Arecanut Price: ಶಿವಮೊಗ್ಗ ಮಾರುಕಟ್ಟೆಯಲ್ಲಿ ಕ್ವಿಂಟಾಲ್ ಅಡಿಕೆ ಧಾರಣೆ ಎಷ್ಟಿದೆ?: ಇಲ್ಲಿದೆ ಮಾರ್ಚ್ 13ರ ದರಪಟ್ಟಿ
Arecanut Price: ಮಲೆನಾಡಿನ ಹೆಬ್ಬಾಗಿಲು ಅಂತಲೇ ಕರೆಸಿಕೊಳ್ಳುವ ಶಿವಮೊಗ್ಗ ಜಿಲ್ಲೆಯಲ್ಲಿ ನಿನ್ನೆಗೆ ಹೋಲಿಕೆ ಮಾಡಿದರೆ ಇಂದು (ಮಾರ್ಚ್ 13) ಕೆಲವು ರೀತಿಯ ಅಡಿಕೆ ಧಾರಣೆ ತುಸು ಇಳಿಕೆ ಕಂಡಿದೆ. ಹಾಗಾದ್ರೆ, ಯಾವ ಅಡಿಕೆ ಬೆಲೆ ಎಷ್ಟಿದೆ ಎನ್ನುವ ಸಂಪೂರ್ಣ ಅಂಕಿಅಂಶಗಳನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಅಡಿಕೆ ಧಾರಣೆ ಎಲ್ಲಾ ಕಡೆಗಳಲ್ಲೂ ಒಂದೇ ರೀತಿ ಇರುವುದಿಲ್ಲ. ತುಸು ವ್ಯತ್ಯಾಸ ಇರುತ್ತದೆ. ಅದರಲ್ಲೂ ರಾಜ್ಯದಲ್ಲಿ ದಾವಣಗೆರೆ ಜಿಲ್ಲೆಯ ಚನ್ನಗಿರಿ ಹಾಗೂ ಶಿವಮೊಗ್ಗ ಜಿಲ್ಲೆಯಲ್ಲಿ ದೊಡ್ಡ ಮಾರುಕಟ್ಟೆಗಳಿದ್ದು, ಈ ಭಾಗಗಳ ಬೆಳೆಗಾರರು ಬೆಲೆಯನ್ನು ಗಮನಿಸಿ ಯಾವ ಮಾರುಕಟ್ಟೆಗೆ ಹಾಕಬೇಕು ಎಂದು ನಿರ್ಧರಿಸುತ್ತಾರೆ. ಯಾಕಂದ್ರೆ, ಹಾಕಿದ ಶ್ರಮಕ್ಕೆ ತಕ್ಕಂತೆ ತಕ್ಕ ಪ್ರತಿಫಲ ಅವರ ಬಯಕೆ ಆಗಿರುತ್ತದೆ. ಇಲ್ಲದಿದ್ದರೆ, ಎಲ್ಲಿ ನಷ್ಟ ಅನುಭವಿಸುತ್ತೇವೆಯೋ ಎನ್ನುವ ಆತಂಕವೂ ಕಾಡುತ್ತಿರುತ್ತದೆ. ಹಾಗಾದ್ರೆ ಇಂದು ಯಾವ ಅಡಿಕೆ ಧಾರಣೆ ಎಷ್ಟಿದೆ ಎಂದು ಇಲ್ಲಿ ಗಮನಿಸಿ.

ಶಿವಮೊಗ್ಗ ಮಾರುಕಟ್ಟೆಯಲ್ಲಿ ಸರಕು ಅಡಿಕೆ ಧಾರಣೆ (ಕ್ವಿಂಟಾಲ್)
* ಕನಿಷ್ಠ - 66,140 ರೂಪಾಯಿ
* ಗರಿಷ್ಠ - 82,509 ರೂಪಾಯಿ
ಶಿವಮೊಗ್ಗದಲ್ಲಿ ಬೆಟ್ಟೆ ಅಡಿಕೆ ಧಾರಣೆ (ಕ್ವಿಂಟಾಲ್)
* ಕನಿಷ್ಠ - 50,172 ರೂಪಾಯಿ
* ಗರಿಷ್ಠ - 61,009 ರೂಪಾಯಿ
ಶಿವಮೊಗ್ಗದಲ್ಲಿ ರಾಶಿ ಅಡಿಕೆ ಧಾರಣೆ (ಕ್ವಿಂಟಾಲ್)
* ಕನಿಷ್ಠ - 46,699 ರೂಪಾಯಿ
* ಗರಿಷ್ಠ - 54,599 ರೂಪಾಯಿ
ಶಿವಮೊಗ್ಗದಲ್ಲಿ ಗೊರಬಲು ಅಡಿಕೆ ಧಾರಣೆ (ಕ್ವಿಂಟಾಲ್)
* ಕನಿಷ್ಠ - 19,000 ರೂಪಾಯಿ
* ಗರಿಷ್ಠ - 19,000 ರೂಪಾಯಿ
ಮಾರ್ಚ್ 12ರಂದು ಅಡಿಕೆ ದಾರಣೆ ಎಷ್ಟಿತ್ತು?
