ಎನ್‌ಡಿಎ ಸೇರಿದ ಪ್ರಫುಲ್ ಪಟೇಲ್ ಮೇಲಿದ್ದ ಭ್ರಷ್ಟಾಚಾರ ಪ್ರಕರಣಕ್ಕೆ ಸಿಬಿಐ ಎಳ್ಳುನೀರು!
ನವದೆಹಲಿ, ಮಾರ್ಚ್. 29: ಮಹಾರಾಷ್ಟ್ರ ರಾಜಕಾರದಲ್ಲಿ ಭಾರಿ ಬಿರುಗಾಳಿ ಎಬ್ಬಿಸಿದ್ದು ಎನ್‌ಸಿಪಿ- ಶಿವಸೇನೆ ಭಿನ್ನಾಭಿಪ್ರಾಯ. ಬಳಿಕ ಎನ್‌ಸಿಪಿಯಲ್ಲಿಯೂ ಬಿರುಕು ಬಂದು ಎನ್‌ಸಿಪಿ ನಾಯಕ ಪ್ರಫುಲ್ ಪಟೇಲ್, ಅಜಿತ್ ಪವಾರ್ ಮತ್ತು ಇತರ ಪಕ್ಷದ ನಾಯಕರು ಎನ್‌ಡಿಎಗೆ ಸೇರಿದ್ದಾರೆ. ಇದರ ಬೆನ್ನಲ್ಲೇ ಕೇಂದ್ರೀಯ ತನಿಖಾ ದಳ (ಸಿಬಿಐ) ಪ್ರಫುಲ್ ಪಟೇಲ್‌ಗೆ ಗುಡ್ ನ್ಯೂಸ್ ನೀಡಿದೆ.
ಎನ್‌ಡಿಎಗೆ ಸೇರಿದ ಎಂಟು ತಿಂಗಳ ನಂತರ, ಏರ್ ಇಂಡಿಯಾ-ಇಂಡಿಯನ್ ಏರ್‌ಲೈನ್ಸ್ ವಿಮಾನಗಳ ಗುತ್ತಿಗೆಯಲ್ಲಿನ ಅಕ್ರಮಗಳ ಪ್ರಕರಣದಲ್ಲಿ ಪ್ರಫುಲ್ ಪಟೇಲ್ ಮೇಲಿದ್ದ ಪ್ರಕರಣವನ್ನು ಸಿಬಿಐ ಮುಚ್ಚಲಿದೆ. ಈ ಬಗ್ಗೆ ಸಿಬಿಐ ವರದಿ ಸಲ್ಲಿಸಿದೆ. ಏರ್ ಇಂಡಿಯಾ-ಇಂಡಿಯನ್ ಏರ್‌ಲೈನ್ಸ್ ವಿಲೀನದ ಸಮಯದಲ್ಲಿ ಕೇಂದ್ರ ನಾಗರಿಕ ವಿಮಾನಯಾನ ಸಚಿವರಾಗಿ ಪ್ರಫುಲ್ ಪಟೇಲ್ ಅವರು ಪ್ರಕರಣದ ಪ್ರಮುಖ ಶಂಕಿತರಲ್ಲಿ ಒಬ್ಬರಾಗಿದ್ದರು. ಅವರನ್ನು ಸಿಬಿಐ ಮತ್ತು ಜಾರಿ ನಿರ್ದೇಶನಾಲಯ (ಇಡಿ) ಪ್ರಶ್ನಿಸಿತ್ತು.

