ಕರ್ನಾಟಕ ಸಿಇಟಿ ಪರೀಕ್ಷೆ 2013 ವೇಳಾಪಟ್ಟಿ
2013-14ನೇ ಸಾಲಿನ ವೈದ್ಯಕೀಯ, ದಂತ ವೈದ್ಯಕೀಯ, ಹೋಮಿಯೋಪತಿ, ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನದ ಮುಂತಾದ ವಿಷಯಗಳ ಮೊದಲ ವರ್ಷದ ಪದವಿ ಪ್ರವೇಶಕ್ಕಾಗಿ ಸಾಮಾನ್ಯ ಪ್ರವೇಶ ಪರೀಕ್ಷೆಗಳು ಕೆಳಗೆ ತಿಳಿಸಿದ ದಿನಗಳಂದು ನಡೆಯಲಿವೆ.
ಪರೀಕ್ಷಾ ಪ್ರಾಧಿಕಾರ ವೇಳಾಪಟ್ಟಿ ಪ್ರಕಟಿಸಿದರೂ ವೈದ್ಯಕೀಯ ವಿದ್ಯಾರ್ಥಿಗಳು ಇನ್ನೂ ಸಿಇಟಿ ಪರೀಕ್ಷೆಗಳನ್ನು ಬರೆಯುವ ಬಗ್ಗೆ ಗೊಂದಲದಲ್ಲಿದ್ದಾರೆ. ಎನ್ ಇಇಟಿ ಬರೆಯಬೇಕೋ ಅಥವಾ ಸಿಇಟಿ ಪರೀಕ್ಷೆ ಬರೆಯಬೇಕೆಂದು ನಿರ್ಧಾರವಾಗಿಲ್ಲ. ಈ ಕುರಿತ ಪ್ರಕರಣದ ವಿಚಾರಣೆ ಸುಪ್ರೀಂಕೋರ್ಟ್ ನಲ್ಲಿ ನಡೆಯುತ್ತಿದ್ದು, ಕೋರ್ಟ್ ನಲ್ಲಿ ವಿದ್ಯಾರ್ಥಿಗಳ ಪರವಾಗಿ ಆದೇಶ ಬಂದರೆ ವೈದ್ಯಕೀಯ ಪ್ರವೇಶ ಪಡೆಯಬಹುದಾಗಿದೆ.
ಆದರೆ. ಆದೇಶ ವಿದ್ಯಾರ್ಥಿಗಳ ಪರವಾಗಿ ಇಲ್ಲದಿದ್ದರೆ, ಸಿಇಟಿ ಅಥವ ಎನ್ಇಇಟಿಯಲ್ಲಿ ಯಾವುದಾದರೂ ಒಂದು ಪರೀಕ್ಷೆ ಅಸಿಂಧುವಾಗುವ ಸಾಧ್ಯತೆ ಇದೆ.
ವೈದ್ಯಕೀಯ ವಿದ್ಯಾರ್ಥಿಗಳಿಗೆ ನೆರವಾಗುವ ದೃಷ್ಟಿಯಿಂದ ವೇಳಾಪಟ್ಟಿ ಪ್ರಕಟಿಸಿರುವ ಪರೀಕ್ಷಾ ಪ್ರಾಧಿಕಾರ ಪರೀಕ್ಷೆಯ ಅರ್ಜಿಯ ಪರೀಶೀಲನೆಯನ್ನು ಸುಪ್ರೀಂಕೋರ್ಟ್ ನ ಆದೇಶದ ನಂತರ ನಡೆಸಲು ನಿರ್ಧರಿಸಿದೆ. ನಡುವೆಯೇ ಖಾಸಗಿ ಇಂಜಿನಿಯರಿಂಗ್ ಮತ್ತು ದಂತ ವೈದ್ಯಕೀಯ ಕಾಲೇಜುಗಳ ಒಕ್ಕೂಟ ಕಾಮೆಡ್-ಕೆ ಮೇ 12ರಿಂದ ಸಾಮಾನ್ಯ ಪ್ರವೇಶ ಪರೀಕ್ಷೆ ನೆಡೆಸುವುದಾಗಿ ಘೋಷಿಸಿದೆ.
ಕರ್ನಾಟಕ ಸಿಇಟಿ ಪರೀಕ್ಷೆ 2013 ವೇಳಾಪಟ್ಟಿ | ||||
ದಿನಾಂಕ: | ವಾರ: | ಸಮಯ: | ವಿಷಯ: | ಅಂಕ: |
ಮೇ 01, 2013 | ಬುಧವಾರ | 10.30ರಿಂದ 11.50 | ಜೀವಶಾಸ್ರ್ರ | 60 |
ಮೇ 01, 2013 | ಬುಧವಾರ | ಮಧ್ಯಾಹ್ನ 2.30 ರಿಂದ 3.50 | ಗಣಿತ | 60 |
ಮೇ 02, 2013 | ಗುರುವಾರ | 10.30ರಿಂದ 11.50 | ಭೌತಶಾಸ್ರ್ರ | 60 |
ಮೇ 02, 2013 | ಗುರುವಾರ | ಮಧ್ಯಾಹ್ನ 2.30 ರಿಂದ 3.50 | ರಸಾಯನ ಶಾಸ್ತ್ರ | 60 |
ಹೊರನಾಡು ಮತ್ತು ಗಡಿನಾಡು ಕನ್ನಡಿಗರಿಗೆ ಕನ್ನಡ | ||||
ಮೇ 03, 2013 | ಶುಕ್ರವಾರ | 2.00ಗಂಟೆಗೆ | ಹೊರನಾಡು ಕನ್ನಡಿಗರಿಗೆ | |
ಮೇ 03, 2013 | ಶುಕ್ರವಾರ | 3.00ಗಂಟೆಗೆ | ಗಡಿನಾಡು ಕನ್ನಡಿಗರಿಗೆ |