ಇರಾನ್ ವಿರುದ್ಧ ಮತ್ತಷ್ಟು ದಾಳಿಗೆ ಸಿದ್ಧವಾದ ಇಸ್ರೇಲ್, ಹೊಸ ತಂತ್ರದ ಮೊರೆ | Operation Roaring Lion
ಇರಾನ್ ವಿರುದ್ಧ ಈ ಬಾರಿ ಯುದ್ಧ ಗೆಲ್ಲಬೇಕು, ಆ ಮೂಲಕ ಮಧ್ಯಪ್ರಾಚ್ಯ ಭಾಗದಲ್ಲಿ ತಮ್ಮ ವಿರುದ್ಧ ಯಾವುದೇ ದೇಶ ಕಿರಿಕ್ ಮಾಡದಂತೆ ಭವಿಷ್ಯ ರೂಪಿಸಬೇಕು ಎಂಬುದು ಅಮೆರಿಕ ಹಾಗೂ ಇಸ್ರೇಲ್ ಪ್ಲಾನ್ ಆಗಿದೆ. ಅದರಲ್ಲೂ ಇರಾನ್ ದೇಶ ಪರಮಾಣು ಬಾಂಬ್ ತಯಾರಿಸುತ್ತಿದೆ ಎಂಬ ಕಾರಣಕ್ಕೆ, ಭಾರಿ ದೊಡ್ಡ ಮಟ್ಟದಲ್ಲಿ ದಾಳಿ ಶುರು ಮಾಡಿದ್ದ ಇಸ್ರೇಲ್ ಮತ್ತು ಅಮೆರಿಕ ಈಗಾಗಲೇ ಹಲವಾರು ನಾಯಕರ ಹತ್ಯೆ ಮಾಡಿದ್ದಾರೆ. ಹೀಗಿದ್ದರೂ ಇರಾನ್ ಮಾತ್ರ ಯುದ್ಧ ಬಿಟ್ಟು ಶರಣಾಗುವ ಹಂತಕ್ಕೆ ಇನ್ನೂ ಬಂದಿಲ್ಲ, ಇಂತಹ ಸಮಯದಲ್ಲಿ ಇರಾನ್ ವಿರುದ್ಧ ಮತ್ತಷ್ಟು ದಾಳಿಗೆ ಸಿದ್ಧವಾದ ಇಸ್ರೇಲ್ ಸೇನೆ ಹೊಸ ತಂತ್ರದ ಮೊರೆ ಹೋಗಿದೆ.
ಇಸ್ರೇಲ್ ಸೇನೆಗೆ ಈಗ ಇರಾನ್ ವಿರುದ್ದ ಹೊಸ ತಂತ್ರ ಉಪಯೋಗಿಸಿ ಯುದ್ಧ ಮಾಡಬೇಕು ಎಂಬುದು ಅರ್ಥ ಆಗಿದೆ. ಅದರಲ್ಲೂ ಇಸ್ರೇಲ್ ಸೇನೆ ನೇರವಾಗಿ ಇರಾನ್ ಮೇಲೆ ದಾಳಿ ಮಾಡುವ ಬದಲಾಗಿ, ಇರಾನ್ ದೇಶದ ದೊಡ್ಡ ದೊಡ್ಡ ನಾಯಕರ ಕಥೆಯನ್ನೇ ಮುಗಿಸಿದರೆ ಕೆಲಸ ಸುಲಭ ಎಂಬುದು ಅರ್ಥ ಆಗಿದೆ. ಅದರಲ್ಲೂ ಪ್ರಮುಖವಾಗಿ ಪರಮಾಣು ವಿಜ್ಞಾನಿಗಳು ಒಬ್ಬೊಬ್ಬರಾಗಿ ಜೀವ ಬಿಡುತ್ತಿದ್ದಾರೆ, ಈ ಮೂಲಕ ಇರಾನ್ ದೇಶದ ಪರಮಾಣು ಕಾರ್ಯಕ್ರಮ ನಿಲ್ಲಿಸುವುದು ಕೂಡ ಇಸ್ರೇಲ್ ಮಾಡಿರುವ ಪ್ಲಾನ್ ಆಗಿದೆ. ಹೀಗಾಗಿ ಈಗ ಮೊದಲು ಇರಾನ್ ದೇಶದ ನೂತನ ಸರ್ವಾಧಿಕಾರಿ ಮೊಜ್ತಬಾ ಖಮೇನಿ ಕಥೆ ಮುಗಿಸಲು ಸ್ಕೆಚ್ ಹಾಕಲಾಗಿದೆ ಎನ್ನಲಾಗಿದೆ. ಇದಕ್ಕೆ ಬೇಕಾದ ಎಲ್ಲಾ ತಯಾರಿ ಕೂಡ ಸಾಗಿದ್ದು, ಈ ಕಾರಣಕ್ಕೆ ಇರಾನ್ ಕೂಡ ತನ್ನ ದೇಶದ ನಾಯಕನ ರಕ್ಷಣೆಗೆ ಒದ್ದಾಡುತ್ತಿದೆ.

