Get Updates
Get notified of breaking news, exclusive insights, and must-see stories!

ಆಜಾನ್ ವಿರುದ್ಧ ಧ್ವನಿ; ದೇವಾಲಯಗಳಲ್ಲಿ ಮೊಳಗಿತು ಸುಪ್ರಭಾತ

ಬೆಂಗಳೂರು, ಮೇ 09: ಮಸೀದಿಗಳಲ್ಲಿನ ಮೈಕ್ ಬಳಕೆ, ಆಜಾನ್ ವಿರುದ್ಧ ಶ್ರೀರಾಮಸೇನೆ ಮತ್ತು ಹಿಂದೂಪರ ಸಂಘಟನೆಗಳು ಕರ್ನಾಟಕದಲ್ಲಿ ಅಭಿಯಾನ ಆರಂಭಿಸಿವೆ. ಸೋಮವಾರ ಮುಂಜಾನೆ ಕರ್ನಾಟಕದ ವಿವಿಧ ಜಿಲ್ಲೆಗಳ ದೇವಾಲಯಗಳಲ್ಲಿ ಸುಪ್ರಭಾತ ಮೊಳಗಿದೆ.

ಅಜಾನ್ ಆರಂಭವಾಗುತ್ತಿದ್ದಂತೆಯೇ ಸುಪ್ರಭಾತ ಶುರುವಾಯಿತು. ವಿವಿಧ ಜಿಲ್ಲೆಗಳಲ್ಲಿ ಹಿಂದೂಪರ ಸಂಘಟನೆಗಳ ಸದಸ್ಯರು ದೇವಾಲಯಗಳಲ್ಲಿ ಪೂಜೆ ಸಲ್ಲಿಸಿ ಹನುಮಾನ್ ಚಾಲೀಸಾ ಪಠಿಸಿದರು. ಮೈಕ್ ಮೂಲಕ ಅದನ್ನು ಬಿತ್ತರಿಸಲಾಯಿತು.

ಮೈಸೂರಿನಲ್ಲಿ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅಭಿಯಾನಕ್ಕೆ ಚಾಲನೆ ನೀಡಿದರು. ಆಂಜನೇಯಸ್ವಾಮಿ ದೇಗುಲದಲ್ಲಿ 300 ಮಂದಿ ಒಟ್ಟಾಗಿ ಸಹಸ್ರನಾಮ, ಹಿಂದೂಗೀತೆ, ಭಜನೆ ಮಾಡುವುದರ ಅಭಿಯಾನ ಆರಂಭವಾಯಿತು.

ಸುಮಾರು ಒಂದು ಗಂಟೆಗಳ ಕಾಲ ರಾಜ್ಯದ ಸಾವಿರಕ್ಕೂ ಅಧಿಕ ದೇವಾಲಯಗಳಲ್ಲಿ ಸುಪ್ರಭಾತ ಕೇಳಿ ಬಂದಿತು. ಈ ಅಭಿಯಾನದ ಹಿನ್ನಲೆಯಲ್ಲಿ ರಾಜ್ಯದ್ಯಂತ ಪೊಲೀಸರು ಸಹ ಹೈ ಅಲರ್ಟ್ ಘೋಷಣೆ ಮಾಡಿದ್ದಾರೆ.

 ಹನುಮಾನ್ ಚಾಲೀಸಾ ಪಠಣೆ

ಹನುಮಾನ್ ಚಾಲೀಸಾ ಪಠಣೆ

ಸಕ್ಕರೆ ನಾಡು ಮಂಡ್ಯ ಜಿಲ್ಲೆಯ ಅನೇಕ ದೇವಾಲಯಗಳಲ್ಲಿ ಬೆಳಗ್ಗೆ 5 ಗಂಟೆಗೆ ಹಿಂದೂಪರ ಕಾರ್ಯಕರ್ತರರು ಹನುಮಾನ್ ಚಾಲೀಸಾ ಪಠಿಸಿದರು. ಚಾಮರಾಜನಗರದಲ್ಲಿ ಚಾಮರಾಜೇಶ್ವರ ದೇವಾಲಯದಲ್ಲಿ ಕೂಡ ಹಿಂದೂಪರ ಸಂಘಟನೆಗಳಿಂದ ಭಜನೆ ಆರಂಭಗೊಂಡಿತು.

