ತಿರುಪತಿ ವೆಂಕಟೇಶ್ವರನ ಶಾಪದಿಂದ ನಿಮ್ಮಪ್ಪ ಸತ್ತಿದ್ದು: ಆಂಧ್ರ ಸಿಎಂಗೆ ಎಚ್ಚರಿಕೆ

ತಿರುಪತಿ ತಿರುಮಲ ದೇವಸ್ಥಾನದ ಆಡಳಿತ ಮಂಡಳಿ ತಮಿಳುನಾಡಿನಲ್ಲಿರುವ ಕೆಲವು ಆಸ್ತಿಗಳನ್ನು ಹರಾಜು ಮೂಲಕ ಮಾರಾಟ ಮಾಡಲು ಮುಂದಾಗಿರುವುದು ವ್ಯಾಪಕ ಚರ್ಚೆಗೆ ಗುರಿಯಾಗಿದೆ.

Recommended Video

      ಆಂಧ್ರ ಮುಖ್ಯಮಂತ್ರಿ ಜಗನ್ ಗೆ ಎಚ್ಚರಿಕೆ ಕೊಟ್ಟ ಪ್ರಮೋದ್ ಮುತಾಲಿಕ್..! | Pramod Mutalik

      ತಿರುಮಲ ದೇವಸ್ಥಾನ ವಿಶ್ವದ ಶ್ರೀಮಂತ ಹಿಂದೂ ದೇವಾಲಯವಾಗಿದ್ದರೂ, ಲಾಕ್ ಡೌನ್ ನಿಂದಾಗಿ ತಮ್ಮ ಉದ್ಯೋಗಿಗಳಿಗೆ ಸಂಬಳ ನೀಡಲು ಪರದಾಡುತ್ತಿದೆ. ಈ ಕಾರಣಕ್ಕಾಗಿ, ತಮಿಳುನಾಡಿನಲ್ಲಿರುವ ಆಸ್ತಿಯನ್ನು ಮಾರಾಟ ಮಾಡಲು ಟಿಟಿಡಿ ಆಡಳಿತ ಮಂಡಳಿ ನಿರ್ಧರಿಸಿದೆ.

      ಈ ಬಗ್ಗೆ, ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್, ಆಂಧ್ರ ಪ್ರದೇಶದ ಮುಖ್ಯಮಂತ್ರಿ ವೈ.ಎಸ್.ಜಗನ್ಮೋಹನ್ ರೆಡ್ಡಿಗೆ, ಆಸ್ತಿಯನ್ನು ಮಾರಾಟ ಮಾಡದಂತೆ ಎಚ್ಚರಿಕೆ ನೀಡಿದ್ದಾರೆ.

      "ದೇವಸ್ಥಾನದ ಪಾವಿತ್ರ್ಯತೆಯನ್ನು ಹಾಳು ಮಾಡಲು ಆಂಧ್ರ ಪ್ರದೇಶದ ಮುಖ್ಯಮಂತ್ರಿ ಜಗನ್ ಅವರು ಈ ನಿರ್ಧಾರಕ್ಕೆ ಬಂದಿದ್ದಾರೆ"ಎಂದು ಪ್ರಮೋದ್ ಮುತಾಲಿಕ್ ಗುಡುಗಿದ್ದಾರೆ.

      ಶ್ರೀರಾಮ ಸೇನೆಯ ಮುಖ್ಯಸ್ಥ ಮುತಾಲಿಕ್ ಎಚ್ಚರಿಕೆ

      ಶ್ರೀರಾಮ ಸೇನೆಯ ಮುಖ್ಯಸ್ಥ ಮುತಾಲಿಕ್ ಎಚ್ಚರಿಕೆ

      "ಜಗನ್ಮೋಹನ್ ಅವರು ಅಲ್ಲಿಯ ಆಸ್ತಿಯನ್ನು ಮಾರಾಟ ಮಾಡಲು ಹೊರಟಿದ್ದಾರೆ. ನಾನು ಇದನ್ನು ಖಂಡಿಸುತ್ತಾ ಇದ್ದೇನೆ, ವಿರೋಧಿಸುತ್ತಾ ಇದ್ದೇನೆ. ನಿಮಗ್ಯಾರು ಹಕ್ಕು ಕೊಟ್ಟವರು ದೇವಾಲಯದ ಆಸ್ತಿಯನ್ನು ಮಾರಾಟ ಮಾಡಲು"ಎಂದು ಮುತಾಲಿಕ್, ಆಂಧ್ರ ಸಿಎಂ ಅನ್ನು ಪ್ರಶ್ನಿಸಿದ್ದಾರೆ.

