ಭಾರತದ ಹಡಗುಗಳಿಗೆ ಭರ್ಜರಿ ಸುದ್ದಿ ನೀಡಿದ ಇರಾನ್, ಗ್ಯಾಸ್ ಸಮಸ್ಯೆ ಇತ್ಯರ್ಥ ಸಾಧ್ಯತೆ | Operation Roaring Lion

ಭಾರತದಲ್ಲಿ ಗ್ಯಾಸ್ ಹಾಗೂ ತೈಲ ಸಮಸ್ಯೆ ಜೋರಾಗಿದ್ದು, ಸಾಮಾನ್ಯ ಜನರು ಈಗ ನರಳುತ್ತಿದ್ದಾರೆ. ಹೋಟೆಲ್ ಸೇರಿದಂತೆ ವಿವಿಧ ವಲಯಗಳು ಈಗ ಗ್ಯಾಸ್ ಸಮಸ್ಯೆ ಪರಿಣಾಮ ಒದ್ದಾಡಿ ಹೋಗಿದ್ದು, ಹೊರ್ಮುಜ್ ಜಲಸಂಧಿ ಬಂದ್ ಆಗಿದ್ದ ಕಾರಣಕ್ಕೆ ಒದ್ದಾಟ ಜೋರಾಗಿತ್ತು. ಭಾರತವೂ ಸೇರಿ ಜಗತ್ತಿನ ಹಲವು ದೇಶಗಳ ತೈಲ ಹಡಗುಗಳ ಸಂಚಾರಕ್ಕೆ ಇರಾನ್ ಸೇನೆಯು ನಿರ್ಬಂಧ ಹೇರಿತ್ತು. ಹೊರ್ಮುಜ್ ಜಲಸಂಧಿ ಬಂದ್ ಆಗಿದ್ದ ಹಿನ್ನೆಲೆ ಭಾರತಕ್ಕೆ ಬರುತ್ತಿದ್ದ ಕಚ್ಚಾತೈಲ ಹಾಗೂ ಗ್ಯಾಸ್ ನಿಂತು ಹೋಗಿ ಭಾರಿ ದೊಡ್ಡ ತಲೆನೋವು ಕೂಡ ಶುರುವಾಗಿದೆ. ಇಂತಹ ಸಮಯದಲ್ಲೇ ಇರಾನ್ ಭಾರತ ಮೂಲದ ಹಡಗುಗಳಿಗೆ ವಿಶೇಷ ವಿನಾಯಿತಿ ನೀಡಿ, ಹೊರ್ಮುಜ್ ಜಲಸಂಧಿ ಬಳಕೆಗೆ ಅವಕಾಶ ಕಲ್ಪಿಸಿದೆ.

ಮಧ್ಯಪ್ರಾಚ್ಯ ಒದ್ದಾಡುತ್ತಿದ್ದು, ಇದೇ ಸ್ಥಿತಿ ಮುಂದುವರಿದರೆ ಇನ್ನೇನು ಇಡೀ ಮಿಡಲ್ ಈಸ್ಟ್ ಭವಿಷ್ಯವೇ ನಾಶವಾಗುವ ಸಾಧ್ಯತೆ ಇದೆ. ಜಗತ್ತಿನ ಶೇಕಡಾ 20ಕ್ಕೂ ಹೆಚ್ಚು ಭಾಗ ಕಚ್ಚಾ ತೈಲ ಪೂರೈಕೆ ಮಾಡುವ ಹರ್ಮುಜ್ ಜಲಸಂಧಿ ಬಂದ್ ಆಗಿದೆ. ಇನ್ನೊಂದು ಕಡೆ ಕುವೈತ್, ಯುಎಇ, ಕತಾರ್ ಸೇರಿ ಅಮೆರಿಕದ ಸೇನಾ ನೆಲೆಗಳು ಇರುವ ಹಲವು ಅರಬ್ ಪ್ರದೇಶಗಳ ಮೇಲೆ ಹಿಂದೆ ಮುಂದೆ ಯೋಚಿಸದೇ ಇರಾನ್ ದಾಳಿ ನಡೆಸುತ್ತಿದೆ.