ಇಸ್ರೇಲ್‌ಗೆ ಅಕ್ಕಪಕ್ಕದ ದೇಶಗಳ ನೆರವು
ಇರಾನ್ ದೇಶದ ನಾಯಕರು ಅಕ್ಕಪಕ್ಕದ ದೇಶಗಳನ್ನು ಎದುರು ಹಾಕಿಕೊಂಡು ಬಾಳುತ್ತಿದ್ದರು, ಈಗ ಅದು ಕೂಡ ದೊಡ್ಡ ಮಟ್ಟದಲ್ಲಿ ಇರಾನ್ ದೇಶಕ್ಕೆ ಈ ಯುದ್ಧದಲ್ಲಿ ಹಿನ್ನಡೆ ಉಂಟು ಮಾಡುತ್ತಾ ಇದೆ. ಹಾಗೇ ಅಮೆರಿಕ ಕೂಡ ಇರಾನ್ ಶತ್ರುಗಳನ್ನು ಒಂದಾಗಿಸಿಕೊಂಡು ದಾಳಿ ಮಾಡುತ್ತಿದ್ದು, ಈ ಹಿನ್ನೆಲೆ ಮಧ್ಯಪ್ರಾಚ್ಯ ಒಡೆದ ಮನೆಯಂತಾಗಿದೆ. ಇಷ್ಟೆಲ್ಲದರ ನಡುವೆಯೇ ನೇರವಾಗಿ ಇರಾನ್ ದೇಶದ ಒಳಗಡೆ ನುಗ್ಗಲು ಇಸ್ರೇಲ್ ಹೊಸ ತಂತ್ರ ಹೂಡುತ್ತಿದೆ. ಇರಾನ್ ಅಕ್ಕಪಕ್ಕ ಇರುವ ದೇಶಗಳ ನಾಯಕರ ಬಳಿ ಮಾತುಕತೆ ನಡೆಸಿ, ಆ ಮೂಲಕ ಇರಾನ್ ರಾಜಧಾನಿ ಮೇಲೆ ಭೂಸೇನೆ ಮೂಲಕ ಕಾರ್ಯಾಚರಣೆ ನಡೆಸುವ ಪ್ಲಾನ್ ಕೂಡ ಜೋರಾಗಿದೆ. ಆದರೆ ಇರಾನ್ ರಾಜಧಾನಿ ತೆಹ್ರಾನ್ ಮೇಲೆ ಭೂದಾಳಿ ಅಷ್ಟು ಸುಲಭ ಅಲ್ಲ ಎಂದು ತಜ್ಞರು ಹೇಳುತ್ತಿದ್ದಾರೆ.
ಇರಾನ್ ಪರಮಾಣು ವಿಜ್ಞಾನಿಯ ಹತ್ಯೆ
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಈ ಬಗ್ಗೆ ಮಾತನಾಡಿದ್ದು, ಇರಾನ್ ಪರಮಾಣು ಶಕ್ತಿ ಅಭಿವೃದ್ಧಿಗೆ ಸಂಬಂಧಿಸಿದ ಪ್ರಮುಖ ವಿಜ್ಞಾನಿ ಇಸ್ರೇಲ್ ದಾಳಿಯಲ್ಲಿ ಹತ್ಯೆ ಆಗಿರುವುದನ್ನು ತಿಳಿಸಿದ್ದಾರೆ. ಫೆಬ್ರವರಿ 28 ಶನಿವಾರ ಆರಂಭ ಆದ ಯುದ್ಧ ಬಳಿಕ ಮೊದಲನೇ ಬಾರಿ ಮಾಧ್ಯಮಗಳ ಎದುರು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಮಾತನಾಡಿ, ದಾಳಿ ಇರಾನ್ ಸೇನೆ ಹಾಗೂ ಭದ್ರತಾ ವ್ಯವಸ್ಥೆಗೆ ಹೊಡೆತ ನೀಡಿದೆ ಎಂದಿದ್ದಾರೆ. ಹೀಗೆ ಇರಾನ್ ದೇಶದಲ್ಲಿ ರಾಜಕೀಯ ನಾಯಕರ ಜೊತೆಗೆ ವಿಜ್ಞಾನಿಗಳು ಹಾಗೂ ಅಧಿಕಾರಿಗಳೂ ಜೀವ ಬಿಡುತ್ತಿದ್ದಾರೆ.
ಜಲಸಂಧಿ ಸಮಸ್ಯೆಗೆ ಸಿಕ್ಕಿಲ್ಲ ಮುಕ್ತಿ
ಹಾರ್ಮುಜ್ ಜಲಸಂಧಿ ಮೂಲಕ ಯಾವುದೇ ತೈಲ & ಗ್ಯಾಸ್ ಹಡಗುಗಳು ಸಂಚಾರ ಮಾಡದಂತೆ ಅಡ್ಡ ಹಾಕಿದೆ. ಅಕಸ್ಮಾತ್ ಹಾರ್ಮುಜ್ ಜಲಸಂಧಿ ದಾಟಲು ಪ್ರಯತ್ನಿಸುತ್ತಿದ್ದರೆ, ದೊಡ್ಡ ಮಟ್ಟದಲ್ಲಿ ದಾಳಿ ಮಾಡುತ್ತಿದೆ. ತಮ್ಮ ಮೇಲೆ ಅಮೆರಿಕ & ಇಸ್ರೇಲ್ ದಾಳಿ ಮಾಡಿದ್ದ ಪರಿಣಾಮ ನಾವು ಈ ರೀತಿಯಾಗಿ ರಿವೇಂಜ್ ತೆಗೆದುಕೊಳ್ಳುತ್ತಿದ್ದೀವಿ ಎಂದು ಇರಾನ್ ಹೇಳುತ್ತಿದೆ. ಹೀಗಿದ್ದಾಗ ಇಸ್ರೇಲ್ ಕೂಡ ದೊಡ್ಡ, ಘೋರ ದಾಳಿಗೆ ಸಜ್ಜಾಗಿದೆ ಈಗ.












Click it and Unblock the Notifications