ಮನೆ, ವಾಹನ ಖರೀದಿ ಯೋಗ

ಎರಡೂವರೆ ವರ್ಷಗಳವರೆಗೆ ಶನಿಯ ಅಖಂಡ ಲಕ್ಷ್ಮಿ ಯೋಗವಿರುವುದು. ಮೇಷ ರಾಶಿಗೆ ಶನಿ ಪ್ರವೇಶದೊಂದಿಗೆ, 4 ರಾಶಿಯವರ ಅದೃಷ್ಟ ಬದಲಾಗುವುದು.

ಹಿಂದೂ ಜ್ಯೋತಿಷ್ಯದಲ್ಲಿ, ಶನಿಯನ್ನು ಕರ್ಮದ ಫಲ ನೀಡುವವನು ಮತ್ತು ನ್ಯಾಯದ ದೇವರು ಎಂದು ಕರೆಯಲಾಗುತ್ತದೆ. ಶನಿ ಗ್ರಹವು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಚಲಿಸಲು ಸುಮಾರು ಎರಡೂವರೆ ವರ್ಷಗಳು ಬೇಕಾಗುತ್ತದೆ. ಈ ದೀರ್ಘ ಸಂಚಾರದಿಂದಾಗಿ, ಎಲ್ಲಾ ರಾಶಿಯವರ ಜೀವನದಲ್ಲಿ ಪ್ರಮುಖ ಏರಿಳಿತಗಳು ಕಂಡುಬರುತ್ತವೆ. ಶನಿಯು ಮೇಷ ರಾಶಿಗೆ ಪ್ರವೇಶಿಸುವುದರೊಂದಿಗೆ, ಕೆಲವು ರಾಶಿಯವರಿಗೆ ಸುವರ್ಣ ಯುಗ ಪ್ರಾರಂಭವಾಗಲಿದೆ.

Akhanda Lakshmi Yoga

ಶನಿಯ ವಿಶೇಷ ಆಶೀರ್ವಾದದಿಂದಾಗಿ, ಕೆಲವು ರಾಶಿಯವರು ಮುಂದಿನ ಎರಡೂವರೆ ವರ್ಷಗಳ ಕಾಲ ಅಭೂತಪೂರ್ವ ಆರ್ಥಿಕ ಪ್ರಗತಿಯನ್ನು ಸಾಧಿಸುತ್ತಾರೆ. ಸಮಾಜದಲ್ಲಿ ರಾಜನಂತಹ ಸ್ಥಾನಮಾನವನ್ನು ಅನುಭವಿಸುತ್ತಾರೆ.

ಇಂದಿನಿಂದ ಈ ರಾಶಿಯವರ ಮೇಲಿರುವುದು ಮಹಾ ಲಕ್ಷ್ಮೀ ಕೃಪೆ: ಹೆಚ್ಚಾಗುವುದು ಸಿರಿ ಸಂಪತ್ತು
ಇಂದಿನಿಂದ ಈ ರಾಶಿಯವರ ಮೇಲಿರುವುದು ಮಹಾ ಲಕ್ಷ್ಮೀ ಕೃಪೆ: ಹೆಚ್ಚಾಗುವುದು ಸಿರಿ ಸಂಪತ್ತು

ಈ ರಾಶಿಯವರಿಗೆ ಅಖಂಡ ಲಕ್ಷ್ಮಿ ಯೋಗದ ಅದೃಷ್ಟ:

