ಭಾರತದಲ್ಲಿ ಬಗೆಹರಿಯಲಿದೆ ಎಲ್‌ಪಿಜಿ ಸಮಸ್ಯೆ, ನೀವು ನಮ್ಮ ಗೆಳೆಯ ಎಂದು ಕರೆದ ಇರಾನ್... Donald Trump
ಭಾರತಕ್ಕೆ ಮಧ್ಯಪ್ರಾಚ್ಯ ಭಾಗದಿಂದ ಇದೀಗ ಭಾರಿ ಭರ್ಜರಿ ಸುದ್ದಿ ಸಿಕ್ಕಿದೆ, ಭಾರತದ ಹಡಗುಗಳು & ನೌಕೆಗಳು ಹಾರ್ಮುಜ್ ಜಲಸಂಧಿಯಲ್ಲಿ ಸಿಲುಕಿ ಪರದಾಡುತ್ತಿದ್ದವು. ಅದರಲ್ಲೂ ಇರಾನ್ ಮಿಲಿಟರಿ ಈ ಭಾಗದಲ್ಲಿ ಎಂದರೆ, ಹಾರ್ಮುಜ್ ಜಲಸಂಧಿ ಮೂಲಕ ಯಾವುದೇ ತೈಲ ಹಾಗೂ ಗ್ಯಾಸ್ ಹಡಗು ಸಂಚಾರ ಮಾಡದಂತೆ ಅಡ್ಡ ಹಾಕಿದೆ. ಅಕಸ್ಮಾತ್ ಹಾರ್ಮುಜ್ ಜಲಸಂಧಿ ದಾಟಲು ಪ್ರಯತ್ನಿಸುತ್ತಿದ್ದರೆ ದೊಡ್ಡ ಮಟ್ಟದಲ್ಲಿ ದಾಳಿ ಮಾಡುತ್ತಿದೆ. ತಮ್ಮ ಮೇಲೆ ಅಮೆರಿಕ ಹಾಗೂ ಇಸ್ರೇಲ್ ದಾಳಿ ಮಾಡಿದ್ದ ಪರಿಣಾಮ ನಾವು ಈ ರೀತಿಯಾಗಿ ರಿವೇಂಜ್ ತೆಗೆದುಕೊಳ್ಳುತ್ತಿದ್ದೀವಿ ಎಂದು ಇರಾನ್ ಹೇಳುತ್ತಿದೆ. ಈ ಪರಿಸ್ಥಿತಿಯಲ್ಲಿ ಭಾರತದ ತೈಲ ಹಾಗೂ ಗ್ಯಾಸ್ ತುಂಬಿದ ಹಡಗುಗಳು ಕೂಡ ಪರದಾಡುತ್ತಿವೆ. ಆದರೆ, ಈಗ ಭಾರತಕ್ಕೆ ಸಿಕ್ಕಿದೆ ದೊಡ್ಡ ವಿನಾಯಿತಿ.
ಅಂದಹಾಗೆ ಹಾರ್ಮುಜ್ ಜಲಸಂಧಿ ಮೂಲಕ ಭಾರತೀಯ ಹಡಗುಗಳ ಸುರಕ್ಷಿತ ಸಂಚಾರಕ್ಕೆ ಇದೀಗ ಇರಾನ್ ಒಪ್ಪಿಗೆ ಸೂಚಿಸಿದೆ. ಭಾರತದ ಅಧಿಕಾರಿಗಳು ಸೇರಿದಂತೆ, ವಿದೇಶಾಂಗ ಸಚಿವರಾದ ಜೈಶಂಕರ್ ಅವರೇ ನೇರವಾಗಿ ಇರಾನ್ ಸರ್ಕಾರದ ಜೊತೆಗೆ ಮಾತುಕತೆ ನಡೆಸಿದ್ದರು. ಈ ಮಾತುಕತೆ ಸಮಯದಲ್ಲಿ ಭಾರತಕ್ಕೆ ಹಾರ್ಮುಜ್ ಜಲಸಂಧಿ ಬಳಸಲು ವಿನಾಯಿತಿ ನೀಡಬೇಕು ಎಂಬ ಮನವಿ ಮಾಡಿದ್ದರು. ಆ ಹಿನ್ನೆಲೆ ಈಗ ಭಾರತಕ್ಕೆ ಸ್ಪೆಷಲ್ ಡಿಸ್ಕೌಂಟ್ ಸಿಕ್ಕಿದ್ದು, ಭಾರತ ಮೂಲದ ತೈಲ ಹಾಗೂ ಗ್ಯಾಸ್ ಹೊತ್ತ ಹಡಗುಗಳು ಸುಲಭವಾಗಿ ಹಾರ್ಮುಜ್ ಜಲಸಂಧಿ ಮೂಲಕ ಸಂಚರಿಸಿ ಭಾರತ ತಲುಪಲಿವೆ. ಹೀಗಾಗಿ ಭಾರತಕ್ಕೆ ದೊಡ್ಡ ರಿಲೀಫ್ ಸಿಗಲಿದೆ ಈಗ.

