2009ರ ಮಂಗಳೂರು ಪಬ್ ದಾಳಿ ಪ್ರಕರಣ: 25 ಆರೋಪಿಗಳು ಖುಲಾಸೆ
ಮಂಗಳೂರು, ಮಾರ್ಚ್ 12: ಅದು ಜನವರಿ 24, 2009. ಮಂಗಳೂರಿನ ಜನ ನಿಬಿಡ ಬಲ್ಮಠ ರಸ್ತೆಯಲ್ಲಿರುವ 'ಅಮ್ನೇಸಿಯಾ - ದಿ ಲಾಂಜೆ' ಪಬ್ ಮೇಲೆ ಶ್ರೀರಾಮ ಸೇನೆ ಕಾರ್ಯಕರ್ತರು ಮುಗಿಬಿದ್ದಿದ್ದರು.
ಪಬ್ ನಲ್ಲಿ ಮೋಜು ಮಸ್ತಿಯಲ್ಲಿದ್ದ ಯುವಕ ಯುವತಿಯರ ಮೇಲೆ ಹಿಗ್ಗಾಮುಗ್ಗಾ ಹಲ್ಲೆ ನಡೆಸಿದ್ದರು. ಈ ನೈತಿಕ ಪೊಲೀಸ್ ಗಿರಿ ಪ್ರಕರಣ ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಮಂಗಳೂರಿನ ಮಾನವನ್ನು ಹರಾಜು ಹಾಕಿತ್ತು.
ರಾಜ್ಯದಲ್ಲಂತೂ ಹಲವು ತಿಂಗಳುಗಳ ಕಾಲ ಬಿಸಿ ಬಿಸಿ ಚರ್ಚೆಯನ್ನೇ ಹುಟ್ಟುಹಾಕಿದ್ದ ಈ ಪ್ರಕರಣಕ್ಕೀಗ ಕೊನೆಗೂ ಇತಿಶ್ರೀ ಹಾಡಲಾಗಿದೆ. ಪ್ರಕರಣದ ಪ್ರಮುಖ 26 ಆರೋಪಿಗಳಿಗೆ ಖುಲಾಸೆ ನೀಡಿ ನ್ಯಾಯಾಲಯ ಇಂದು ತೀರ್ಪು ನೀಡಿದೆ.

ಹಲವು ವರ್ಷಗಳ ಕಾಲ ನಡೆದ ಸುದೀರ್ಘ ವಾದ ಪ್ರತಿವಾದ ವಿಚಾರಣೆಗಳ ನಂತರ,
ದಕ್ಷಿಣ ಕನ್ನಡ 3ನೇ ಜಿಲ್ಲಾ ಸೆಷನ್ಸ್ ಕೋರ್ಟ್ ಈ ತೀರ್ಪು ನೀಡಿದೆ.
ಸಾಕ್ಷ್ಯಾಧಾರ ಕೊರತೆಯಿಂದ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್, ಪ್ರಸಾದ್ ಅತ್ತಾವರ, ಸುಭಾಸ್ ಪಡೀಲ್, ದಿನಕರ ಶೆಟ್ಟಿ ಸೇರಿ 25 ಮಂದಿ ಆರೋಪಿಗಳನ್ನು ನ್ಯಾಯಾಲಯ ಪ್ರಕರಣದಲ್ಲಿ ಖುಲಾಸೆಗೊಳಿಸಿದೆ












Click it and Unblock the Notifications