1. ಮೇಷ ರಾಶಿ (Aries): ಶನಿಯು ಮೇಷ ರಾಶಿಯಲ್ಲಿಯೇ ಸಂಚಾರ ನಡೆಸಲಿರುವ ಕಾರಣ ಇದು ಕೆಲವು ಪ್ರಮುಖ ಬದಲಾವಣೆಗಳನ್ನು ತರಲಿದೆ. ಕೆಲವು ಸಮಯದಿಂದ ಕೆಲಸದ ವಿಚಾರವಾಗಿ ನೀವು ಎದುರಿಸುತ್ತಿರುವ ಎಲ್ಲಾ ಅಡೆತಡೆಗಳು ಮತ್ತು ತೊಂದರೆಗಳು ಸಂಪೂರ್ಣವಾಗಿ ನಿವಾರಣೆಯಾಗುತ್ತವೆ. ಉದ್ಯೋಗಿಗಳಿಗೆ ಕಚೇರಿಯಲ್ಲಿ ಬಡ್ತಿ ಸಿಗುತ್ತದೆ ವೇತನದಲ್ಲಿ ಭಾರೀ ಹೆಚ್ಚಳವಾಗುತ್ತದೆ. ಹೊಸ ವ್ಯವಹಾರಗಳನ್ನು ಪ್ರಾರಂಭಿಸಲು ಇದು ಅನುಕೂಲಕರ ಸಮಯ. ನ್ಯಾಯಾಲಯದ ಪ್ರಕರಣಗಳು ನಿಮ್ಮ ಪರವಾಗಿ ಬಗೆಹರಿಯುವುದರೊಂದಿಗೆ ನಿಮಗೆ ಪರಿಹಾರ ಸಿಗುತ್ತದೆ.

2. ಮಿಥುನ ರಾಶಿ (Gemini): ಈ ಶನಿಯ ಸಂಚಾರದಿಂದಾಗಿ ಮಿಥುನ ರಾಶಿಯವರಿಗೆ ಅನಿರೀಕ್ಷಿತ ಆರ್ಥಿಕ ಲಾಭಗಳಾಗುವುದು. ಈ ಅವಧಿಯಲ್ಲಿ ನಿಮ್ಮ ಆರ್ಥಿಕ ಪರಿಸ್ಥಿತಿ ಅನಿರೀಕ್ಷಿತವಾಗಿ ಸುಧಾರಿಸುತ್ತದೆ. ಹಳೆಯ ಸಾಲಗಳ ನೋವಿನಿಂದ ಮುಕ್ತರಾಗುವಿರಿ. ಷೇರು ಮಾರುಕಟ್ಟೆ, ಲಾಟರಿ ಮತ್ತು ರಿಯಲ್ ಎಸ್ಟೇಟ್ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಿದವರಿಗೆ ಹಣದ ಮಳೆಯಾಗುವುದು. ಸಮಾಜದಲ್ಲಿ ನಿಮ್ಮ ಗೌರವ ಮತ್ತು ಪ್ರತಿಷ್ಠೆ ಮಹತ್ತರವಾಗಿ ಹೆಚ್ಚಾಗುತ್ತದೆ. ಮನೆ ಖರೀದಿ ಅಥವಾ ನಿರ್ಮಾಣ, ವಾಹನ ಖರೀದಿ ಯೋಗವಿದೆ. ಮನಸ್ಸಿನ ಆಸೆಗಳು ಈಡೇರುವ ಸಮಯ.

ಈ ರಾಶಿಯವರಿಗೆ ಮಹಾಲಕ್ಷ್ಮೀ ಯೋಗ: ಒಲಿದು ಬರುವುದು ಸಿರಿ ಸಂಪತ್ತು, ಎಲ್ಲಾ ಸಮಸ್ಯೆಗಳಿಗೂ ಸಿಗುವುದು ಪರಿಹಾರ
ಈ ರಾಶಿಯವರಿಗೆ ಮಹಾಲಕ್ಷ್ಮೀ ಯೋಗ: ಒಲಿದು ಬರುವುದು ಸಿರಿ ಸಂಪತ್ತು, ಎಲ್ಲಾ ಸಮಸ್ಯೆಗಳಿಗೂ ಸಿಗುವುದು ಪರಿಹಾರ