ಶಿವಮೊಗ್ಗ ಮಾರುಕಟ್ಟೆಯಲ್ಲಿ ಸರಕು ಅಡಿಕೆ ಧಾರಣೆ (ಕ್ವಿಂಟಾಲ್)
* ಕನಿಷ್ಠ - 50,859 ರೂಪಾಯಿ
* ಗರಿಷ್ಠ - 91,700 ರೂಪಾಯಿ
ಶಿವಮೊಗ್ಗದಲ್ಲಿ ಬೆಟ್ಟೆ ಅಡಿಕೆ ಧಾರಣೆ (ಕ್ವಿಂಟಾಲ್)
* ಕನಿಷ್ಠ - 50,119 ರೂಪಾಯಿ
* ಗರಿಷ್ಠ - 62,910 ರೂಪಾಯಿ
ಶಿವಮೊಗ್ಗದಲ್ಲಿ ರಾಶಿ ಅಡಿಕೆ ಧಾರಣೆ (ಕ್ವಿಂಟಾಲ್)
* ಕನಿಷ್ಠ - 47,089 ರೂಪಾಯಿ
* ಗರಿಷ್ಠ - 54,869 ರೂಪಾಯಿ
ಶಿವಮೊಗ್ಗದಲ್ಲಿ ಗೊರಬಲು ಅಡಿಕೆ ಧಾರಣೆ (ಕ್ವಿಂಟಾಲ್)
* ಕನಿಷ್ಠ - 19,000 ರೂಪಾಯಿ
* ಗರಿಷ್ಠ - 40,169 ರೂಪಾಯಿ
ಭದ್ರಾವತಿಯಲ್ಲಿ ಸಿಪ್ಪೆಗೋಟು ಅಡಿಕೆ ಧಾರಣೆ (ಕ್ವಿಂಟಾಲ್)
* ಕನಿಷ್ಠ - 10,500 ರೂಪಾಯಿ
* ಗರಿಷ್ಠ - 13,000 ರೂಪಾಯಿ
ಶಿಕಾರಿಪುರದಲ್ಲಿ ರಾಶಿ ಅಡಿಕೆ ಧಾರಣೆ (ಕ್ವಿಂಟಾಲ್)
* ಕನಿಷ್ಠ - 51,780 ರೂಪಾಯಿ
* ಗರಿಷ್ಠ - 51,780 ರೂಪಾಯಿ
ಇನ್ನೇನು ಇದೀಗ ಬೇಸಿಗೆ ಆರಂಭವಾಗಿದ್ದು, ಬಿಸಿಲಿನ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲಿದೆ. ಈ ಸಮಯದಲ್ಲಿ ಗಿಡಗಳನ್ನು ರಕ್ಷಣೆ ಮಾಡುವುದೇ ಬೆಳೆಗಾರರಿಗೆ ದೊಡ್ಡ ಸವಾಲಾಗಿದೆ. ಈಗಾಗಲೇ ಬಹುತೇಕ ಭಾಗಗಳಲ್ಲಿ ರಕ್ಷಣೆ ದಾರಿಯನ್ನು ಕಂಡುಕೊಂಡಿದ್ದು, ಪ್ರತಿ ಗಿಡಕ್ಕೂ ಸುಣ್ಣ ಬಳಿದು ಗರಿ ಕಟ್ಟಿದ್ದಾರೆ. ಇಲ್ಲದಿದ್ದರೆ, ಸೂರ್ಯ ಕಿರಣಗಳ ಶಾಖಕ್ಕೆ ಬುಡದಲ್ಲಿ ಬಿರುಕು ಬಿಟ್ಟು ಗಿಡ ಹಾಳಾಗುವ ಸಾಧ್ಯತೆ ಹೆಚ್ಚಿರುತ್ತದೆ. ಈಗಾಗಲೇ ಕೆಲವೆಡೆ ಈ ಕ್ರಮ ಅನುಸರಿಸದವರ ತೋಟಗಳಲ್ಲಿ ಬೆಳೆ ನಾಶವಾದ ಉದಾಹರಣೆಗಳಿವೆ.












Click it and Unblock the Notifications