ಜಸ್ಟ್ 28, ಸುರಸುಂದರನಿಗೆ ಸಿಕ್ಕಿತು ಸಿರುಗುಪ್ಪ 'ಕೈ' ಟಿಕೆಟ್
Recommended Video

ಬಳ್ಳಾರಿ, ಏಪ್ರಿಲ್ 16: 'ಜಸ್ಟ್ 28 ಏಜ್. ನಾನಿನ್ನೂ ಬ್ಯಾಚ್ಯುಲರ್ ಸಾರ್. ಎಲೆಕ್ಷನ್ ಗೆ ಸ್ಪರ್ಧೆ ಮಾಡುತ್ತಿರುವೆ. ಗೆಲ್ಲುವ ವಿಶ್ವಾಸವಿದೆ. ಕಾಂಗ್ರೆಸ್ ಪಕ್ಷ, ಮುಖಂಡರು ನನ್ನ ಮೇಲಿಟ್ಟಿರುವ ನಂಬಿಕೆ - ಭರವಸೆಗಳನ್ನು ಉಳಿಸಿಕೊಳ್ಳುವ ನಂಬಿಕೆ ಇದೆ'.
- ಇದು ಸಿರುಗುಪ್ಪ ಪರಿಶಿಷ್ಟ ಪಂಗಡ ಮೀಸಲು ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಆಗಿರುವ ಬಿ. ಮುರಳಿಕೃಷ್ಣ ಅವರ ಮಾತು. ಬೆಂಗಳೂರಿನ ಜೈನ್ ಯೂನಿವರ್ಸಿಟಿಯಲ್ಲಿ ಬಿಬಿಎಂ ಪದವಿ ಓದಿರುವ ಇವರು, ಸಾರ್ವಜನಿಕ ಸೇವಾ ಉತ್ಸಾಹದಿಂದಲೇ ನೇರವಾಗಿ ರಾಜಕೀಯಕ್ಕೆ ಪದಾರ್ಪಣೆ ಮಾಡಿದ್ದಾರೆ.
ಸೋದರಮಾವ, ಕೂಡ್ಲಿಗಿಯ ಶಾಸಕ ಬಿ. ನಾಗೇಂದ್ರ ಅವರ ಗರಡಿಯಲ್ಲಿ ರಾಜಕೀಯದ ಪಟ್ಟುಗಳನ್ನು ಕಲಿಯುತ್ತಿರುವ ಇವರು, ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ತಂದೆ ಬಿ. ಕೃಷ್ಣಪ್ಪ, 59, ಬೆಸ್ಕಾಂನಲ್ಲಿ ಇಂಜಿನಿಯರ್. ಹಿರಿಯ ಅಧಿಕಾರಿ. ತಾಯಿ ಬಿ. ರಾಜೇಶ್ವರಿ, ಬಿಎ ಪದವೀಧರೆ. ಸೋದರ ವಂಶಿಕೃಷ್ಣಗೆ 24 ವರ್ಷ, ಬೆಂಗಳೂರಿನಲ್ಲಿ ಎಂಬಿಎ ಪದವಿ ಪಡೆದು, ಸ್ವಂತ ವ್ಯವಹಾರ ಪ್ರಾರಂಭಿಸಿದ್ದಾರೆ.
ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್
ಬಾಲ್ಯದಿಂದಲೂ ಜನಸೇವೆ, ಜನಪ್ರತಿನಿಧಿಗಳತ್ತ ಆಕರ್ಷಣೆ ಹೊಂದಿದ್ದ ಮುರಳಿಕೃಷ್ಣ, ಹಾಲಿ ಶಾಸಕರಿಗೆ ಟಿಕೆಟ್ ತಪ್ಪಿಸಿದ ಆರೋಪಕ್ಕೂ ಗುರಿಯಾಗಿದ್ದಾರೆ. ಸಿರುಗುಪ್ಪದ ಕಾಂಗ್ರೆಸ್ ಶಾಸಕ ಬಿ.ಎಂ. ನಾಗರಾಜ್ ಅವರು 'ಮತ್ತೊಮ್ಮೆ ಸ್ಪರ್ಧಿಸುವುದಿಲ್ಲ' ಎನ್ನುತ್ತಿದ್ದಂತೆಯೇ ಚುನಾವಣೆಯಲ್ಲಿ ಸ್ಪರ್ಧಿಸಲು ಆಸಕ್ತಿ ತೋರಿದ್ದ ಯುವ ಮುಖಂಡ ಬಿ. ಮುರಳಿಕೃಷ್ಣ ಅವರತ್ತ ಕಾಂಗ್ರೆಸ್ಸಿನವರ ಚಿತ್ತ ಹರಿದಿತ್ತು.
ಕೊನೆಯದಾಗಿ ಟಿಕೆಟ್ ಗಿಟ್ಟಿಸಿಯೇಬಿಟ್ಟರು. ನಾಮಪತ್ರ ಸಲ್ಲಿಸಿ, ಪ್ರಚಾರ ಆರಂಭಿಸಬೇಕಿದೆ. ಒನ್ಇಂಡಿಯಾ ಕನ್ನಡಕ್ಕಾಗಿ ಅವರು ನೀಡಿದ ಸಂದರ್ಶನ ಇಲ್ಲಿದೆ

