KCET Results 2023: ಬಿಎಸ್‌ಸಿ ವಿಭಾದಲ್ಲಿ ಈ ಕಾಲೇಜಿನ ವಿದ್ಯಾರ್ಥಿ ಪ್ರಥಮ ರ‍್ಯಾಂಕ್
ಮಂಗಳೂರು, ಜೂನ್, 15: ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆಯ (KCET 2023) ಫಲಿತಾಂಶ ಗುರುವಾರ (ಜೂನ್ 15) ಪ್ರಕಟವಾಗಿದೆ. ಹಾಗೆಯೆ ಈ ಪರೀಕ್ಷೆಯಲ್ಲಿ ಮಂಗಳೂರಿನ ಎಕ್ಸ್‌ಪರ್ಟ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಬೈರೇಶ್ ಬಿಎಸ್‌ಸಿ ವಿಭಾಗದಲ್ಲಿ ಪ್ರಥಮ ಸ್ಥಾನ ಅಲಂಕರಿಸಿದ್ದಾರೆ.
ಬೈರೇಶ್ ಬಿಎಸ್‌ಸಿ ವಿಭಾಗದಲ್ಲಿ 720ರಲ್ಲಿ 710 ಅಂಕಗಳನ್ನು ಗಳಿಸುವ ಮೂಲಕ ಅಭೂತಪೂರ್ವ ಸಾಧನೆ ಮಾಡಿದ್ದಾರೆ. ಈ ಮೂಲಕ ಬೈರೇಶ್ ರಾಜ್ಯದಲ್ಲಿ ಎರಡನೇ ಸ್ಥಾನ ಮತ್ತು ದೇಶದಲ್ಲಿ 48ನೇ ಸ್ಥಾನವನ್ನು ಪಡೆದಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಕೋಲಾರ ಜಿಲ್ಲೆಯ ಹರೀಶ್ ಎಸ್.ಬಿ ಮತ್ತು ರಾಧಮ್ಮ ದಂಪತಿ ಪುತ್ರರಾಗಿರುವ ಬೈರೇಶ್, ವೈದ್ಯನಾಗುವ ಆಸೆ ಹೊಂದಿದ್ದಾರೆ. ತನ್ನ ಸಾಧನೆ ಬಗ್ಗೆ ಮಾತನಾಡಿರುವ ಅವರು, ಚಿಕ್ಕಂದಿನಿಂದಲೂ ವೈದ್ಯರ ಬಗ್ಗೆ ಗೌರವ ಇತ್ತು. ಹಾಗೆಯೇ ವೈದ್ಯನಾಗುವ ಗುರಿಯೊಂದಿಗೆ ಎಂಬಿಬಿಎಸ್ ಪ್ರವೇಶ ಪಡೆಯುತ್ತಿದ್ದೇನೆ. ಮುಂದೆ ಕಾರ್ಡಿಯೋಲಾಜಿಯಲ್ಲಿ ವಿಶೇಷ ತರಬೇತಿ ಪಡೆದು ಹೃದಯರೋಗ ವೈದ್ಯನಾಗುವ ಗುರಿ ಇದೆ ಎಂದಿದ್ದಾರೆ.
ಎಕ್ಸ್‌ಪರ್ಟ್ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಫ್ರೊ.ನರೇಂದ್ರ ಎಸ್.ನಾಯಕ್ ವಿದ್ಯಾರ್ಥಿಯ ಸಾಧನೆಗೆ ಹರ್ಷ ವ್ಯಕ್ತಪಡಿಸಿದ್ದಾರೆ. ಕಠಿಣ ಪರಿಶ್ರಮ, ಶ್ರದ್ಧೆಯ ಜೊತೆಗೆ ಪೂರಕ ವಾತವರಣ ಇದ್ದರೆ ವಿದ್ಯಾರ್ಥಿ ಎಂತಹ ಸಾಧನೆಯನ್ನೂ ಮಾಡಬಹುದು ಎಂಬುವುದಕ್ಕೆ ಬೈರೇಶ್ ನಿದರ್ಶನ ಆಗಿದ್ದಾರೆ. ನಮ್ಮ ಸಂಸ್ಥೆಯ ವಿದ್ಯಾರ್ಥಿಗಳಿಗೆ ಈ ಸಾಧನೆ ಪ್ರೇರಣೆ ಆಗುತ್ತದೆ ಎಂದು ಸಂತೋಷ ವ್ಯಕ್ತಪಡಿಸಿದರು.












Click it and Unblock the Notifications