Get Updates
Get notified of breaking news, exclusive insights, and must-see stories!

Bengaluru Drone Survey: ಬೆಂಗಳೂರಿನಲ್ಲಿ ಆಸ್ತಿಗಳ ಡ್ರೋನ್ ಸರ್ವೇ: ಇದರ ಉದ್ದೇಶವೇನು, ವಿರೋಧವೇಕೆ ಇಲ್ಲಿದೆ ಮಾಹಿತಿ

Bengaluru Drone Survey: ಬೆಂಗಳೂರಿನಲ್ಲಿ ಹಲವು ವರ್ಷಗಳಿಂದ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವವರು ಹಾಗೂ ತಪ್ಪಾಗಿ ಆಸ್ತಿ ವಿಸ್ತೀರ್ಣ - ವಿವರ ಸಲ್ಲಿಸಿರುವವರಿಗೆ ಬಿಸಿ ಮುಟ್ಟಿಸುವ ಉದ್ದೇಶದಿಂದ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಹಲವು ಹೊಸ ಮಾರ್ಗಗಳನ್ನು ಅಳವಡಿಸಿಕೊಳ್ಳುತ್ತಿದೆ. ಇದೀಗ ಬೆಂಗಳೂರಿನಲ್ಲಿ ಆಸ್ತಿಗಳ ಡ್ರೋನ್ ಸಮೀಕ್ಷೆಯನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರ ಪ್ರಾರಂಭಿಸಿದೆ. ವೈಮಾನಿಕ ಚಿತ್ರಣ ಹಾಗೂ ಜಿಪಿಎಸ್ ಬಳಸಿಕೊಂಡು ತೆರಿಗೆ ವಂಚಕರನ್ನು ಪತ್ತೆ ಮಾಡುವ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ಆದರೆ ಇದಕ್ಕೆ ವಿರೋಧ ವ್ಯಕ್ತವಾಗುತ್ತಿದೆ.

ವಿರೋಧ ಪಕ್ಷದ ಶಾಸಕರು, ಜಿಬಿಎ ಅಡಿಯಲ್ಲಿ ಐದು ಪಾಲಿಕೆ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಆಸ್ತಿಗಳ ಸಮೀಕ್ಷೆಗೆ ಡ್ರೋನ್‌ಗಳನ್ನು ಬಳಸುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಮಾಲೀಕರು ಘೋಷಿಸಿರುವ ಕಟ್ಟಡದ ವಿಸ್ತೀರ್ಣವು ನಿಜವಾದ ಕಟ್ಟಡ ಪ್ರದೇಶಕ್ಕೆ ಹೊಂದಿಕೆಯಾಗುತ್ತದೆಯೇ ಎಂದು ತಿಳಿಯುವ ಉದ್ದೇಶದಿಂದ ಡ್ರೋನ್ ಹಾಗೂ ಜಿಪಿಎಸ್ ಸಮೀಕ್ಷೆ ನಡೆಸಲಾಗುತ್ತಿದೆ. ಬೆಂಗಳೂರಿನಲ್ಲಿ ಈ ಹಿಂದೆ ಆಸ್ತಿದಾರರಿಗೆ ಸ್ವಯಂ ಆಸ್ತಿ ವಿವರಣೆ ಘೋಷಣೆ ಮಾಡಿಕೊಳ್ಳುವುದಕ್ಕೆ ಅವಕಾಶ ನೀಡಲಾಗಿತ್ತು. ಆದರೆ, ಈ ಅವಕಾಶವನ್ನು ಹಲವು ಆಸ್ತಿದಾರರು ದುರುಪಯೋಗಪಡಿಸಿಕೊಂಡಿದ್ದರು. ಹೀಗಾಗಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಹಾಗೂ ಪ್ರಾಧಿಕಾರ ವ್ಯಾಪ್ತಿಯ ಪಾಲಿಕೆಗಳು ಸರ್ವೇ ಕಾರ್ಯಾಚರಣೆಯನ್ನು ನಡೆಸುತ್ತಿವೆ.