ಪ್ರಶ್ನೆ: ರಾಜಕೀಯಕ್ಕೆ ಏಕೆ ಬರುತ್ತಿದ್ದೀರಿ?
ಮುರಳಿಕೃಷ್ಣ: ಸಮಾಜ ಸೇವೆಯ ಮೂಲಕ ಅಮೂಲಾಗ್ರ ಬದಲಾವಣೆ ತರಲು ಸಾಧ್ಯವಿದೆ. ಜನಸೇವೆಯ ಗುರಿಯೊಂದಿಗೆ ರಾಜಕೀಯ ಪ್ರವೇಶಿಸುತ್ತಿದ್ದೇವೆ.

ಪ್ರಶ್ನೆ: ಯುವಶಕ್ತಿ, ವಿದ್ಯಾವಂತರು ರಾಜಕೀಯ, ಚುನಾವಣೆಯಿಂದ ದೂರ ಸರಿಯುತ್ತಿರುವಾಗ ನೀವೇಕೆ ಇತ್ತ?
ಮುರಳಿಕೃಷ್ಣ: ವಿದ್ಯಾವಂತರು ರಾಜಕೀಯಕ್ಕೆ ಬಂದಾಗಲೇ ಸಮಾಜವನ್ನು ಸಮರ್ಥವಾಗಿ ಕಟ್ಟಲು, ಜನರ ಬೇಕು - ಬೇಡಗಳನ್ನು ಅರ್ಥ ಮಾಡಿಕೊಳ್ಳಲು ಸಾಧ್ಯ. ಪ್ರಜಾಪ್ರಭುತ್ವ ಯಶಸ್ಸು ಸಾಧಿಸಲು ವಿದ್ಯಾವಂತ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಸಕ್ರಿಯ ರಾಜಕೀಯಕ್ಕೆ ಬರಬೇಕಿದೆ.

ಪ್ರಶ್ನೆ: ನಿಮ್ಮ ಪಾಲಿಗೆ ಆದರ್ಶ ರಾಜಕಾರಣಿ ಯಾರು?
ಮುರಳಿಕೃಷ್ಣ: ಕಾಂಗ್ರೆಸ್ ಪಕ್ಷದ ತತ್ವ, ಸಿದ್ಧಾಂತ, ಆಡಳಿತ, ನಾಯಕರು ನನ್ನ ಆದರ್ಶ. ಕಾಂಗ್ರೆಸ್ ನಲ್ಲಿ ಆಂತರಿಕ ಮತ್ತು ಬಾಹ್ಯ ಪ್ರಜಾಪ್ರಭುತ್ವ ಇದೆ. ಅದೇ ಕಾರಣಕ್ಕೆ ನನ್ನಂಥ ಯುವಕರಿಗೆ ಪ್ರೋತ್ಸಾಹ ಸಿಕ್ಕಿದೆ. ಪಕ್ಷದ ನೀತಿ- ನಿಯಮಗಳು, ನಾಯಕರೇ ನನ್ನ ಆದರ್ಶ.

ಪ್ರಶ್ನೆ: ಟಿಕೆಟ್ ವಂಚಿತ ಶಾಸಕರ ಭಿನ್ನಮತ ಶಮನ ಹೇಗೆ ಮಾಡ್ತೀರಿ?
ಮುರಳಿಕೃಷ್ಣ: ನಾನು ಅನನುಭವಿ. ಪಕ್ಷದ ಹಿರಿಯ ಮುಖಂಡರು, ಪಕ್ಷದ ಎಲ್ಲರೂ ಒಟ್ಟಾಗಿ ಕೂತು ಹಾಲಿ ಶಾಸಕ, ಹಿರಿಯ ಕಾಂಗ್ರೆಸ್ಸಿಗ ಬಿ.ಎಂ.ನಾಗರಾಜ್ ಅವರ ಜೊತೆ ಚರ್ಚೆ ಮಾಡಿ, ಭಿನ್ನಮತ ಪರಿಹರಿಸಿಕೊಳ್ಳುವೆ. ಅವರೊಂದಿಗೆ ಕ್ಷೇತ್ರದಲ್ಲಿ ಪ್ರಚಾರ ನಡೆಸುವೆ. ಅವರನ್ನು ಕ್ಷೇತ್ರದ ಹಿರಿಯರನ್ನಾಗಿ ಗೌರವಿಸಿ - ಅಭಿನಂದಿಸುವೆ.