ಭಾರತದ ಹಡಗುಗಳಿಗೆ ಸಿಕ್ಕಿದೆ ಪರ್ಮಿಷನ್!
ಪ್ರಪಂಚದ ಯಾವುದೇ ಮೂಲೆಯಲ್ಲಿ ಯುದ್ಧ ನಡೆದರೂ ಅದು ನೇರವಾಗಿ ಅಥವಾ ಪರೋಕ್ಷವಾಗಿ ಇಡೀ ಜಗತ್ತಿನ ಮೇಲೆ ಪರಿಣಾಮ ಬೀರುತ್ತದೆ. ಆದರೆ ಈ ವಿಚಾರದಲ್ಲಿ ಭಾರತ ಮಾತ್ರ ಜಾಣ ನಡೆ, ಉತ್ತಮ ಆಯ್ಕೆ ಮೂಲಕ ಸಮಸ್ಯೆಗಳನ್ನು ಸರಿ ಮಾಡುತ್ತಾ ಇದೆ ಎಂಬುದು ಗಮನಾರ್ಹ. ಅದರಲ್ಲೂ ಈಗ ಇರಾನ್ ಮತ್ತು ಅಮೆರಿಕ ನಡುವೆ ದೊಡ್ಡ ಮಟ್ಟದಲ್ಲಿ ಕದನ ನಡೆಯುತ್ತಾ, ಮಧ್ಯಪ್ರಾಚ್ಯವೇ ಬೆಂಕಿಯ ಕುಲುಮೆಯಲ್ಲಿ ಬೆಂದು ಹೋಗುತ್ತಿದೆ.
ಹೀಗಾಗಿ ಪ್ರಪಂಚದ ಮೂಲೆ ಮೂಲೆಯಲ್ಲೂ ಹಲವು ಸಮಸ್ಯೆ ಎದುರಾಗಿರುವ ಸಮಯದಲ್ಲಿ, ಭಾರತ ಸರ್ಕಾರ ಇರಾನ್ ಜೊತೆಗೆ ಚರ್ಚೆ ಮಾಡಿದ್ದು ಹಾರ್ಮುಜ್ ಜಲಸಂಧಿ ಮೂಲಕ ಭಾರತೀಯ ಹಡಗುಗಳ ಸುರಕ್ಷಿತ ಸಂಚಾರಕ್ಕೆ ಇದೀಗ ಹೊಸ ವ್ಯವಸ್ಥೆಯನ್ನ ಮಾಡಿಕೊಂಡಿದೆ. ಈ ಬಗ್ಗೆ ಖುದ್ದು ಇರಾನ್ ಕೂಡ ತಿಳಿಸಿದ್ದು, ಭಾರತ ನಮ್ಮ ಸ್ನೇಹಿತ ರಾಷ್ಟ್ರವಾಗಿರುವ ಕಾರಣ ಭಾರತದ ಹಡಗುಗಳಿಗೆ ವಿನಾಯಿತಿ ಇದೆ ಎಂದಿದೆ. ಹೀಗಾಗಿ ಭಾರತೀಯರಿಗೆ ಈಗ ಯುದ್ಧದ ನಡುವೆ ರಿಲೀಫ್ ಸಿಕ್ಕಂತೆ ಆಗಿದ್ದು, ಎಲ್‌ಪಿಜಿ ಸಮಸ್ಯೆ ಬಗೆಹರಿಯುವ ನಿರೀಕ್ಷೆ ಮೂಡಿದೆ.












Click it and Unblock the Notifications