ಹಿಂದುಪರ ಸಂಘಟನೆಗಳು ಯಾದಗಿರಿ ನಗರದ ಮಂದಿರಗಳಿಗೆ ತೆರಳಿ ಜಾಗೃತಿ ಅಭಿಯಾನ ನಡೆಸಿದರು. ಅಜಾನ್ ವಿರುದ್ಧ ಹಿಂದೂಪರ ಸಂಘಟನೆಗಳಿಂದ ಪ್ರತಿಭಟನೆ, ಚಳವಳಿ ಶುರುವಾಗಿದೆ. ದೇವಾಲಯಗಲ್ಲಿ ಹನುಮಾನ್ ಚಾಲೀಸಾ, ಭಕ್ತಿಗೀತೆ ಮೊಳಗಿದವು. ಶ್ರೀರಾಮಸೇನೆ ಜಿಲ್ಲಾಧ್ಯಕ್ಷ ವಿಜಯ ಪಾಟೀಲ್ ನೇತೃತ್ವದಲ್ಲಿ ಸುಪ್ರಭಾತ ಅಭಿಯಾನ ಶುರುವಾಯಿತು.

 ಹಾಸನದಲ್ಲಿ ಹುನುಮಾನ್ ಚಾಲೀಸಾ

ಹಾಸನದಲ್ಲಿ ಹುನುಮಾನ್ ಚಾಲೀಸಾ

ಮಸೀದಿಗಳ ಮೇಲಿನ ಮೈಕ್‌ ತೆರವುಗೊಳಿಸುವಂತೆ ಶ್ರೀರಾಮಸೇನೆ ಗಡುವು ನೀಡಿತ್ತು. ಗಡುವು ಪೂರ್ಣಗೊಂಡ ಹಿನ್ನಲೆಯಲ್ಲಿ ಹನುಮಾನ್ ಚಾಲೀಸಾ ಪಠಿಸಲಾಯಿತು. ಹಾಸನದಲ್ಲಿ ಶ್ರೀರಾಮಸೇನೆ ಜಿಲ್ಲಾಧ್ಯಕ್ಷ ಹೇಮಂತ್ ಕುಮಾರ್ ನೇತೃತ್ವದಲ್ಲಿ ಹನುಮಾನ್ ಚಾಲೀಸಾ ಪಠಣ ಮಾಡಲಾಯಿತು. ಹಾಸನದ ಸಂಗಮೇಶ್ವರ ಬಡಾವಣೆಯಲ್ಲಿರುವ ಶ್ರೀಸಂಗಮೇಶ್ವರ ದೇವಾಲಯದಲ್ಲಿ ಧ್ವನಿ ವರ್ಧಕದ ಮೂಲಕ ಹನುಮಾನ್ ಚಾಲೀಸಾ ಜೋರಾಗಿ ಹಾಕಲಾಯಿತು.

ಕೋಲಾರ ಜಿಲ್ಲೆಯ ಕಾರಂಜಿಕಟ್ಟೆಯಲ್ಲಿ ಶ್ರೀರಾಮಸೇನೆ ಜಿಲ್ಲಾಧ್ಯಕ್ಷ ರಮೇಶ್ ರಾಜ್ ನೇತೃತ್ವದಲ್ಲಿ 10 ದೇವಾಲಯಲ್ಲಿ ಭಜನೆ ನಡೆಯಿತು. ಕೀಲಿಕೋಟೆ ಆಂಜನೇಯ ದೇಗುಲ, ಬ್ರಾಹ್ಮಣ ಬಡಾವಣೆಯಲ್ಲಿ ಶ್ರೀರಾಮ ಗುಡಿ, ಕೆಇಬಿ ದೇವಸ್ಥಾನದಲ್ಲಿ ಭಜನೆ ನಡೆಯಿತು.