Bengaluru Drone Survey

Bengaluru Drone Survey: ಡ್ರೋನ್ ಸರ್ವೇಗೆ ವಿರೋಧ

ಇನ್ನು ಬೆಂಗಳೂರಿನಲ್ಲಿ ಆಸ್ತಿಗಳ ಪರಿಶೀಲನೆ ಹಾಗೂ ಡ್ರೋನ್ ಸರ್ವೇ ವಿಚಾರದಲ್ಲಿ ಜಿಬಿಎ ಅಳವಡಿಸಿಕೊಂಡಿರುವ ಕೆಲವು ಕ್ರಮಗಳಿಗೆ ವಿರೋಧ ವ್ಯಕ್ತವಾಗುತ್ತಿದೆ. ಕರ್ನಾಟಕ ವಿಧಾನಸಭೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿರುವ ಬಿಜೆಪಿ ಶಾಸಕ ಸಿ.ಕೆ. ರಾಮಮೂರ್ತಿ ಅವರು, ಇಂತಹ ಕ್ರಮವು ನಿವಾಸಿಗಳಲ್ಲಿ ಭಯವನ್ನು ಉಂಟುಮಾಡಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಇದನ್ನು 'ಆಸ್ತಿ ತೆರಿಗೆ ಭಯೋತ್ಪಾದನೆ' ಎಂದು ಹೇಳಿದ್ದಾರೆ. ಆಸ್ತಿಗಳ ಡ್ರೋನ್ ಸಮೀಕ್ಷೆಯ ನಂತರ ಬೆಂಗಳೂರಿನ ಐದು ನಗರ ಪಾಲಿಕೆಗಳು ವಿವೇಚನೆಯಿಲ್ಲದೆ ತೆರಿಗೆಯನ್ನು ಹೆಚ್ಚಿಸುತ್ತಿವೆ ಎಂದು ಆರೋಪಿಸಿದ್ದಾರೆ.

Bengaluru Drone Survey: ಡ್ರೋನ್ ಸಮೀಕ್ಷೆ ನಿಲ್ಲಿಸಲು ಆಗ್ರಹ

ಇನ್ನು ಬೆಂಗಳೂರಿನಲ್ಲಿ ಡ್ರೋನ್ ಸಮೀಕ್ಷೆಯನ್ನು ನಿಲ್ಲಿಸಬೇಕು ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಹಾಗೂ ಬಿಜೆಪಿ ಶಾಸಕರು ಆಗ್ರಹಿಸಿದ್ದಾರೆ. ವೈಮಾನಿಕ ಸಮೀಕ್ಷೆಯು ಕಟ್ಟಡಗಳು ಹೆಚ್ಚಾಗಿರುವ ಪ್ರದೇಶಗಲ್ಲಿನ ರಚನೆಗೆ ಸಂಬಂಧಿಸಿದಂತೆ ಸ್ಪಷ್ಟ ವಿವರವನ್ನು ನೀಡಲಿವೆಯೇ ಎಂದು ಆರ್‌. ಅಶೋಕ್ ಪ್ರಶ್ನೆ ಮಾಡಿದ್ದು, ಡ್ರೋನ್ ಸಮೀಕ್ಷೆಯನ್ನು ತಕ್ಷಣವೇ ನಿಲ್ಲಿಸುವಂತೆ ಒತ್ತಾಯಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಬೆಂಗಳೂರು ಅಭಿವೃದ್ಧಿ ಸಚಿವ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು, ಬೆಂಗಳೂರಿನಲ್ಲಿ ಡ್ರೋನ್ ಸಮೀಕ್ಷೆ ಸರಿಯಾಗಿಲ್ಲ ಎಂಬ ಯಾವುದೇ ಲಿಖಿತ ದೂರು ಇದ್ದರೆ, ನಗರ ಪಾಲಿಕೆಗಳು ಕ್ರಮ ಕೈಗೊಳ್ಳುತ್ತವೆ ಎಂದು ಹೇಳಿದ್ದಾರೆ.

