ಬೆಂಗಳೂರಿನ ಪ್ರಸಿದ್ಧ ಹೋಟೆಲ್‌ನಲ್ಲಿ ದೋಸಾ, ಚಿಕನ್ ಕರಿ ಜೊತೆ 'ಗ್ಯಾಸ್' ಶುಲ್ಕ ವಸೂಲಿ: ರೊಚ್ಚಿಗೆದ್ದ ಗ್ರಾಹಕ ಮಾಡಿದ್ದೇನು?

Bengaluru Hotel Bill: ಬೆಂಗಳೂರಿನ ಜನಪ್ರಿಯ 'ಮಿಸ್ಟರ್ ಆಂಧ್ರ ಮೀಲ್ಸ್' (Mr Andhra Meals) ಎಂಬ ಹೋಟೆಲ್‌ಗೆ ಗ್ರಾಹಕರೊಬ್ಬರು ತಿಂಡಿಗೆಂದು ಭೇಟಿ ನೀಡಿದ್ದರು. ಈ ವೇಳೆ ಹೋಟೆಲ್ ಬಿಲ್‌ನಲ್ಲಿ 'ಗ್ಯಾಸ್ ಸಪ್ಲೈ ಶುಲ್ಕ' (gas supply issue) ಎಂಬ ಹೆಸರಿನಲ್ಲಿ ಹೆಚ್ಚುವರಿಯಾಗಿ 30 ರೂಪಾಯಿಗಳನ್ನು ವಿಧಿಸಿರುವ ಅಚ್ಚರಿ ಘಟನೆ ನಡೆದಿದೆ. ಇದು ಇದೀಗ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ.

ಗ್ರಾಹಕರು ತಾವು ತಂಗಿದ್ದ ಪಿಜಿಯಲ್ಲಿ (PG) ಆಹಾರದ ಕೊರತೆಯಿದ್ದ ಕಾರಣ ಹೋಟೆಲ್‌ಗೆ ಹೋಗಿದ್ದರು. ಅಲ್ಲಿ ಇಂತಹ ವಿಚಿತ್ರ ಶುಲ್ಕ ವಿಧಿಸಿರುವುದನ್ನು ಕಂಡು, ಇದು ಎಲ್‌ಪಿಜಿ ಕೊರತೆ ಎಂಬ ಹೆಸರು ಬಳಸಿಕೊಂಡು ನಡೆಯುತ್ತಿರುವ "ದೊಡ್ಡ ಹಗರಣ" ಎಂದು ಆರೋಪಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಬಿಲ್‌ನ ಫೋಟೋ ಹಂಚಿಕೊಂಡಿರುವ ಅವರು, ಬೆಂಗಳೂರು ಪೊಲೀಸರಿಗೆ ದೂರು ನೀಡುವಂತೆ ಟ್ಯಾಗ್ ಮಾಡಿ, ಹೋಟೆಲ್‌ಗಳು ಜನರನ್ನು ಲೂಟಿ ಮಾಡುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Bengaluru Hotel Bill Sparks Outrage After Gas Supply Issue Charge of 30 Added to Customer Bill

ಹೋಟೆಲ್ ಅಸೋಸಿಯೇಷನ್ ಪ್ರತಿಕ್ರಿಯೆ

ಈ ವಿವಾದದ ಬಗ್ಗೆ ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ.ರಾವ್ ಪ್ರತಿಕ್ರಿಯಿಸಿದ್ದು, ಸದರಿ ಹೋಟೆಲ್ ತಮ್ಮ ಸದಸ್ಯತ್ವವನ್ನು ಹೊಂದಿಲ್ಲ ಮತ್ತು ಈ ವಿಷಯದ ಬಗ್ಗೆ ಗಮನಹರಿಸುವುದಾಗಿ ಎಂದು ತಿಳಿಸಿದ್ದಾರೆ. ಅಲ್ಲದೆ, ಇಂತಹ ಪದ್ಧತಿಗಳನ್ನು ಕೈಬಿಡುವಂತೆ ಹೋಟೆಲ್ ಆಡಳಿತ ಮಂಡಳಿಯೊಂದಿಗೆ ಮಾತನಾಡುವುದಾಗಿ ಭರವಸೆ ನೀಡಿದ್ದಾರೆ. ಸದ್ಯ ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ಬಿಲ್‌ನಲ್ಲಿ ಆಹಾರದ ಜೊತೆಗೆ ಗ್ಯಾಸ್‌ ಶುಲ್ಕ

* ಪ್ಲೇನ್ ಪೆಸರಾ ದೋಸಾ 2 - 80 ರೂಪಾಯಿ
* ಚಿಕನ್ ಕರಿ (Half) - 120 ರೂಪಾಯಿ
* ಗ್ಯಾಸ್ (Gas Supply issue) - 30 ರೂಪಾಯಿ