ಪ್ರಶ್ನೆ: ನಿಮಗೆ ಕ್ಷೇತ್ರದ ಪರಿಚಯ ಇದೆಯೇ?
ಮುರಳಿಕೃಷ್ಣ: ನಾನು ಬೆಂಗಳೂರಿನಲ್ಲಿ ಓದಿದ್ದರೂ ಸಿರುಗುಪ್ಪ ವಿಧಾನಸಭಾ ಕ್ಷೇತ್ರದ ಸಮಗ್ರ ಮಾಹಿತಿ ಪಡೆದಿದ್ದೇನೆ. ಹಾಲಿ ಶಾಸಕರು 'ಮತ್ತೊಮ್ಮೆ ನಾನು, ಸ್ಪರ್ಧಿಸುವುದಿಲ್ಲ' ಎಂದ ಕ್ಷಣದಿಂದಲೇ ಕ್ಷೇತ್ರದ ಅಧ್ಯಯನ ನಡೆಸಿದ್ದೇನೆ. ಪ್ರಚಾರದ ಸಂದರ್ಭದಲ್ಲಿ ಜನರೊಂದಿಗೆ ಮಾತನಾಡಿ, ಅವರ ಅವಶ್ಯಕತೆಗಳನ್ನು, ಕ್ಷೇತ್ರದ ಅಭಿವೃದ್ಧಿಗೆ ಪೂರಕ ಯೋಜನೆಗಳನ್ನು ರೂಪಿಸುತ್ತೇನೆ. ಆಸಕ್ತರು ಸಲಹೆ - ಸೂಚನೆ ನೀಡಲು ಸಂಪರ್ಕಿಸಿ : ಇ - ಮೇಲ್ ಐಡಿ[email protected]
-
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಪಿಎಂ ಇ-ಬಸ್ ಯೋಜನೆ: ಕರ್ನಾಟಕದಲ್ಲಿ ರಸ್ತೆಗಿಳಿಯಲಿವೆ 750 ಇ-ಬಸ್ಗಳು; ಮಹಾರಾಷ್ಟ್ರಕ್ಕೆ ಸಿಂಹಪಾಲು -
Bengaluru Drone Survey: ಬೆಂಗಳೂರಿನಲ್ಲಿ ಆಸ್ತಿಗಳ ಡ್ರೋನ್ ಸರ್ವೇ: ಇದರ ಉದ್ದೇಶವೇನು, ವಿರೋಧವೇಕೆ ಇಲ್ಲಿದೆ ಮಾಹಿತಿ -
ಇರಾನ್ ಸಂಘರ್ಷ: ಭಾರತದ ಪ್ರಯತ್ನಕ್ಕೆ ಫಲ, ಕೊಲ್ಲಿ ಮಾರ್ಗವಾಗಿ ಭಾರತಕ್ಕೆ ಬಂದ ಮೊದಲ ತೈಲ ಟ್ಯಾಂಕರ್ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
ಭಾರತದ ಹಡಗುಗಳಿಗೆ ಭರ್ಜರಿ ಸುದ್ದಿ ನೀಡಿದ ಇರಾನ್, ಗ್ಯಾಸ್ ಸಮಸ್ಯೆ ಇತ್ಯರ್ಥ ಸಾಧ್ಯತೆ | Operation Roaring Lion -
Swamijis: ಬಹುತೇಕ ಕಾವಿಧಾರಿ ಸ್ವಾಮೀಜಿಗಳು ಅವಿವಾಹಿತರು, ಆದರೆ ಅವರೆಲ್ಲರೂ ಬ್ರಹ್ಮಚಾರಿಗಳಲ್ಲ: ರವಿಕೃಷ್ಣ ರೆಡ್ಡಿ -
ಬೆಂಗಳೂರಿನ ಪ್ರಮುಖ ವಿದ್ಯುತ್ ಸ್ಥಾವರ ಬಂದ್; ರಾಜ್ಯದಲ್ಲಿ ವಿದ್ಯುತ್ ಕಡಿತದ ಭೀತಿ! -
ಅರಬ್ ದೇಶಗಳ ಬ್ಯಾಕಿಂಗ್ ಸೇವೆ ಮೇಲೆ ಇರಾನ್ ಸೇನೆ ದಾಳಿ ಸಾಧ್ಯತೆ ಹಿನ್ನೆಲೆ ಕಟ್ಟೆಚ್ಚರ | Operation Roaring Lion












Click it and Unblock the Notifications