ಮುಂದುವರಿದು ಐದು ನಗರ ಪಾಲಿಕೆಗಳು ಇಲ್ಲಿಯವರೆಗೆ ವಿವಿಧ ಆಸ್ತಿಗಳ ಸಮೀಕ್ಷೆಗಾಗಿ ಡ್ರೋನ್‌ಗಳನ್ನು ಬಳಸಿವೆ ಮತ್ತು ನಿರ್ಮಾಣ ಪ್ರದೇಶಕ್ಕೆ ಸಂಬಂಧಿಸಿದ ಅಳತೆಗಳಲ್ಲಿನ ವ್ಯತ್ಯಾಸಗಳಿಂದಾಗಿ 24,874 ಮಾಲೀಕರಿಗೆ ಶೋಕಾಸ್ ನೋಟಿಸ್‌ಗಳನ್ನು ನೀಡಲಾಗಿದೆ ಎಂದು ಡಿ.ಕೆ ಶಿವಕುಮಾರ್ ಅವರು ಮಾಹಿತಿ ನೀಡಿದ್ದಾರೆ.

ಬೆಂಗಳೂರಿನಲ್ಲಿ ಆಸ್ತಿಗಳ ಡ್ರೋನ್ ಸಮೀಕ್ಷೆ ಉದ್ದೇಶವೇನು

ಬೆಂಗಳೂರಿನಲ್ಲಿ ಆಸ್ತಿಗಳ ಡ್ರೋನ್ ಸಮೀಕ್ಷೆ ನಡೆಸಲಾಗುತ್ತಿದ್ದು, ಇದರಲ್ಲಿ ಆಸ್ತಿ ವಿವರ ತಪ್ಪು ನೀಡಿರುವವರು, ಆಸ್ತಿ ತೆರಿಗೆ ವ್ಯಾಪ್ತಿಯಿಂದ ಹೊರಗೆ ಉಳಿದವರನ್ನು ಪತ್ತೆ ಮಾಡುವುದು ಮುಖ್ಯ ಉದ್ದೇಶವಾಗಿದೆ. ಕಟ್ಟಡ ನಿರ್ಮಾಣ ಪ್ರದೇಶ, ಆಸ್ತಿ ಬಳಕೆ (ವಸತಿ vs. ವಾಣಿಜ್ಯ) ಮತ್ತು ಅನಧಿಕೃತ ನಿರ್ಮಾಣಗಳಲ್ಲಿನ ವ್ಯತ್ಯಾಸಗಳನ್ನು ಗುರುತಿಸುವ ಮೂಲಕ ಆಸ್ತಿ ತೆರಿಗೆ ವಂಚನೆಯನ್ನು ಬಹಿರಂಗಪಡಿಸುವುದು ಪ್ರಾಥಮಿಕ ಗುರಿಯಾಗಿದೆ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಕಂದಾಯ ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸಮೀಕ್ಷೆಯು ಹೆಚ್ಚಿನ ರೆಸಲ್ಯೂಶನ್ ಡ್ರೋನ್ ಚಿತ್ರಣ, 3D ಮ್ಯಾಪಿಂಗ್, LiDAR ಮತ್ತು GPS ಅನ್ನು ಬಳಸಿಕೊಳ್ಳುತ್ತದೆ, ಇದನ್ನು ನಿಖರವಾದ, ಡೇಟಾ-ಚಾಲಿತ ವಿಶ್ಲೇಷಣೆಗಾಗಿ ಹೆಚ್ಚಾಗಿ GIS ನೊಂದಿಗೆ ಸಂಯೋಜಿಸಲಾಗುತ್ತದೆ. ಇನ್ನು ಈ ಸಮೀಕ್ಷೆಯು ಪ್ರಮುಖ ತೆರಿಗೆ ವಂಚನೆಯನ್ನು ಪತ್ತೆಹಚ್ಚಲು ಕಾರಣವಾಗಿದೆ. 2026ರ ಆರಂಭದಲ್ಲಿ 13,600 ಕ್ಕೂ ಹೆಚ್ಚು ಆಸ್ತಿಗಳಿಂದ 318 ಕೋಟಿ ಆಸ್ತಿ ತೆರಿಗೆ ಬಾಕಿ ಇರುವುದು ಇದೀಗ ಬೆಳಕಿಗೆ ಬಂದಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+