Air India-BIAL: 'ಏರ್ ಇಂಡಿಯಾ ವಿಮಾನಯಾನ ಹಬ್' ಆಗಲಿದೆ ಬೆಂಗಳೂರು ಏರ್‌ಪೋರ್ಟ್
ಬೆಂಗಳೂರು, ಏಪ್ರಿಲ್ 09: ಬೆಂಗಳೂರು ಇಂಟರ್‌ನ್ಯಾಶನಲ್ ಏರ್‌ಪೋರ್ಟ್ ಲಿಮಿಟೆಡ್ (BIAL) ಮತ್ತು ಏರ್ ಇಂಡಿಯಾ (Air India) ಮಧ್ಯೆ ಪ್ರಮುಖ ಒಪ್ಪಂದ ಏರ್ಪಟ್ಟಿದೆ. ಈ ಒಪ್ಪಂದಕ್ಕೆ ಎರಡು ಕಂಪನಿಗಳ ಮುಖ್ಯಸ್ಥರು ಸಹಿ ಹಾಕಿದ್ದಾರೆ.
ರಾಜಧಾನಿ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ) 'ಏರ್ ಇಂಡಿಯಾ ವಿಮಾನಯಾನ ಕೇಂದ್ರ'ವಾಗಿ ಅಭಿವೃದ್ಧಿಪಡಿಸಲು ಈ ಒಪ್ಪಂದಕ್ಕೆ ನಡೆದಿರುವ ಬಗ್ಗೆ BIAL ಕಳೆದ ಸೋಮವಾರ ಮಾಹಿತಿ ನೀಡಿದೆ.

ವಿಮಾನಯಾನ ಕೇಂದ್ರ ಮೀಸಲಾದ ದೇಶೀಯ ವಿಶ್ರಾಂತಿ ಕೋಣೆ ನಿರ್ಮಾಣ, ಅಂತಾರಾಷ್ಟ್ರೀಯ ಸೇವೆಗಳನ್ನು ಮತ್ತಷ್ಟು ವಿಸ್ತರಿಸುವ ಯೋಜನೆ, ಏರ್ ಇಂಡಿಯಾ, ದುರಸ್ತಿ, ಪರೀಕ್ಷೆಗಳು ಸೇರಿದಂತೆ ಹಲವು ನಿರ್ವಹಣೆಗಳು ಬೆಂಗಳೂರಿನಲ್ಲಿಯೇ ನಡೆಯಲಿವೆ.
ಏರ್ ಇಂಡಿಯಾ ಸೇವೆಗಳ ನಿರ್ವಹಣೆ
ಏರ್ ಇಂಡಿಯಾ (ಇತರ ಟಾಟಾ ಗ್ರೂಪ್ ಏರ್‌ಲೈನ್ಸ್ - AIX ಮತ್ತು ವಿಸ್ತಾರಾ ಒಳಗೊಂಡ) ಹಾಗೂ ಬಿಐಎಎಲ್ ಮಧ್ಯೆ ಮುಂದಿನ ಐದು ವರ್ಷಗಳವರೆಗೆ ಈ ಒಪ್ಪಂದ ಇರಲಿದೆ. ಈ ಮೂಲಕ ಏರ್ ಇಂಡಿಯಾವು ಅಂತಾರಾಷ್ಟ್ರೀಯ ವಿಮಾನ ಸೇವೆ, ಅತ್ಯುತ್ತಮ ಕಾರ್ಯಾಚರಣೆ, ದಕ್ಷತೆ ಮತ್ತು ಪ್ರಯಾಣಿಕರ ಉತ್ತಮ ಅನುಭವ ನೀಡಲು ಈ ಒಪ್ಪಂದವು ಹೆಚ್ಚು ಪರಿಣಾಮಕಾರಿಯಾಗಲಿದೆ ಎಂದ ಕಂಪನಿಯು ಭಾವಿಸಿದೆ.