 ಗದಗನಲ್ಲಿಯೂ ಭಜನೆ

ಗದಗನಲ್ಲಿಯೂ ಭಜನೆ

ಸೋಮವಾರ ಬೆಳಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಗದಗ ನಗರದ ಬಹುತೇಕ ಮಂದಿರಗಳಲ್ಲಿ ಭಜನೆಗಳ ಸುದ್ದು ಕೇಳಿತು. ಇದರಿಂದ ನಗರದ ವಿವಿಧೆಡೆ ಬ್ರಾಹ್ಮೀ ಮುಹೂರ್ತದಲ್ಲಿ ಭಜನೆ v/s ಆಜಾನ್ ಶುರುವಾಯಿತು. 4.55ಕ್ಕೆ ಶ್ರೀರಾಮಸೇನೆ ಕಾರ್ಯಕರ್ತರು ಭಜನೆಗಳನ್ನು ಮೊಳಗಿಸಿದರು. ನಗರದ ವಿವಿಧ 10 ದೇವಸ್ಥಾನಗಳಲ್ಲಿ ಏಕ ಕಾಲಕ್ಕೆ ಭಜನೆ ನಡೆಯಿತು. ಐತಿಹಾಸಿಕ ಜುಮ್ಮಾ ಮಸೀದಿ ಕೂಗಳತೆ ದೂರದಲ್ಲಿ ಆಜಾನ್‌ಗೆ ವಿರುದ್ಧವಾಗಿ ಭಜನೆಯನ್ನು ಆರಂಭಿಸಲಾಯಿತು.

ಜುಮ್ಮಾ ಮಸೀದಿ ಆವರಣದಲ್ಲಿ ಮುಂಜಾಗ್ರತೆ ಕ್ರಮವಾಗಿ ಪೊಲೀಸ್ ಬಿಗಿಭದ್ರತೆ ಒದಗಿಸಲಾಗಿತ್ತು. ಒಂದು ಕೆಎಸ್‌ಆರ್‌ಪಿ ತುಕುಡಿ ಸೇರಿದಂತೆ ಸ್ಥಳೀಯ ಪೊಲೀಸರಿಂದ ಭದ್ರತೆ ನೀಡಲಾಗಿತ್ತು.

 ಹಳೇಹುಬ್ಬಳ್ಳಿಯಲ್ಲಿ ಭಜನೆ

ಹಳೇಹುಬ್ಬಳ್ಳಿಯಲ್ಲಿ ಭಜನೆ

ಹಳೇ ಹುಬ್ಬಳ್ಳಿಯ ದಿಡ್ಡಿ ಹನುಮಂತ ದೇವಾಲಯದಲ್ಲಿ ಸುಪ್ರಭಾತ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಶ್ರೀರಾಮಸೇನೆ, ದೇವಸ್ಥಾನ ಆಡಳಿತ ಮಂಡಳಿ ಸದಸ್ಯರು ಮತ್ತು ಅರ್ಚಕರಿಂದ ಪೂಜೆ ಸಲ್ಲಿಸಲಾಯಿತು. ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಹನುಮನ ಮಂತ್ರ ಜಪಿಸಿದರು. ಭಕ್ತಿಗೀತೆಗಳು ಮೊಳಗಿದವು, ಕಳೆದ ತಿಂಗಳು ಕೋಮು ಗಲಭೆಯಲ್ಲಿ ಈ ದೇವಸ್ಥಾನದ ಮೇಲೆ ದಾಳಿಯಾಗಿದ್ದ ಹಿನ್ನಲೆಯಲ್ಲಿ ಪೊಲೀಸ್ ಬಂದೋಬಸ್ತ್‌ ಮಾಡಲಾಗಿತ್ತು.

ತುಮಕೂರು ತಾಲೂಕಿನ ಪಾವಗಡದ ಕೋಟೆ ಆಂಜನೇಯ ದೇವಾಲಯದಲ್ಲಿ ಶ್ರೀರಾಮಸೇನೆ ಕಾರ್ಯಕರ್ತರು ಲೌಡ್ ಸ್ಪೀಕರ್ ಮೂಲಕ ಆಜಾನ್ ಕೂಗುವ ವೇಳೆ ಹನುಮಾನ್ ಚಾಲಿಸಾ ಸುಪ್ರಭಾತ ಹಾಕಿದರು.

Recommended Video

      Dinesh Karthik ಆಟ ನೋಡಿ RCB ಆಟಗಾರರು ಮಾಡಿದ್ದೇನು | Virat Kohli bows down to DK | Oneindia Kannada

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+