      ವೆಂಕಟೇಶ್ವರನ ಶಾಪದಿಂದ ನಿಮ್ಮಪ್ಪ ಸತ್ತು ಹೋದ

      ವೆಂಕಟೇಶ್ವರನ ಶಾಪದಿಂದ ನಿಮ್ಮಪ್ಪ ಸತ್ತು ಹೋದ

      "ಜಗನ್ ಅವರೇ ಅಲ್ಲಿನ ಆಸ್ತಿ ನಿಮ್ಮಪ್ಪನ ಮನೆಯದಲ್ಲ. ನಿಮ್ಮಪ್ಪ (ವೈ.ಎಸ್.ರಾಜಶೇಖರ ರೆಡ್ಡಿ, ದಿವಂಗತ ಆಂಧ್ರ ಸಿಎಂ) ಕೂಡಾ, ಆಸ್ತಿಯನ್ನು ಮಾರಾಟ ಮಾಡಲು ಹೋಗಿ, ವೆಂಕಟೇಶ್ವರನ ಶಾಪದಿಂದ ಸತ್ತು ಹೋದ. ಎಚ್ಚರಿಕೆ ಇರಲಿ, ತಿರುಪತಿ ದೇವಸ್ಥಾನದ ಆಸ್ತಿಯನ್ನು ಮಾರಾಟ ಮಾಡಿ, ನಿಮ್ಮ ಸ್ವಾರ್ಥಕ್ಕೆ ಬಳಸಿಕೊಂಡರೆ, ದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ಹೋರಾಟ ಆಗುತ್ತದೆ"ಎಂದು ಮುತಾಲಿಕ್ ಎಚ್ಚರಿಸಿದ್ದಾರೆ.

      ಆಂಧ್ರ ಪ್ರದೇಶದ ಮುಖ್ಯಮಂತ್ರಿ ವೈ.ಎಸ್.ಜಗನ್ಮೋಹನ್ ರೆಡ್ಡಿ

      ಆಂಧ್ರ ಪ್ರದೇಶದ ಮುಖ್ಯಮಂತ್ರಿ ವೈ.ಎಸ್.ಜಗನ್ಮೋಹನ್ ರೆಡ್ಡಿ

      "ಶ್ರೀರಾಮಸೇನೆ ಕರ್ನಾಟಕದಲ್ಲಿ 'ತಿರುಪತಿ ಉಳಿಸಿ' ಎನ್ನುವ ಆಂದೋಲನವನ್ನು ಮೇ 27ರಂದು ಹಮ್ಮಿಕೊಂಡಿದೆ. ಅಲ್ಲಿನ ದೇವಾಲಯದ ಆಸ್ತಿಯನ್ನು ಮಾರಾಟ ಮಾಡಬೇಡಿ ಎನ್ನುವುದು ನಮ್ಮ ಹೋರಾಟದ ಉದ್ದೇಶ"ಎಂದು ಮುತಾಲಿಕ್ ಹೇಳಿದ್ದಾರೆ.

      ತಮಿಳುನಾಡಿನ ವಿವಿಧ ಜಿಲ್ಲೆಯಲ್ಲಿರುವ ಶ್ರೀವಾರಿ ಭೂಮಿ

      ತಮಿಳುನಾಡಿನ ವಿವಿಧ ಜಿಲ್ಲೆಯಲ್ಲಿರುವ ಶ್ರೀವಾರಿ ಭೂಮಿ

      ಹಿಂದೆ ಟಿಟಿಡಿ ಆಡಳಿತ ಮಂಡಳಿ ತಮಿಳುನಾಡಿನ ವಿವಿಧ ಜಿಲ್ಲೆಯಲ್ಲಿರುವ ಶ್ರೀವಾರಿ ಭೂಮಿಯನ್ನು ಮಾರಾಟ ಮಾಡಲು ತೀರ್ಮಾನಿಸಿತ್ತು. ಈಗ ನಿವೇಶನ, ಮನೆ ಸೇರಿದಂತೆ 23 ಆಸ್ತಿಗಳನ್ನು ಮಾರಾಟ ಮಾಡಲು ಆಡಳಿತ ಮಂಡಳಿ ಸಭೆಯಲ್ಲಿ ಒಪ್ಪಿಗೆ ಕೊಡಲಾಗಿದೆ. ತಮಿಳುನಾಡಿನ ವಿವಿಧ ಜಿಲ್ಲೆಯಲ್ಲಿ ದೇವಸ್ಥಾನದ ಹೆಸರಿನಲ್ಲಿರುವ 23 ಜಮೀನುಗಳನ್ನು ಮಾರಾಟ ಮಾಡಲಾಗುತ್ತದೆ. ಟಿಟಿಡಿ ಈ ಭೂಮಿಗೆ ಬೆಲೆ ನಿಗದಿ ಮಾಡಿದೆ. ಸಾರ್ವಜನಿಕ ಹರಾಜಿನ ಮೂಲಕ ಆಸ್ತಿ ಮಾರಲು 8 ಅಧಿಕಾರಿಗಳ ಎರಡು ಸಮಿತಿ ರಚನೆ ಮಾಡಲಾಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+