ಮೇ 2019 ರಲ್ಲಿ, 'ಸಚಿವರಾಗಿದ್ದ ಪ್ರಫುಲ್ ಪಟೇಲ್ ಅವರು ಆತ್ಮೀಯ ದೀಪಕ್ ತಲ್ವಾರ್ ಅವರು ಸಚಿವರ ಸಾಮೀಪ್ಯವನ್ನು ಬಳಸಿಕೊಂಡು 2008-09 ರ ಅವಧಿಯಲ್ಲಿ ಖಾಸಗಿ ವಿಮಾನಯಾನ ಸಂಸ್ಥೆಗಳಿಗೆ ಲಾಭದಾಯಕ ಏರ್ ಇಂಡಿಯಾ ರೂಟ್ಸ್‌ಗಳನ್ನು ವಿತರಿಸಲು ಅನುಕೂಲ ಮಾಡಿಕೊಟ್ಟರು" ಎಂದು ಜಾರಿ ನಿರ್ದೇಶನಾಲಯ ವಿಶೇಷ ನ್ಯಾಯಾಲಯ ಹೇಳಿತ್ತು.
ಯುಪಿಎ ಆಡಳಿತದಲ್ಲಿ ಏರ್ ಇಂಡಿಯಾ ಮತ್ತು ಇಂಡಿಯನ್ ಏರ್‌ಲೈನ್ಸ್ ವಿಲೀನದ ನಂತರ ರೂಪುಗೊಂಡ ನ್ಯಾಷನಲ್ ಏವಿಯೇಷನ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (ಎನ್‌ಎಸಿಐಎಲ್) ನಿಂದ ವಿಮಾನಗಳ ಗುತ್ತಿಗೆಯಲ್ಲಿ ಅಕ್ರಮಗಳು ನಡೆದಿದೆ ಎಂದು ಆರೋಪಿಸಲಾಗಿದೆ. ಈ ಪ್ರಕರಣದಲ್ಲಿ 'ಯಾವುದೇ ತಪ್ಪಿನ ಪುರಾವೆಗಳಿಲ್ಲ' ಎಂದು ಸಿಬಿಐ ಅಧಿಕಾರಿಗಳು ಹೇಳಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.

2017 ರಲ್ಲಿ ಸುಪ್ರೀಂ ಕೋರ್ಟ್‌ನ ಆದೇಶದ ನಂತರ ಈ ಆರೋಪಗಳ ತನಿಖೆಯನ್ನು ಕೇಂದ್ರೀಯ ತನಿಖಾ ದಳ (ಸಿಬಿಐ) ವಹಿಸಿಕೊಂಡಿತ್ತು. ಏರ್ ಇಂಡಿಯಾ ಕಡಿಮೆ ಪ್ರಯಾಣಿಕರಿಂದ ಗಮನಾರ್ಹ ನಷ್ಟ ಅನುಭವಿಸುತ್ತಿದ್ದ ಹೊರತಾಗಿಯೂ ಹೆಚ್ಚಿನ ಸಂಖ್ಯೆಯ ವಿಮಾನಗಳನ್ನು ಗುತ್ತಿಗೆಗೆ ತೆಗೆದುಕೊಳ್ಳುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಇದರ ಪರಿಣಾಮವಾಗಿ ಖಾಸಗಿ ಕಂಪನಿಗಳಿಗೆ ಆರ್ಥಿಕ ಲಾಭ ಮತ್ತು ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗಿದೆ ಎಂದು ಎಫ್‌ಐಆರ್‌ನಲ್ಲಿ ಆರೋಪಿಸಲಾಗಿದೆ.
"ಏರ್ ಇಂಡಿಯಾ, ಖಾಸಗಿ ಕಂಪನಿಗಳಿಗೆ ಅನುಕೂಲವಾಗುವಂತೆ 2006 ರಲ್ಲಿ ಐದು ವರ್ಷಗಳ ಅವಧಿಗೆ ನಾಲ್ಕು ಬೋಯಿಂಗ್ 777 ಗಳನ್ನು ಡ್ರೈ ಲೀಸ್‌ಗೆ ನೀಡಿತ್ತು. ಇದರ ಪರಿಣಾಮವಾಗಿ, 2007-09ರ ಅವಧಿಯಲ್ಲಿ ಐದು ಬೋಯಿಂಗ್ 777 ಮತ್ತು ಐದು ಬೋಯಿಂಗ್ 737 ವಿಮಾನಗಳು ಸುಮಾರು 840 ಕೋಟಿಗಳಷ್ಟು ನಷ್ಟಕ್ಕೆ ಕಾರಣವಾಗಿವೆ" ಎಂದು ಎಫ್‌ಐಆರ್ ಆರೋಪಿಸಿದೆ.












Click it and Unblock the Notifications