ಸಾಮಾಜಿಕ ಜಾಲತಾಣದಲ್ಲಿ ಈ ವಿಷಯದ ಕುರಿತು ಚರ್ಚೆ ನಡೆಯುತ್ತಿದ್ದು, ಗ್ರಾಹಕರು ಇದನ್ನು 'ದೊಡ್ಡ ವಂಚನೆ' ಎಂದು ಕರೆದಿದ್ದಾರೆ ಮತ್ತು ಎಲ್‌ಪಿಜಿ (LPG) ಕೊರತೆಯ ಲಾಭವನ್ನು ಹೋಟೆಲ್ ಪಡೆದುಕೊಳ್ಳುತ್ತಿದೆ. ಈ ರೀತಿ ಸಾರ್ವಜನಿಕರನ್ನು ಲೂಟಿ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೀಗೆ ದೇಶದಲ್ಲಿ ಅಡುಗೆ ಅನಿಲ ಸಿಲಿಂಡರ್‌ಗಳ ಪೂರೈಕೆಯಲ್ಲಿನ ಕೊರತೆಯ ನಡುವೆಯೇ, ಭಾರತದ ಕೆಲವು ಭಾಗಗಳಲ್ಲಿನ ರೆಸ್ಟೋರೆಂಟ್‌ಗಳು ಗ್ರಾಹಕರ ಬಿಲ್‌ನಲ್ಲಿ 'ಎಲ್‌ಪಿಜಿ ಶುಲ್ಕ'ವನ್ನು ವಿಧಿಸಲು ಪ್ರಾರಂಭಿಸಿದ್ದು, ಇದರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಗಳು ವ್ಯಕ್ತವಾಗುತ್ತಿವೆ.

ಇಸ್ರೇಲ್-ಇರಾನ್ ನಡುವಿನ ಯುದ್ಧದ ಪರಿಣಾಮವಾಗಿ ಮಧ್ಯಪ್ರಾಚ್ಯದಿಂದ ಎಲ್‌ಪಿಜಿ ರವಾನೆಯಲ್ಲಿ ಉಂಟಾಗಿರುವ ಕೊರತೆಯು ಬೆಲೆ ಏರಿಕೆಗೆ ಕಾರಣವಾಗಿದೆ. ಈ ಪರಿಸ್ಥಿತಿಯಿಂದಾಗಿ ರೆಸ್ಟೋರೆಂಟ್‌ಗಳು, ಹೋಟೆಲ್‌ಗಳಿಗೆ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಪೂರೈಕೆಗೆ ಅಡ್ಡಿಯುಂಟಾಗಿದೆ. ಕರ್ನಾಟಕದ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಎಲ್‌ಪಿಜಿ ಸಿಲಿಂಡರ್ ವಿತರಣೆಯಲ್ಲಿ ವ್ಯತ್ಯಯ ಉಂಟಾಗಿದೆ. ಕೆಲವರು ಇದನ್ನೇ ನೆಪವಾಗಿ ಇಟ್ಟುಕೊಂಡು ಗ್ರಾಹಕರ ಜೇಬಿಗೆ ಕತ್ತರಿ ಹಾಕುವ ಕೆಲಸ ಮಾಡುತ್ತಿದ್ದಾರೆ ಎನ್ನುವ ಆರೋಪಗಳು ಕೇಳಿಬಂದಿವೆ.

ರೆಸ್ಟೋರೆಂಟ್ ಅಸೋಸಿಯೇಷನ್ ಹೇಳೋದೇನು?

ನ್ಯಾಷನಲ್ ರೆಸ್ಟೋರೆಂಟ್ ಅಸೋಸಿಯೇಷನ್ ಆಫ್ ಇಂಡಿಯಾ (NRAI) ಈ ಮೊದಲೇ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಅವರ ಬಳಿ ಆತಂಕ ವ್ಯಕ್ತಪಡಿಸಿತ್ತು. ಎಲ್‌ಪಿಜಿ ಪೂರೈಕೆಯ ವಿಷಯದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಇತ್ತೀಚೆಗೆ ಹೊರಡಿಸಲಾದ ನಿರ್ದೇಶನವು, ವಾಣಿಜ್ಯ ಅಡುಗೆ ಅನಿಲವನ್ನೇ ಅವಲಂಬಿಸಿರುವ ರೆಸ್ಟೋರೆಂಟ್‌ಗಳಂತಹ ಸಂಸ್ಥೆಗಳಿಗೆ ಅನುಕೂಲಕರವಾಗಿಲ್ಲ ಎಂದು ಸಂಘವು ತಿಳಿಸಿತ್ತು.

ಪತ್ರದ ಮೂಲಕ ಮನವಿ ಮಾಡಿದ್ದು, "ರೆಸ್ಟೋರೆಂಟ್ ಉದ್ಯಮವು ವಾಣಿಜ್ಯ ಎಲ್‌ಪಿಜಿ ಮೇಲೆ ಅವಲಂಬಿತವಾಗಿದೆ. ಇದರಲ್ಲಿ ಯಾವುದೇ ರೀತಿಯ ವ್ಯತ್ಯಯ ಉಂಟಾದರೂ, ಅದು ಬಹುಪಾಲು ರೆಸ್ಟೋರೆಂಟ್‌ಗಳು ಮುಚ್ಚುವಂತಹ ಪರಿಸ್ಥಿತಿಗೆ ಕಾರಣವಾಗಲಿದೆ," ಎಂದು ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+