ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರೇಮಿಗಳ ದಿನಾಚರಣೆ: ಪಿಂಕ್ ಚಡ್ಡಿಗಿಂದು ನಾಲ್ಕು ವರ್ಷ

|
Google Oneindia Kannada News

ಬೆಂಗಳೂರು, ಫೆ 14: ಇಂದು ಪ್ರೇಮಿಗಳ ದಿನಾಚರಣೆ. ಈ ಆಚರಣೆಯ ಪರ ಮತ್ತು ವಿರೋಧದ ಕೂಗಿನ ನಡುವೆ ಪ್ರೀತಿ ತನ್ನ ಅಭಿವ್ಯಕ್ತಿ ತೋಡಿಕೊಳ್ಳುವ ಆತುರದಲ್ಲಿದೆ. ಈ ಆಚರಣೆ ನಮ್ಮ ಸಂಪ್ರದಾಯಕ್ಕೆ ವಿರೋಧ ಎನ್ನುವವರು ಒಂದು ಕಡೆಯಾದರೆ ಮತ್ತು ಆಚರಣೆಗೆ ಧಕ್ಕೆ ತರಬಾರದು ಎಂದು ಪ್ರೋತ್ಸಾಹಿಸುವವರು ಇನ್ನೊಂದೆಡೆ. ಇದರೆ ಮಧ್ಯೆ ಈ ಆಚರಣೆ ಸಾಂಗವಾಗಿ ನಡೆದು ಕೊಂಡು ಬರುತ್ತಿರುವುದಂತೂ ಸತ್ಯ.

ಭಾರತದ ಸಂಸ್ಕೃತಿಯ ಸ್ವಯಂಘೋಷಿತ ಸಂರಕ್ಷಕರಾದ ಶ್ರೀರಾಮಸೇನೆ ಸಂಘಟನೆಗೂ ಪ್ರೇಮಿಗಳ ದಿನಾಚರಣೆಗೂ ಅವಿನಭಾವ ಸಂಬಂಧ. ಪ್ರತಿ ವರ್ಷ ಫೆಬ್ರವರಿ 14 ಬಂತೆಂದರೆ ಶ್ರೀರಾಮಸೇನೆ ಕಾರ್ಯಕರ್ತರು ಆಚರಣೆ ಪ್ರತಿಭಟಿಸಲು ಟೊಂಕ ಕಟ್ಟಿ ನಿಲ್ಲುತ್ತಾರೆ.

ಪ್ರೇಮಕ್ಕೆ ನಮ್ಮ ವಿರೋಧವಿಲ್ಲ, ಆದರೆ ಆಚರಣೆಗೆ ವಿರೋಧವಿದೆ ಎಂದು ಸೇನೆಯ ಕಾರ್ಯಕರ್ತರು ವಿಭಿನ್ನ, ವಿಶಿಷ್ಟ ರೀತಿಯಲ್ಲಿ ಪ್ರತಿಭಟಿಸುತ್ತಾ ಬಂದಿದ್ದಾರೆ. ಈ ವರ್ಷ ಪಾಶ್ಚಾತ್ಯ ಸಂಸ್ಕೃತಿಯ ಈ ವ್ಯಾಲಂಟೆನ್ಸ್ ಡೇ ಆಚರಣೆಯ ದಿನವನ್ನು ಮಾತಾಪಿತರನ್ನು ಪೂಜಿಸುವ ದಿನವಾಗಿ ಆಚರಿಸಲು ಶ್ರೀರಾಮಸೇನೆ ನಿರ್ಧರಿಸಿದೆ.

ನಾಲ್ಕು ವರ್ಷಗಳ ಹಿಂದಿನ ಘಟನೆ. ಫೆಬ್ರವರಿ 2009ರ ಪ್ರೇಮಿಗಳ ದಿನಾಚರಣೆಯನ್ನು ವಿರೋಧಿಸಿ ಶ್ರೀರಾಮಸೇನೆ ರಾಜ್ಯಾದ್ಯಂತ ಭಾರೀ ಪ್ರತಿಭಟನೆಗೆ ಮುಂದಾಗಿತ್ತು. ಸೇನೆ ಈ ಕ್ರಮವನ್ನು ಸಮರ್ಥಿಸಿಕೊಳ್ಳುವವರಿಗಿಂತ ವಿರೋಧಿಸುವವರೇ ಹೆಚ್ಚಾಗಿದ್ದರು. ಮುಖ್ಯವಾಗಿ ಯುವ ಸಮುದಾಯ ಪ್ರಮೋದ್ ಮುತಾಲಿಕ್ ವಿರುದ್ದ ತಿರುಗಿ ಬಿದ್ದಿತ್ತು.

ಏನಿದು ಪಿಂಕ್ ಚಡ್ಡಿ ರಾದ್ದಾಂತ, ಸರಕಾರದ, ಪ್ರಗತಿಪರರ ಅಂದಿನ ನಿಲುವೇನು? : ಮುಂದಿನ ಸ್ಲೈಡಿನಲ್ಲಿ ನೋಡಿ

ಪಿಂಕ್ ಚಡ್ಡಿ

ಪಿಂಕ್ ಚಡ್ಡಿ

ಫೆ 14 ರಂದು ಆಚರಿಸುವ ಪ್ರೇಮಿಗಳ ದಿನಕ್ಕೆ ಮುತಾಲಿಕ್ ತೀವ್ರವಾಗಿ ವಿರೋಧಿಸಿದ್ದರು. ರಾಖಿ ಕಟ್ಟಿ, ಇಲ್ಲ ತಾಳಿ ಕಟ್ಟಿ ಅಭಿಯಾನ ಆರಂಭಿಸುವುದಾಗಿ ಹೇಳಿದ್ದರು. ಇದು ರಾಷ್ಟ್ರೀಯ ಸುದ್ದಿಯಾಗಿತ್ತು. ಮುತಾಲಿಕ್ ಕ್ರಮ ದೇಶಾದ್ಯಂತ ವ್ಯಾಪಕ ಟೀಕೆಗೆ ಗುರಿಯಾಗಿತ್ತು.