3. ಸಿಂಹ ರಾಶಿ (leo): ಸಿಂಹ ರಾಶಿಯವರು ಶನಿಯ ಅನುಗ್ರಹದಿಂದ ಅದೃಷ್ಟದ ಜೀವನವನ್ನು ಪ್ರಾರಂಭಿಸುತ್ತಾರೆ. ವಿದೇಶದಲ್ಲಿ ಅಧ್ಯಯನ ಮಾಡಲು ಅಥವಾ ಉದ್ಯೋಗ ಪಡೆಯಲು ಬಯಸುವವರ ಕನಸು ಈ ಎರಡೂವರೆ ವರ್ಷಗಳಲ್ಲಿ ನನಸಾಗುವುದು. ಹೊಸ ಮನೆ, ಭೂಮಿ ಅಥವಾ ವಾಹನವನ್ನು ಖರೀದಿಸಲು ಸಾಧ್ಯವಾಗುತ್ತದೆ. ಕುಟುಂಬದಲ್ಲಿನ ಹಳೆಯ ವಿವಾದಗಳು ಮತ್ತು ಘರ್ಷಣೆಗಳು ಬಗೆಹರಿಯುತ್ತವೆ. ಮನೆಯಲ್ಲಿ ಜೀವನದಲ್ಲಿ ಶಾಂತಿ ನೆಲೆಸುತ್ತದೆ. ಆರೋಗ್ಯವೂ ಸುಧಾರಿಸುತ್ತದೆ.

4. ಧನು ರಾಶಿ (Sagitarius): ಶನಿಯ ಸಂಚಾರವು ಧನು ರಾಶಿಯವರಿಗೆ ಉತ್ತಮ ಯಶಸ್ಸನ್ನು ತರುತ್ತದೆ. ನೀವು ಕೈಗೊಳ್ಳುವ ಪ್ರತಿಯೊಂದು ಸಣ್ಣ ಕೆಲಸದಲ್ಲೂ ಅದೃಷ್ಟವು ನಿಮ್ಮೊಂದಿಗೆ ಇರುತ್ತದೆ. ಮೇಲಧಿಕಾರಿಗಳೊಂದಿಗೆ ಉತ್ತಮ ಸಂಬಂಧದಿಂದಾಗಿ ವೃತ್ತಿಜೀವನದಲ್ಲಿ ಉತ್ತುಂಗ ಮಟ್ಟವನ್ನು ತಲುಪುವಿರಿ. ಉದ್ಯಮಿಗಳ ಲಾಭ ದ್ವಿಗುಣವಾಗುವುದು. ಮಕ್ಕಳಿಲ್ಲದವರಿಗೆ ಸಂತಾನ ಭಾಗ್ಯ ಒಲಿಯುವುದು. ಮನೆ ಕಟ್ಟುವ ಕನಸು ನನಸಾಗುವುದು. ಮಕ್ಕಳ ಸಾಧನೆ ಸಂತೋಷ ತರುವುದು.

ಶನಿಯ ಆಶೀರ್ವಾದ ಪಡೆಯಲು 3 ಸರಳ ಪರಿಹಾರಗಳು:

ಪ್ರತಿ ಶನಿವಾರ ಸಂಜೆ ಅಶ್ವಥ ಮರದ ಕೆಳಗೆ ಎಳ್ಳೆಣ್ಣೆಯ ದೀಪ ಹಚ್ಚುವುದರಿಂದ ಶನಿಯ ದೋಷಗಳು ದೂರವಾಗುತ್ತವೆ.

ಹನುಮಾನ್ ಚಾಲೀಸಾ ಪಠಣ: ಹನುಮಾನ್ ಚಾಲೀಸಾವನ್ನು ನಿಯಮಿತವಾಗಿ ಪಠಿಸುವವರಿಗೆ ಶನಿ ದೇವರು ಎಂದಿಗೂ ತೊಂದರೆ ಕೊಡುವುದಿಲ್ಲ. ಕುಷ್ಠರೋಗಿಗಳು, ಕುರುಡರು ಮತ್ತು ಬಡವರಿಗೆ ನಿಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಕಪ್ಪು ಬಟ್ಟೆ ಅಥವಾ ಆಹಾರವನ್ನು ದಾನ ಮಾಡುವುದರಿಂದ ಶನಿ ದೇವರು ಸಂತೋಷಪಡುತ್ತಾರೆ.

(ಬರಹ: ರಂಜಿತಾ ಆರ್.ಕೆ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+