Operation Roaring Lion

ಭಾರತಕ್ಕೆ ಸಿಕ್ಕಿದೆ ಬಿಗ್ ರಿಲೀಫ್

ಹೀಗೆ ಪರಿಸ್ಥಿತಿ ಕೈಮೀರಿ ಹೋದ ಸಮಯದಲ್ಲೇ, ಇರಾನ್ ರಾಜಧಾನಿ ಮತ್ತೊಮ್ಮೆ ಸೇಡಿಗೆ ಸೇಡು ಎಂದು ಗುಡುಗಿತ್ತು. ಇದೇ ಕಾರಣಕ್ಕೆ ಭಾರತದಲ್ಲಿ ಕೂಡ ತೈಲ ಹಾಗೂ ಗ್ಯಾಸ್ ಸಮಸ್ಯೆ ಇನ್ನೂ ಹೆಚ್ಚಾಗುವ ಭಯ ಮೂಡಿತ್ತು. ಆದರೆ ಈಗ ಭಾರತ ಸರ್ಕಾರ ನಡೆಸಿದ ಸಂಧಾನ ಯಶಸ್ವಿಯಾಗಿದ್ದು, ಭಾರತದ ತೈಲ & ಗ್ಯಾಸ್ ತುಂಬಿದ ಹಡಗುಗಳು ಹೊರ್ಮುಜ್ ಜಲಸಂಧಿ ಮೂಲಕ ಸಂಚಾರ ಮಾಡಬಹುದಾಗಿದೆ ಎಂದು ಅವಕಾಶ ಕೊಟ್ಟಿದೆ ಇರಾನ್. ಸದ್ಯಕ್ಕೆ 2 ಹಡಗುಗಳ ಪ್ರವೇಶಕ್ಕೆ ಅವಕಾಶ ನೀಡಿದ್ದರೂ, ಈ ಅವಕಾಶ ಇನ್ನಷ್ಟು ಭಾರತೀಯ ಹಡಗುಗಳ ಸಂಚಾರಕ್ಕೂ ವಿಸ್ತರಣೆ ಆಗುವ ನಿರೀಕ್ಷೆ ಇದೆ.

ಭಾರತಕ್ಕೆ ಸಿಕ್ಕಿದೆ ದೊಡ್ಡ ಗೆಲುವು!

ದೆಹಲಿ ನಡೆಸಿದ ಸಂಧಾನಕ್ಕೆ ಜೈ ಎಂದಿರುವ ತೆಹ್ರಾನ್, ಭಾರತದ ತೈಲ ಟ್ಯಾಂಕರ್‌ಗಳಿಗೆ ಹಾರ್ಮುಜ್ ಜಲಸಂಧಿಯ ಮೂಲಕ ದಾರಿ ಸುಗಮಗೊಳಿಸಿದೆ. ಮಾತುಕತೆ ನಂತರ ಪುಷ್ಪಕ್ & ಪರಿಮಲ್ ಸುರಕ್ಷಿತ ಮಾರ್ಗವನ್ನು ಪಡೆದುಕೊಂಡಿದ್ದು, ಮುಂಬೈನಲ್ಲಿ ಸುರಕ್ಷಿತವಾಗಿ ಬಂದರು ತಲುಪಿವೆ. ಇದು ಅಮೆರಿಕ ಮತ್ತು ಮಿತ್ರ ದೇಶಗಳ ಕಣ್ಣು ಕೆಂಪಾಗಿಸಿದ್ದರೂ, ಭಾರತಕ್ಕೆ ಮಾತ್ರ ಮತ್ತೊಮ್ಮೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಗೆಲುವು ಸಿಕ್ಕಂತೆ ಆಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+