ಪಿಂಕ್ ಚಡ್ಡಿ

ಪಿಂಕ್ ಚಡ್ಡಿ

ಸೇನೆಯ ಈ ಪ್ರತಿಭಟನೆ ಖಂಡಿಸಿ ಪತ್ರಕರ್ತೆ ನಿಶಾ ಸೂಸಾನ್ ಸೇರಿದಂತೆ ಸಾವಿರಾರು ಮಂದಿ ಬೆಳಗಾವಿಯಲ್ಲಿರುವ ಪ್ರಮೋದ್ ಮುತಾಲಿಕ್ ಅವರ ಮನೆಗೆ ಸಾವಿರಾರು ಪಿಂಕ್ ಚಡ್ಡಿ ಕಳುಹಿಸಿ ಅವರನ್ನು ಅವಮಾನಗೊಳಿಸಿದ್ದರು.

ಪಿಂಕ್ ಚಡ್ಡಿ

ಪಿಂಕ್ ಚಡ್ಡಿ

ಪ್ರೇಮಿಗಳ ದಿನದಂದು ಶ್ರೀರಾಮಸೇನೆ ಕ್ರಮ ವಿರೋಧಿಸಿ ಪಿಂಕ್ ಚಡ್ಡಿ ಕಳುಹಿಸಿದ್ದ ಪತ್ರಕರ್ತೆ ನಿಶಾ ಸೂಸಾನ್ ಸೇರಿದಂತೆ 8 ಮಂದಿಗೆ ಪ್ರಮೋದ್ ಮುತಾಲಿಕ್ ಪರ ವಕೀಲರು ನೋಟಿಸ್ ನೀಡಿದ್ದರು.

ಪಿಂಕ್ ಚಡ್ಡಿ

ಪಿಂಕ್ ಚಡ್ಡಿ

ಪ್ರೇಮಿಗಳ ದಿನಕ್ಕೆ ಮುತಾಲಿಕ್ ಅವರಿಂದ ವ್ಯಕ್ತವಾದ ವಿರೋಧ, ರಾಖಿ ಕಟ್ಟಿ, ಇಲ್ಲ ತಾಳಿ ಕಟ್ಟಿ ಅಭಿಯಾನ, ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾದ ಪರಿಣಾಮ ಸರಕಾರ ಎಚ್ಚೆತ್ತು ಕೊಂಡಿತು. ಮುಂಜಾಗ್ರತಾ ಕ್ರಮವಾಗಿ ಫೆ 13 ರಂದು ಮುತಾಲಿಕ್ ಅವರನ್ನು ಪೊಲೀಸರು ಬಂಧಿಸಿದರು.

ಪಿಂಕ್ ಚಡ್ಡಿ

ಪಿಂಕ್ ಚಡ್ಡಿ

ಪ್ರೇಮಿಗಳ ದಿನಾಚರಣೆಗೆ ನಮ್ಮ ಆಕ್ಷೇಪಣೆ ಏನೂ ಇಲ್ಲ. ರಾಧೆ ಮತ್ತು ಕೃಷ್ಣರ ಅಮರ ಪ್ರೇಮದ ಆರಾಧಕರು ನಾವು ಎಂದು ಬಜರಂಗದಳ ಇದ್ದಕ್ಕಿದ್ದಂತೆ ತನ್ನ ಧೋರಣೆಯನ್ನು ಬದಲಾಯಿಸಿಕೊಂಡು ಅಚ್ಚರಿಯನ್ನುಂಟು ಮಾಡಿತು.

ಪಿಂಕ್ ಚಡ್ಡಿ

ಪಿಂಕ್ ಚಡ್ಡಿ

ಪ್ರೇಮಿಗಳು ಯಾವುದೇ ಭಯಭೀತಿ ಇಲ್ಲದೇ ತಮಗಿಷ್ಟಪಟ್ಟವರ ಜೊತೆಗೆ ವ್ಯಾಲೆಂಟೈನ್ ಡೇಯನ್ನು ಆಚರಿಸಬಹುದು. ಪ್ರೇಮಿಗಳ ದಿನ ಯಾವುದೇ ತೊಂದರೆ ಇಲ್ಲದೆ ಸುಗಮವಾಗಿ ನಡೆಯಲು ಬೆಂಗಳೂರು ನಗರದಾದ್ಯಂತ ತಮ್ಮ ಬೆಂಬಲಿಗರನ್ನು ಪತ್ರಕರ್ತ ಮತ್ತು ಪ್ರಗತಿಪರ ಹೋರಾಟಗಾರ ಅಗ್ನಿ ಶ್ರೀಧರ್ ಬೆಂಗಳೂರು ನಗರದಾದ್ಯಂತ ತಮ್ಮ ಬೆಂಬಲಿಗರನ್ನು ನೇಮಿಸಿದರು.

English summary
Valentines Day 2013 : Its time to turn pages from V Day history. Four year back i.e. 14.02.2009 'pink chaddi' incident created furor in India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X