5 ವರ್ಷದವರೆಗೆ ಒಪ್ಪಂದ
ಟಾಟಾ ಗ್ರೂಪ್ ನ ಪರಿಪೂರ್ಣ ಮಾಲೀಕತ್ವದಲ್ಲಿರುವ 'ಏರ್ ಇಂಡಿಯಾ' AIX ಕನೆಕ್ಟ್ ಮತ್ತು ಏರ್ ಇಂಡಿಯಾ ಎಕ್ಸ್‌ಪ್ರೆಸ್ ಸಂಪೂರ್ಣ ಸ್ವಾಮ್ಯದ ಅಂಗ ಸಂಸ್ಥೆಗಳಾಗಿವೆ. ಇತ್ತ ವಿಸ್ತಾರ ಏರ್‌ಲೈನ್ಸ್ ಉದ್ಯಮ ಟಾಟಾ ಗ್ರೂಪ್ ಮತ್ತು ಸಿಂಗಾಪುರ್ ಏರ್‌ಲೈನ್ಸ್ ಮಧ್ಯೆದಲ್ಲಿ ಜಂಟಿ ಉದ್ಯಮವಾಗಿ ಬೆಳೆಯುತ್ತಿದೆ. ವಿಸ್ತಾರಾ ಪ್ರಸ್ತುತ ಏರ್ ಇಂಡಿಯಾದಲ್ಲಿ ವಿಲೀನಗೊಳ್ಳಲಿದೆ. ಇವುಗಳನ್ನು ಮುಂದಿನ ಐದು ವರ್ಷಗಳ ವರೆಗೆ ಬಿಐಎಎಲ್ ನಿರ್ವಹಿಸಲಿದೆ ಎಂದು ಜಂಟಿ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಶೇ. 30ರಷ್ಟು ಪಾಲು ಹೊಂದಿರುವ ಏರ್‌ಇಂಡಿಯಾ
ಹಾಲಿ ಬೆಂಗಳೂರು ವಿಮಾನ ನಿಲ್ದಾಣವು ಸದ್ಯಕ್ಕೆ ಒಂದು ವಾರಕ್ಕೆ ಅಂದಾಜು 5,145 ವಿಮಾನಗಳನ್ನು ನಿರ್ವಹಣೆ ಮಾಡುತ್ತಿದೆ. ಟಾಟಾ ಸಮೂಹದ ವಿಮಾನಯಾನ ಸಂಸ್ಥೆಗಳ 1,538 ವಿಮಾನಗಳು ಇಲ್ಲಿಂದ ಸೇವೆ ನೀಡುತ್ತವೆ. ಅಂದರೆ ಬೆಂಗಳೂರು ವಿಮಾನ ಜಾಲದಲ್ಲಿ ಶೇಕಡಾ 30ರಷ್ಟು ಪಾಲು ಏರ್ ಇಂಡಿಯಾ ಹೊಂದಿದೆ.
ಈ ಕಾರಣದಿಂದಲೇ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನವನ್ನು 'ಏರ್ ಇಂಡಿಯಾ ವಿಮಾನಯಾನ ಕೇಂದ್ರ (ಹಬ್)' ಆಗಿ ಮಾಡಲು ನಿರ್ಧರಿಸಲಾಗಿದೆ. ಈ ಏರ್‌ಪೋರ್ಟ್‌ನಲ್ಲಿ ಏರ್ ಇಂಡಿಯಾ ಮತ್ತು ವಿಸ್ತಾರಾ ಏರ್‌ಲೈನ್ಸ್‌ಗಳು ಕೆಲವು ಸೇವೆ ಪರಿಚಯಿಸುವ ಮೂಲಕ ತಮ್ಮ ವಿಮಾನಯಾನವನ್ನು ಬಲಪಡಿಸಲು ಮುಂದಾಗಿವೆ.
ರಾಜ್ಯ ಸರ್ಕಾರದ ಜತೆ ಏರ್ ಇಂಡಿಯಾ ಒಪ್ಪಂದ
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಸಮಗ್ರ ಎಂಆರ್‌ಒ ಸೌಲಭ್ಯ ಸ್ಥಾಪನೆ ಏರ್ ಇಂಡಿಯಾ ಸಂಸ್ಥೆ ಕರ್ನಾಟಕ ರಾಜ್ಯ ಸರ್ಕಾರದೊಂದಿಗೆ ತಿಳುವಳಿಕೆ ಒಪ್ಪಂದಕ್ಕೆ (ಎಂಒಯು) ಸಹಿ ಹಾಕಿದೆ. ಈ ಮೂಲಕ ರಾಜಧಾನಿಯಲ್ಲಿ ಅಸ್ತಿತ್ವ ಬಲಪಡಿಸುವ ಏರ್ ಇಂಡಿಯಾದ ಬದ್ಧತೆಯನ್ನು ಈ ಒಪ್ಪಂದಗಳು ಪ್ರತಿನಿಧಿಸುತ್ತವೆ.
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಏರ್ ಇಂಡಿಯಾದಂತೆ ಇಂಡಿಗೋ ವಿಮಾನ ವಿಮಾನಯಾನವು ಬಹುದೊಡ್ಡ ಪಾಲನ್ನು ಹೊಂದಿದೆ. ಇಲ್ಲಿ ಇಂಡಿಗೋ ಶೇಕಡಾ 51ರಷ್ಟು ಪಾಲು ಹೊಂಡಿದೆ.












Click it and Unblock the Notifications